Suttur Jatre 2025: ಮುಗಿಯಿತು ಸುತ್ತೂರು ಜಾತ್ರೆ, ಮರೆಯಲಾಗದ ಭಿನ್ನ ಮುಖಗಳು: ಛಾಯಾ ಕಲಾವಿದ ತ್ರಿಪುರಾಂತಕ ಚಿತ್ರಗಳಲ್ಲಿ ಬದುಕು ಅನಾವರಣ
- Suttur Jatre 2025: ಜಾತ್ರೆ ಅಂದರೆ ಅದು ಸಂಸ್ಕೃತಿಯ ಸಂಗಮ. ಅಲ್ಲಿಗೆ ಬರುವ ಜನರ ಖುಷಿಗೆ ಬೆಲೆ ಕಟ್ಟಲಾಗದು. ಜಾತ್ರೆಯನ್ನು ಹಬ್ಬವಾಗಿಸುವ ಜನರ ಭಕ್ತಿ ಭಾವ ಕ್ಷಣಗಳು ಕೂಡ. ಅಂತಹ ಕ್ಷಣಗಳನ್ನು ಸುತ್ತೂರಿನ ಜೆಎಸ್‌ಎಸ್ ಶಿಕ್ಷಣ ಸಂಸ್ಥೆ ಸಂಯೋಜನಾಧಿಕಾರಿಯೂ ಆಗಿರುವ, ಲೇಖಕ ಜಿ.ಎಲ್.ತ್ರಿಪುರಾಂತಕ ಚಿತ್ರಗಳಲ್ಲಿ ಕಟ್ಟಿಕೊಟ್ಟಿದ್ಧಾರೆ. ಜಾತ್ರೆ ವೈಭವ ಹೀಗಿದೆ ನೋಡಿ
- Suttur Jatre 2025: ಜಾತ್ರೆ ಅಂದರೆ ಅದು ಸಂಸ್ಕೃತಿಯ ಸಂಗಮ. ಅಲ್ಲಿಗೆ ಬರುವ ಜನರ ಖುಷಿಗೆ ಬೆಲೆ ಕಟ್ಟಲಾಗದು. ಜಾತ್ರೆಯನ್ನು ಹಬ್ಬವಾಗಿಸುವ ಜನರ ಭಕ್ತಿ ಭಾವ ಕ್ಷಣಗಳು ಕೂಡ. ಅಂತಹ ಕ್ಷಣಗಳನ್ನು ಸುತ್ತೂರಿನ ಜೆಎಸ್‌ಎಸ್ ಶಿಕ್ಷಣ ಸಂಸ್ಥೆ ಸಂಯೋಜನಾಧಿಕಾರಿಯೂ ಆಗಿರುವ, ಲೇಖಕ ಜಿ.ಎಲ್.ತ್ರಿಪುರಾಂತಕ ಚಿತ್ರಗಳಲ್ಲಿ ಕಟ್ಟಿಕೊಟ್ಟಿದ್ಧಾರೆ. ಜಾತ್ರೆ ವೈಭವ ಹೀಗಿದೆ ನೋಡಿ
(1 / 18)
ಭರತನಾಟ್ಯ ಕಲಾವಿದೆಯರ ಮಂದಹಾಸಕ್ಕೆ ಚುರುಮುರಿಯೇ ಕಾರಣ:
ಸುತ್ತೂರು ಜಾತ್ರೆಯ ಸಾಂಸ್ಕೃತಿಕ ಕಾರ್ಯಕ್ರಮ ನೀಡಲು ಬಂದ ಕಲಾವಿದರು ಇಲ್ಲಿನ ಚುರುಮುರಿಗೆ ಮಾರು ಹೋದರು,
(2 / 18)
ಮದುವೆಯಲ್ಲೂ ಬಿಡದ ಮೊಬೈಲ್ ಎಂಬ ಮಾಯೆ !:
ಸುತ್ತೂರು ಜಾತ್ರೆಯಲ್ಲಿ ಸಾಮೂಹಿಕ ವಿವಾಹದಲ್ಲಿ ಭಾಗಿಯಾದ ವಧು ಮೊಬೈಲ್ ಮಾಯೆಗೆ ವರನ ಕುತೂಹಲದ ನೋಟ.
(3 / 18)
ಚೆಂಡೆ ಮತ್ತು ಚೆಲ್ವೆ!:
ಸುತ್ತೂರು ಜಾತ್ರಾ ಮಹೋತ್ಸವ ನಿಜಕ್ಕೂ ಕಲಾ ಸಂಗಮ. ಚೆಂಡೆಮದ್ದಳೆಗೆ ಮಹಿಳೆಯ ಲಾಲಿತ್ಯ ಹಾಗೂ ನೋಟ ಭಿನ್ನವಾಗಿಯೇ ಇತ್ತು.
(6 / 18)
ಅಪ್ಪನ ಹೆಗಲ ಮೇಲೆ ಜಾತ್ರೆ ಸೊಬಗು: ಅಪ್ಪನ ಹೆಗಲಿಗಿಂತ ಸಿಂಹಾಸನ ಉಂಟೇ ? ಪ್ರಪಂಚ ಪರಿಚಯಿಸುವ ಮೊದಲ ಗುರು ಅಪ್ಪ
(13 / 18)
ಸಾಮಾಜಿಕ ಜಾಲತಾಣ ಪ್ರಚೋದನೆ ಅಷ್ಟೇ ಅಲ್ಲದೆ ಪ್ರೇರಣೆಯನ್ನು ಸಹ ನೀಡುತ್ತದೆ ಎಂಬುದಕ್ಕೆ ಈ ಅನುಭವ ನಿದರ್ಶನ. ನಂಜನಗೂಡಿನ ಅಂಚೆ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುವ ಮಂಜುನಾಥರವರು ಆಹಾರ ವ್ಯರ್ಥ ಮಾಡಬೇಡಿ ಎಂಬ ಪೋಸ್ಟ್ ಗಳಿಂದ ಪ್ರೇರೇಪಿತರಾಗಿ ಅವರು ಸಹ ಅನುಸರಿಸುತ್ತಿದ್ದಾರೆ. ಈ ಬಾರಿಯೂ ಅವರು ಅನುಸರಿಸಿದ ಊಟದ ಕ್ರಮ ಅನುಕರಣೀಯ
(14 / 18)
ಇಡೀ ಜಗತ್ತಿಗೆ ಅಪ್ಪ ಬಡವನಾಗಿ ಕಾಣಬಹುದು. ಆದರೆ ಮಕ್ಕಳಿಗೆ ಅವರ ಅಪ್ಪ ಹೃದಯ ಶ್ರೀಮಂತ. ಅವನ ಒಳಗೂ ಮಾತೃ ಹೃದಯ ಇರುತ್ತದೆ. ಅಮ್ಮ ಪ್ರೀತಿ ಮಾಡುವಷ್ಟೇ ಅಪ್ಪ ಕಾಳಜಿ ವಹಿಸುತ್ತಾನೆ. ಅಮ್ಮ ತಾಯ್ತನವನ್ನು ಅನುಭವಿಸುವಂತೆ ತಂದೆಯೂ ತಂದೆತನವನ್ನು ಅನುಭವಿಸುತ್ತಾನೆ. ಸುತ್ತೂರು ಜಾತ್ರೆಯಲ್ಲಿ ಬೀದಿ ಬದಿಯ ವ್ಯಾಪಾರಿ ಕುಟುಂಬ ಕಂಡದ್ದು ಹೀಗೆ.
(15 / 18)
ಈ ಮಕ್ಕಳಿಗೆ ಬಯಲೇ ವಿದ್ಯಾಲಯ ! :
ಸುತ್ತೂರು ಜಾತ್ರೆಯಲ್ಲಿ ರಾತ್ರಿ 11ರ ವೇಳೆಯಲ್ಲಿ ಕಂಡ ದೃಶ್ಯವಿದು. ಎರಡು ಮಕ್ಕಳ ತಾಯಿ ಗಾಳಿ ತುಂಬಿದ ತಲೆದಿಂಬನ್ನು ಮಾರುತ್ತಿದ್ದಳು. ಎಲ್ಲರಿಗೂ ಸುಖ ನಿದ್ರೆಗೆ ತಲೆದಿಂಬನ್ನು ಮಾರಾಟ ಮಾಡಲು ಪ್ರಯತ್ನಿಸುತ್ತಿರುವ ಇವಳಿಗೆ ಸುಖನಿದ್ರೆ ಎಂಬುದು ಮರೀಚಿಕೆಯ ಆಗಿರಬಹುದು !. ಮಧ್ಯರಾತ್ರಿಯಾದರೂ ಈ ಮಾತೆಗೆ ವ್ಯಾಪಾರ ಮಾಡುವ ಅನಿವಾರ್ಯತೆ
ಚಿಕ್ಕ ತಳ್ಳುವ ಗಾಡಿಯಲ್ಲಿ ಎರಡು ಮಕ್ಕಳನ್ನು ಕಟ್ಟಿಕೊಂಡು ಇವಳು ಬದುಕನ್ನು ನಡೆಸುತ್ತಿರುವುದು ಡಿವಿಜಿ ಅವರ 'ಬದುಕು ಜಟಕಾಬಂಡಿ ವಿಧಿ ಅದರ ಸಾಹೇಬ' ಈ ಕಗ್ಗವನ್ನು ನೆನಪಿಸುತ್ತದೆ. ಶಾಲೆಯಲ್ಲಿ ಪಾಠದ ಜೊತೆಗೆ ಆಟ ಕಲಿಯಬೇಕಾಗಿದ್ದ ಈ ಮಕ್ಕಳು ಹಗಲು ರಾತ್ರಿ ಎನ್ನದೆ ಹೆತ್ತವರೊಟ್ಟಿಗೆ ವ್ಯಾಪಾರದಲ್ಲಿ ತೊಡಗಿಸಿಕೊಂಡು ಬಯಲನ್ನೇ ವಿದ್ಯಾಲಯ ಮಾಡಿಕೊಂಡಿದ್ದಾರೆ. ಮಕ್ಕಳಿಗೆ ರಾತ್ರಿ ವೇಳೆಯಲ್ಲಿ ಊಟ ಮಾಡಿಸಲು ಚಂದಮಾಮನನ್ನು ತೋರಿಸಿ ಹೆಣಗಾಡುಗಾಡುತ್ತಿರುವ ಅಮ್ಮಂದಿರು ಒಂದು ಕಡೆಯಾದರೆ, ಚಂದಮಾಮನನ್ನು ತೋರಿಸಲು ಸಂಯಮ, ಸಮಯವೇ ಇಲ್ಲದ ಈಕೆ ಮತ್ತೊಂದು ಕಡೆ. ಜೀವನ ಜಾತ್ರೆಯಲ್ಲಿ ಎಷ್ಟೊಂದು ವೈರುಧ್ಯಗಳು ಇವೆ ಅಲ್ಲವೇ ?
(16 / 18)
ಈಕೆ ಮೂಲತಃ ತುಮಕೂರಿನವಳು. ಬೀದಿಬದಿ ವ್ಯಾಪಾರ ಮಾಡುವ ಕುಟುಂಬ ವರ್ಗದವಳು. ಸುತ್ತೂರು ಜಾತ್ರಾ ಮಹೋತ್ಸವದಲ್ಲಿ
ಮೂರು ತಿಂಗಳ ಹಸುಗೂಸನ್ನು ಮಡಿಲಲ್ಲಿ ಇಟ್ಟುಕೊಂಡು ಹೊಟ್ಟೆ ಹೊರೆಯಲು ರಸ್ತೆ ಬದಿ ಕುಳಿತಿದ್ದಾಳೆ. ಈ ಕಾಲದ ಚಳಿಗೆ ಮಗು ನಡುಗುತ್ತಿದ್ದರೆ, ಇವಳ ಬದುಕು ನಲುಗುತ್ತಿದೆ. ಪ್ರಯಾಗ್ ರಾಜ್ ನಲ್ಲಿ ಸರ ಮಾರುತ್ತಿದ್ದ ಮೊನಾಲಿಸಾಳ ಆಕರ್ಷಣೀಯ ಕಣ್ಣುಗಳು ನನ್ನನ್ನು ಅಷ್ಟಾಗಿ ಕೆರಳಿಸಲಿಲ್ಲ, ಆದರೆ ಹೊಳೆಯುವ ಸ್ಟೀಲ್ ಪಾತ್ರೆ ಮಾರುತ್ತಿರುವ ಹೊಳಪಿಲ್ಲದ ಈಕೆಯ ಕಣ್ಣುಗಳು ನನ್ನನ್ನು ಕನಿಕರಿಸುವಂತೆ ಮಾಡಿದವು. ಬದುಕು ಎಷ್ಟು ಕ್ರೂರ ಎಂದು ಇವಳ ಪರಿಸ್ಥಿತಿಯನ್ನು ಕಂಡಾಗ ಅನಿಸಿತು, ಕಣ್ಣಾಲಿಗಳು ತಂತಾನೆ ತೇವಗೊಂಡವು. ಇಂದು ರಾತ್ರಿ ನನಗೆ ನಿದ್ರೆ ಬರುವುದು ತುಸು ಕಷ್ಟವಾಗಬಹುದು. ಜೀವನ ಯಾತ್ರೆಯಲ್ಲಿ ಆನಂದ ಭಾಷ್ಪದಂತೆ ಆತಂಕ ಭಾಷ್ಪಗಳು ಕಾಣಸಿಗುತ್ತದೆ. ಗಮನಿಸುವ ಸೂಕ್ಷ್ಮತೆ ನಮ್ಮಲ್ಲಿರಬೇಕು. ಎಲ್ಲರಿಗೂ ಒಂದೇ ರೀತಿಯ ಬದುಕು ಇರುವುದಿಲ್ಲ. ಎಲ್ಲವೂ ಇದ್ದು ಏನೂ ಇಲ್ಲ ಎಂದು ಕೊರಗುವವರು ಈಕೆಯ ಪರಿಸ್ಥಿತಿಯನ್ನು ಒಮ್ಮೆ ಊಹಿಸಿಕೊಳ್ಳುವುದು ಒಳ್ಳೆಯದು. -
(17 / 18)
ಈ ವೃದ್ಧೆ ನಂಜನಗೂಡು ತಾಲ್ಲೂಕಿನ ಆಲಂಬೂರು ಗ್ರಾಮದವರು. ಸುತ್ತೂರು ಜಾತ್ರಾ ಮಹೋತ್ಸವದಲ್ಲಿ ಆರು ದಿನಗಳ ಕಾಲ ಧೂಪ ಹಾಗೂ ಹಣ್ಣು ದವನ ವ್ಯಾಪಾರ ಮಾಡುತ್ತಿದ್ದರು. ಇವರನ್ನು ಜಾತ್ರೆಯ ಕೊನೆಯ ದಿನದಂದು ಮಾತನಾಡಿಸಿದಾಗ 'ಅಷ್ಟೂ ದಿನಗಳು ಉಚಿತ ಪ್ರಸಾದ ಹಾಗೂ ವಸತಿ ವ್ಯವಸ್ಥೆಯನ್ನು ಸುತ್ತೂರು ಮಠದ ವತಿಯಿಂದ ಪಡೆದೆ, ಸುಮಾರು ಒಂದು ಸಾವಿರ ರೂಪಾಯಿಗಳು ಲಾಭವಾಗಿದೆ ಎಂದು ಖುಷಿ ಪಟ್ಟು, ಆ ಕಾರಣಕ್ಕೆ ಪೂಜ್ಯ ಸ್ವಾಮೀಜಿಯವರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ' ಎಂದು ಹೇಳಿದರು. ಜಾತ್ರೆ ಒಬ್ಬೊಬ್ಬರಿಗೆ ಒಂದೊಂದು ರೀತಿಯ ಅನುಭವ ಹಾಗೂ ಆನಂದವನ್ನು ನೀಡುತ್ತದೆ. ಇಳಿವಯಸ್ಸಿನಲ್ಲೂ ವ್ಯಾಪಾರ ಮಾಡಿ ಬದುಕುವ ಇವರ ಮುಖದಲ್ಲಿ ಅವರಿಗಾದ ಸ್ವಲ್ಪ ಲಾಭದಲ್ಲೇ ಸಂತೃಪ್ತಿ, ಸಮಾಧಾನ ಕಂಡಿದ್ದು ಖುಷಿ ಕೊಟ್ಟಿತು.
ಇಂತಹ ಎಷ್ಟೋ ಜೀವಗಳಿಗೆ ಜಾತ್ರೆಯ ಮೂಲಕ ಸಂತಸ ತಂದುಕೊಟ್ಟ ಪರಮಪೂಜ್ಯರಿಗೆ ಅನಂತ ಪ್ರಣಾಮಗಳು
ಇತರ ಗ್ಯಾಲರಿಗಳು