Suttur Jatre 2025: ಸುತ್ತೂರು ಜಾತ್ರೆಯಲ್ಲಿ ರಾಸುಗಳ ಲೋಕ, 12 ಲಕ್ಷ ಬೆಲೆ ಬಾಳುವ ಜೋಡೆತ್ತುಗಳ ಆಕರ್ಷಣೆ
Suttur Jatre 2025: ಮೈಸೂರು ಜಿಲ್ಲೆ ಕಪಿಲಾ ತೀರದ ಸುತ್ತೂರಿನಲ್ಲಿ ನಡೆದಿರುವ ಜಾತ್ರೆಯಲ್ಲಿ ಈ ಬಾರಿ ದನಗಳ ಪರಿಷೆ ಜೋರಾಗಿದೆ. ಬಗೆಬಗೆಯ ರಾಸುಗಳು ಜಾತ್ರೆಗೆ ಬಂದಿವೆ. ಇದರ ನೋಟ ಇಲ್ಲಿದೆ.
(1 / 7)
ಸುತ್ತೂರು ಜಾತ್ರೆ ಬರೀ ಧಾರ್ಮಿಕ ಜಾತ್ರೆಯಲ್ಲ. ಅದು ಜಾಗೃತಿ ಯಾತ್ರೆ. ಇಲ್ಲಿ ಕೃಷಿಗೆ ಸಂಬಂಧಿಸಿದ ಹಲವು ಮಾದರಿಗಳಿವೆ. ಅದರಲ್ಲೂ ರಾಸುಗಳ ಪ್ರದರ್ಶನ ಹಾಗೂ ಮಾರಾಟ ಗಮನ ಸೆಳೆಯುತ್ತದೆ. ]
(2 / 7)
ಕರ್ನಾಟಕದ ನಾನಾ ಭಾಗಗಳಿಂದ ರೈತರು ತಮ್ಮ ರಾಸುಗಳನ್ನು ಸುತ್ತೂರು ಜಾತ್ರೆಗೆ ಕರೆ ತಂದಿದ್ದಾರೆ. ಇದರಲ್ಲಿ ಕೆಲವು ರಾಸುಗಳು ಒಂದು ಲಕ್ಷದಿಂದ 12 ಲಕ್ಷ ರೂ.ವರೆಗೂ ಮಾರಾಟವಾಗುತ್ತಿವೆ.
(3 / 7)
ಗ್ರಾಮೀಣ ಭಾಗದಲ್ಲಿ ಕೃಷಿಗೆ ಈಗಲೂ ಎತ್ತುಗಳೇ ಜೋಡಿ. ಮನೆಯಲ್ಲಿ ರಾಸುಗಳಿದ್ದರೆ ಕೃಷಿಗೂ ಉಮೇದು. ಜಾತ್ರೆ ವೇಳೆ ನಡೆಯುವ ರಾಸುಗಳ ಪ್ರದರ್ಶನಕ್ಕೆ ಹಲವರು ತಮ್ಮ ಜೋಡೆತ್ತುಗಳನ್ನು ತರುತ್ತಾರೆ.
(5 / 7)
ಸುತ್ತೂರು ಜಾತ್ರಾ ಮಹೋತ್ಸವದಲ್ಲಿ 54ನೇ ವರ್ಷದ ದನಗಳ ಪರಿಷೆ ಆಯೋಜನೆಯಾಗಿದ್ದು, 150ಕ್ಕೂ ಹೆಚ್ಚು ಜೋಡಿ ರಾಸುಗಳು ಭಾಗಿಯಾಗಿರುವುದು ವಿಶೇಷ.
(6 / 7)
ಚನ್ನಪಟ್ಟಣದ ಕೆಂಗಲ್ ಜಾತ್ರೆ ಮುಗಿಸಿ ಸುತ್ತೂರು ಜಾತ್ರೆಗೆ ಬಂದಿರುವ ರೈತರು ಮುಂದೆ ಮುಡುಕುತೊರೆ ಜಾತ್ರೆಗೂ ಹೋಗುತ್ತಾರೆ. ಈಗ ಕೃಷಿ ಚಟುವಟಿಕೆಯೂ ಮುಗಿದಿರುವುದರಿಂದ ಕೆಲವರು ತಮ್ಮ ರಾಸುಗಳ ಪ್ರದರ್ಶನಕ್ಕೂ ಜಾತ್ರೆಗಳನ್ನು ಬಳಸಿಕೊಳ್ಳುತ್ತಾರೆ.
ಇತರ ಗ್ಯಾಲರಿಗಳು