Suttur Jatre 2025: ಹತ್ತೂರಿಗೆ ಮಾದರಿಯಾಗುವ ಜಾತ್ರೆಗೆ ಸಿದ್ದವಾಗುತ್ತಿದೆ ಸುತ್ತೂರು, ಹೊರಗೆ ಬಂತು ರಥ, ಕೃಷಿ ಮೇಳಕ್ಕೂ ತಯಾರಿ ಜೋರು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Suttur Jatre 2025: ಹತ್ತೂರಿಗೆ ಮಾದರಿಯಾಗುವ ಜಾತ್ರೆಗೆ ಸಿದ್ದವಾಗುತ್ತಿದೆ ಸುತ್ತೂರು, ಹೊರಗೆ ಬಂತು ರಥ, ಕೃಷಿ ಮೇಳಕ್ಕೂ ತಯಾರಿ ಜೋರು

Suttur Jatre 2025: ಹತ್ತೂರಿಗೆ ಮಾದರಿಯಾಗುವ ಜಾತ್ರೆಗೆ ಸಿದ್ದವಾಗುತ್ತಿದೆ ಸುತ್ತೂರು, ಹೊರಗೆ ಬಂತು ರಥ, ಕೃಷಿ ಮೇಳಕ್ಕೂ ತಯಾರಿ ಜೋರು

Suttur Jatre 2025: ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಕಪಿಲಾ ತೀರದ ಧಾರ್ಮಿಕ ಕ್ಷೇತ್ರ ಸುತ್ತೂರಿನಲ್ಲಿ ಜಾತ್ರಾ ಮಹೋತ್ಸವಕ್ಕೆ ಸಿದ್ದತೆ ಭರದಿಂದ ಸಾಗಿದೆ. ಜನವರಿ 26ರಿಂದ 31ರವರೆಗೆ ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವ ನಡೆಯಲಿದೆ.ಚಿತ್ರ: ಜಿ.ಎಲ್‌.ತ್ರಿಪುರಾಂತಕ, ಸಂಯೋಜನಾಧಿಕಾರಿಗಳು ಸುತ್ತೂರು.

ಸುತ್ತೂರು ವೀರಸಿಂಹಾಸನ ಮಠವು ಹತ್ತು ಶತಮಾನಕ್ಕೂ ಹೆಚ್ಚಿನ ಇತಿಹಾಸ ಹೊಂದಿದ್ದು, ಆದಿಗುರು ಶ್ರೀ ಶಿವರಾತ್ರಿಶ್ವರ ಭಗವತ್ಪಾದರಿಂದ (ಕ್ರಿ.ಶ. 950-1030) ಇಲ್ಲಿವರೆಗೆ ಈ ಮಠವು ಹಲವು ಜಗದ್ಗುರುಗಳನ್ನು ಕಂಡಿದೆ. ಮಠದಿಂದ ಆಯೋಜನೆಗೊಳ್ಳುವ ಜಾತ್ರೆ ಹತ್ತೂರಿನ ಜನರನ್ನು ಸೆಳೆಯಲಿದೆ.
icon

(1 / 10)

(ಚಿತ್ರ: ಜಿ.ಎಲ್.ತ್ರಿಪುರಾಂತಕ)

ಸುತ್ತೂರಿನಲ್ಲಿರುವ ಶಿವರಾತ್ರೀಶ್ವರ ಜಗತ್ಪಾದರ ಗದ್ದುಗೆ, ದೇವಸ್ಥಾನದಿಂದ ಮಹತ್ವವನ್ನು ಪಡೆದಿದೆ. ಪ್ರತಿ ವರ್ಷ ವಾರ ಕಾಲ ಜಾತ್ರಾ ಮಹೋತ್ಸವ ನಡೆಯಲಿದೆ.
icon

(2 / 10)

ಸುತ್ತೂರು ಜಾತ್ರಾ ಮಹೋತ್ಸವದಲ್ಲಿ ರಥೋತ್ಸವವೂ ಪ್ರಮುಖ ಭಾಗ. ಈ ಬಾರಿ ರಥೋತ್ಸವ ಜನವರಿ 28ರಂದು ನಡೆಯಲಿದೆ.
icon

(3 / 10)

ಕಪಿಲಾ ನದಿ ತೀರದ  ಸುತ್ತೂರು ಕ್ಷೇತ್ರದಲ್ಲಿ ನಡೆಯುವ ಜಾತ್ರೆ ಒಂದು ದಿನದಲ್ಲಿ ಮುಗಿದು ಹೋಗುವದಲ್ಲ.ಅದು ವೈವಿಧ್ಯಮಯ ವಿಷಯಗಳ ಸಂಗಮ. ಅದರಲ್ಲೂ ಕೃಷಿ ಪ್ರದರ್ಶನ ರೈತರಿಗೆ ಸಮಗ್ರ ಮಾಹಿತಿ ಕೊಡಲಿದೆ. 
icon

(4 / 10)

 ಆರು ದಿನಗಳ ಕಾಲ ನಡೆಯುವ ಜಾತ್ರೆಯಲ್ಲಿ ಆರೋಗ್ಯ ಮೇಳ, ಕೃಷಿ ಮೇಳ, ಉತ್ಪಾದಕ ಮತ್ತು ಗ್ರಾಹಕ ಮೇಳ, ಕ್ರೀಡಾ ಮೇಳ, ಸಾಂಸ್ಕ್ಕತಿಕ ಮೇಳ, ಶೈಕ್ಷಣಿಕ ಮೇಳ, ಸಾಹಿತ್ಯ ಮತ್ತು ಪುಸ್ತಕ ಮೇಳ, ಸರ್ವಧರ್ಮ ಸಮ್ಮಿಲನ, ಸಾಮೂಹಿಕ ವಿವಾಹ, ವಿವಿಧ ವಸ್ತು ಪ್ರದರ್ಶನಗಳು, ದನಗಳ ಜಾತ್ರೆ, ಜಾನಪದ ಜಾತ್ರೆ, ಕುಸ್ತಿ ಪಂದ್ಯಾವಳಿ, ನಗೆ ಉತ್ಸವ, ನಾಟಕ, ನೃತ್ಯ, ವಚನಗಾಯನ, ಸುಗಮ ಸಂಗೀತ, ಯಕ್ಷಗಾನ ಗಮನ ಸೆಳೆಯಲಿವೆ.
icon

(5 / 10)

ವಸ್ತು ಪ್ರದರ್ಶನವಂತೂ ಬಗೆಬಗೆಯ ವಸ್ತುಗಳ ಮಾಹಿತಿಯ ಸಂಗಮ. ವಿವಿಧ ಭಾಗಗಳಿಂದ ಆಗಮಿಸುವವರು ತಮ್ಮ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟವನ್ನು ಸುತ್ತೂರು ಜಾತ್ರೆಯಲ್ಲಿ ಮಾಡುತ್ತಾರೆ.
icon

(6 / 10)

ಆರೋಗ್ಯ ಶಿಬಿರವೂ ಸೇರಿದಂತೆ ಹಲವು ಚಟುವಟಿಕೆಗಳು ನಡೆದು ಜನರಿಗೆ ಜಾತ್ರೆಯಲ್ಲಿ ಆರೋಗ್ಯದ ಕುರಿತೂ ಮಾಹಿತಿ ಒದಗಿಸಲಾಗುತ್ತದೆ.
icon

(7 / 10)

ಸುತ್ತೂರು ಮಠದ ಮುಖ್ಯ ಕಾರ್ಯಕ್ರಮ ನಡೆಯುವ ವಿಶಾಲ ವೇದಿಕೆಯಲ್ಲಿ ನಿತ್ಯ ದೇಶ ವಿದೇಶಗಳಿಂದಲೂ ಗಣ್ಯರು ಆಗಮಿಸುತ್ತಾರೆ. ಸಂಜೆ ನಂತರ ಸಾಂಸ್ಕೃತಿಕ ಕಾರ್ಯಕ್ರಮ, ನಾಟಕಗಳೂ ಜಾತ್ರೆಗೆ ಜನರನ್ನು ಸೆಳೆಯಲಿವೆ. 
icon

(8 / 10)

ಸುತ್ತೂರು ಜಾತ್ರೆಗೆ ನಿತ್ಯ ಸಹಸ್ರಾರು ಭಕ್ತರು ಆಗಮಿಸುತ್ತಾರೆ. ಅವರಿಗೆಲ್ಲಾ ದಾಸೋಹ ಹಾಗೂ ಪ್ರಸಾದದ ವ್ಯವಸ್ಥೆಯನ್ನು ಸುತ್ತೂರು ಮಠದಿಂದಲೇ ಅಚ್ಚುಕಟ್ಟಾಗಿ ಮಾಡಲಾಗುತ್ತದೆ.
icon

(9 / 10)

ಸುತ್ತೂರಿಗೆ ಆಗಮಿಸುವ ಮುಖ್ಯ ರಸ್ತೆಯುದ್ದಕ್ಕೂ ಜಾತ್ರೆಯ ಕಳೆಗಟ್ಟಿಸುವ ತೋರಣವನ್ನು ಹಾಕುವ ಕೆಲಸವೂ ನಡೆದಿದೆ. ಮುಂದಿನ ವಾರದ ಹೊತ್ತಿಗೆ ಸುತ್ತೂರು ಜಾತ್ರೆಗೆ ಸಂಪೂರ್ಣ ಅಣಿಯಾಗಲಿದೆ. 
icon

(10 / 10)

ಇತರ ಗ್ಯಾಲರಿಗಳು