ಕನ್ನಡ ಸುದ್ದಿ  /  Photo Gallery  /  Svym Jnanadeepa: How To Manage Teenage A Report Of Webinar By Swami Vivekananda Youth Movement

SVYM Jnanadeepa: ಟೀನೇಜ್‌ ನಿರ್ವಹಣೆ ಹೇಗೆ?; ಮಕ್ಕಳಿಗೆ ಅರಿವು ಮೂಡಿಸಿದ ಕಾರ್ಯಕ್ರಮ

  • SVYM Jnanadeepa: ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಮಕ್ಕಳಿಗೆ ಪಠ್ಯ ವಿಷಯಗಳ ಹೊರತಾಗಿ ಜ್ಞಾನ ವೃದ್ಧಿಗೆ ಪೂರಕವಾಗುವಂತಹ ವಿಷಯಗಳ ಮೇಲೆ ವಿವಿಧ ಸಂಪನ್ಮೂಲ ವ್ಯಕ್ತಿಗಳಿಂದ ವಿಚಾರ ಮಂಥನ ಕಾರ್ಯ ನಡೆಸಿಕೊಡುವ ಕಾರ್ಯಕ್ರಮವೇ ಪ್ರತಿ ಬುಧವಾರದ Wednesday Webinar - ಜ್ಞಾನ ದೀಪ.  ಬೆಂಗಳೂರಿನ ಡಾ. ನಂದಿನಿ ಲಕ್ಷ್ಮಿಕಾಂತ್ ಟೀನ್‌ಏಜ್‌ ನಿರ್ವಹಣೆ ಕುರಿತು ಮಾತನಾಡಿದರು. 

Wednesday Webinar - ಜ್ಞಾನ ದೀಪ:  ಶಾಲಾ ಶಿಕ್ಷಣ ಕಾರ್ಯಕ್ರಮದ ಭಾಗವಾಗಿ ಮಕ್ಕಳಿಗೊಂದು ಜೀವನ ಪಾಠ ಎಂಬ ಶೀರ್ಷಿಕೆಯಡಿ ಆನ್‌ಲೈನ್ ವೆಬಿನಾರಗಳನ್ನು ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್, ಧಾರವಾಡ ಸಂಘಟಿಸುತ್ತಿದೆ. ಸೆಪ್ಟೆಂಬರ್ 21ರ ಬುಧವಾರದಂದು ನಡೆದ ಬೆಂಗಳೂರಿನ ಡಾ. ನಂದಿನಿ ಲಕ್ಷ್ಮಿಕಾಂತ್ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದು, ಟೀನ್ -ಏಜ್ ನಿರ್ವಹಣೆ ಹೇಗೆ? ಎಂಬ ವಿಷಯದ ಮೇಲೆ ಹಲವಾರು ಅಂಶಗಳನ್ನು ತಿಳಿಯ ಪಡಿಸಿದರು.
icon

(1 / 4)

ಬಾಲ್ಯಾವಸ್ಥೆ, ಕಿಶೋರಾವಸ್ಥೆ , ಯೌವ್ವನಾವಸ್ಥೆ ಮತ್ತು ವೃದ್ಧಾಪ್ಯಗಳು ಪ್ರತಿಯೊಬ್ಬರ ಜೀವನದಲ್ಲಿ ಹಾಯ್ದು ಹೋಗುವಂತಹ ಪ್ರಮುಖ ಘಟ್ಟಗಳಾಗಿವೆ. ಪ್ರತಿ ಮಗುವಿನ ಜೀವನದಲ್ಲಿ ಕಿಶೋರಾವಸ್ಥೆಯು ಮಾನಸಿಕ, ಭೌದ್ಧಿಕ, ಸಾಮಾಜಿಕ ಮತ್ತು ಭಾವನಾತ್ಮಕ ಬದಲಾವಣೆಗಳು ಚಿಗುರೊಡೆಯುವ ಕಾಲ. ಸಾಮಾನ್ಯವಾಗಿ ಹದಿಮೂರು ವರ್ಷಗಳಿಂದ ಹತ್ತೊಂಬತ್ತು ವರ್ಷಗಳ (ಟೀನ್ - ಏಜ್) ನಡುವಿನ ಕಾಲವನ್ನು ಕಿಶೋರಾವಸ್ಥೆ ಎನ್ನುತ್ತಾರೆ ಎಂದು ಡಾ.ನಂದಿನಿ ಲಕ್ಷ್ಮೀಕಾಂತ್‌ ವಿವರಿಸಿದರು. 
icon

(2 / 4)

ಬಾಲ್ಯಾವಸ್ಥೆಯಿಂದ ಕಿಶೋರಾವಸ್ಥೆಗೆ ಮಗು ಪಾದಾರ್ಪಣೆ ಮಾಡುವಾಗ ಹಲವಾರು ಬದಲಾವಣೆಗಳನ್ನು ತನ್ನೊಳಗೆ ಕಾಣುವುದು ಸಹಜ. ಆದರೆ ಬದಲಾವಣೆಯ ಪರಿಕಲ್ಪನೆಯಾಗಲಿ, ಪೂರ್ವ ಜ್ಞಾನವಾಗಲಿ ಮಕ್ಕಳಿಗೆ ಇಲ್ಲದಿರುವುದರಿಂದ ಮಗು ಗೊಂದಲಗಳಿಗೆ ಒಳಗಾಗುವುದು ಈ ಅವಸ್ಥೆಯ ಸಹಜ ಪ್ರಕ್ರಿಯೆ ಎಂದು ತಿಳಿಸಿದರು. ಇಲ್ಲಿ ಮಗುವು ಹಿರಿಯರು ಹೇಳಿದ್ದನ್ನು ಒಪ್ಪಿಕೊಳ್ಳುವುದಿಲ್ಲ ಬದಲಾಗಿ ತನ್ನ ಇಚ್ಛೆಗೆ ಪೂರಕವಾದ ಕಾರ್ಯದಲ್ಲಿ ತೊಡಗುತ್ತದೆ. ಆದರೆ ಆ ಕಾರ್ಯದ ಗುಣಾವಗುಣಗಳ ಬಗ್ಗೆ ಅರಿವಿರುವುದಿಲ್ಲ. ಒಂದು ವೇಳೆ ಅರಿವಿದ್ದರೂ ಒಪ್ಪಿಕೊಳ್ಳುವ ಮನಸ್ಥಿತಿ ಮಗುವಿಗೆ ಇರುವುದಿಲ್ಲ. ಇಲ್ಲಿ ಮಗುವು ಸ್ವಯಂ ಕೇಂದ್ರಿತ ಕೆಲಸಗಳಿಂದ ಗುರುತಿಸಿಕೊಳ್ಳಲು ಯತ್ನಿಸುವುದನ್ನು ಕಾಣಬಹುದು ಎಂದು ಡಾ.ನಂದಿನಿ ಲಕ್ಷ್ಮೀಕಾಂತ್‌ ವಿವರಿಸಿದರು. 
icon

(3 / 4)

ಮಗುವಿನ ಜಾಗೃತಿಯ ಹಿತದೃಷ್ಟಿಯಿಂದ ಒಳ್ಳೆಯ ಸ್ಪರ್ಶ ಮತ್ತು ಕೆಟ್ಟ ಸ್ಪರ್ಶ ಗಳ ಬಗ್ಗೆ ಅರಿವು ನೀಡುವುದು ಪಾಲಕ-ಪೋಷಕರ ಹಾಗೂ ಶಿಕ್ಷಕರ ಆದ್ಯಕರ್ತವ್ಯ. ಒಟ್ಟಿನಲ್ಲಿ ಬದಾಲಾವಣೆಯ ಪರ್ವಕಾಲವನ್ನು ಉತ್ತಮವಾಗಿ ಬಳಸಿದರೆ ಅದ್ಭುತವಾದ ವ್ಯಕ್ತಿತ್ವವನ್ನು ರೂಪಿಸಿ ಕೊಳ್ಳಬಹುದು ಎಂಬುದನ್ನು ತಿಳಿಸುವ ಮೂಲಕ ಡಾ.ನಂದಿನಿ ಲಕ್ಮ್ಷೀಕಾಂತ್‌  ವೆಬಿನಾರನ್ನು ಯಶಸ್ವಿಯಾಗಿ ನಡೆಸಿಕೊಟ್ಟರು. ನಿನ್ನೆ ನಡೆದ ಈ ವೆಬಿನಾರಲ್ಲಿ 50 ಸರ್ಕಾರಿ ಶಾಲೆಗಳಿಂದ 531 ವಿದ್ಯಾರ್ಥಿಗಳು ಮತ್ತು 979 ವಿದ್ಯಾರ್ಥಿನಿಯರು ಸೇರಿ 1510 ಮಕ್ಕಳು ಪಾಲ್ಗೊಂಡಿದ್ದರು. 
icon

(4 / 4)

IPL_Entry_Point

ಇತರ ಗ್ಯಾಲರಿಗಳು