ಐಪಿಎಲ್, ವಿಶ್ವಕಪ್ ಸೇರಿ ವರ್ಷಪೂರ್ತಿ ಟಿ20 ಲೀಗ್ಗಳ ಮಹಾಪೂರ; ಕ್ರಿಕೆಟ್ ಪ್ರೇಮಿಗಳಿಗೆ ಮನರಂಜನೆಯೋ ಮನರಂಜನೆ
- T20 leagues in 2024: 2023ರ ಮುಕ್ತಾಯಗೊಂಡು 2024ರ ಕ್ಯಾಲೆಂಡರ್ಗೆ ಕಾಲಿಟ್ಟಿದ್ದೇವೆ. ಪ್ರತಿ ವರ್ಷದಂತೆ ಈ ವರ್ಷ ಕ್ರಿಕೆಟ್ ಪ್ರೇಮಿಗಳಿಗೆ ಇನ್ನಷ್ಟು ಮನರಂಜನೆ ಸಿಗಲಿದೆ. ಜನವರಿಯಿಂದ ಡಿಸೆಂಬರ್ವರೆಗೂ ಟಿ20 ಲೀಗ್ಗಳು ನಡೆಯಲಿದ್ದು, ಅವು ಯಾವುವು? ಯಾವಾಗ ಆರಂಭ? ಎಂಬುದನ್ನು ಇಲ್ಲಿ ತಿಳಿಯೋಣ.
- T20 leagues in 2024: 2023ರ ಮುಕ್ತಾಯಗೊಂಡು 2024ರ ಕ್ಯಾಲೆಂಡರ್ಗೆ ಕಾಲಿಟ್ಟಿದ್ದೇವೆ. ಪ್ರತಿ ವರ್ಷದಂತೆ ಈ ವರ್ಷ ಕ್ರಿಕೆಟ್ ಪ್ರೇಮಿಗಳಿಗೆ ಇನ್ನಷ್ಟು ಮನರಂಜನೆ ಸಿಗಲಿದೆ. ಜನವರಿಯಿಂದ ಡಿಸೆಂಬರ್ವರೆಗೂ ಟಿ20 ಲೀಗ್ಗಳು ನಡೆಯಲಿದ್ದು, ಅವು ಯಾವುವು? ಯಾವಾಗ ಆರಂಭ? ಎಂಬುದನ್ನು ಇಲ್ಲಿ ತಿಳಿಯೋಣ.
(1 / 12)
ಜನವರಿಯಿಂದ ಡಿಸೆಂಬರ್ವರೆಗೆ ಸಾಲು ಸಾಲು ಫ್ರಾಂಚೈಸಿಗಳ ಟಿ20 ಲೀಗ್ಗಳು ನಡೆಯಲಿವೆ. ತಿಂಗಳಿಗೊಂದರಂತೆ ಟಿ20 ಲೀಗ್ಗಳು ಜರುಗಲಿದ್ದು, ಕ್ರಿಕೆಟ್ ಪ್ರೇಮಿಗಳಿಗೆ ಭರಪೂರ ಮನರಂಜನೆ ಒದಗಿಸಲು ಸಜ್ಜಾಗಿವೆ. ಇದರಲ್ಲಿ ಟಿ20 ವಿಶ್ವಕಪ್ ವೇಳಾಪಟ್ಟಿಯೂ ಒಂದು. ಸೀಮಿತ ಓವರ್‌ಗಳ ಕ್ರಿಕೆಟ್ ಫ್ರಾಂಚೈಸಿ ಲೀಗ್ ವೇಳಾಪಟ್ಟಿ ಇಲ್ಲಿದೆ.
(2 / 12)
ದಕ್ಷಿಣ ಆಫ್ರಿಕಾ ಟಿ20 ಲೀಗ್ ವರ್ಷದ ಆರಂಭದಲ್ಲಿ ನಡೆಯಲಿದೆ. ಈ ಲೀಗ್ ಜನವರಿ 9, 2024 ರಿಂದ ಪ್ರಾರಂಭವಾಗುತ್ತದೆ. ಈ ಲೀಗ್ ಫೆಬ್ರವರಿ 10ರವರೆಗೆ ನಡೆಯಲಿದೆ.
(3 / 12)
ಜನವರಿ 19ರಿಂದ ಐಎಲ್ಟಿ20 ಲೀಗ್ ಆರಂಭವಾಗಲಿದೆ. ಎಮಿರೇಟ್ಸ್ ಕ್ರಿಕೆಟ್ ಮಂಡಳಿಯು ಈ ಲೀಗ್ ಅನ್ನು ಆಯೋಜಿಸುತ್ತದೆ. ILT ಟಿ20 ಲೀಗ್ ಜನವರಿ 19 ರಿಂದ ಫೆಬ್ರವರಿ 17 ರವರೆಗೆ ನಡೆಯಲಿದೆ.
(4 / 12)
ಬಾಂಗ್ಲಾದೇಶ ಪ್ರೀಮಿಯರ್ ಲೀಗ್ ಕೂಡ ಜನವರಿ 19ರಿಂದ ಆರಂಭವಾಗಲಿದೆ. ಈ ಲೀಗ್‌ನ ಕೊನೆಯ ಪಂದ್ಯ ಮಾರ್ಚ್ 1 ರಂದು ನಡೆಯಲಿದೆ. ಬಾಂಗ್ಲಾದೇಶ ಕ್ರಿಕೆಟಿಗರ ಜೊತೆಗೆ ಹಲವು ವಿದೇಶಿ ಆಟಗಾರರಯ ಸಹ ಈ ಲೀಗ್‌ನಲ್ಲಿ ನಿರತರಾಗಿರುತ್ತಾರೆ.
(5 / 12)
ಬಾಂಗ್ಲಾದೇಶ ಪ್ರೀಮಿಯರ್ ಲೀಗ್ ಮುಗಿಯುವ ಮುನ್ನ ಪಾಕಿಸ್ತಾನ ಕ್ರಿಕೆಟ್ ಲೀಗ್ ಆರಂಭವಾಗಲಿದೆ. ಪಿಎಸ್ಎಲ್ ಫೆಬ್ರವರಿ 13 ರಂದು ಪ್ರಾರಂಭವಾಗಲಿದ್ದು, ಮಾರ್ಚ್ 19 ರವರೆಗೆ ಮುಂದುವರೆಯಲಿದೆ.
(6 / 12)
ದಿನಾಂಕವನ್ನು ಇನ್ನೂ ಘೋಷಿಸಲಾಗಿಲ್ಲವಾದರೂ ವಿಶ್ವದ ಅತ್ಯಂತ ಜನಪ್ರಿಯ ಫ್ರಾಂಚೈಸ್ ಲೀಗ್ ಐಪಿಎಲ್ ಮಾರ್ಚ್ 23ರಿಂದ ಪ್ರಾರಂಭವಾಗಲಿದೆ ಎಂದು ಹೇಳಲಾಗಿದೆ. ಮೇ 26ರವರೆಗೆ ನಡೆಸಲು ನಿರ್ಧರಿಸಲಾಗಿದೆ ಎಂದು ವರದಿಯಾಗಿದೆ.
(7 / 12)
ಐಪಿಎಲ್ ಇಂಗ್ಲೆಂಡ್‌ನ ಜನಪ್ರಿಯ ಲೀಗ್ ವಿಟಾಲಿಟಿ ಬ್ಲಾಸ್ಟ್ ಪ್ರಾರಂಭವಾಗುತ್ತದೆ. ಮೇ 30 ರಿಂದ ಸೆಪ್ಟೆಂಬರ್ 14 ರವರೆಗೆ ಲೀಗ್ ನಡೆಸಲು ನಿರ್ಧರಿಸಲಾಗಿದೆ. ಆದರೆ ಇಲ್ಲಿ ಬಹುತೇಕ ದೇಶಿಯ ಆಟಗಾರರು ಮಾತ್ರ ಕಾಣಿಸಿಕೊಳ್ಳುತ್ತಾರೆ.
(8 / 12)
ಈ ನಡುವೆ ಈ ವರ್ಷದ ಟಿ20 ವಿಶ್ವಕಪ್ ಆರಂಭವಾಗಲಿದೆ. ಈ ಟೂರ್ನಿ ಜೂನ್ 4ರಿಂದ ಆರಂಭವಾಗಲಿದೆ. ಈ ಟೂರ್ನಿಯ ಫೈನಲ್ ಪಂದ್ಯ ಜೂನ್ 30 ರಂದು ನಡೆಯಲಿದೆ ಎಂದು ವರದಿಯಾಗಿದೆ. ಶೀಘ್ರದಲ್ಲೇ ವೇಳಾಪಟ್ಟಿ ಪ್ರಕಟಗೊಳ್ಳಲಿದೆ.
(9 / 12)
ದಿನಾಂಕವನ್ನು ಘೋಷಿಸದಿದ್ದರೂ, ದಿ ಹಂಡ್ರೆಡ್ ಟೂರ್ನಿ ಆಗಸ್ಟ್‌ನಲ್ಲಿ ಪ್ರಾರಂಭವಾಗಲಿದೆ. ಇಂಗ್ಲೆಂಡಿನಲ್ಲೂ ಇದು ಅತ್ಯಂತ ಜನಪ್ರಿಯ ಲೀಗ್ ಆಗಿದೆ. ಭಾರತದ ಆಟಗಾರರು ಹೊರತುಪಡಿಸಿ ವಿಶ್ವದ ಸ್ಟಾರ್ ಆಟಗಾರರು ಈ ಲೀಗ್‌ನಲ್ಲಿ ಆಡುತ್ತಾರೆ.
(10 / 12)
ಕೆರಿಬಿಯನ್ ಪ್ರೀಮಿಯರ್ ಲೀಗ್ ಕೂಡ ಆಗಸ್ಟ್‌ನಲ್ಲಿ ಆರಂಭವಾಗಲಿದೆ. ದಿನಾಂಕ ಘೋಷಿಸಿಲ್ಲ. ಆದರೆ ಆಗಸ್ಟ್‌ನಲ್ಲಿ ಆರಂಭಗೊಂಡು ಸೆಪ್ಟೆಂಬರ್‌ನಲ್ಲಿ ಕೊನೆಗೊಳ್ಳಲಿದೆ.
(11 / 12)
ಅಬುಧಾಬಿ ಟಿ10 ಲೀಗ್ ಅಕ್ಟೋಬರ್‌ನಲ್ಲಿ ಆರಂಭವಾಗಲಿದೆ. ಈ ಲೀಗ್ 2017ರಲ್ಲಿ ಪ್ರಾರಂಭವಾಯಿತು. ಐಪಿಎಲ್ ಟೂರ್ನಿಯ ಹಲವು ಫ್ರಾಂಚೈಸಿಗಳನ್ನು ಇಲ್ಲಿ ಕಾಣಬಹುದು.
ಇತರ ಗ್ಯಾಲರಿಗಳು