ಕನ್ನಡ ಸುದ್ದಿ  /  Photo Gallery  /  Take A Look At Bilaspur Aiims Worth <Span Class='webrupee'>₹</span>1470 Crore

AIIMS Bilaspur: 247 ಎಕರೆ ಪ್ರದೇಶದಲ್ಲಿ ಎದ್ದು ನಿಂತ ಬಿಲಾಸ್‌ಪುರ ಏಮ್ಸ್‌ ಹೇಗಿದೆ ನೋಡಿ

ಕೇವಲ ನಾಲ್ಕು ವರ್ಷಗಳ ಅವಧಿಯಲ್ಲಿ, ಹಿಮಾಚಲ ಪ್ರದೇಶದ ಬಿಲಾಸ್‌ಪುರದಲ್ಲಿ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ತಲೆಎತ್ತಿದೆ. ಒಟ್ಟು 247 ಎಕರೆ ಪ್ರದೇಶದಲ್ಲಿ ಇದರ ಕ್ಯಾಂಪಸ್‌ ಇದೆ. ಬರೋಬ್ಬರಿ 3,650 ಕೋಟಿ ರೂಪಾಯಿ ವೆಚ್ಚದ ಯೋಜನೆಗಳ ಶಂಕುಸ್ಥಾಪನೆಯೊಂದಿಗೆ ಪ್ರಧಾನಿ ನರೇಂದ್ರ ಮೋದಿ ಬುಧವಾರ ಈ ಆಸ್ಪತ್ರೆಯನ್ನು ಉದ್ಘಾಟಿಸಿದ್ದಾರೆ. ಇದು ಹೇಗಿದೆ ಎಂಬುದನ್ನು ನೋಡ ಬನ್ನಿ.

ಪ್ರಧಾನಿ ನರೇಂದ್ರ ಮೋದಿ, ಇಂದು ಹಿಮಾಚಲ ಪ್ರದೇಶದ ಬಿಲಾಸ್‌ಪುರದಲ್ಲಿ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯನ್ನು (AIIMS) ಉದ್ಘಾಟಿಸಿದ್ದಾರೆ. 2017ರಲ್ಲಿ ಇದಕ್ಕೆ ಮೋದಿ ಅಡಿಗಲ್ಲು ಹಾಕಿದ್ದರು.
icon

(1 / 5)

ಪ್ರಧಾನಿ ನರೇಂದ್ರ ಮೋದಿ, ಇಂದು ಹಿಮಾಚಲ ಪ್ರದೇಶದ ಬಿಲಾಸ್‌ಪುರದಲ್ಲಿ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯನ್ನು (AIIMS) ಉದ್ಘಾಟಿಸಿದ್ದಾರೆ. 2017ರಲ್ಲಿ ಇದಕ್ಕೆ ಮೋದಿ ಅಡಿಗಲ್ಲು ಹಾಕಿದ್ದರು.(ANI/Twitter)

AIIMS ಬಿಲಾಸ್‌ಪುರದ 247 ಎಕರೆ ವಿಸ್ತಾರವಾದ ಕ್ಯಾಂಪಸ್ 24 ಗಂಟೆಗಳ ತುರ್ತು ಸೇವೆ ಮತ್ತು ಡಯಾಲಿಸಿಸ್ ಸೌಲಭ್ಯಗಳನ್ನು ಹೊಂದಿದೆ. ಅಲ್ಟ್ರಾಸೋನೋಗ್ರಫಿ, ಸಿಟಿ ಸ್ಕ್ಯಾನ್ ಮತ್ತು ಎಂಆರ್‌ಐ ಸ್ಕ್ಯಾನ್‌ನಂತಹ ಆಧುನಿಕ ರೋಗನಿರ್ಣಯ ಯಂತ್ರಗಳು ಆಸ್ಪತ್ರೆಯಲ್ಲಿ ರೋಗಿಗಳಿಗೆ ಲಭ್ಯವಿರುತ್ತವೆ.
icon

(2 / 5)

AIIMS ಬಿಲಾಸ್‌ಪುರದ 247 ಎಕರೆ ವಿಸ್ತಾರವಾದ ಕ್ಯಾಂಪಸ್ 24 ಗಂಟೆಗಳ ತುರ್ತು ಸೇವೆ ಮತ್ತು ಡಯಾಲಿಸಿಸ್ ಸೌಲಭ್ಯಗಳನ್ನು ಹೊಂದಿದೆ. ಅಲ್ಟ್ರಾಸೋನೋಗ್ರಫಿ, ಸಿಟಿ ಸ್ಕ್ಯಾನ್ ಮತ್ತು ಎಂಆರ್‌ಐ ಸ್ಕ್ಯಾನ್‌ನಂತಹ ಆಧುನಿಕ ರೋಗನಿರ್ಣಯ ಯಂತ್ರಗಳು ಆಸ್ಪತ್ರೆಯಲ್ಲಿ ರೋಗಿಗಳಿಗೆ ಲಭ್ಯವಿರುತ್ತವೆ.(@mansukhmandviya/Twitter)

ಅಮೃತ್ ಫಾರ್ಮಸಿ ಮತ್ತು ಜನೌಷಧಿ ಕೇಂದ್ರ ಮತ್ತು 30 ಹಾಸಿಗೆಗಳ ಆಯುಷ್ ಬ್ಲಾಕ್ ಸಾಲಭ್ಯ ಹೊಂದಿರುವುದರಿಂದ ಎಲ್ಲಾ ಉನ್ನತ ಮಟ್ಟದ ವೈದ್ಯಕೀಯ ಸೌಲಭ್ಯ ಇಲ್ಲಿ ಸಿಕ್ಕಂತಾಗುತ್ತದೆ. ಆಸ್ಪತ್ರೆಯು ಆಯುಷ್ ಆರೋಗ್ಯ ಸೇವೆಯನ್ನು ಸಹ ಒದಗಿಸುತ್ತದೆ.
icon

(3 / 5)

ಅಮೃತ್ ಫಾರ್ಮಸಿ ಮತ್ತು ಜನೌಷಧಿ ಕೇಂದ್ರ ಮತ್ತು 30 ಹಾಸಿಗೆಗಳ ಆಯುಷ್ ಬ್ಲಾಕ್ ಸಾಲಭ್ಯ ಹೊಂದಿರುವುದರಿಂದ ಎಲ್ಲಾ ಉನ್ನತ ಮಟ್ಟದ ವೈದ್ಯಕೀಯ ಸೌಲಭ್ಯ ಇಲ್ಲಿ ಸಿಕ್ಕಂತಾಗುತ್ತದೆ. ಆಸ್ಪತ್ರೆಯು ಆಯುಷ್ ಆರೋಗ್ಯ ಸೇವೆಯನ್ನು ಸಹ ಒದಗಿಸುತ್ತದೆ.(@mansukhmandviya/Twitter)

ಅತ್ಯಾಧುನಿಕ ಆಸ್ಪತ್ರೆಯು 18 ಸ್ಪೆಷಾಲಿಟಿ ಮತ್ತು 17 ಸೂಪರ್ ಸ್ಪೆಷಾಲಿಟಿ ವಿಭಾಗಗಳನ್ನು ಹೊಂದಿದೆ, 18 ಮಾಡ್ಯುಲರ್ ಆಪರೇಷನ್ ಥಿಯೇಟರ್‌ಗಳು ಮತ್ತು 64 ಐಸಿಯು ಹಾಸಿಗೆಗಳೊಂದಿಗೆ ಒಟ್ಟು 750 ಹಾಸಿಗೆಗಳನ್ನು ಹೊಂದಿದೆ. ಆಸ್ಪತ್ರೆಯ ಸೆಂಟರ್ ಫಾರ್ ಡಿಜಿಟಲ್ ಹೆಲ್ತ್ ವಿಭಾಗವು ರಾಜ್ಯದ ದೂರದ ಸ್ಥಳಗಳಲ್ಲಿ ವಾಸಿಸುವ ಬುಡಕಟ್ಟು ಜನರು ಕೂಡಾ ಆಸ್ಪತ್ರೆಯ ಪ್ರಯೋಜನವನ್ನು ಪಡೆಯುವಂತೆ ಮಾಡಿದೆ.
icon

(4 / 5)

ಅತ್ಯಾಧುನಿಕ ಆಸ್ಪತ್ರೆಯು 18 ಸ್ಪೆಷಾಲಿಟಿ ಮತ್ತು 17 ಸೂಪರ್ ಸ್ಪೆಷಾಲಿಟಿ ವಿಭಾಗಗಳನ್ನು ಹೊಂದಿದೆ, 18 ಮಾಡ್ಯುಲರ್ ಆಪರೇಷನ್ ಥಿಯೇಟರ್‌ಗಳು ಮತ್ತು 64 ಐಸಿಯು ಹಾಸಿಗೆಗಳೊಂದಿಗೆ ಒಟ್ಟು 750 ಹಾಸಿಗೆಗಳನ್ನು ಹೊಂದಿದೆ. ಆಸ್ಪತ್ರೆಯ ಸೆಂಟರ್ ಫಾರ್ ಡಿಜಿಟಲ್ ಹೆಲ್ತ್ ವಿಭಾಗವು ರಾಜ್ಯದ ದೂರದ ಸ್ಥಳಗಳಲ್ಲಿ ವಾಸಿಸುವ ಬುಡಕಟ್ಟು ಜನರು ಕೂಡಾ ಆಸ್ಪತ್ರೆಯ ಪ್ರಯೋಜನವನ್ನು ಪಡೆಯುವಂತೆ ಮಾಡಿದೆ.(@mansukhmandviya/Twitter)

ಆಸ್ಪತ್ರೆಯು ಪ್ರತಿ ವರ್ಷ ಎಂಬಿಬಿಎಸ್ ಕೋರ್ಸ್‌ಗಳಿಗೆ 100 ವಿದ್ಯಾರ್ಥಿಗಳನ್ನು ಮತ್ತು ನರ್ಸಿಂಗ್ ಕೋರ್ಸ್‌ಗಳಿಗೆ 60 ವಿದ್ಯಾರ್ಥಿಗಳನ್ನು ದಾಖಲಿಸಿಕೊಳ್ಳುತ್ತದೆ. ಆಸ್ಪತ್ರೆಯು ಹಳ್ಳಿಗಳು, ದೂರದ ಬುಡಕಟ್ಟು ಪ್ರದೇಶಗಳು ಹಾಗೂ ಸಲೂನಿ ಮತ್ತು ಕೀಲಾಂಗ್‌ನಂತಹ ಎತ್ತರದ ಹಿಮಾಲಯ ಪ್ರದೇಶಗಳಲ್ಲಿ ನಿಯಮಿತವಾಗಿ ಆರೋಗ್ಯ ತಪಾಸಣೆ ಶಿಬಿರಗಳನ್ನು ನಡೆಸುತ್ತದೆ.
icon

(5 / 5)

ಆಸ್ಪತ್ರೆಯು ಪ್ರತಿ ವರ್ಷ ಎಂಬಿಬಿಎಸ್ ಕೋರ್ಸ್‌ಗಳಿಗೆ 100 ವಿದ್ಯಾರ್ಥಿಗಳನ್ನು ಮತ್ತು ನರ್ಸಿಂಗ್ ಕೋರ್ಸ್‌ಗಳಿಗೆ 60 ವಿದ್ಯಾರ್ಥಿಗಳನ್ನು ದಾಖಲಿಸಿಕೊಳ್ಳುತ್ತದೆ. ಆಸ್ಪತ್ರೆಯು ಹಳ್ಳಿಗಳು, ದೂರದ ಬುಡಕಟ್ಟು ಪ್ರದೇಶಗಳು ಹಾಗೂ ಸಲೂನಿ ಮತ್ತು ಕೀಲಾಂಗ್‌ನಂತಹ ಎತ್ತರದ ಹಿಮಾಲಯ ಪ್ರದೇಶಗಳಲ್ಲಿ ನಿಯಮಿತವಾಗಿ ಆರೋಗ್ಯ ತಪಾಸಣೆ ಶಿಬಿರಗಳನ್ನು ನಡೆಸುತ್ತದೆ.(@mansukhmandviya/Twitter)


IPL_Entry_Point

ಇತರ ಗ್ಯಾಲರಿಗಳು