ಕನ್ನಡ ಸುದ್ದಿ  /  Photo Gallery  /  Tamil Nadu Adheenams Hand Over Sengol To Pm Narendra Modi On Eve Of New Parliament Building Inauguration Mgb

Sengol: ಸಂಸತ್‌ ಭವನ ಲೋಕಾರ್ಪಣೆಗೂ ಮುನ್ನ ಪ್ರಧಾನಿ ಮೋದಿಗೆ ಸೆಂಗೋಲ್ ಹಸ್ತಾಂತರಿಸಿದ ಅಧೀನಂ ಪೀಠಾಧಿಪತಿಗಳು PHOTOS

  • Sengol and New Parliament: ನಾಳೆ (ಮೇ 28, ಭಾನುವಾರ) ನೂತನ ಸಂಸತ್‌ ಭವನ ಲೋಕಾರ್ಪಣೆಗೊಳ್ಳಲಿದೆ. ಐತಿಹಾಸಿಕ ಸೆಂಗೋಲ್​ ಚಿನ್ನದ ರಾಜದಂಡವನ್ನು ಲೋಕಸಭೆಯ ಸ್ಪೀಕರ್‌ ಆಸನದ ಪಕ್ಕ ನಾಳೆ ಅಳವಡಿಸಲಾಗುತ್ತದೆ. ಸಂಸತ್‌ ಭವನ ಉದ್ಘಾಟನೆಗೂ ಮುನ್ನ ತಮಿಳುನಾಡಿನ ವಿವಿಧ ಅಧೀನಂ ಮಠದ ಪೀಠಾಧಿಪತಿಗಳು ಸೆಂಗೋಲ್​ ಅನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹಸ್ತಾಂತರಿಸಿದ್ದಾರೆ.

ಸಂಸತ್‌ ಭವನ ಲೋಕಾರ್ಪಣೆಗೂ ಮುನ್ನ ಇಂದು (ಮೇ 27, ಶನಿವಾರ) ಸಂಜೆ ತಮಿಳುನಾಡಿನ ಅಧೀನಂ ಮಠದ ಪೀಠಾಧಿಪತಿಗಳು ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸೆಂಗೋಲ್​ ಅನ್ನು ಹಸ್ತಾಂತರಿಸಿದ್ದಾರೆ.  
icon

(1 / 5)

ಸೆಂಗೋಲ್​, ಇದು ಚೋಳರ ಕಾಲದ ತಮಿಳುನಾಡಿನ ಚಿನ್ನದ ರಾಜದಂಡವಾಗಿದ್ದು, ಅಧಿಕಾರ ಹಸ್ತಾಂತರದ ಸಂಕೇತವಾಗಿದೆ. 1947ರಲ್ಲಿ ಬ್ರಿಟಿಷರು ಅಧಿಕಾರ ಹಸ್ತಾಂತರದ ಸಂಕೇತವಾಗಿ ಭಾರತಕ್ಕೆ ಇದನ್ನು ನೀಡಿದ್ದರು. 
icon

(2 / 5)

ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರು ಇದನ್ನು ಬ್ರಿಟಿಷರಿಂದ ಸ್ವೀಕರಿಸಿದ್ದರು. ಇದನ್ನು ಇಷ್ಟು ದಿನ ಅಲಹಾಬಾದ್‌ನ ವಸ್ತುಸಂಗ್ರಹಾಲಯದಲ್ಲಿ ಇರಿಸಲಾಗಿತ್ತು. 
icon

(3 / 5)

ನಾಳೆ (ಮೇ 28, ಭಾನುವಾರ) ನೂತನ ಸಂಸತ್‌ ಭವನ ಲೋಕಾರ್ಪಣೆಗೊಳ್ಳಲಿದ್ದು, ಲೋಕಸಭೆಯ ಸ್ಪೀಕರ್‌ ಆಸನದ ಪಕ್ಕ ಇದನ್ನು ಅಳವಡಿಸಲಾಗುತ್ತದೆ. 
icon

(4 / 5)

ಸಂಸತ್​ ಭವನ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲು ತಮಿಳುನಾಡಿನಿಂದ ಧರ್ಮಪುರಂ ಅಧೀನಂ, ಪಳನಿ ಅಧೀನಂ, ವಿರುಧಾಚಲಂ ಅಧೀನಂ ಮತ್ತು ತಿರುಕೋಯಿಲೂರ್ ಅಧೀನಂ ಸೇರಿದಂತೆ ವಿವಿಧ ಅಧೀನಂ ಮಠದ ಪೀಠಾಧಿಪತಿಗಳು ದೆಹಲಿಗೆ ಬಂದಿದ್ದಾರೆ. ಪಿಎಂ ಮೋದಿ ನಿವಾಸದಲ್ಲಿ ಸೆಂಗೋಲ್​ ಅನ್ನು ಹಸ್ತಾಂತರಿಸಿದ್ದಾರೆ.  
icon

(5 / 5)

IPL_Entry_Point

ಇತರ ಗ್ಯಾಲರಿಗಳು