ತಮಿಳುನಾಡು ಬಜೆಟ್ ರೂಪಾಯಿ ಚಿಹ್ನೆ ವಿವಾದ; ಅಧಿಕೃತ ರೂಪಾಯಿ ಚಿಹ್ನೆಯ ಹಿಂದಿರುವ ತತ್ತ್ವಶಾಸ್ತ್ರವೇನು, ಇಲ್ಲಿದೆ 10 ಅಂಶ- ಫೋಟೋಸ್
ತಮಿಳುನಾಡು ಬಜೆಟ್ 2025-26 ಇಂದು ಮಂಡನೆಯಾಗುತ್ತಿದೆ. ತಮಿಳುನಾಡು ಸರ್ಕಾರ ನಮ್ಮ ದೇಶ ಭಾರತದ ಅಧಿಕೃತ ರೂಪಾಯಿ ಚಿಹ್ನೆಯ ಜಾಗದಲ್ಲಿ ತಮಿಳು ಅಕ್ಷರ ರು ವನ್ನು ಬಜೆಟ್ ಪುಸ್ತಕದಲ್ಲಿ ಬಳಸಿರುವುದು ಟೀಕೆಗೆ ಒಳಗಾಗಿದೆ. ಭಾರತದ ಅಧಿಕೃತ ರೂಪಾಯಿ ಚಿಹ್ನೆಯ ಹಿಂದಿರುವ ತತ್ತ್ವಶಾಸ್ತ್ರದ 10 ಅಂಶಗಳ ವಿವರ ಇಲ್ಲಿದೆ.
(1 / 11)
ತಮಿಳನಾಡು ಬಜೆಟ್ 2025-26ರ ಪುಸ್ತಕದಲ್ಲಿ ಭಾರತದ ಅಧಿಕೃತ ರೂಪಾಯಿ ಚಿಹ್ನೆಯ ಜಾಗದಲ್ಲಿ ತಮಿಳು ಅಕ್ಷರ ರು ವನ್ನು ಬಳಸಿದೆ. ವಾಸ್ತವದಲ್ಲಿ ಭಾರತದ ಅಧಿಕೃತ ರೂಪಾಯಿ ಚಿ್ಹ್ನೆ ಹಿಂದೆ ತತ್ತ್ವಶಾಸ್ತ್ರ ಅಂಶಗಳಿವೆ. ಅದರ ಗಾತ್ರ, ಅದರಲ್ಲಿರುವ ಸಂಕೇತಗಳು ನೀಡುವ ಸಂದೇಶ ಮುಂತಾದವು ಅಡಕವಾಗಿದೆ.ಅವುಗಳ ಕಡೆಗ ಗಮನಹರಿಸೋಣ
(2 / 11)
ರೂಪಾಯಿಯ ತಲೆ ಮೇಲಿನ ಗೆರೆ (ಶಿರೋ ರೇಖೆ): ದೇವನಾಗರಿ ಲಿಪಿಯ ವಿಶೇಷ ಅಂಶ ಇದು. ದೇವನಾಗರಿ ಲಿಪಿಯ ಅಕ್ಷರಗಳು ತಳಕ್ಕೆ ಮುಟ್ಟಲ್ಲ. ಜಗತ್ತಿನ ಯಾವುದೇ ಭಾಷೆಯ ಲಿಪಿಗೂ ಈ ವಿಶೇಷ ಅಂಶವಿಲ್ಲ.
(idc.iitb.ac.in)(3 / 11)
ತಿರಂಗಾದ ಸಂಕೇತ ಈ ಚಿಹ್ನೆ: ರೂಪಾಯಿ ಚಿಹ್ನೆಯಲ್ಲಿ ಕಂಡು ಬರುವ ಶಿರೋ ರೇಖೆಗೆ ಸಮಾನಂತರವಾಗಿ ಇನ್ನೊಂದು ರೇಖೆ ಬರುತ್ತದೆ. ಅದು ಸೇರಿದಾಗ ರೂಪಾಯಿ ಚಿಹ್ನೆಯ ವರ್ಣವು ಭಾರತದ ರಾಷ್ಟ್ರಧ್ವಜ ತಿರಂಗಾವನ್ನು ಪ್ರತಿನಿಧಿಸುತ್ತದೆ. ಶಿರೋ ರೇಖೆ ಕೇಸರಿ ವರ್ಣದಲ್ಲಿದ್ದರೆ,ಅದಕ್ಕೆ ಕೆಳಗೆ ಸಮಾನಂತರದಲ್ಲಿರುವ ರೇಖೆ ಹಸಿರು ವರ್ಣದಲ್ಲಿದೆ.
(idc.iitb.ac.in)(4 / 11)
ಸಮ ಚಿಹ್ನೆ: ರೂಪಾಯಿ ಚಿಹ್ನೆಯಲ್ಲಿ ಶಿರೋ ರೇಖೆ ಮತ್ತು ಅದಕ್ಕೆ ಸಮಾನಂತರವಾಗಿರುವ ರೇಖೆ ಸೇರಿ ಗಣತದ ಸಮ ಚಿಹ್ನೆಯನ್ನು ಸೃಷ್ಟಿಸಿವೆ. ಇದು ಜನಸಾಮಾನ್ಯರಿಗೆ ಜಾಗತಿಕ ಅರ್ಥ ವ್ಯವಸ್ಥೆಯಲ್ಲಿ ಭಾರತದ ರೂಪಾಯಿಯ ಮೌಲ್ಯವನ್ನು ಅರಿತುಕೊಳ್ಳುವುದಕ್ಕೂ ನೆರವಾಗುತ್ತದೆ.ಸಮ ಚಿಹ್ನೆ ಎಂಬುದು ಸಾಮರಸ್ಯದ ಸಂಕೇತವೂ ಹೌದು.
(idc.iitb.ac.in)(5 / 11)
ರೂಪಾಯಿ ಚಿಹ್ನೆ ಎರಡು ಲಿಪಿಗಳ ಅಕ್ಷರ: ರೂಪಾಯಿ ಚಿಹ್ನೆಯು ಭಾರತದ ದೇವನಾಗರಿ ಲಿಪಿಯ ರೂ ಅಕ್ಷರ ಹಾಗೂ ಇಂಗ್ಲಿಷ್ ಭಾಷೆಯ ಆರ್ ಅಕ್ಷರವನ್ನು ಸಂಕೇತಿಸುತ್ತದೆ.
(idc.iitb.ac.in)(8 / 11)
ಹೀಗಿದೆ ನೋಡಿ ಸರಳ ರೂಪಾಯಿ ಚಿಹ್ನೆ: ಭಾರತದ ರೂಪಾಯಿ ಚಿಹ್ನೆ ಸರಳವಾಗಿ ಹೀಗಿದೆ. ಭಾರತದ ರಾಷ್ಟ್ರ ಧ್ವಜದ ತಿರಂಗಾ, ಗಣಿತದ ಸಮ ಚಿಹ್ನೆ ದೇವನಾಗರಿ ಭಾಷೆಯ ರೂ, ಆಂಗ್ಲ ಭಾಷೆಯ ಆರ್‌ಗಳನ್ನು ಒಳಗೊಂಡ ರೂಪಾಯಿ ಚಿಹ್ನೆ ವರ್ಣಚಿತ್ರ.
(idc.iitb.ac.in)(9 / 11)
ರೂಪಾಯಿ ಚಿಹ್ನೆಯ ರೇಖೆಗಳ ಅಳತೆ: ರೂಪಾಯಿ ಚಿಹ್ನೆಯನ್ನು ವಿನ್ಯಾಸಗೊಳಿಸುವಾಗ ಪ್ರತಿ ರೇಖೆಗೂ ಅಳತೆಯನ್ನು ನಮೂದಿಸಲಾಗಿದೆ. ರೂಪಾಯಿ ಚಿಹ್ನೆಯನ್ನು ಬರೆಯುವಾಗ ಅದರ ಆಕಾರ, ಗಾತ್ರದಲ್ಲಿ ವ್ಯತ್ಯಾಸವಾಗಬಾರದು ಎಂಬುದು ಇದರ ಉದ್ದೇಶ
(idc.iitb.ac.in)(10 / 11)
ಭಾರತದ ಪೈಸೆ ಚಿಹ್ನೆ: ಭಾರತದ ರೂಪಾಯಿ ಚಿಹ್ನೆಯಷ್ಟೇ ಅಲ್ಲ, ಪೈಸೆಗೂ ಚಿಹ್ನೆ ಇದೆ. ಇದನ್ನೂ ರೂಪಾಯಿ ಚಿಹ್ನೆ ವಿನ್ಯಾಸ ರೂಪಿಸಿದ ಅದೇ ಪರಿಕಲ್ಪನೆಯಲ್ಲಿ ರೂಪಿಸಲಾಗಿದೆ. ದೇವನಾಗರಿಯ ಪ ಅಕ್ಷರವನ್ನು ಬಳಸಲಾಗಿದೆ.
(idc.iitb.ac.in)ಇತರ ಗ್ಯಾಲರಿಗಳು