ಹಾಟ್ ಏರ್ ಬಲೂನ್‌ಗಳನ್ನು ನೋಡುವಾಸೆಯೇ, ತಮಿಳುನಾಡಲ್ಲಿ ಅಂತಾರಾಷ್ಟ್ರೀಯ ಬಿಸಿಗಾಳಿ ಬಲೂನ್ ಉತ್ಸವ ಶುರುವಾಗಿದೆ ನೋಡಿ- ಫೋಟೋಸ್
Hot air Balloon Fest: ತಮಿಳುನಾಡು ಅಂತಾರಾಷ್ಟ್ರೀಯ ಬಿಸಿಗಾಳಿ ಬಲೂನು ಉತ್ಸವ ಶುರುವಾಗಿದೆ. ಇದು 10ನೇ ಆವೃತ್ತಿಯ ಉತ್ಸವವಾಗಿದ್ದು, ಚೆನ್ನೈ, ಪೊಲ್ಲಾಚಿ ಮತ್ತು ಮದುರೈನಲ್ಲಿ ಜ 10ರಿಂದ 19ರ ತನಕ ಬೇರೆ ಬೇರೆ ದಿನಾಂಕಗಳಲ್ಲಿ ನಡೆಯುತ್ತಿದೆ. ಜಗತ್ತಿನ 10 ಆಕರ್ಷಕ ಬಿಸಿಗಾಳಿ ಬಲೂನ್‌ಗಳು ಕೂಡ ಇದರಲ್ಲಿ ಭಾಗವಹಿಸುತ್ತಿವೆ. ಇಲ್ಲಿದ ಆಕರ್ಷಕ ಚಿತ್ರನೋಟ.
(1 / 9)
ತಮಿಳುನಾಡು ಪ್ರವಾಸೋದ್ಯಮ ಆಯೋಜಿಸಿರುವ ತಮಿಳುನಾಡು ಇಂಟರ್‌ನ್ಯಾಷನಲ್ ಬಲೂನ್ ಫೆಸ್ಟಿವಲ್ (TNIBF) ನ 10 ನೇ ಆವೃತ್ತಿ ಶುರುವಾಗಿದೆ. ಚೆನ್ನೈ ಸಮೀಪದ ಮಾಮಲ್ಲಪುರಂನಲ್ಲಿ ನಿನ್ನೆ ಬಿಸಿಗಾಳಿ ಬಲೂನು ಉತ್ಸವ ಶುರುವಾಗಿದೆ. ಅದರ ಚಿತ್ರನೋಟ ಮತ್ತು ಆಯೋಜಿಸಿರುವ ತಮಿಳುನಾಡು ಇಂಟರ್‌ನ್ಯಾಷನಲ್ ಬಲೂನ್ ಫೆಸ್ಟಿವಲ್ ಕುರಿತ ಇನ್ನಷ್ಟು ವಿವರ ಇಲ್ಲಿದೆ.
(Lakshmi / ANI Photo)(2 / 9)
ಬಿಸಿಗಾಳಿ ಬಲೂನ್ ಉತ್ಸವದಲ್ಲಿ ಯುನೈಟೆಡ್ ಕಿಂಗ್‌ಡಮ್, ಫ್ರಾನ್ಸ್, ಆಸ್ಟ್ರಿಯಾ, ಬ್ರೆಜಿಲ್, ಬೆಲ್ಜಿಯಂ, ಜಪಾನ್, ಥೈಲ್ಯಾಂಡ್ ಮತ್ತು ವಿಯೆಟ್ನಾಂ ಸೇರಿ ಹಲವಾರು ದೇಶಗಳ ಬಿಸಿಗಾಳಿ ಬಲೂನ್‌ಗಳು ಪಾಲ್ಗೊಳ್ಳುತ್ತಿವೆ.
(Lakshmi / ANI Photo)(3 / 9)
ಬಿಸಿಗಾಳಿ ಬಲೂನ್ ಉತ್ಸವ ತಮಿಳುನಾಡಿನ ಚೆನ್ನೈನಲ್ಲಿ ಜನವರಿ 10 ರಿಂದ 12ರ ತನಕ, ಪೊಲ್ಲಾಚಿಯಲ್ಲಿ ಜನವರಿ 14 ರಿಂದ 16, ಮದುರೈನಲ್ಲಿ ಜನವರಿ 18 - 19ರಂದು ನಡೆಯಲಿದೆ. ಚೆನ್ನೈನಲ್ಲಿ ಶಾಲಾ ಬಾಲಕಿಯರು ಬಿಸಿಗಾಳಿ ಬಲೂನ್ ಅನ್ನು ಹತ್ತಿರದಿಂದ ವೀಕ್ಷಿಸಿ ಸಂಭ್ರಮಿಸಿದರು.
(Lakshmi/ ANI Photo)(4 / 9)
ಈ ಸಲದ ಬಿಸಿಗಾಳಿ ಬಲೂನ್ ಉತ್ಸವದಲ್ಲಿ ಬ್ರೆಜಿಲ್‌ನ ಬೇಬಿ ಮಾನ್‌ಸ್ಟರ್, ಇಂಗ್ಲೆಂಡ್‌ನ ವೆಸ್ ದಿ ವೂಲ್ಫ್, ಎಲಿ ದಿ ಎಲಿಫೆಂಟ್, ಆಸ್ಟ್ರಿಯಾದ ಹುಗೋ ಮತ್ತು ಚೀತಾ ಬಲೂನ್‌ಗಳು ಪ್ರಮುಖ ಆಕರ್ಷಣೆಯಾಗಿ ಗೋಚರಿಸಿವೆ.
(Lakshmi / ANI Photo)(5 / 9)
ಥೈಲ್ಯಾಂಡ್ ಮತ್ತು ತೈವಾನ್‌ನಲ್ಲಿ ಬಲೂನ್ ಉತ್ಸವಗಳೊಂದಿಗೆ ಕೆಲಸ ಮಾಡುತ್ತಿದ್ದ ಬಲೂನ್ ಫೆಸ್ಟಿವಲ್‌ನ ಸಂಸ್ಥಾಪಕ ಮತ್ತು ಗ್ಲೋಬಲ್ ಮೀಡಿಯಾ ಬಾಕ್ಸ್‌ನ ಈವೆಂಟ್ ಡೈರೆಕ್ಟರ್ ಬೆನೆಡಿಕ್ಟ್ ಸವಿಯೊ ಅವರ ಕನಸಿನ ಕೂಸು ಈ ಉತ್ಸವ.
(PTI)(7 / 9)
ತಮಿಳುನಾಡು ಅಂತಾರಾಷ್ಟ್ರೀಯ ಬಿಸಿಗಾಳಿ ಬಲೂನ್ ಉತ್ಸವ 2015ರಲ್ಲಿ ಮೊದಲ ಬಾರಿ ನಡೆಯಿತು. ಅಂದು ಪೊಲ್ಲಾಚಿಯಲ್ಲಿ ಒಂದೆರಡು ಬಿಸಿಗಾಳಿ ಬಲೂನ್‌ನೊಂದಿಗೆ ಆರಂಭವಾಗಿದ್ದ ಉತ್ಸವ ಇದು. ಈಗ ಭಾರತದ ನಿರೀಕ್ಷಿತ ವಾರ್ಷಿಕ ಹಬ್ಬವಾಗಿ ಬದಲಾಗತೊಡಗಿದೆ.
(PTI)ಇತರ ಗ್ಯಾಲರಿಗಳು