Dhanush Divorce: ತಮಿಳುನಾಡಿನಲ್ಲಿ ಮತ್ತೊಂದು ಸಿನೆಮಾ ಜೋಡಿ ವಿಚ್ಚೇದನ, ಧನುಷ್, ಐಶ್ವರ್ಯಾ ಹಿನ್ನೆಲೆ ಹೀಗಿದೆ
- Dhanush Divorce: ತಮಿಳು ಚಿತ್ರರಂಗದ ಯಶಸ್ವಿ ದಂಪತಿ ಧನುಷ್ ಹಾಗೂ ಐಶ್ವರ್ಯಾ ರಜನಿಕಾಂತ್ ಅಧಿಕೃತವಾಗಿ ಪ್ರತ್ಯೇಕವಾಗಿದ್ದಾರೆ. ಇಬ್ಬರು ಬೆಳೆದು ಬಂದ ಹಾದಿ, ಹಿನ್ನೆಲೆಯ ಚಿತ್ರನೋಟ ಇಲ್ಲಿದೆ.
- Dhanush Divorce: ತಮಿಳು ಚಿತ್ರರಂಗದ ಯಶಸ್ವಿ ದಂಪತಿ ಧನುಷ್ ಹಾಗೂ ಐಶ್ವರ್ಯಾ ರಜನಿಕಾಂತ್ ಅಧಿಕೃತವಾಗಿ ಪ್ರತ್ಯೇಕವಾಗಿದ್ದಾರೆ. ಇಬ್ಬರು ಬೆಳೆದು ಬಂದ ಹಾದಿ, ಹಿನ್ನೆಲೆಯ ಚಿತ್ರನೋಟ ಇಲ್ಲಿದೆ.
(1 / 11)
ತಮಿಳುನಾಡು ಚಿತ್ರರಂಗದಲ್ಲಿ ಸಣ್ಣ ವಯಸ್ಸಿನಲ್ಲಿಯೇ ದೊಡ್ಡ ಸಾಧನೆ ಮಾಡಿದ ಕಲಾವಿದ ಧನುಷ್. ಅವರ ನಿಜವಾದ ಹೆಸರು ವೆಂಕಟೇಶ ಪ್ರಭು. ಜನಿಸಿದ್ದು 28 ಜನವರಿ 1983ರಂದು ಚೆನ್ನೈನಲ್ಲಿ. ಹಲವು ಚಿತ್ರಗಳಲ್ಲಿ ಅಭಿನಯಿಸಿ, ನಿರ್ದೇಶಕರೂ ಆಗಿದಾರೆ ಧನುಷ್.
(2 / 11)
ಖ್ಯಾತ ನಟ, ಕರ್ನಾಟಕ ಮೂಲಕ ರಜನಿಕಾಂತ್ ಅವರ ಹಿರಿಯ ಪುತ್ರಿ ಐಶ್ವರ್ಯಾ. ಜನಿಸಿದ್ದು ಚೆನ್ನೈನಲ್ಲಿ 1 ಜನವರಿ 1982ರಂದು.
(3 / 11)
2002ರಲ್ಲಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಧನುಷ್ ಹಲವಾರು ಸಿನೆಮಾಗಳಲ್ಲಿ ಅಭಿನಯಿಸಿ ತಮಿಳುನಾಡಿನಲ್ಲಿ ಮನೆ ಮಾತಾಗಿದ್ದಾರೆ. 12 ವರ್ಷದ ಹಿಂದೆ ಪ್ರತಿಯೊಬ್ಬರ ಬಾಯಿಯಲ್ಲೂ ಹರಿದಾಡಿದ್ದ ಕೊಲವರಿ ಡಿ ಎಂಬ ಹಾಡು ಹಾಡಿದ್ದು ಇದೇ ಧನುಷ್. ಈ ಹಾಡಿಗೆ 100 ಮಿಲಿಯನ್ ಗಿಂತ ಹೆಚ್ಚು ಜನರ ಯೂಟ್ಯೂಬಿನಲ್ಲಿ ವಿಕ್ಷಣೆ ಪಡೆದ ಮೊದಲನೆಯ ಭಾರತೀಯ ವೀಡಿಯೊ ಇದಾಗಿತ್ತು.
(4 / 11)
ಐಶ್ವರ್ಯಾ ಕೂಡ ಚಿತ್ರರಂಗದಲ್ಲಿ ಗುರುತಿಸಿಕೊಂಡು 2000ರಲ್ಲಿ ಪಾದಾರ್ಪಣೆ ಮಾಡಿದರು. ಸಂಗೀತ ಸಂಯೋಜನೆ ಸಹಿತ ಹಲವು ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರು ಐಶ್ವರ್ಯಾ. 2012ರಲ್ಲಿ ಚಿತ್ರಕಥೆ, ನಿರ್ದೇಶನದ ಮೂಲಕ ತಮಿಳು ಚಿತ್ರ ವಲಯದಲ್ಲಿ ಬೆಳೆದರು.
(5 / 11)
ಇಬ್ಬರು ಚಿತ್ರರಂಗದಲ್ಲಿ ಕೆಲಸ ಮಾಡುವಾಗಲೇ ಪರಿಚಯವಾಗಿ ನಂತರ ಪ್ರೇಮಿಸಿ ಮದುವೆಯಾದರು. ತಮಗಿಂತ ಒಂದು ವರ್ಷ ದೊಡ್ಡವರಾದ ಐಶ್ವರ್ಯಾ ಅವರನ್ನು ಧನುಷ್ ವರಿಸಿದರು.
(6 / 11)
ಈ ಇಬ್ಬರು ಮದುವೆಯಾದ ನಂತರ ಚಿತ್ರಣವೇ ಬದಲಾಯಿತು. ಅಷ್ಟರ ಮಟ್ಟಿಗೆ ಚಿತ್ರರಂಗದಲ್ಲಿ ಒಂದೊಂದೇ ಮೆಟ್ಟಿಲು ಏರುತ್ತಾ ಹೋದರು. ನಟರಾಗಿ ಧನುಷ್, ನಿರ್ದೇಶಕರಾಗಿ ಐಶ್ವರ್ಯಾ ಚೆನ್ನಾಗಿಯೇ ಬೆಳೆದರು.
(7 / 11)
2004 ರಲ್ಲಿ ಮದುವೆಯಾದ ಈ ದಂಪತಿಗೆ ಲಿಂಗ ಮತ್ತು ಯಾತ್ರಾ ಎಂಬ ಇಬ್ಬರು ಮಕ್ಕಳಿದ್ದಾರೆ. ಲಿಂಗಾ ಈಗ ಪಿಯುಸಿ ವಿದ್ಯಾರ್ಥಿ,. ಸಣ್ಣವನು ಹೈಸ್ಕೂಲ್ ಮೆಟ್ಟಿಲು ಏರಿದ್ದು. ಕ್ರಿಕೆಟ್ ನಲ್ಲಿ ಆಸಕ್ತಿ ಹೊಂದಿದ್ದಾರೆ.
(8 / 11)
ನಾಲ್ಕೈದು ವರ್ಷಗಳಿಂದ ದಂಪತಿ ನಡುವೆ ಭಿನ್ನಾಭಿಪ್ರಾಯ ಶುರುವಾಗಿ ಪ್ರತ್ಯೇಕವಾಗುವ ಚರ್ಚೆಗಳು ಶುರುವಾಗಿದ್ದವು. ಆದರೆ ಹಿರಿಯರ ಮಧ್ಯಸ್ಥಿಕೆಯಿಂದ ಬದುಕು ಮುಂದುವರಿದಿತ್ತು.
(9 / 11)
ಆದರೆ 2022 ರ ಜನವರಿಯಲ್ಲಿ ದಂಪತಿಗಳು ತಮ್ಮ ಪ್ರತ್ಯೇಕತೆಯನ್ನು ಘೋಷಿಸಿಯೇ ಬಿಟ್ಟರು. ಅಲ್ಲಿಂದ ನ್ಯಾಯಾಲಯಕ್ಕೆ ವಿಚ್ಛೇದನೆ ಅರ್ಜಿ ಸಲ್ಲಿಕೆಯಾದರೂ ಒಂದುಗೂಡಿಸುವ ಪ್ರಯತ್ಬಗಳು ನಿಂತಿರಲಿಲ್ಲ.
(10 / 11)
ವಿಚ್ಛೇದನದ ಗೊಂದಲಗಳ ನಡುವೆಯೇ ಐಶ್ವರ್ಯ ಈ ವರ್ಷದಲ್ಲಿ ಲಾಲ್ ಸಲಾಂ ಎನ್ನುವ ರಜನಿಕಾಂತ್ ನಾಯಕತ್ವದ ಚಿತ್ರವೊಂದನ್ನು ನಿರ್ದೇಶಿಸಿ ಗಮನ ಸೆಳೆದಿದ್ದರು.
ಇತರ ಗ್ಯಾಲರಿಗಳು