Teachers Day Wishes: ಶಿಕ್ಷಕರ ದಿನದ ಶುಭಾಶಯ, ಸಂದೇಶ, ಗ್ರೀಟಿಂಗ್ಸ್ , ನಿಮ್ಮ ಅಚ್ಚುಮೆಚ್ಚಿನ ಶಿಕ್ಷಕ-ಶಿಕ್ಷಕಿಯರಿಗೆ ಈ ಸಂದೇಶ ಕಳುಹಿಸಿ
- Teacher's Day Messages : ಪ್ರತಿಯೊಬ್ಬ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೂ ಅಚ್ಚುಮೆಚ್ಚಿನ ಶಿಕ್ಷಕ, ಶಿಕ್ಷಕಿಯರು ಇರುತ್ತಾರೆ. ಶಾಲಾ ಕಾಲೇಜುಗಳಲ್ಲಿರುವ ಹತ್ತು ಹಲವು ಶಿಕ್ಷಕರಲ್ಲಿ ಕೆಲವರಂತೂ ತುಂಬಾ ಆಪ್ತರಾಗಿರುತ್ತಾರೆ. ವರ್ಣ ಮಾತ್ರ ಕಲಿಸಿದಾತಂ ಗುರು ಎಂಬ ಮಾತಿದೆ. ಒಂದಕ್ಷರವನ್ನು ಕಲಿಸಿದವನು ಗುರು ಎಂದು. ವಿದ್ಯಾರ್ಥಿಗಳೇ ನಿಮ್ಮ ಬದುಕಿನಲ್ಲಿ ಹಲವು ಜನರು ಗುರುಗಳು ಇರುತ್ತಾರೆ. ನಿಮಗೆ ಅಕ್ಷರ ಕಲಿಸಿದ ಬದುಕು ಕಲಿಸಿದ ಶಿಕ್ಷಕ ಶಿಕ್ಷಕಿಯರಿಗೆ ಇಂದು ತಪ್ಪದೇ ಸಂದೇಶಗಳನ್ನು, ಗ್ರೀಟಿಂಗ್ಸ್ಗಳನ್ನು, ವಿಶಸ್ಗಳನ್ನು ಕಳುಹಿಸಿ.

(1 / 9)
ಸೆಪ್ಟೆಂಬರ್ 5 ಶಿಕ್ಷಕರ ದಿನ. ಭಾರತದ ಮೊದಲ ಉಪರಾಷ್ಟ್ರಪತಿ ಮತ್ತು ಎರಡನೇ ರಾಷ್ಟ್ರಪತಿಯಾಗಿದ್ದ ಭಾರತ ರತ್ನ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನದಂದು ದೇಶದೆಲ್ಲೆಡೆ ಆಚರಿಸುವ ಶಿಕ್ಷಕರ ದಿನಕ್ಕೆ ನೀವು ಏನು ಸಂದೇಶ ಕಳುಹಿಸುವಿರಿ? ಇದಕ್ಕಾಗಿ ಇಂಟರ್ನೆಟ್ನಲ್ಲಿ ಸಂದೇಶಗಳು, ವಿಶಸ್ಗಳನ್ನು ಹುಡುಕುತ್ತಿದ್ದೀರಾ? ಹಾಗಾದರೆ, ಇಲ್ಲೊಂದಿಷ್ಟು ಗ್ರೀಟಿಂಗ್ಸ್, ವಿಶಸ್ಗಳನ್ನು ನೀಡಲಾಗಿದೆ. (Shutterstock)
(2 / 9)
ದೊಡ್ಡ ಕನಸು ಕಾಣಲು ನೀವು ನಮಗೆ ಕಾರಣ ನೀಡಿದ್ದೀರಿ. ಎಲ್ಲವನ್ನು ಸಾಧಿಸಲು ಸಂಪನ್ಮೂಲ ನೀಡಿದ್ದೀರಿ. ನಮ್ಮ ಜೀವನಕ್ಕೆ ನೀವು ಆಶೀರ್ವಾದ- ಶಿಕ್ಷಕರ ದಿನದ ಶುಭಾಶಯಗಳು
(3 / 9)
ನಿಮ್ಮ ಬದುಕಿನಲ್ಲಿ ನೀವು ಇತರರ ಜತೆ ನೀವೂ ಯಶಸ್ಸು ಪಡೆದಿರಬಹುದು. ನಿಮ್ಮ ಈ ಯಶಸ್ಸಿನ ಹಿಂದೆ ಅತ್ಯುತ್ತಮ ಶಿಕ್ಷಕರು ಎಲ್ಲೋ ಪಾತ್ರ ವಹಿಸಿರುತ್ತಾರೆ- ಬರಾಕ್ ಒಬಾಮಾ
(4 / 9)
"ಶಿಕ್ಷಕರು ಚಾಕ್ ಮತ್ತು ಸವಾಲಿನ ಸರಿಯಾದ ಮಿಶ್ರಣವನ್ನು ನೀಡಿ ನಮ್ಮ ಬದುಕನ್ನು ಬದಲಾಯಿಸಬಲ್ಲರು"- ಜಾಯ್ಸ್ ಮೇಯರ್
(5 / 9)
ನನ್ನನು ಇಂದು ಪರಿಪೂರ್ಣ ವ್ಯಕ್ತಿಯಾಗಿ ರೂಪಿಸಲು ನೀವು ಸಹಾಯ ಮಾಡಿದ್ದೀರಿ. ನಿಮ್ಮಿಂದ ನಾನು ಇಂದು ನಾನು ಪರಿಪೂರ್ಣ ವ್ಯಕ್ತಿಯಾಗಿದ್ದೇನೆ. ನಾನು ಇದಕ್ಕಾಗಿ ನಿಮಗೆ ಸದಾ ಋಣಿ- ಶಿಕ್ಷಕರ ದಿನದ ಶುಭಾಶಯ
(6 / 9)
ಪ್ರತಿಭಾನ್ವಿತ ಶಿಕ್ಷಕರು ಇಂದಿನ ಮಗುವಿನ ಅಗತ್ಯತೆಗಳನ್ನು ಪೂರೈಸುವುದು ಮಾತ್ರವಲ್ಲ, ಪ್ರತಿ ಮಗುವಿನ ಭವಿಷ್ಯದಲ್ಲಿ ಭರವಸೆ ಮತ್ತು ಕನಸುಗಳನ್ನು ಕಾಣಿಸುತ್ತಾರೆ- ರಾಬರ್ಟ್ ಜಾನ್ ಮೆಹನ್
(7 / 9)
ಹೆತ್ತವರು ನಮಗೆ ಬದುಕು ನೀಡುತ್ತಾರೆ. ಈ ಬದುಕನ್ನು ಹೇಗೆ ಬದುಕಬೇಕೆಂದು ಶಿಕ್ಷಕರು ಹೇಳಿ ಕೊಡುತ್ತಾರೆ. ಈ ಜಗತ್ತಿನ ಎಲ್ಲಾ ಕಠಿಣ ಪರಿಶ್ರಮಿ ಶಿಕ್ಷಕರಿಗೂ ಶಿಕ್ಷಕರ ದಿನದ ಶುಭಾಶಯಗಳು.
(8 / 9)
ನಿಮ್ಮ ಜ್ಞಾನ, ದಯೆ ಯಾವಾಗಲೂ ನಮ್ಮನ್ನು ಸರಿಯಾದ ಮಾರ್ಗಕ್ಕೆ ಕರೆದೊಯ್ಯುತ್ತದೆ, ಉತ್ತಮ ಮನುಷ್ಯರಾಗಲು ನಮಗೆ ಸ್ಫೂರ್ತಿ ನೀಡುತ್ತದೆ. ನನ್ನ ಎಲ್ಲಾ ಶಿಕ್ಷಕರಿಗೂ ನಿಮ್ಮ ದಿನ ಪ್ರೀತಿಯ ಶುಭಾಶಯ
ಇತರ ಗ್ಯಾಲರಿಗಳು