ಶಿಕ್ಷಕರ ದಿನಾಚರಣೆ 2024: ತೆರೆ ಮೇಲೆ ಗುರುಗಳ ಪಾತ್ರದಲ್ಲಿ ಅಭಿನಯಿಸಿದ್ದ ಸ್ಯಾಂಡಲ್‌ವುಡ್ ನಟ-ನಟಿಯರಿವರು; ನಿಮಗೆ ಯಾರ ಪಾತ್ರ ಇಷ್ಟ?
ಶಿಕ್ಷಕರಾಗಿ, ಭಾರತದ ರಾಷ್ಟ್ರಪತಿಗಳಾಗಿ ಹೆಸರಾದ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನದ ಅಂಗವಾಗಿ ಪ್ರತಿ ವರ್ಷ ಸೆಪ್ಟೆಂಬರ್ 5 ರಂದು ಶಿಕ್ಷಕರ ದಿನಾಚರಣೆ ಆಚರಿಸುತ್ತಾ ಬರಲಾಗಿದೆ.
(1 / 14)
ಈ ವಿಶೇಷ ದಿನದಂದು ಕನ್ನಡ ಚಿತ್ರರಂಗದಲ್ಲಿ ತೆರೆ ಮೇಲೆ ಶಿಕ್ಷಕರಾಗಿ ಮಿಂಚಿದ ನಟ-ನಟಿಯರನ್ನು ನೆನಪು ಬಾರದೆ ಇರದು. ಡಾ. ರಾಜ್‌ಕುಮಾರ್, ಡಾ. ವಿಷ್ಣುವರ್ಧನ್, ಅಂಬರೀಶ್, ರಮ್ಯಾ ಹಾಗೂ ಇನ್ನಿತರರು ತೆರೆ ಮೇಲೆ ನಟ-ನಟಿಯರಾಗಿ ಅಭಿನಯಿಸಿದ್ದಾರೆ. (PC: YouTube)
(2 / 14)
ಡಾ. ವಿಷ್ಣುವರ್ಧನ್ ನಾಯಕನಾಗಿ ನಟಿಸಿದ ಮೊದಲ ಚಿತ್ರ ನಾಗರಹಾವು. ಈ ಚಿತ್ರದಲ್ಲಿರ ರಾಮಾಚಾರಿ ಗುರುಗಳಾದ ಚಾಮಯ್ಯ ಮೇಷ್ಟ್ರು ಪಾತ್ರದಲ್ಲಿ ಹಿರಿಯ ನಟ ಕೆ.ಎಸ್.ಅಶ್ವತ್ಥ್ ನಟಿಸಿದ್ದರು. (PC: @SGVKannadaRetro)
(3 / 14)
ಎರಡು ಕನಸು, ದಾರಿ ತಪ್ಪಿದ ಮಗ, ಒಲವು ಗೆಲುವು ಚಿತ್ರದಲ್ಲಿ ವರನಟ ಡಾ ರಾಜ್‌ಕುಮಾರ್ ಕಾಲೇಜು ಪ್ರೊಫೆಸರ್ ಪಾತ್ರದಲ್ಲಿ ನಟಿಸಿದ್ದಾರೆ.
(5 / 14)
ಕಾಳಿದಾಸ ಕನ್ನಡ ಮೇಷ್ಟ್ರು ಚಿತ್ರದಲ್ಲಿ ನವರಸನಾಯಕ ಜಗ್ಗೇಶ್ ಕನ್ನಡ ಶಿಕ್ಷಕನ ಪಾತ್ರದಲ್ಲಿ ನಟಿಸಿದ್ದಾರೆ. ಜಗ್ಗೇಶ್ ಜೋಡಿಯಾಗಿ ಮೇಘನಾ ಗಾಂವ್ಕರ್ ಇಂಗ್ಲೀಷ್ ಶಿಕ್ಷಕಿಯಾಗಿ ನಟಿಸಿದ್ದಾರೆ.
(7 / 14)
ಹಳ್ಳಿಮೇಷ್ಟ್ರು ಚಿತ್ರದಲ್ಲಿ ವಿ ರವಿಚಂದ್ರನ್ ಶಾಲಾ ಶಿಕ್ಷಕನಾಗಿ ನಟಿಸಿದ್ದಾರೆ. ಈ ಸಿನಿಮಾ ಕಥೆ ಹಾಗೂ ಹಾಡುಗಳು ಇಂದಿಗೂ ಬಹಳ ಫೇಮಸ್.
(8 / 14)
ಸಿದ್ಲಿಂಗು ಚಿತ್ರದಲ್ಲಿ ಮೋಹಕ ತಾರೆ ರಮ್ಯಾ ಮಂಗಳ ಟೀಚರ್ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ರಮ್ಯಾ ಜೋಡಿಯಾಗಿ ಯೋಗೇಶ್ ಇದ್ದಾರೆ.
(9 / 14)
ಕಳೆದ ವರ್ಷ ತೆರೆ ಕಂಡ ಕ್ರಾಂತಿ ಚಿತ್ರದಲ್ಲಿ ಡಿಂಪಲ್ ಕ್ವೀನ್ ರಚಿತಾ ರಾಮ್ ಉಷಾ ಟೀಚರ್ ಪಾತ್ರದಲ್ಲಿ ನಟಿಸಿದ್ದಾರೆ.
(10 / 14)
ಮಾಸ್ಟರ್ ಕಿಶನ್ ನಿರ್ದೇಶಿಸಿದ್ದ ಕೇರ್ ಆಫ್ ಫುಟ್‌ಪಾತ್ ಚಿತ್ರದಲ್ಲಿ ರಾಷ್ಟ್ರಪ್ರಶಸ್ತಿ ವಿಜೇತ ನಟಿ ತಾರಾ ಅನುರಾಧಾ, ಸರಸ್ವತಿ ಟೀಚರ್ ಪಾತ್ರದಲ್ಲಿ ನಟಿಸಿದ್ದಾರೆ.
(12 / 14)
ಡೇರ್ ಡೆವಿಲ್ ಮುಸ್ತಾಫಾ ಸಿನಿಮಾದಲ್ಲಿ ನಟ ನಾಗಭೂಷಣ್ ಕನ್ನಡ ಲೆಕ್ಚರ್ ಮೋಹನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
(13 / 14)
ಫ್ರೊಫೆಸರ್ ಹಾಗೂ ಗೂಂಡಾ ಗುರು ಚಿತ್ರದಲ್ಲಿ ರೆಬೆಲ್ ಸ್ಟಾರ್ ಅಂಬರೀಶ್ ಕಾಲೇಜ್ ಪ್ರೊಫೆಸರ್, ಶಾಲಾ ಶಿಕ್ಷಕನ ಪಾತ್ರದಲ್ಲಿ ನಟಿಸಿದ್ದಾರೆ.
ಇತರ ಗ್ಯಾಲರಿಗಳು