ಸುಲಭವಾಗಿ ಸ್ಪಿನ್ ಬಲೆಗೆ ಬೀಳುತ್ತಿರುವ ಹಿಟ್‌ಮ್ಯಾನ್; 2020ರಿಂದ ಸ್ಪಿನ್ನರ್‌ಗಳ ಮುಂದೆ ರೋಹಿತ್ ಶರ್ಮಾ ಬ್ಯಾಟ್ ಸೈಲೆಂಟ್
- Rohit Sharma: ಇಂಗ್ಲೆಂಡ್ ಸ್ಪಿನ್ ದಾಳಿಗೆ, ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಬಲು ಬೇಗನೆ ವಿಕೆಟ್ ಒಪ್ಪಿಸಿದರು. ಸ್ಪಿನ್ನರ್‌ಗಳ ಬೌಲಿಂಗ್‌ಗೆ ಹಿಟ್‌ಮ್ಯಾನ್ ಬ್ಯಾಟ್ ಬೀಸಲು ಹೆಣಗಾಡುತ್ತಿದ್ದಾರೆ. ಅಂಕಿ-ಅಂಶಗಳೇ ಇದನ್ನು ಹೇಳುತ್ತಿವೆ. 2020ರ ನಂತರ ಸ್ಪಿನ್ನರ್‌ಗಳ ವಿರುದ್ಧ ರೋಹಿತ್ ಪ್ರದರ್ಶನ ಹೇಗಿದೆ ಎಂಬುದನ್ನು ನೋಡೋಣ.

(1 / 5)
ವಿಶಾಖಪಟ್ಟಣದಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ರೋಹಿತ್ ಶರ್ಮಾ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿದರು. ಆರಂಭದಿಂದಲೂ ಲಯ ಕಂಡುಕೊಳ್ಳಲು ವಿಫಲರಾದ ಭಾರತ ತಂಡದ ನಾಯಕನ ಬ್ಯಾಟ್‌ನಿಂದ ಒಂದೇ ಒಂದು ಬೌಂಡರಿ ಕೂಡಾ ಸಿಡಿಯಲಿಲ್ಲ. ಅವರಲ್ಲಿ ಆತ್ಮವಿಶ್ವಾಸದ ಕೊರತೆ ಇತ್ತು.
(2 / 5)
ಇಂಗ್ಲೆಂಡ್ ಪರ ಚೊಚ್ಚಲ ಪಂದ್ಯ ಆಡಿದ ಶೋಯೆಬ್ ಬಶೀರ್, ಭಾರತದ ನಾಯಕನ ವಿಕೆಟ್ ಪಡೆದರು, 41 ಎಸೆತಗಳನ್ನು ಎದುರಿಸಿದ ರೋಹಿತ್, ಕೇವಲ 14 ರನ್ ಗಳಿಸಿದರು. ರೋಹಿತ್ ಮತ್ತೆ ಸ್ಪಿನ್ ಬಲೆಗೆ ಬಿದ್ದರು. 2020 ರಿಂದ, ರೋಹಿತ್ ಪದೇ ಪದೇ ಸ್ಪಿನ್ನರ್‌ಗಳನ್ನು ಎದುರಿಸಲು ಹೆಣಗಾಡುತ್ತಿದ್ದಾರೆ.(AP)
(3 / 5)
2020ರಿಂದ ರೋಹಿತ್ ಶರ್ಮಾ ಸ್ಪಿನ್ನರ್‌ಗಳ ವಿರುದ್ಧ ಸುಲಭವಾಗಿ ಔಟಾಗುತ್ತಿದ್ದಾರೆ ಎಂದು ಅಂಕಿಅಂಶಗಳು ಹೇಳುತ್ತವೆ. ಅದಕ್ಕೂ ಮುನ್ನ ಸ್ಪಿನ್ ವಿರುದ್ಧ ಸಮರ್ಥವಾಗಿ ಬ್ಯಾಟ್ ಬೀಸುತ್ತಿದ್ದ ರೋಹಿತ್, ಉತ್ತಮ ರನ್ ಕಲೆ ಹಾಕುತ್ತಿದ್ದರು. ಆ ನಂತರ ಅಂಕಿ-ಅಂಶಗಳೇ ತಲೆಕೆಳಗಾಗಿವೆ.(PTI)
(4 / 5)
ರೋಹಿತ್ ಶರ್ಮಾ 2013ರಿಂದ 19ರವರೆಗೆ ಸ್ಪಿನ್ ವಿರುದ್ಧ 16 ಇನ್ನಿಂಗ್ಸ್‌ಗಳಲ್ಲಿ 81.6ರ ಸರಾಸರಿಯಲ್ಲಿ 734 ರನ್ ಗಳಿಸಿದ್ದರು. ಈ ನಡುವೆ 9 ಬಾರಿ ಸ್ಪಿನ್ ದಾಳಿ ವೇಖೆ ಔಟಾಗಿದ್ದಾರೆ.(AFP )
ಇತರ ಗ್ಯಾಲರಿಗಳು