Indian Cricketers wife profession: ಟೀಮ್ ಇಂಡಿಯಾ ಕ್ರಿಕೆಟಿಗರ ಪತ್ನಿಯರು ಕೆಲಸ ಮಾಡ್ತಾರಾ? ಯಾರು ಯಾವ ಉದ್ಯೋಗದಲ್ಲಿದ್ದಾರೆ?
- Indian Cricketers wife profession: ಟೀಮ್ ಇಂಡಿಯಾ ಕ್ರಿಕೆಟಿಗರು ಜಗತ್ತಿನಲ್ಲೇ ತುಂಬಾ ಫೇಮಸ್. ಬಲಿಷ್ಠ ಕ್ರಿಕೆಟ್ ತಂಡದ ಆಟಗಾರರು ಜಾಗತಿಕ ಮಟ್ಟದಲ್ಲಿ ಸುದ್ದಿಯಾಗುತ್ತಾರೆ. ಅವರು ಮಾತ್ರವಲ್ಲದೆ ಆಟಗಾರರ ಪತ್ನಿಯರು ಕೂಡಾ ಯಾವುದೇ ವಿಚಾರದಲ್ಲಿ ಅವರಿಗಿಂತ ಕಡಿಮೆಯಿಲ್ಲ. ವಿರಾಟ್ ಕೊಹ್ಲಿ ಅವರ ಪತ್ನಿ ಅನುಷ್ಕಾ ಶರ್ಮಾ ನಟಿಯಾಗಿ ಮಿಂಚುತ್ತಿದ್ದರೆ, ರವೀಂದ್ರ ಜಡೇಜಾ ಅವರ ಪತ್ನಿ ರಾಜಕೀಯದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ದೇಶದ ಇನ್ನುಳಿದ ಕೆಲ ಕ್ರಿಕೆಟಿಗರು ಮತ್ತು ಅವರ ಪತ್ನಿಯ ವೃತ್ತಿಯ ಬಗ್ಗೆ ಇಲ್ಲಿದೆ ಮಾಹಿತಿ.

(1 / 7)
R Ashwin prithi narayanan: ರವಿಚಂದ್ರನ್ ಅಶ್ವಿನ್ ಅವರು 2011ರಲ್ಲಿ ಪ್ರೀತಿ ನಾರಾಯಣ್ ಜೊತೆ ವಿವಾಹವಾದರು. ಇಬ್ಬರೂ ಒಂದೇ ಕಾಲೇಜಿನಲ್ಲಿ ಇಂಜಿನಿಯರಿಂಗ್ ಓದಿದ್ದರು. ಪ್ರೀತಿ ಬಿ.ಟೆಕ್ ಮಾಹಿತಿ ತಂತ್ರಜ್ಞಾನದವರೆಗೆ ಓದಿದ್ದು, ಬಳಿಕ ಕೆಲ ಕಂಪನಿಗಳಲ್ಲಿಯೂ ಕೆಲಸ ಮಾಡಿದ್ದರು. ಆದರೆ, ಅಶ್ವಿನ್ ಜತೆ ಮದುವೆಯಾದ ಬಳಿಕ ಸಂಸಾರದ ನಿರ್ವಹಣೆಯ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ.
(2 / 7)
Virat Kohli, Anushka Sharma :ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ 2017ರ ಡಿಸೆಂಬರ್ 11ರಂದು ಇಟಲಿಯಲ್ಲಿ ನಟಿ ಅನುಷ್ಕಾ ಶರ್ಮಾ ಅವರನ್ನು ವಿವಾಹವಾದರು. ಅನುಷ್ಕಾ ಬಾಲಿವುಡ್‌ನ ಪ್ರಸಿದ್ಧ ನಟಿ. ಅಲ್ಲದೆ ಜಾಹೀರಾತು ಕ್ಷೇತ್ರದಲ್ಲೂ ಸಕ್ರಿಯವಾಗಿದ್ದಾರೆ. ಬಾಲಿವುಡ್‌ನಲ್ಲಿ ಸತತವಾಗಿ ಹಲವು ಹಿಟ್ ಸಿನಿಮಾಗಳನ್ನು ನೀಡಿದ್ದಾರೆ.
(3 / 7)
rohit sharma ritika sajdeh : ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರ ಲವ್ ಸ್ಟೋರಿ ಸಿನಿಮಾ ಕಥೆಗಿಂತ ಕಡಿಮೆಯಿಲ್ಲ. ಅವರು ಕ್ರೀಡಾ ಮ್ಯಾನೇಜರ್ ರಿತಿಕಾ ಸಜ್ದೇಹ್ ಅವರನ್ನು ವಿವಾಹವಾದರು. ರಿತಿಕಾ ತಮ್ಮ ವೃತ್ತಿಜೀವನವನ್ನು ಕ್ರೀಡಾ ನಿರ್ವಹಣಾ ಕಂಪನಿಯೊಂದಿಗೆ ಪ್ರಾರಂಭಿಸಿದರು. ರಿತಿಕಾ ಮತ್ತು ರೋಹಿತ್ ಮೊದಲ ಬಾರಿಗೆ ಜಾಹೀರಾತಿನ ಚಿತ್ರೀಕರಣದ ಸಮಯದಲ್ಲಿ ಭೇಟಿಯಾದರು. ಆದ್ರೆ, ರೋಹಿತ್ ಜೊತೆ ಮದುವೆಯಾದ ಮೇಲೆ ರಿತಿಕಾ ಈ ಕ್ಷೇತ್ರಕ್ಕೆ ಗುಡ್ ಬೈ ಹೇಳಿದರು.
(4 / 7)
ajinkya rahane radhika dhopavkar: ಅಜಿಂಕ್ಯ ರಹಾನೆ 2014ರಲ್ಲಿ ರಾಧಿಕಾ ಧೋಪ್ವಾಕರ್ ಅವರನ್ನು ವಿವಾಹವಾದರು. ಅವರು ತಮ್ಮ ಕಾಲೇಜು ಜೀವನದಿಂದ ಒಬ್ಬರಿಗೊಬ್ಬರು ಪರಿಚಿತರು. ರಾಧಿಕಾ ಇಂಟೀರಿಯರ್ ಡಿಸೈನರ್.
(5 / 7)
ravindra jadeja riva solanki : ರವೀಂದ್ರ ಜಡೇಜಾ ಪ್ರಸ್ತುತ ಕ್ರಿಕೆಟ್‌ನ ಎಲ್ಲಾ ಮೂರು ಸ್ವರೂಪಗಳಲ್ಲಿ ಅತ್ಯುತ್ತಮ ಆಲ್‌ರೌಂಡರ್ ಆಗಿ ಮಿಂಚುತ್ತಿದ್ದಾರೆ. ಜಡೇಜಾ ಅವರು ರಿವಾ ಸೋಲಂಕಿ ಅವರೊಂದಿಗೆ ಮೆಕ್ಯಾನಿಕಲ್ ಎಂಜಿನಿಯರಿಂಗ್ ಅಧ್ಯಯನ ಮಾಡಿದ್ದಾರೆ. 2022ರ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಪಡೆದು ರಿವಾ ಗೆದ್ದಿದ್ದಾರೆ. ರಿವಾ ಅವರು ಸುದೀರ್ಘ ರಾಜಕೀಯ ಇತಿಹಾಸ ಹೊಂದಿರುವ ಕುಟುಂಬದಿಂದ ಬಂದವರು.
(6 / 7)
Dinesh Karthik-Dipika Pallikal: ದಿನೇಶ್ ಕಾರ್ತಿಕ್ ಮತ್ತು ಭಾರತದ ಸ್ಕ್ವಾಷ್ ಆಟಗಾರ್ತಿ ದೀಪಿಕಾ ಪಳ್ಳಿಕಲ್ 2013ರಲ್ಲಿ ಪರಸ್ಪರ ಭೇಟಿಯಾದರು. 3 ವರ್ಷಗಳ ಸಂಬಂಧದ ನಂತರ, ಅವರು 2015ರಲ್ಲಿ ವಿವಾಹವಾದರು. ದೀಪಿಕಾ ಶ್ರೇಷ್ಠ ಸ್ಕ್ವಾಷ್ ಆಟಗಾರ್ತಿ. 2014ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಜೋತ್ಸ್ನಾ ಚಿನಪ್ಪ ಅವರೊಂದಿಗೆ ಚಿನ್ನದ ಪದಕ ಗೆದ್ದಿದ್ದರು. ಅವರಿಗೆ ಅರ್ಜುನ ಪ್ರಶಸ್ತಿ ಮತ್ತು ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಇತರ ಗ್ಯಾಲರಿಗಳು