ಪಾಕಿಸ್ತಾನ ವಿರುದ್ಧ ಕಣಕ್ಕಿಳಿಯಲು ಕೆಎಲ್ ರಾಹುಲ್ ಸಜ್ಜು; ಕೊಹ್ಲಿ-ರೋಹಿತ್ ಇಲ್ಲದೆ ನೆಟ್ಸ್‌ನಲ್ಲಿ ಬೆವರಿಳಿಸಿದ ಭಾರತದ ಆಟಗಾರರು
India vs Pakistan: ಕೊಲಂಬೊದಲ್ಲಿ ಭಾರತದ ಆಟಗಾರರು ಸುದೀರ್ಘ ಅಭ್ಯಾಸ ನಡೆಸಿದರು. ಆದರೆ, ಈ ಅಭ್ಯಾಸಕ್ಕೆ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಕಾಣಿಸಿಕೊಂಡಿಲ್ಲ.
(1 / 10)
ಏಷ್ಯಾಕಪ್ 2023 ಟೂರ್ನಿಯ ಸೂಪರ್ ಫೋರ್ ಹಂತದಲ್ಲಿ ಭಾರತ ಸೆಪ್ಟೆಂಬರ್ 10 ರಂದು ಪಾಕಿಸ್ತಾನ ತಂಡವನ್ನು ಎದುರಿಸಲಿದೆ. ಈ ಹೈವೋಲ್ಟೇಜ್ ಪಂದ್ಯಕ್ಕಾಗಿ ಟೀಮ್ ಇಂಡಿಯಾ ಆಟಗಾರರು ನೆಟ್ಸ್‌ನಲ್ಲಿ ಸಖತ್ ಬೆವರು ಹರಿಸಿದರು.(Photo: Twitter/BCCI)
(2 / 10)
ಕೊಲಂಬೊದಲ್ಲಿ ಭಾರತದ ಆಟಗಾರರು ಸುದೀರ್ಘ ಅಭ್ಯಾಸ ನಡೆಸಿದರು. ಆದರೆ, ಈ ಅಭ್ಯಾಸಕ್ಕೆ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಮತ್ತು ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಬಂದಿರಲಿಲ್ಲ.(Photo: Twitter/BCCI)
(3 / 10)
ಗಾಯದಿಂದ ಚೇತರಿಸಿಕೊಂಡಿರುವ ಕೆಎಲ್ ರಾಹುಲ್ ಕೂಡ ಅಭ್ಯಾಸ ನಡೆಸಿದರು. ಏಷ್ಯಾಕಪ್ ಟೂರ್ನಿಗೆ ಆಯ್ಕೆಯಾಗಿದ್ದರೂ ಮೊದಲೆರಡು ಪಂದ್ಯಗಳಿಗೆ ಲಭ್ಯರಿರಲಿಲ್ಲ.ಈಗ ಅವರು ಸಂಪೂರ್ಣ ಫಿಟ್ನೆಸ್ ಪಡೆದಿರುವಂತಿದೆ.(Photo: Twitter/BCCI)
(5 / 10)
ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಸೆಪ್ಟೆಂಬರ್ 10 ರಂದು ಕೊಲಂಬೊದ ಆರ್.ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯಕ್ಕೂ ಮಳೆ ಅಡ್ಡಿಪಡಿಸುವ ಸಾಧ್ಯತೆಗಳಿವೆ.(Photo: Twitter/BCCI)
(7 / 10)
ಭಾರತ-ಪಾಕಿಸ್ತಾನ ಪಂದ್ಯಕ್ಕೆ ಶೇ 75ರಿಂದ 95ರಷ್ಟು ಮಳೆ ಬೀಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಇತರ ಗ್ಯಾಲರಿಗಳು