ಟಿ20 ವಿಶ್ವಕಪ್ ಬಳಿಕ ಜಿಂಬಾಬ್ವೆ ಪ್ರವಾಸ ಕೈಗೊಳ್ಳಲಿದೆ ಭಾರತ; 5 ಪಂದ್ಯಗಳ ಟಿ20 ಸರಣಿಯಲ್ಲಿ ಭಾಗಿ
- India vs Zimbabwe: 2024ರಲ್ಲಿ ಭಾರತ ಕ್ರಿಕೆಟ್ ತಂಡ ಆಡಲಿರುವ ಸರಣಿಗಳ ಪಟ್ಟಿಗೆ ಮತ್ತೊಂದು ಸರಣಿ ಸೇರ್ಪಡೆಗೊಂಡಿದೆ. ಮಹತ್ವದ ಟಿ20 ವಿಶ್ವಕಪ್ ಪಂದ್ಯಾವಳಿ ನಡೆದ ಬಳಿಕ ಟೀಮ್ ಇಂಡಿಯಾ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಆಡಲು ಜಿಂಬಾಬ್ವೆ ಪ್ರವಾಸ ಮಾಡಲಿದೆ.

(1 / 5)
2022ರ ನಂತರ ಜಿಂಬಾಬ್ವೆಗೆ ಇದು ಭಾರತ ತಂಡದ ಮೊದಲ ಪ್ರವಾಸವಾಗಲಿದೆ. ಈ ಬಾರಿ ಸರಣಿಯ ಎಲ್ಲಾ ಐದು ಪಂದ್ಯಗಳು ಹರಾರೆಯಲ್ಲಿ ನಡೆಯಲಿವೆ.
(2 / 5)
ಜುಲೈ 6ರಿಂದ 14ರವರೆಗೆ ಸರಣಿ ನಡೆಯಲಿದೆ. ಮೊದಲ ಎರಡು ಪಂದ್ಯಗಳು ಹಗಲು ಪಂದ್ಯಗಳಾಗಿದ್ದು, ಭಾರತದ ಕಾಲಮಾನದ ಪ್ರಕಾರ ಮಧ್ಯಾಹ್ನ 1 ಗಂಟೆಗೆ ಆರಂಭವಾಗಲಿದೆ. ಕೊನೆಯ ಮೂರು ಪಂದ್ಯಗಳು ರಾತ್ರಿ 6 ಗಂಟೆಗೆ ಪ್ರಾರಂಭವಾಗಲಿದೆ.
(3 / 5)
2010ರಿಂದ ಜಿಂಬಾಬ್ವೆ ಮತ್ತು ಭಾರತದ ನಡುವೆ ಇದು ಐದನೇ ಬಾರಿಗೆ ಟಿ20 ದ್ವಿಪಕ್ಷೀಯ ಸರಣಿ ನಡೆಯುತ್ತಿದೆ. 2015 ಮತ್ತು 2016ರಲ್ಲಿ ಭಾರತವು ಪ್ರವಾಸ ಮಾಡಿತ್ತು. ಈ ಎರಡೂ ಸಂದರ್ಭಗಳಲ್ಲಿ ಸರಣಿ ಗೆದ್ದು ತವರಿಗೆ ಮರಳಿದೆ.
(4 / 5)
ಎರಡು ವರ್ಷಗಳ ಹಿಂದೆ, ಭಾರತವು ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಆಡಲು ಜಿಂಬಾಬ್ವ ಪ್ರವಾಸ ಕೈಗೊಂಡಿತ್ತು. ಕೊನೆಯ ಸರಣಿಯಲ್ಲಿ ಭಾರತವು 3-0 ಅಂತರದಿಂದ ಕ್ಲೀನ್ ಸ್ವೀಪ್ ಸಾಧಿಸಿತ್ತು.
ಇತರ ಗ್ಯಾಲರಿಗಳು