ಆರ್​ಆರ್​-ಸಿಎಸ್​ಕೆ 10 ಸೋಲು; ಇದು ಐಪಿಎಲ್​ ಲೀಗ್​ ಹಂತದಲ್ಲಿ ಹತ್ತು ಅಥವಾ ಅದಕ್ಕಿಂತ ಹೆಚ್ಚು ಪಂದ್ಯ ಸೋತ ತಂಡಗಳ ಪಟ್ಟಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಆರ್​ಆರ್​-ಸಿಎಸ್​ಕೆ 10 ಸೋಲು; ಇದು ಐಪಿಎಲ್​ ಲೀಗ್​ ಹಂತದಲ್ಲಿ ಹತ್ತು ಅಥವಾ ಅದಕ್ಕಿಂತ ಹೆಚ್ಚು ಪಂದ್ಯ ಸೋತ ತಂಡಗಳ ಪಟ್ಟಿ

ಆರ್​ಆರ್​-ಸಿಎಸ್​ಕೆ 10 ಸೋಲು; ಇದು ಐಪಿಎಲ್​ ಲೀಗ್​ ಹಂತದಲ್ಲಿ ಹತ್ತು ಅಥವಾ ಅದಕ್ಕಿಂತ ಹೆಚ್ಚು ಪಂದ್ಯ ಸೋತ ತಂಡಗಳ ಪಟ್ಟಿ

  • 2025ರ ಐಪಿಎಲ್​ನಲ್ಲಿ ರಾಜಸ್ಥಾನ್ ರಾಯಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಲಾ 10 ಲೀಗ್ ಪಂದ್ಯಗಳಲ್ಲಿ ಸೋತಿವೆ. ಹಾಗಾದರೆ, ಲೀಗ್ ಹಂತದಲ್ಲಿ 10 ಅಥವಾ ಅದಕ್ಕಿಂತ ಹೆಚ್ಚು ಪಂದ್ಯಗಳನ್ನು ಸೋತ ತಂಡಗಳ ಪಟ್ಟಿ ಇಲ್ಲಿದೆ.

2025ರ ಐಪಿಎಲ್​ನಲ್ಲಿ ರಾಜಸ್ಥಾನ್ ರಾಯಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್​ ತಂಡಗಳು ತಲಾ 10 ಪಂದ್ಯಗಳಲ್ಲಿ ಸೋಲಿಗೆ ಶರಣಾಗಿವೆ. ಸಿಎಸ್​ಕೆ ಇನ್ನೂ ಒಂದು ಪಂದ್ಯ ಬಾಕಿ ಇದೆ. ಐಪಿಎಲ್ ಇತಿಹಾಸದಲ್ಲಿ ಲೀಗ್ ಹಂತದಲ್ಲಿ 10 ಅಥವಾ ಅದಕ್ಕಿಂತ ಹೆಚ್ಚು ಪಂದ್ಯ ಸೋತ ತಂಡಗಳನ್ನು ನೋಡೋಣ.
icon

(1 / 5)

(PTI)

ಐಪಿಎಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ 2008ರ ಚಾಂಪಿಯನ್ ತಂಡ ರಾಜಸ್ಥಾನ್ ರಾಯಲ್ಸ್ ಲೀಗ್ ಹಂತದಲ್ಲಿ 10 ಪಂದ್ಯಗಳನ್ನು ಸೋತಿದೆ. ಐಪಿಎಲ್ 2025ರಲ್ಲಿ ಆರ್​ಆರ್​ ಆಡಿದ 14 ಪಂದ್ಯಗಳಲ್ಲಿ 10 ಸೋಲು, 4 ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ.
icon

(2 / 5)

(REUTERS)

5 ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ 2ನೇ ಬಾರಿಗೆ ಈ ಪಟ್ಟಿಗೆ ಸೇರ್ಪಡೆಯಾಗಿದೆ. 2025ರ ಐಪಿಎಲ್​ಗೂ ಮುನ್ನ 2022ರಲ್ಲಿ ಭಾರತ 10 ಪಂದ್ಯದಲ್ಲಿ ಸೋತಿತ್ತು.
icon

(3 / 5)

ಐಪಿಎಲ್ ಇತಿಹಾಸದಲ್ಲಿ ಚೆನ್ನೈ ಸೂಪರ್ ಕಿಂಗ್ಸ್, ಕೋಲ್ಕತಾ ನೈಟ್ ರೈಡರ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಮುಂಬೈ ಇಂಡಿಯನ್ಸ್, ಪುಣೆ ವಾರಿಯರ್ಸ್, ಡೆಕ್ಕನ್ ಚಾರ್ಜರ್ಸ್, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಸನ್​ರೈಸರ್ಸ್ ಹೈದರಾಬಾದ್ ತಂಡಗಳು ಎರಡು ಬಾರಿ ಲೀಗ್ ಹಂತದಲ್ಲಿ 10 ಪಂದ್ಯಗಳನ್ನು ಸೋತಿವೆ.
icon

(4 / 5)

(Surjeet Yadav)

ಮೊದಲ ಬಾರಿಗೆ ಐಪಿಎಲ್ ಪ್ರಶಸ್ತಿ ಗೆಲ್ಲುವ ಕನಸಿನಲ್ಲಿರುವ ಪಂಜಾಬ್ ಕಿಂಗ್ಸ್ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಲೀಗ್ ಹಂತದಲ್ಲಿ ತಂಡವು ಮೂರು ಬಾರಿ 10 ಅಥವಾ ಅದಕ್ಕಿಂತ ಹೆಚ್ಚು ಪಂದ್ಯಗಳನ್ನು ಸೋತಿದೆ. 2010ರಲ್ಲಿ ಮೊದಲ ಬಾರಿಗೆ ಈ ಕೆಟ್ಟ ದಾಖಲೆ ಬರೆದಿತ್ತು. ನಂತರ 2015, 2016ರಲ್ಲಿ ಮತ್ತೊಮ್ಮೆ ಇದೇ ಕೆಟ್ಟ ದಾಖಲೆ ನಿರ್ಮಿಸಿತ್ತು.
icon

(5 / 5)

ಪ್ರಸನ್ನಕುಮಾರ್ ಪಿ.ಎನ್.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಸಂಜೆವಾಣಿ, ವಿಶ್ವವಾಣಿ, ಪ್ರಜಾವಾಣಿ, ಈಟಿವಿ ಭಾರತ್, ನ್ಯೂಸ್ ಫಸ್ಟ್​ ಮಾಧ್ಯಮ ಸಂಸ್ಥೆಗಳಲ್ಲಿ ಒಟ್ಟು 7 ವರ್ಷ ಸೇವೆ ಸಲ್ಲಿಸಿದ ಅನುಭವ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಲಿಂಗಯ್ಯನಪಾಳ್ಯ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.

ಇತರ ಗ್ಯಾಲರಿಗಳು