ಪ್ರವಾಸದ ವೇಳೆ ನಿಮ್ಮಲ್ಲಿರಬೇಕಾದ 5 ಅಗತ್ಯ ಗ್ಯಾಜೆಟ್‌ಗಳು; ಕ್ಯಾಮರಾ, ಪವರ್‌ಬ್ಯಾಂಕ್ ಯಾವುದೆಂಬ ಗೊಂದಲ ಬೇಡ
- ನೀವು ಉತ್ಸಾಹಿ ಪ್ರವಾಸಪ್ರಿಯರಾಗಿದ್ದರೆ, ಒಂದು ಸ್ಥಳದಿಂದ ಮತ್ತೊಂದೆಡೆಗೆ ಟ್ರಾವೆಲಿಂಗ್ ಮಾಡುತ್ತಾ ಇರುತ್ತೀರಿ. ಇಂಥಾ ಸಂದರ್ಭದಲ್ಲಿ ಕೆಲವೊಂದು ಗ್ಯಾಜೆಟ್‌ಗಳು ನಿಮ್ಮ ಬಳಿ ಇರಬೇಕಾಗುತ್ತದೆ. ಉತ್ತಮ ಗ್ಯಾಜೆಟ್ ಸಂಗಾತಿಯನ್ನು ಹುಡುಕುವ ಉತ್ಸಾಹಿ ಪ್ರಯಾಣಿಕರಾಗಿದ್ದರೆ, ನಿಮ್ಮಲ್ಲಿರಬೇಕಾದ 5 ಅಗತ್ಯ ಗ್ಯಾಜೆಟ್‌ಗಳ ಪಟ್ಟಿ ಇಲ್ಲಿದೆ.
- ನೀವು ಉತ್ಸಾಹಿ ಪ್ರವಾಸಪ್ರಿಯರಾಗಿದ್ದರೆ, ಒಂದು ಸ್ಥಳದಿಂದ ಮತ್ತೊಂದೆಡೆಗೆ ಟ್ರಾವೆಲಿಂಗ್ ಮಾಡುತ್ತಾ ಇರುತ್ತೀರಿ. ಇಂಥಾ ಸಂದರ್ಭದಲ್ಲಿ ಕೆಲವೊಂದು ಗ್ಯಾಜೆಟ್‌ಗಳು ನಿಮ್ಮ ಬಳಿ ಇರಬೇಕಾಗುತ್ತದೆ. ಉತ್ತಮ ಗ್ಯಾಜೆಟ್ ಸಂಗಾತಿಯನ್ನು ಹುಡುಕುವ ಉತ್ಸಾಹಿ ಪ್ರಯಾಣಿಕರಾಗಿದ್ದರೆ, ನಿಮ್ಮಲ್ಲಿರಬೇಕಾದ 5 ಅಗತ್ಯ ಗ್ಯಾಜೆಟ್‌ಗಳ ಪಟ್ಟಿ ಇಲ್ಲಿದೆ.
(1 / 5)
ಗೋಪ್ರೋ ಹೀರೋ 11 ಕ್ಯಾಮರಾ: ಗೋಪ್ರೋ ಹೀರೋ 11 ಬ್ಲ್ಯಾಕ್ ಕ್ಯಾಮರಾದೊಂದಿಗೆ ನಿಮ್ಮ ಪ್ರವಾಸದ ಸ್ಮರಣೀಯ ಕ್ಷಣಗಳನ್ನು ಸೆರೆಹಿಡಿಯಿರಿ. ಇದು ಬಹುಮುಖ ಬಳಕೆಯ ಮತ್ತು ಬಾಳಿಕೆ ಬರುವ ಆಕ್ಷನ್ ಕ್ಯಾಮೆರಾ. ನಿಮ್ಮ ಸಾಹಸಮಯ ಪ್ರವಾಸದ ಕ್ಷಣಗಳನ್ನು ಉತ್ತಮ ಇಮೇಜ್ ಗುಣಮಟ್ಟ ಹಾಗೂ ಸುಧಾರಿತ ಮೌಂಟಿಂಗ್ ಆಯ್ಕೆಗಳ ಶ್ರೇಣಿಯೊಂದಿಗೆ ಇನ್ನಷ್ಟು ಅವಿಸ್ಮರಣೀಯವಾಗಿಸಲಬಲ್ಲದು.(Amazon)
(2 / 5)
ಜೆಬಿಎಲ್ ಚಾರ್ಜ್ 5 ಸ್ಪೀಕರ್: ವಾಟರ್‌ಪ್ರೂಫ್ ಜೆಬಿಎಲ್ ಚಾರ್ಜ್ 5 ಸ್ಪೀಕರ್‌ನೊಂದಿಗೆ ನಿಮ್ಮ ಮುಂದಿನ ಪ್ರಾವಾಸದ ವೇಳೆ ಪಾರ್ಟಿಯನ್ನು ಮತ್ತಷ್ಟು ಅದ್ಧೂರಿಯಾಗಿಸಿ. ಉತ್ತಮ ಆಡಿಯೊ ಕ್ವಾಲಿಟಿ ಹಾಗೂ ಗುಣಮಟ್ಟದ ಧ್ವನಿಯೊಂದಿಗೆ ನಿಮ್ಮ ಜೋಶ್ ಹೆಚ್ಚಿಸಲಬಲ್ಲ ಸಾಮರ್ಥ್ಯ ಇದಕ್ಕಿದೆ. ಹೊರಾಂಗಣ ಸಾಹಸಗಳಿಗೆ ನಿಮಗೆ ಪರಿಪೂರ್ಣ ಸಂಗಾತಿಯಾಗಿದೆ.(Amazon)
(3 / 5)
ಬೋಸ್ ನಾಯ್ಸ್ ಕ್ಯಾನ್ಸಲಿಂಗ್ ಹೆಡ್ ಫೋನ್ಸ್ 700: ಬೋಸ್ ನಾಯ್ಸ್ ಕ್ಯಾನ್ಸಲಿಂಗ್ ಹೆಡ್ ಫೋನ್ 700, ಅತ್ಯಂತ ಸವಾಲಿನ ವಾತಾವರಣದಲ್ಲಿಯೂ ಅದ್ಭುತ ಗುಣಮಟ್ಟದ ಆಡಿಯೊ ನಿಮ್ಮ ಕಿವಿಗೆ ಕೇಳಿಸುತ್ತದೆ. ಈ ಅತ್ಯಾಧುನಿಕ ಹೆಡ್ ಫೋನ್ ನಾಯ್ಸ್ ಕ್ಯಾನ್ಸಲಿಂಗ್ ತಂತ್ರಜ್ಞಾನ ಹೊಂದಿದೆ. ಅಂದರೆ ಗುಣಮಟ್ಟದ ಆಡಿಯೋ ನೀಡುತ್ತದೆ. ನಿಮ್ಮ ಸಾಹಸಮಯ ಪ್ರವಾಸದ ಸಮಯದಲ್ಲಿ ಉತ್ತಮ ಮನರಂಜನೆ ನೀಡಲಿದೆ.(Amazon)
(4 / 5)
ಅಮೇಝ್‌ಫಿಟ್ ಟಿ-ರೆಕ್ಸ್ ಅಲ್ಟ್ರಾ ಸ್ಮಾರ್ಟ್‌ವಾಚ್ : ಅಮೇಝ್‌ಫಿಟ್ ಟಿ-ರೆಕ್ಸ್ ಅಲ್ಟ್ರಾ ಸ್ಮಾರ್ಟ್ ವಾಚ್ ಹೊರಾಂಗಣ ಸಾಹಸಗಳ ಸಂದರ್ಭಗಳಲ್ಲಿ ಬಳಸಲು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಇದು -30 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆ ತಾಪಮಾನದಲ್ಲಿಯೂ ಬಳಸಬಹುದು. ಒಂದು ಬಾರಿ ಚಾರ್ಜ್ ಮಾಡಿದರೆ 20 ದಿನಗಳವರೆಗೆ ಬಾಳಿಕೆ ಬರುತ್ತದೆ.(Amazon)
ಇತರ ಗ್ಯಾಲರಿಗಳು