ಸೆಪ್ಟೆಂಬರ್‌ನಲ್ಲಿ ಐಫೋನ್ 16 ಲಾಂಚ್; ಹೊಸ ಸೀರೀಸ್ ಬಂದ ಬಳಿಕ ಐಫೋನ್ 15 ಖರೀದಿಸದಿರೋದೆ ಒಳ್ಳೆಯದು
- ಮುಂದಿನ ತಿಂಗಳು, ಅಂದರೆ ಸೆಪ್ಟೆಂಬರ್‌ನಲ್ಲಿ ಐಫೋನ್ 16 ಲಾಂಚ್ ಆಗಲಿದೆ. ಭಾರಿ ರಿಯಾಯಿತಿಯಿಂದಾಗಿ ಐಫೋನ್ 16 ಫೋನ್‌ಗಳು ಬಿಡುಗಡೆಯಾದ ನಂತರ ಐಫೋನ್ 15 ಖರೀದಿಸದಿರುವುದೇ ಒಳ್ಳೆಯದು. ಇದಕ್ಕೆ ಕಾರಣ ಇಲ್ಲಿದೆ.
- ಮುಂದಿನ ತಿಂಗಳು, ಅಂದರೆ ಸೆಪ್ಟೆಂಬರ್‌ನಲ್ಲಿ ಐಫೋನ್ 16 ಲಾಂಚ್ ಆಗಲಿದೆ. ಭಾರಿ ರಿಯಾಯಿತಿಯಿಂದಾಗಿ ಐಫೋನ್ 16 ಫೋನ್‌ಗಳು ಬಿಡುಗಡೆಯಾದ ನಂತರ ಐಫೋನ್ 15 ಖರೀದಿಸದಿರುವುದೇ ಒಳ್ಳೆಯದು. ಇದಕ್ಕೆ ಕಾರಣ ಇಲ್ಲಿದೆ.
(1 / 5)
ಬಹುನಿರೀಕ್ಷಿತ ಐಫೋನ್ 16 ಸರಣಿಯು ಒಂದಷ್ಟು ಅಪ್ಡೇಟ್‌ಗಳು ಹಾಗೂ ಹೊಸ ವೈಶಿಷ್ಟ್ಯಗಳೊಂದಿಗೆ ಕೆಲವೇ ವಾರಗಳಲ್ಲಿ ಲಾಂಚ್ ಆಗಲಿದೆ. ಬಿಡುಗಡೆಯ ದಿನಾಂಕ ಹತ್ತಿರವಾಗುತ್ತಿದ್ದಂತೆ, ಐಫೋನ್ ಪ್ರಿಯರು ಐಫೋನ್ 15 ಬೆಲೆ ಇಳಿಕೆಗಾಗಿ ಕಾಯುತ್ತಿದ್ದಾರೆ. ಆದಾಗ್ಯೂ, ಹಲವಾರು ಕಾರಣಗಳು ಮತ್ತು ಹಾರ್ಡ್‌ವೇರ್ ಮಿತಿಗಳಿಂದಾಗಿ ಸ್ಮಾರ್ಟ್ ಫೋನ್ ಅಪ್ ಗ್ರೇಡ್‌ಗೆ ಯೋಗ್ಯವಾಗಿಲ್ಲ ಎಂಬುದು ತಿಳಿದುಬಂದಿದೆ. (X.com/Apple Hub)
(2 / 5)
ಐಫೋನ್ 15 ಕೇವಲ ಒಂದು ವರ್ಷ ಹಳೆಯದು, ಆದರೆ, ಇದು 2022ರ ಎ16 ಬಯೋನಿಕ್ ಚಿಪ್ ಅನ್ನು ಹೊಂದಿದೆ, ಇದು ಮುಂಬರುವ ಎ18 ಸರಣಿ ಚಿಪ್‌ಸೆಟ್‌ಗಳಿಗೆ ಹೋಲಿಸಿದರೆ ವೇಗ, ಮಲ್ಟಿಟಾಸ್ಕಿಂಗ್ ಮತ್ತು ಕಾರ್ಯಕ್ಷಮತೆ ಹೊಂದಿಲ್ಲ. ಐಫೋನ್ 16 ಮೊದಲ ಬಾರಿಗೆ ಇದಕ್ಕೂ ಹಿಂದಿನ ಎಲ್ಲಾ ಐಫೋನ್ ಮಾದರಿಗಳಿಗಿಂತಲೂ ನವೀಕರಿಸಿದ ಚಿಪ್‌ಸೆಟ್‌ಗಳನ್ನು ಹೊಂದಿರಲಿದೆ. ಹೀಗಾಗಿ ಐಫೋನ್ 16 ಬಳಕೆದಾರರು ಸುಗಮ ಮತ್ತು ವೇಗದ ಕಾರ್ಯಕ್ಷಮತೆಯೊಂದಿಗೆ ದೀರ್ಘಾವಧಿಯಲ್ಲಿ ಎಲ್ಲಾ ಸುಧಾರಿತ ವೈಶಿಷ್ಟ್ಯಗಳನ್ನು ಆನಂದಿಸಬಹುದು. (Apple )
(3 / 5)
ಐಫೋನ್ 15 ಒಂದು ಕೇವಲ ಒಂದು ವರ್ಷ ಹಳೆಯದಾದರೂ ಆಪಲ್ ಇಂಟೆಲಿಜೆನ್ಸ್ ಅನ್ನು ಕಳೆದುಕೊಳ್ಳುತ್ತದೆ. ಈ ಫೋನ್ ಐಒಎಸ್ 18 ಅಪ್ಡೇಟ್‌ನೊಂದಿಗೆ ಹೊಂದಿಕೆಯಾದರೂ, ಇತ್ತೀಚಿನ ಡಬ್ಲ್ಯೂಡಬ್ಲ್ಯೂಡಿಸಿ ಈವೆಂಟ್‌ನಲ್ಲಿ ಘೋಷಿಸಲಾದ ಇತ್ತೀಚಿನ ಎಐ ವೈಶಿಷ್ಟ್ಯಗಳನ್ನು ಕಳೆದುಕೊಳ್ಳುತ್ತದೆ. ಹೀಗಾಗಿ ಹೊಸ ಸೀರೀಸ್ ಬಂದಾದ ಹಳೆಯ ಫೋನ್‌ಗೆ ರಿಯಾಯಿತಿ ಸಿಕ್ಕರೂ ದೊಡ್ಡ ಪ್ರಮಾಣದ ಹಣವನ್ನು ಖರ್ಚು ಮಾಡುವುದು ಅಷ್ಟೊಂದು ಯೋಗ್ಯವಲ್ಲ. ಹೀಗಾಗಿ ಐಫೋನ್ 15 ಖರೀದಿದಾರರು ಸ್ಮಾರ್ಟ್ ಸಿರಿ, ಎಐ ಚಾಲಿತ ಐಒಎಸ್ ಅಪ್ಲಿಕೇಶನ್‌ಗಳು ಮತ್ತು ಇತರ ವೈಶಿಷ್ಟ್ಯಗಳನ್ನು ಆನಂದಿಸಲು ಸಾಧ್ಯವಾಗುವುದಿಲ್ಲ.(HT Tech)
(4 / 5)
ಐಫೋನ್ 16 ಬೆಲೆ ಸುಮಾರು 799 ಡಾಲರ್. ಅಂದರೆ ಭಾರತದಲ್ಲಿ ಸುಮಾರು 80,000 ರೂಪಾಯಿ. ಆದರೆ, ನೀವು ಇನ್ನೂ ಕಡಿಮೆ ಬೆಲೆಯ ಐಫೋನ್ ಖರೀದಿಗೆ ನೋಡುತ್ತಿದ್ದರೆ, ಮಾರ್ಚ್ 2025ರಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿರುವ ಐಫೋನ್ ಎಸ್ಇ 4ಗಾಗಿ ಕಾಯಬೇಕು. ಈ ಫೋನ್, ಎಲ್ಲಾ ಪ್ರೀಮಿಯಂ ವೈಶಿಷ್ಟ್ಯಗಳೊಂದಿಗೆ ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಬರುವ ನಿರೀಕ್ಷೆಯಿದೆ. (Bloomberg)
ಇತರ ಗ್ಯಾಲರಿಗಳು