Whatsapp tips: ವಾಟ್ಸಪ್‌ನಲ್ಲಿ ನಿಮ್ಮನ್ನು ಯಾರಾದರೂ ಬ್ಲಾಕ್ ಮಾಡಿದ್ದಾರ? ಈ ರೀತಿ ಚೆಕ್ ಮಾಡಿ ಪರಿಶೀಲಿಸಿ
- whatsapp tips and tricks: ನಿಮಗೆ ವಾಟ್ಸಪ್‌ನಲ್ಲಿ ಯಾರಾದರೂ ಕಿರಿಕಿರಿ ಮಾಡುತ್ತಿದ್ದರೆ ಅವರ ಸಹವಾಸ ಬೇಡವೆಂದು ಅವರ ಮೊಬೈಲ್ ನಂಬರ್ ಅನ್ನು ಬ್ಲಾಕ್ ಮಾಡಬಹುದು. ಇದೇ ರೀತಿ ನಿಮ್ಮನ್ನು ಯಾರಾದರೂ ಬ್ಲಾಕ್ ಮಾಡಿರಬಹುದು. ನಿಮ್ಮನ್ನು ಯಾರಾದರೂ ಬ್ಲಾಕ್ ಮಾಡಿದ್ದಾರ ಎಂದು ತಿಳಿಯಲು ಮುಂದಿನ ಸಲಹೆಗಳನ್ನು ಅನುಸರಿಸಿ.
- whatsapp tips and tricks: ನಿಮಗೆ ವಾಟ್ಸಪ್‌ನಲ್ಲಿ ಯಾರಾದರೂ ಕಿರಿಕಿರಿ ಮಾಡುತ್ತಿದ್ದರೆ ಅವರ ಸಹವಾಸ ಬೇಡವೆಂದು ಅವರ ಮೊಬೈಲ್ ನಂಬರ್ ಅನ್ನು ಬ್ಲಾಕ್ ಮಾಡಬಹುದು. ಇದೇ ರೀತಿ ನಿಮ್ಮನ್ನು ಯಾರಾದರೂ ಬ್ಲಾಕ್ ಮಾಡಿರಬಹುದು. ನಿಮ್ಮನ್ನು ಯಾರಾದರೂ ಬ್ಲಾಕ್ ಮಾಡಿದ್ದಾರ ಎಂದು ತಿಳಿಯಲು ಮುಂದಿನ ಸಲಹೆಗಳನ್ನು ಅನುಸರಿಸಿ.
(1 / 7)
ವಾಟ್ಸಪ್‌ನಲ್ಲಿ ಯಾರನ್ನಾದರೂ ಬ್ಲಾಕ್ ಮಾಡಲು ನಮ್ಮಲ್ಲಿ ಹಲವು ಕಾರಣಗಳು ಇರಬಹುದು. ಸೇಲ್ಸ್ ಕಿರಿಕಿರಿ, ಅಪರಿಚಿತ ಸಂಖ್ಯೆಯಿಂದ ತೊಂದರೆ ಮುಂತಾದ ಕಾರಣ ನೀಡಿ ನೀವು ಯಾವುದಾದರೂ ಮೊಬೈಲ್ ನಂಬರ್ ಅನ್ನು ಬ್ಲಾಕ್ ಲಿಸ್ಟ್‌ಗೆ ಸೇರಿಸಿರಬಹುದು. ಇದೇ ರೀತಿ ನಿಮ್ಮಿಂದ ತೊಂದರೆಯಾಗುತ್ತದೆ ಎಂದು ಅಥವಾ ನಿಮ್ಮ ಸಹವಾಸ ಸಾಕು ಎಂಬ ಕಾರಣಕ್ಕೆ ಯಾರಾದರೂ ನಿಮ್ಮನ್ನು ಯಾರಾದರೂ ಬ್ಲಾಕ್ ಮಾಡಿರಬಹುದು. ಇದನ್ನು ತಿಳಿಯಲು ವಾಟ್ಸಪ್‌ನಲ್ಲಿ ಯಾವುದೇ ಫೀಚರ್‌ಗಳು ಇಲ್ಲ. ಆದರೆ, ಕೆಲವೊಂದು ವಿಧಾನಗಳ ಮೂಲಕ ನಿಮ್ಮನ್ನು ಯಾರು ಬ್ಲಾಕ್ ಮಾಡಿದ್ದಾರೆ ಎಂದು ತಿಳಿದುಕೊಳ್ಳಬಹುದು.
(AI Image deepai.org)(2 / 7)
ಪ್ರೇಮ ಪ್ರಕರಣಗಳಲ್ಲಿ ಇಂತಹ ಬ್ಲಾಕ್ ಪ್ರಕರಣಗಳು ಹೆಚ್ಚಾಗಿ ನಡೆಯುತ್ತವೆ. ನಿಮ್ಮ ಜತೆ ಸಾಕಷ್ಟು ದಿನ ಚೆನ್ನಾಗಿಯೇ ಇದ್ದ ಹುಡುಗ ಅಥವಾ ಹುಡುಗಿ ಮತ್ತೆ ನಿಮ್ಮಿಂದ ದೂರ ಹೋಗಲು ಬ್ಲಾಕ್ ಅಸ್ತ್ರ ಪ್ರಯೋಗಿಸಬಹುದು. ಕೆಲವೊಮ್ಮೆ ಇನ್ನೊಬ್ಬರ ಜತೆ ಸಂಬಂಧ ಉಂಟಾದಾಗ ಹಳೆಯ ಸಂಬಂಧ ಕಡಿದುಕೊಳ್ಳಲು ಈ ಬ್ಲಾಕ್ ಫೀಚರ್ ಬಳಸಲಾಗುತ್ತದೆ. ಅಶ್ಲೀಲ ಸಂದೇಶ ಕಳುಹಿಸುವವರನ್ನು ಈ ರೀತಿ ಬ್ಲಾಕ್ ಲಿಸ್ಟ್‌ಗೆ ಸೇರಿಸಬಹುದು. ನಿಮ್ಮಿಂದ ಹಣಕಾಸು ಸಾಲ ಪಡೆದವರು ನೀವು ಸಾಲ ಕೇಳುವಿರಿ ಎಂದು ಬ್ಲಾಕ್ ಲಿಸ್ಟ್‌ಗೆ ಸೇರಿಸಬಹುದು. ಹೀಗೆ ನಿಮ್ಮನ್ನು ಬ್ಲಾಕ್ ಮಾಡಲು ನಿರ್ದಿಷ್ಟ ಕಾರಣಗಳು ಆ ಕಡೆಯವರಲ್ಲಿ ಇರಬಹುದು.
(3 / 7)
ವಾಟ್ಸಪ್‌ನಲ್ಲಿ ಯಾರಾದರೂ ನಿಮ್ಮ ಕಾಂಟ್ಯಾಕ್ಟ್ ಸಂಖ್ಯೆಯನ್ನು ಬ್ಲಾಕ್ ಮಾಡಿದರೆ ನಿಮಗೆ ಅವರ ಲಾಸ್ಟ್ ಸೀನ್, ಆನ್‌ಲೈನ್ ಸ್ಟೇಟಸ್ ಇತ್ಯಾದಿಗಳನ್ನು ನೋಡಲಾಗುವುದಿಲ್ಲ. ಈ ರೀತಿ ನಮ್ಮ ಪ್ರೈವೆಸಿ ಸೆಟ್ಟಿಂಗ್‌ನಲ್ಲಿ ಇತರರನ್ನು ಬ್ಲಾಕ್ ಮಾಡಬಹುದು.
(4 / 7)
ನಿಮ್ಮನ್ನು ಯಾರಾದರೂ ಬ್ಲಾಕ್ ಮಾಡಿದರೆ ಅವರ ಪ್ರೊಫೈಲ್ ಫಿಕ್ಚರ್ ನಿಮಗೆ ಕಾಣಿಸದು. ಸಾಮಾನ್ಯವಾಗಿ ಪ್ರೊಫೈಲ್ ಫಿಕ್ಚರ್ ಹಾಕುವ ವ್ಯಕ್ತಿಯ ಪ್ರೊಫೈಲ್ ಫಿಕ್ಚರ್ ಕಾಣಿಸದೆ ಇದ್ದರೆ ಅವರು ನಿಮ್ಮನ್ನು ಬ್ಲಾಕ್ ಮಾಡಿರಬಹುದು. (ಪ್ರೊಫೈಲ್ ಫಿಕ್ಚರ್ ಹಾಕದೆ ಇರುವವರೂ ಇರುತ್ತಾರೆ).
(5 / 7)
ನೀವು ಯಾರಿಗಾದರೂ ವಾಟ್ಸಪ್‌ನಲ್ಲಿ ಕಾಲ್ ಮಾಡಲು ಪ್ರಯತ್ನಿಸಿದರೆ ಅವರಿಗೆ ಕಾಲ್ ಹೋಗದೆ ಇದ್ದರೂ ಅವರು ಬ್ಲಾಕ್ ಮಾಡಿರುವ ಸಾಧ್ಯತೆಯನ್ನು ಸೂಚಿಸುತ್ತದೆ.
(6 / 7)
ಈ ರೀತಿ ಎಲ್ಲಾ ಅಂಶಗಳು ಒಂದು ಕಾಂಟ್ಯಾಕ್ಟ್‌ನಿಂದ ಗೋಚರಿಸುತ್ತ ಇದ್ದರೆ ಆ ವ್ಯಕ್ತಿ ನಿಮ್ಮನ್ನು ಬ್ಲಾಕ್ ಮಾಡಿರುವ ಸಾಧ್ಯತೆ ಹೆಚ್ಚಿದೆ ಎಂದು ಅರ್ಥ. ಕೆಲವೊಮ್ಮೆ ನಿಮ್ಮ ಮೊಬೈಲ್ ನಂಬರ್ ಆ ಕಡೆಯವರಲ್ಲಿ ಮಿಸ್ ಆಗಿದ್ದರೆ, ಅವರ ಮೊಬೈಲ್ ರಿಸೆಟ್ ಆಗಿದ್ದರೆ ಮೇಲಿನಂತೆ ಕಾಣಿಸಬಹುದು. ಯಾವುದಕ್ಕೂ ಅವಸರದಲ್ಲಿ "ಇವರು ನನ್ನನ್ನು ಬ್ಲಾಕ್ ಮಾಡಿದ್ದಾರೆ" ಎಂಬ ನಿರ್ಧಾರಕ್ಕೆ ಬರಬೇಡಿ.
ಇತರ ಗ್ಯಾಲರಿಗಳು