200 ಮೆಗಾ ಫಿಕ್ಸೆಲ್ ಕ್ಯಾಮೆರಾ ಹೊಂದಿರುವ ಐದು 5ಜಿ ಸ್ಮಾರ್ಟ್‌ಫೋನ್‌ಗಳು; ಮೊಬೈಲ್ ಫೋಟೋಗ್ರಫಿಗೆ ಸಖತ್ ಕ್ಯಾಮೆರಾ ಫೋನ್
200MP Camera Mobile Phones: ಫೋಟೋಗ್ರಫಿ ಕುರಿತು ಆಸಕ್ತಿ ಇರುವವರು 200 ಮೆಗಾ ಫಿಕ್ಸೆಲ್ ಕ್ಯಾಮೆರಾ ಇರುವ ಫೋನ್ ನೀವು ಹುಡುಕುತ್ತಿರಬಹುದು. ಅಂತಹ ಕ್ಯಾಮೆರಾ ಫೋನ್‌ಗಳ ವಿವರ ಇಲ್ಲಿ ನೀಡಲಾಗಿದೆ. ಈ ಪಟ್ಟಿಯಲ್ಲಿ ಸ್ಯಾಮ್‌ಸಂಗ್, ರೆಡ್‌ಮಿಯಂತಹ ಬ್ರ್ಯಾಂಡ್‌ಗಳೂ ಇವೆ.
(1 / 6)
ರೆಡ್ಮಿ ನೋಟ್ 13 ಪ್ರೊ 5ಜಿ: ಈ ರೆಡ್ಮಿ ಫೋನ್ 200 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾವನ್ನು ಹೊಂದಿದೆ. ಸೆಲ್ಫಿಗಾಗಿ 16 ಮೆಗಾಪಿಕ್ಸೆಲ್ ಲೆನ್ಸ್ ಹೊಂದಿದೆ. ಫ್ಲಿಪ್‌ಕಾರ್ಟ್‌ನಲ್ಲಿ ಫೋನ್‌ನ 8 ಜಿಬಿ + 128 ಜಿಬಿ ಆವೃತ್ತಿಯ ದರ 19,999 ರೂಪಾಯಿ ಇದೆ. (ಆರ್ಕ್ವೈಟ್ ಬಿಳಿ ಬಣ್ಣದ ಫೋನ್ ದರ ಇದಾಗಿದೆ).
(2 / 6)
ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್ 23 ಅಲ್ಟ್ರಾ 5ಜಿ: ಸ್ಯಾಮ್‌ಸಂಗ್‌ನ ಈ ಪ್ರಮುಖ ಫೋನ್ 200 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾವನ್ನು ಹೊಂದಿದೆ. ಸೆಲ್ಫಿಗಾಗಿ ಇದು 12 ಮೆಗಾಪಿಕ್ಸೆಲ್ ಲೆನ್ಸ್ ಅನ್ನು ಹೊಂದಿದೆ. ಫ್ಲಿಪ್‌ಕಾರ್ಟ್‌ನಲ್ಲಿ ಈ ಫೋನ್‌ನ 12ಜಿಬಿ + 256ಜಿಬಿ ವರ್ಷನ್‌ನ ದರ 76,566 ರೂಪಾಯಿ ಇದೆ. ಇದು ಹಸಿರು ಬಣ್ಣದ ಫೋನ್ ದರ.
(3 / 6)
ಇನ್ಫಿನಿಕ್ಸ್ ಝೀರೋ ಅಲ್ಟ್ರಾ 5ಜಿ: ಇದರ ಹಿಂಭಾಗದ ಮುಖ್ಯ ಕ್ಯಾಮೆರಾ 200 ಮೆಗಾ ಫಿಕ್ಸೆಲ್ ಇದೆ. ಸೆಲ್ಫಿಗಾಗಿ ಮುಂಭಾಗದಲ್ಲಿ 32 ಮೆಗಾಪಿಕ್ಸೆಲ್ ಕ್ಯಾಮೆರಾ ಇದೆ. ಫ್ಲಿಪ್‌ಕಾರ್ಟ್‌ನಲ್ಲಿ 8ಜಿಬಿ + 256 ಜಿಬಿ ಫೋನ್ ದರ 34,990 ರೂ. (ಕಪ್ಪು ಬಣ್ಣ) ಇದೆ.
(4 / 6)
ರೆಡ್ಮಿ ನೋಟ್ 13 ಪ್ರೊ+ 5ಜಿ: ಈ ರೆಡ್ಮಿ ಫೋನ್ 200 ಮೆಗಾ ಫಿಕ್ಸೆಲ್ ಕ್ಯಾಮೆರಾ ಹೊಂದಿದೆ. ಮುಂಭಾಗದಲ್ಲಿ 16 ಮೆಗಾ ಫಿಕ್ಸೆಲ್ ಕ್ಯಾಮೆರಾ ಇದೆ. ಫ್ಲಿಪ್‌ಕಾರ್ಟ್‌ನಲ್ಲಿ 8ಜಿಬಿ + 256ಜಿಬಿ ಆವೃತ್ತಿಯ ದರ 22,496 ರೂಪಾಯಿ ಇದೆ. ಇದು ಫ್ಯೂಷನ್ ಪರ್ಪಲ್ ಬಣ್ಣದ ಫೋನ್‌ನ ದರ.
(5 / 6)
ರಿಯಲ್ ಮಿ 11 ಪ್ರೊ+ 5ಜಿ: ಈ ಫೋನ್ ಒಐಎಸ್ ಜತೆಗೆ 200 ಮೆಗಾಫಿಕ್ಸೆಲ್ ಮುಖ್ಯ ಕ್ಯಾಮೆರಾ ಹೊಂದಿದೆ. ಸೆಲ್ಫಿಗಾಗಿ ಮುಂಭಾಗದಲ್ಲಿ 32 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಹೊಂದಿದೆ. ಫ್ಲಿಪ್‌ಕಾರ್ಟ್‌ನಲ್ಲಿ 8ಜಿಬಿ + 256ಜಿಬಿ ಆವೃತ್ತಿಯ ದರ 28,990 ರೂಪಾಯಿ ಇದೆ.
ಇತರ ಗ್ಯಾಲರಿಗಳು