Audi RS3: ಜಾಗತಿಕ ಮಾರುಕಟ್ಟೆಗೆ ಕಾಲಿಟ್ಟ ‘ಆಡಿ ಆರ್‌ಎಸ್3’; ಕಾರಿನ ಸ್ಟೈಲಿಶ್‌ ಲುಕ್‌ ಹೀಗಿದೆ ನೋಡಿ-technology news audi rs3 performance sedan unveiled globally with stylish look and upgrades luxury cars jra ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Audi Rs3: ಜಾಗತಿಕ ಮಾರುಕಟ್ಟೆಗೆ ಕಾಲಿಟ್ಟ ‘ಆಡಿ ಆರ್‌ಎಸ್3’; ಕಾರಿನ ಸ್ಟೈಲಿಶ್‌ ಲುಕ್‌ ಹೀಗಿದೆ ನೋಡಿ

Audi RS3: ಜಾಗತಿಕ ಮಾರುಕಟ್ಟೆಗೆ ಕಾಲಿಟ್ಟ ‘ಆಡಿ ಆರ್‌ಎಸ್3’; ಕಾರಿನ ಸ್ಟೈಲಿಶ್‌ ಲುಕ್‌ ಹೀಗಿದೆ ನೋಡಿ

  • ಪ್ರತಿಷ್ಠಿತ ಕಾರು ಕಂಪನಿಯಾದ ಆಡಿ, ತನ್ನ ಹೊಸ ಆರ್‌ಎಸ್ 3 ಪರ್ಫಾಮೆನ್ಸ್ ಸೆಡಾನ್ ಕಾರನ್ನು ಜಾಗತಿಕವಾಗಿ ಬಿಡುಗಡೆಗೊಳಿಸಿದೆ. ಹೊರಭಾಗ ಮತ್ತು ಕ್ಯಾಬಿನ್ ಒಳಗೆ ಹಲವಾರು ನೂತನ ಅಪ್‌ಡೇಟ್‌ಗಳೊಂದಿಗೆ ಕಾರು ರಸ್ತೆಗಿಳಿಯಲಿದಿದ್ದು, ಇದರ ವೈಶಿಷ್ಟ್ಯ ಕುರಿತ ಮಾಹಿತಿ ಇಲ್ಲಿದೆ.

ಆಡಿ ಆರ್‌ಎಸ್3 ಪರ್ಫಾಮೆನ್ಸ್ ಸೆಡಾನ್ ನವೀಕರಿಸಿದ ಕಾರನ್ನು ಜಾಗತಿಕವಾಗಿ ಅನಾವರಣಗೊಳಿಸಲಾಗಿದೆ. ಐಷಾರಾಮಿ ಸೆಡಾನ್ ಕಾರು, ವಿನ್ಯಾಸ ಮತ್ತು ವೈಶಿಷ್ಟ್ಯದಲ್ಲಿ ಅಪ್ಡೇಟ್‌ಗಳೊಂದಿಗೆ ಬಂದಿದೆ. ಕಾರು ಹೆಚ್ಚು ಆಕರ್ಷಕವಾಗಿದ್ದು, ಹೊಸ ಆಡಿ ಆರ್‌ಎಸ್ 3 ಕಾರಿನ ಹೊರಭಾಗ ಮತ್ತು ಕ್ಯಾಬಿನ್ ಒಳಭಾಗದ ನವೀಕರಣಗಳು ಗ್ರಾಹಕರನ್ನು ಮತ್ತಷ್ಟು ಆಕರ್ಷಿಸುತ್ತವೆ ಎಂದು ವಾಹನ ತಯಾರಕರು ನಿರೀಕ್ಷಿಸಿದ್ದಾರೆ.
icon

(1 / 6)

ಆಡಿ ಆರ್‌ಎಸ್ 3 ಪರ್ಫಾಮೆನ್ಸ್ ಸೆಡಾನ್, ನವೀಕರಿಸಿದ ಕಾರಿನಲ್ಲಿ ಮುಂಭಾಗದ ಗ್ರಿಲ್ ಮರುವಿನ್ಯಾಸಗೊಳಿಸಲಾಗಿದೆ. ಇದು ಸ್ಮಾರ್ಟ್ ಆಗಿ ಕಾಣುವ ಮ್ಯಾಟ್ರಿಕ್ಸ್ ಎಲ್ಇಡಿ ಹೆಡ್‌ಲೈಟ್‌ಗಳಿಂದ ಸುತ್ತುವರೆದಿದೆ. ಮ್ಯಾಟ್ರಿಕ್ಸ್ ಎಲ್ಇಡಿ ಎಂಬುದು ಫೋಕ್ಸ್ ವ್ಯಾಗನ್ ಗ್ರೂಪ್ ಅಡಿಯಲ್ಲಿ ಜರ್ಮನಿಯ ಐಷಾರಾಮಿ ಕಾರು ತಯಾರಕರ ಸೆಡಾನ್ ಮತ್ತು ಎಸ್ ಯುವಿಗಳಲ್ಲಿ ಬಳಸಲಾಗುವ ಸಿಗ್ನೇಚರ್ ತಂತ್ರಜ್ಞಾನವಾಗಿದೆ.
icon

(2 / 6)

ಹೊಸ ಆಡಿ ಆರ್ ಎಸ್ 3 ಕಾರು ಸಿಂಗಲ್ ಫ್ರೇಮ್ ಗ್ರಿಲ್‌ನಲ್ಲಿ ಡೈಮಂಡ್ ಮಾದರಿಯನ್ನು ಹೊಂದಿದ್ದು, ನವೀಕರಿಸಿದ ಏರ್ ಇನ್ ಟೇಕ್‌ಗಳಲ್ಲಿ ಇದನ್ನು ಪುನರಾವರ್ತಿಸಲಾಗುತ್ತದೆ. ಇದು ಲಂಬ ಕಪ್ಪು ಬ್ಲೇಡ್‌ಗಳನ್ನು ಹೊಂದಿದೆ. ಜರ್ಮನ್ ಐಷಾರಾಮಿ ಕಾರು ತಯಾರಕ ಕಂಪನಿಯು, ತನ್ನ ಹೊಸ ವಿನ್ಯಾಸವು 1987ರ ಕ್ವಾಟ್ರೊ ಎಸ್ 1 ಪೈಕ್ಸ್ ಪೀಕ್ ಅನ್ನು ನೆನಪಿಸುತ್ತದೆ ಎಂದು ಹೇಳಿಕೊಂಡಿದೆ.
icon

(3 / 6)

ಹಿಂಭಾಗದಲ್ಲಿ, ಟೈಲ್ ಲೈಟ್ ಗಳು ಹೊಸ ಗ್ರಾಫಿಕ್ಸ್ ಅನ್ನು ಹೊಂದಿದ್ದರೆ, ಬಂಪರ್ ಈಗ ಎರಡು ಬದಿಯ ಲಂಬ ರಿಫ್ಲೆಕ್ಟರ್‌ಗಳನ್ನು ಹೊಂದಿದೆ. ಜೊತೆಗೆ ಮೂರನೇ ರಿಫ್ಲೆಕ್ಟರ್ ಡಿಫ್ಯೂಸರ್ ಅನ್ನು ವಿಭಜಿಸುತ್ತದೆ. ಆಡಿ ಕಂಪನಿಯು ಇದೇ ಮೊದಲ ಬಾರಿಗೆ ಆರ್ ಎಸ್ 3 ಕಾರನ್ನು ಡೇಟೋನಾ ಗ್ರೇ ಮ್ಯಾಟ್ ಫಿನಿಶ್‌ನೊಂದಿಗೆ ಬಿಡುಗಡೆಗೊಳಿಸಿದೆ.
icon

(4 / 6)

ಕ್ಯಾಬಿನ್ ಒಳಗೆ, ಆಡಿ ಆರ್ ಎಸ್ 3 ಕಾರಿನಲ್ಲೂ ಬಿಎಂಡಬ್ಲ್ಯು ಎಂ2ನಂತೆಯೇ ಐಚ್ಛಿಕ ಕಾರ್ಬನ್ ಬಕೆಟ್ ಮುಂಭಾಗದ ಸೀಟುಗಳಿವೆ. ಆಡಿ ಕಂಪನಿಯು ಪ್ಯಾಡಲ್ ಶಿಫ್ಟರ್ ಗೆ ಆಕರ್ಷಕ ವಿನ್ಯಾಸವನ್ನು ಸಹ ನೀಡಿದೆ.
icon

(5 / 6)

ಹೊಸ ಆಡಿ ಆರ್ ಎಸ್ 3 ಕಾರು ಪವರ್ ಟ್ರೇನ್ ಅನ್ನು ಉಳಿಸಿಕೊಂಡಿದೆ. ಇದು ಐದು ಸಿಲಿಂಡರ್‌ಗಳೊಂದಿಗೆ ಬರುತ್ತದೆ. 2.5 ಟಿಎಫ್‌ಎಸ್‌ಐ ಪೆಟ್ರೋಲ್ ಎಂಜಿನ್ 389 ಬಿಹೆಚ್ ಪಿ ಪವರ್ ಉತ್ಪಾದಿಸುತ್ತದೆ.
icon

(6 / 6)

ಇತರ ಗ್ಯಾಲರಿಗಳು