ನಿಮ್ಮ ಐಫೋನ್ ಒರಿಜಿನಲಾ ಅಲ್ಲ ನಕಲಿಯಾ? ಹೆಚ್ಚಾಯ್ತು ಡೂಪ್ಲಿಕೇಟ್ ಭೀತಿ, ಗುಣಮಟ್ಟ ಪರೀಶಿಲಿಸಲು ಈ ಟೆಸ್ಟ್‌ ಮಾಡಿ-technology news how to check iphone is real or fake key tips to identify authenticity of apple iphone tech tips jra ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ನಿಮ್ಮ ಐಫೋನ್ ಒರಿಜಿನಲಾ ಅಲ್ಲ ನಕಲಿಯಾ? ಹೆಚ್ಚಾಯ್ತು ಡೂಪ್ಲಿಕೇಟ್ ಭೀತಿ, ಗುಣಮಟ್ಟ ಪರೀಶಿಲಿಸಲು ಈ ಟೆಸ್ಟ್‌ ಮಾಡಿ

ನಿಮ್ಮ ಐಫೋನ್ ಒರಿಜಿನಲಾ ಅಲ್ಲ ನಕಲಿಯಾ? ಹೆಚ್ಚಾಯ್ತು ಡೂಪ್ಲಿಕೇಟ್ ಭೀತಿ, ಗುಣಮಟ್ಟ ಪರೀಶಿಲಿಸಲು ಈ ಟೆಸ್ಟ್‌ ಮಾಡಿ

  • ಜಾಗತಿಕವಾಗಿ ಹೆಚ್ಚು ಮಾರಾಟವಾಗುವ ಹಾಗೂ ಜನಪ್ರಿಯವಾಗಿರುವ ಸ್ಮಾರ್ಟ್ ಫೋನ್‌ಗಳಲ್ಲಿ ಐಫೋನ್‌ಗೆ ಅಗ್ರಪಟ್ಟ. ಫೋನ್‌ಗಳಲ್ಲಿ ಐಫೋನ್‌ಗಿರುವ ಬ್ರಾಂಡ್‌ ವ್ಯಾಲ್ಯೂ ಇತರ ಫೋನ್‌ಗಳಿಗೆ ಇಲ್ಲ. ಈ ಜನಪ್ರಿಯತೆಯಿಂದಾಗಿ ಅದರ ನಕಲಿ ಅಥವಾ ಡೂಪ್ಲಿಕೇಟ್‌ ಮಾದರಿಗಳು ಕೂಡಾ ಹೆಚ್ಚಿವೆ. ನೀವು ಬಳಸುವ ಐಫೋನ್‌ ಕೂಡಾ ನಕಲಿ ಆಗಿರಬಹುದು. ಅದನ್ನು ಪರಿಶೀಲಿಸುವುದು ಹೇಗೆ ಎಂದು ನೋಡೋಣ.

ಐಫೋನ್ ಖರೀದಿಸುವುದು ಹಲವರ ಆಸೆ-ಕನಸು. ಇದೇ ಕಾರಣಕ್ಕೆ ವಿಶ್ವಾದ್ಯಂತ ಹೆಚ್ಚು ಮಾರಾಟವಾಗುವ ಸ್ಮಾರ್ಟ್ ಫೋನ್‌ಗಳಲ್ಲಿ ಇದು ಕೂಡಾ ಒಂದು. 2024ರ ಮೂರನೇ ತ್ರೈಮಾಸಿಕದಲ್ಲಿ ಐಫೋನ್‌ ಮಾರಾಟ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿ ಆದಾಯವು ಸರಿಸುಮಾರು 39 ಬಿಲಿಯನ್ ಡಾಲರ್ ತಲುಪಿದೆ. ಈ ಬೇಡಿಕೆ ಹಾಗೂ ಜನಪ್ರಿಯತೆಯು ಹೆಚ್ಚಾಗುತ್ತಿರುವುದರಿಂದ ಒರಿಜಿನಲ್ ಮಾದರಿಗಳನ್ನು ಹೋಲುವ ನಕಲಿ ಐಫೋನ್‌ಗಳ ಹೆಚ್ಚಳಕ್ಕೂ ಕಾರಣವಾಗಿದೆ. 
icon

(1 / 7)

ಐಫೋನ್ ಖರೀದಿಸುವುದು ಹಲವರ ಆಸೆ-ಕನಸು. ಇದೇ ಕಾರಣಕ್ಕೆ ವಿಶ್ವಾದ್ಯಂತ ಹೆಚ್ಚು ಮಾರಾಟವಾಗುವ ಸ್ಮಾರ್ಟ್ ಫೋನ್‌ಗಳಲ್ಲಿ ಇದು ಕೂಡಾ ಒಂದು. 2024ರ ಮೂರನೇ ತ್ರೈಮಾಸಿಕದಲ್ಲಿ ಐಫೋನ್‌ ಮಾರಾಟ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿ ಆದಾಯವು ಸರಿಸುಮಾರು 39 ಬಿಲಿಯನ್ ಡಾಲರ್ ತಲುಪಿದೆ. ಈ ಬೇಡಿಕೆ ಹಾಗೂ ಜನಪ್ರಿಯತೆಯು ಹೆಚ್ಚಾಗುತ್ತಿರುವುದರಿಂದ ಒರಿಜಿನಲ್ ಮಾದರಿಗಳನ್ನು ಹೋಲುವ ನಕಲಿ ಐಫೋನ್‌ಗಳ ಹೆಚ್ಚಳಕ್ಕೂ ಕಾರಣವಾಗಿದೆ. (AFP)

ವಿಶ್ವಾಸಾರ್ಹ ಮೂಲಗಳಿಂದ ಖರೀದಿಸಿ: ಆಪಲ್ ಸ್ಟೋರ್‌ನಂತಹ ವಿಶ್ವಾಸಾರ್ಹ ಚಿಲ್ಲರೆ ವ್ಯಾಪಾರಿಗಳಿಂದ ಐಫೋನ್ ಖರೀದಿಸುವುದು ಸೂಕ್ತ. ಇದು ನಕಲಿ ಸಾಧನಗಳನ್ನು ಖರೀದಿಸುವ ಅಪಾಯ ಕಡಿಮೆ ಮಾಡುತ್ತದೆ. ಹೀಗಾಗಿ ಅನಧಿಕೃತ ಮಾರಾಟಗಾರರಿಂದ ಅಥವಾ ದುರಸ್ತಿ ಸೇವೆ ನೀಡುವ ಅಂಗಡಿಗಳಿಂದ ಖರೀದಿಸುವುದು ನಕಲಿ ಫೋನ್‌ ಅಪಾಯ ಹೆಚ್ಚಿಸಬಹುದು.
icon

(2 / 7)

ವಿಶ್ವಾಸಾರ್ಹ ಮೂಲಗಳಿಂದ ಖರೀದಿಸಿ: ಆಪಲ್ ಸ್ಟೋರ್‌ನಂತಹ ವಿಶ್ವಾಸಾರ್ಹ ಚಿಲ್ಲರೆ ವ್ಯಾಪಾರಿಗಳಿಂದ ಐಫೋನ್ ಖರೀದಿಸುವುದು ಸೂಕ್ತ. ಇದು ನಕಲಿ ಸಾಧನಗಳನ್ನು ಖರೀದಿಸುವ ಅಪಾಯ ಕಡಿಮೆ ಮಾಡುತ್ತದೆ. ಹೀಗಾಗಿ ಅನಧಿಕೃತ ಮಾರಾಟಗಾರರಿಂದ ಅಥವಾ ದುರಸ್ತಿ ಸೇವೆ ನೀಡುವ ಅಂಗಡಿಗಳಿಂದ ಖರೀದಿಸುವುದು ನಕಲಿ ಫೋನ್‌ ಅಪಾಯ ಹೆಚ್ಚಿಸಬಹುದು.(HT)

ಪ್ಯಾಕೇಜಿಂಗ್ ಮತ್ತು ಆಕ್ಸೆಸರಿಗಳನ್ನು ಪರಿಶೀಲಿಸಿ: ನಿಮ್ಮ ಐಫೋನ್‌ ಒರಿಜಿನಲ್‌ ಅಥವಾ ನಕಲಿ ಎಂಬ ಸತ್ಯಾಸತ್ಯತೆಯನ್ನು ಪರಿಶೀಲಿಸಲು, ಅದರ ಪ್ಯಾಕೇಜಿಂಗ್ ಮತ್ತು ಪರಿಕರಗಳನ್ನು ಸರಿಯಾಗಿ ಪರಿಶೀಲಿಸಿ. ನಿಜವಾದ ಐಫೋನ್ ಪೆಟ್ಟಿಗೆಗಳು ಬಾಳಿಕೆ ಬರುತ್ತವೆ ಮತ್ತು ಉತ್ತಮ-ಗುಣಮಟ್ಟದ ಚಿತ್ರಗಳನ್ನು ಹೊಂದಿರುತ್ತವೆ. ಕೇಬಲ್ ಗಳು ಸೇರಿದಂತೆ ಅಕ್ಸೆಸರಿಗಳು ಆಪಲ್‌ನ ಮಾನದಂಡಗಳಿಗೆ ಹೊಂದಿಕೆಯಾಗಬೇಕು. ಪ್ಯಾಕೇಜಿಂಗ್‌ನಲ್ಲಿನ ಗುಣಮಟ್ಟ ಕಳಪೆಯಾಗಿದ್ದರೆ ಅದು ನಕಲಿಯಾಗಿರಬಹುದು.
icon

(3 / 7)

ಪ್ಯಾಕೇಜಿಂಗ್ ಮತ್ತು ಆಕ್ಸೆಸರಿಗಳನ್ನು ಪರಿಶೀಲಿಸಿ: ನಿಮ್ಮ ಐಫೋನ್‌ ಒರಿಜಿನಲ್‌ ಅಥವಾ ನಕಲಿ ಎಂಬ ಸತ್ಯಾಸತ್ಯತೆಯನ್ನು ಪರಿಶೀಲಿಸಲು, ಅದರ ಪ್ಯಾಕೇಜಿಂಗ್ ಮತ್ತು ಪರಿಕರಗಳನ್ನು ಸರಿಯಾಗಿ ಪರಿಶೀಲಿಸಿ. ನಿಜವಾದ ಐಫೋನ್ ಪೆಟ್ಟಿಗೆಗಳು ಬಾಳಿಕೆ ಬರುತ್ತವೆ ಮತ್ತು ಉತ್ತಮ-ಗುಣಮಟ್ಟದ ಚಿತ್ರಗಳನ್ನು ಹೊಂದಿರುತ್ತವೆ. ಕೇಬಲ್ ಗಳು ಸೇರಿದಂತೆ ಅಕ್ಸೆಸರಿಗಳು ಆಪಲ್‌ನ ಮಾನದಂಡಗಳಿಗೆ ಹೊಂದಿಕೆಯಾಗಬೇಕು. ಪ್ಯಾಕೇಜಿಂಗ್‌ನಲ್ಲಿನ ಗುಣಮಟ್ಟ ಕಳಪೆಯಾಗಿದ್ದರೆ ಅದು ನಕಲಿಯಾಗಿರಬಹುದು.(Bloomberg)

ಸರಣಿ ಸಂಖ್ಯೆ ಮತ್ತು ಐಎಂಇಐ ಪರಿಶೀಲಿಸಿ: ನಿಮ್ಮ ಐಫೋನ್‌ನ ವಿಶಿಷ್ಟ ಸರಣಿ ಸಂಖ್ಯೆ ಮತ್ತು ಐಎಂಇಐ ಅನ್ನು ಪರಿಶೀಲಿಸಿ. ಫೋನ್‌ನಲ್ಲಿ ಸೆಟ್ಟಿಂಗ್‌ಗೆ ಹೋಗಿ ಅದರಲ್ಲಿ ಜನರಲ್‌ ಆಯ್ಕೆ ಮೇಲೆ ಕ್ಲಿಕ್‌ ಮಾಡಿ. ಅದರಲ್ಲಿ ಅಬೌಟ್‌ ಮೇಲೆ ಕ್ಲಿಕ್‌ ಮಾಡಿ ಸೀರಿಯಲ್‌ ನಂಬರ್‌ ನೋಡಿ. ನಂತರ, ಆಪಲ್‌ನ ಚೆಕ್ ಕವರೇಜ್ ಪೇಜ್‌ಗೆ ಭೇಟಿ ನೀಡಿ. IMEI ವೀಕ್ಷಿಸಲು #06#ಗೆ ಡಯಲ್ ಮಾಡಿ ಮತ್ತು ಅದರಲ್ಲಿ ಬಾಕ್ಸ್ ಮತ್ತು ಸಿಮ್ ಟ್ರೇಗೆ ಹೊಂದಿಕೆಯಾಗುತ್ತದೆಯೇ ಎಂದು ಖಚಿತಪಡಿಸಿಕೊಳ್ಳಿ. 
icon

(4 / 7)

ಸರಣಿ ಸಂಖ್ಯೆ ಮತ್ತು ಐಎಂಇಐ ಪರಿಶೀಲಿಸಿ: ನಿಮ್ಮ ಐಫೋನ್‌ನ ವಿಶಿಷ್ಟ ಸರಣಿ ಸಂಖ್ಯೆ ಮತ್ತು ಐಎಂಇಐ ಅನ್ನು ಪರಿಶೀಲಿಸಿ. ಫೋನ್‌ನಲ್ಲಿ ಸೆಟ್ಟಿಂಗ್‌ಗೆ ಹೋಗಿ ಅದರಲ್ಲಿ ಜನರಲ್‌ ಆಯ್ಕೆ ಮೇಲೆ ಕ್ಲಿಕ್‌ ಮಾಡಿ. ಅದರಲ್ಲಿ ಅಬೌಟ್‌ ಮೇಲೆ ಕ್ಲಿಕ್‌ ಮಾಡಿ ಸೀರಿಯಲ್‌ ನಂಬರ್‌ ನೋಡಿ. ನಂತರ, ಆಪಲ್‌ನ ಚೆಕ್ ಕವರೇಜ್ ಪೇಜ್‌ಗೆ ಭೇಟಿ ನೀಡಿ. IMEI ವೀಕ್ಷಿಸಲು #06#ಗೆ ಡಯಲ್ ಮಾಡಿ ಮತ್ತು ಅದರಲ್ಲಿ ಬಾಕ್ಸ್ ಮತ್ತು ಸಿಮ್ ಟ್ರೇಗೆ ಹೊಂದಿಕೆಯಾಗುತ್ತದೆಯೇ ಎಂದು ಖಚಿತಪಡಿಸಿಕೊಳ್ಳಿ. (AFP)

ನಿರ್ಮಾಣ ಗುಣಮಟ್ಟವನ್ನು ಮೌಲ್ಯಮಾಪನ ಮಾಡಿ: ನಿಮ್ಮ ಐಫೋನ್‌ನ ಬಿಲ್ಡ್‌ ಕ್ವಾಲಿಟಿ ಪರಿಶೀಲಿಸಿ. ನಿಜವಾದ ಐಫೋನ್‌ನ ಯಾವುದೇ ಭಾಗಗಳು ಸಡಿಲವಾಗಿರುವುದಿಲ್ಲ. ಎಲ್ಲವೂ ಸರಿಯಾಗಿರುತ್ತವೆ. ಅಲ್ಲದೆ ಎಲ್ಲಾ ಬಟನ್ ಸರಿಯಾಗಿ ಪ್ರತಿಕ್ರಿಯೆ ನೀಡುತ್ತವೆ. ಆಪಲ್ ಲೋಗೋ ಸರಿಯಾದ ಸ್ಥಳದಲ್ಲಿರುತ್ತದೆ. ಒರಟು ಅಂಚುಗಳು, ತಪ್ಪಾಗಿ ವಿನ್ಯಾಸಗೊಳಿಸಲಾದ ಲೋಗೊಗಳು ಅಥವಾ ಸಡಿಲ ಕಾಂಪೊನೆಂಟ್‌ಗಳಿದ್ದರೆ ಅಂಥಾ ನ್ಯೂನತೆಗಳನ್ನು ಪರಿಶೀಲಿಸಿ. 
icon

(5 / 7)

ನಿರ್ಮಾಣ ಗುಣಮಟ್ಟವನ್ನು ಮೌಲ್ಯಮಾಪನ ಮಾಡಿ: ನಿಮ್ಮ ಐಫೋನ್‌ನ ಬಿಲ್ಡ್‌ ಕ್ವಾಲಿಟಿ ಪರಿಶೀಲಿಸಿ. ನಿಜವಾದ ಐಫೋನ್‌ನ ಯಾವುದೇ ಭಾಗಗಳು ಸಡಿಲವಾಗಿರುವುದಿಲ್ಲ. ಎಲ್ಲವೂ ಸರಿಯಾಗಿರುತ್ತವೆ. ಅಲ್ಲದೆ ಎಲ್ಲಾ ಬಟನ್ ಸರಿಯಾಗಿ ಪ್ರತಿಕ್ರಿಯೆ ನೀಡುತ್ತವೆ. ಆಪಲ್ ಲೋಗೋ ಸರಿಯಾದ ಸ್ಥಳದಲ್ಲಿರುತ್ತದೆ. ಒರಟು ಅಂಚುಗಳು, ತಪ್ಪಾಗಿ ವಿನ್ಯಾಸಗೊಳಿಸಲಾದ ಲೋಗೊಗಳು ಅಥವಾ ಸಡಿಲ ಕಾಂಪೊನೆಂಟ್‌ಗಳಿದ್ದರೆ ಅಂಥಾ ನ್ಯೂನತೆಗಳನ್ನು ಪರಿಶೀಲಿಸಿ. (Apple)

ಸಾಫ್ಟ್‌ವೇರ್ ಮತ್ತು ವೈಶಿಷ್ಟ್ಯಗಳನ್ನು ಪರಿಶೀಲಿಸಿ:  ಸಾಫ್ಟ್‌ವೇರ್ ಅಪ್ಡೇಟ್‌ ಪರಿಶೀಲಿಸುವ ಮೂಲಕ ನಿಮ್ಮ ಐಫೋನ್ ನಿಜಕ್ಕೂ ಐಒಎಸ್‌ನಲ್ಲಿ ವರ್ಕ್‌ ಆಗ್ತಿದೆಯಾ ಎಂಬುದನ್ನು ಪರಿಶೀಲಿಸಿ (Settings > General > Software Update). ನಕಲಿ ಐಫೋನ್‌ ಆಗಿದ್ದರೆ ಐಒಎಸ್ ಅನ್ನು ಅನುಕರಿಸಿರಬಹುದು ಆದರೆ ಅದು ಆಂಡ್ರಾಯ್ಡ್‌ನಲ್ಲಿ ಕಾರ್ಯನಿರ್ವಹಿಸುತ್ತವೆ.
icon

(6 / 7)

ಸಾಫ್ಟ್‌ವೇರ್ ಮತ್ತು ವೈಶಿಷ್ಟ್ಯಗಳನ್ನು ಪರಿಶೀಲಿಸಿ:  ಸಾಫ್ಟ್‌ವೇರ್ ಅಪ್ಡೇಟ್‌ ಪರಿಶೀಲಿಸುವ ಮೂಲಕ ನಿಮ್ಮ ಐಫೋನ್ ನಿಜಕ್ಕೂ ಐಒಎಸ್‌ನಲ್ಲಿ ವರ್ಕ್‌ ಆಗ್ತಿದೆಯಾ ಎಂಬುದನ್ನು ಪರಿಶೀಲಿಸಿ (Settings > General > Software Update). ನಕಲಿ ಐಫೋನ್‌ ಆಗಿದ್ದರೆ ಐಒಎಸ್ ಅನ್ನು ಅನುಕರಿಸಿರಬಹುದು ಆದರೆ ಅದು ಆಂಡ್ರಾಯ್ಡ್‌ನಲ್ಲಿ ಕಾರ್ಯನಿರ್ವಹಿಸುತ್ತವೆ.(Apple)

ಇದೇ ವೇಳೆ "ಹೇ ಸಿರಿ" ಎಂದು ಹೇಳುವ ಮೂಲಕ ಅಥವಾ ಪವರ್ ಬಟನ್ ಹಿಡಿದು ಸಿರಿಯನ್ನು ಪರೀಕ್ಷಿಸಿ. ಐಫೋನ್‌ನಲ್ಲಿ ಸಿರಿ ಧ್ವನಿ ಪ್ರತಿಕ್ರಿಯೆ ಫೀಚರ್‌ ಇರಬೇಕು. ಒಂದು ವೇಳೆ ಅದು ಪ್ರತಿಕ್ರಿಯಿಸದಿದ್ದರೆ, ನಿಮ್ಮ ಐಫೋನ್ ನಕಲಿಯಾಗಿರಬಹುದು.
icon

(7 / 7)

ಇದೇ ವೇಳೆ "ಹೇ ಸಿರಿ" ಎಂದು ಹೇಳುವ ಮೂಲಕ ಅಥವಾ ಪವರ್ ಬಟನ್ ಹಿಡಿದು ಸಿರಿಯನ್ನು ಪರೀಕ್ಷಿಸಿ. ಐಫೋನ್‌ನಲ್ಲಿ ಸಿರಿ ಧ್ವನಿ ಪ್ರತಿಕ್ರಿಯೆ ಫೀಚರ್‌ ಇರಬೇಕು. ಒಂದು ವೇಳೆ ಅದು ಪ್ರತಿಕ್ರಿಯಿಸದಿದ್ದರೆ, ನಿಮ್ಮ ಐಫೋನ್ ನಕಲಿಯಾಗಿರಬಹುದು.(AFP)


ಇತರ ಗ್ಯಾಲರಿಗಳು