Samsung Galaxy Z Fold: ಸ್ಯಾಮ್‌ಸಂಗ್‌ನ ಮಡುಚಬಹುದಾದ ಸ್ಮಾರ್ಟ್‌ಫೋನ್ ಜಾಗತಿಕವಾಗಿ ಲಾಂಚ್, ಭಾರತದಲ್ಲಿ ಬಿಡುಗಡೆ ಯಾವಾಗ
Samsung foldable smartphones: ಜಾಗತಿಕವಾಗಿ ಸ್ಯಾಮಸಂಗ್ ಕಂಪನಿಯು ನೂತನ ಫೋಲ್ಡೆಬಲ್ ಸ್ಮಾರ್ಟ್‌ಫೋನ್‌ಗಳನ್ನು ನಿನ್ನೆ ಅಂದರೆ ಜುಲೈ 26ರಂದು ಬಿಡುಗಡೆ ಮಾಡಿದೆ. ಭಾರತದಲ್ಲೂ ಈ ಸ್ಮಾರ್ಟ್‌ಫೋನ್ ಕುರಿತು ಕ್ರೇಜ್ ಹುಟ್ಟಿಕೊಂಡಿದೆ.
(1 / 8)
ಜುಲೈ 26ರಂದು ಸ್ಯಾಮ್‌ಸಂಗ್ ಕಂಪನಿಯು ಬಹುನಿರೀಕ್ಷಿತ Galaxy Z Fold 5 ಮತ್ತು Flip 5 ಎಂಬ ಫೋಲ್ಡೆಬಲ್ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿದೆ. ಈ ಸ್ಮಾರ್ಟ್‌ಫೋನ್‌ಗಳ ಮಾರಾಟವು ಆಗಸ್ಟ್ 11ರಂದು ಆರಂಭವಾಗಲಿದೆ. (samsung)
(2 / 8)
ಆದರೆ, ಭಾರತದಲ್ಲಿ ಈ ಉತ್ಪನ್ನಗಳು ಸದ್ಯ ದೊರಕದು. ಆಗಸ್ಟ್ 11ರ ಬಳಿಕ ಕೆಲವು ದಿನ ಕಳೆದು ಭಾರತದಲ್ಲಿ ಈ ಸ್ಮಾರ್ಟ್‌ಫೋನ್ ಲಾಂಚ್ ಆಗಬಹುದು ಎಂದು ಮೂಲಗಳು ತಿಳಿಸಿವೆ.(Samsung)
(3 / 8)
ಮುಂದಿನ ಕೆಲವು ವರ್ಷಗಳಲ್ಲಿ ಫೋಲ್ಡೆಬಲ್ ಸಾಧನಗಳ ಮಾರುಕಟ್ಟೆಯು 100 ದಶಲಕ್ಷ ಸಾಧನಗಳಿಗೆ ತಲುಪಲಿದೆ. ಈಗಾಗಲೇ ಸಾಕಷ್ಟು ಗ್ರಾಹಕರು ಇಂತಹ ಫೋನ್‌ಗಳ ಕುರಿತು ಒಲವು ತೋರುತ್ತಿದ್ದಾರೆ ಎಂದು ಸ್ಯಾಮ್‌ಸಂಗ್ ಎಲೆಕ್ಟ್ರಾನಿಕ್ಸ್‌ನ ಮೊಬೈಲ್ ಎಕ್ಸ್‌ಪಿರಿಯೆನ್ಸ್ ಬಿಸ್ನೆಸ್ ವಿಭಾಗದ ಮುಖ್ಯಸ್ಥ ಟಿಎಂ ರೋಹ್ ಹೇಳಿದ್ದಾರೆ.(Samsung)
(4 / 8)
ಕಳೆದ ಐದು ವರ್ಷಗಳಲ್ಲಿ ಕಂಪನಿಯ ಫೋಲ್ಡೆಬಲ್ ಸಾಧನಗಳ ಕುರಿತು ಭಾರತದ ಗ್ರಾಹಕರು ಸಾಕಷ್ಟು ಆಸಕ್ತಿ ವಹಿಸಿದ್ದಾರೆ. ಇದು ಇನ್ನೋವೇಟಿವ್ ಆಗಿರುವುದರಿಂದ ಸಾಕಷ್ಟು ಬೇಡಿಕೆ ಪಡೆದುಕೊಂಡಿದೆ ಎಂದು ಸ್ಯಾಮ್‌ಸಂಗ್ ಇಂಡಿಯಾದ ನಿರ್ದೇಶಕರಾದ ಆದಿತ್ಯ ಬಾಬರ್ ಹೇಳಿದ್ದಾರೆ.(Samsung)
(5 / 8)
ಸ್ಯಾಮ್‌ಸಂಗ್ ಕಂಪನಿಯು ಈ ಹಿಂದೆ ಪರಿಚಯಿಸಿದ ಫೋಲ್ಡೆಬಲ್ ಸ್ಮಾರ್ಟ್‌ಫೋನ್‌ಗಳಿಗೆ ಹೋಲಿಸಿದರೆ ಐದನೇ ತಲೆಮಾರಿನ ನೂತನ ಫೋನ್‌ಗಳು ಬಳಕೆದಾರರ ಅನುಭವವನ್ನು ಇನ್ನಷ್ಟು ಉತ್ತಮಪಡಿಸುವ ನಿರೀಕ್ಷೆಯಿದೆ. ಇದರ ಸ್ನಾಪ್‌ಡ್ರಾಗನ್ 8 ಜೆನ್ 2 ಚಿಪ್‌ಸೆಟ್ ಅತ್ಯುತ್ತಮ ಪರ್ಫಾಮೆನ್ಸ್ ಹೊಂದಿರಲಿದೆ.(Samsung)
(6 / 8)
ಮರುವಿನ್ಯಾಸದ ಈ ಸ್ಮಾರ್ಟ್‌ಫೋನ್ ತುಸು ಹಗುರವಾಗಿದೆ. ಸುಲಭವಾಗಿ ಮಡುಚಿ ಕಿಸೆಯೊಳಗೆ ಇಟ್ಟುಕೊಳ್ಳಬಹುದು. (Samsung)
(7 / 8)
2023ರ ತ್ರೈಮಾಸಿಕದಲ್ಲಿ ಸ್ಯಾಮ್‌ಸಂಗ್ನ ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳಿಗೆ ಬೇಡಿಕೆ ಹೆಚ್ಚಾಗಿದೆ. ಅಂದರೆ, ಹೆಚ್ಚು ದರದ ಸ್ಯಾಮ್‌ಸಂಗ್ ಫೋನ್‌ಗಳು ಹೆಚ್ಚು ಗ್ರಾಹಕರನ್ನು ಆಕರ್ಷಿಸುತ್ತಿದೆ. (Samsung)
ಇತರ ಗ್ಯಾಲರಿಗಳು