iPhone 16 series: ಹೊಸ ಐಫೋನ್ 16ರ ಪ್ರಮುಖ ಫೀಚರ್‌ಗಳಿವು, ಆಪಲ್ ಲಾಂಚ್ ಇವೆಂಟ್‌ನಲ್ಲಿ ಇವೆಲ್ಲ ಹೈಲೈಟ್ ಆಗಲೇ ಇಲ್ಲ
iPhone 16 series: ಆಪಲ್ ಲಾಂಚ್ ಇವೆಂಟ್‌ನಲ್ಲಿ ಹೊಸ ಐಫೋನ್ 16 ಸರಣಿಗಳ ಸಾಕಷ್ಟು ಫೀಚರ್‌ಗಳ ಕುರಿತು ಹೈಲೈಟ್ ಮಾಡಲಾಯಿತು. ಆದರೆ, ಇದೇ ಸಮಯದಲ್ಲಿ ಇನ್ನೂ ಹಲವು ಪ್ರಮುಖ ಫೀಚರ್‌ಗಳನ್ನು ಹೈಲೈಟ್ ಮಾಡಲು ಕಂಪನಿ ಮರೆತಂತೆ ಕಾಣಿಸಿದೆ. ಆಪಲ್ ಲಾಂಚ್ ಇವೆಂಟ್‌ನಲ್ಲಿ ಪ್ರಚಾರಪಡಿಸಲು ಮರೆತ ಪ್ರಮುಖ ಫೀಚರ್‌ಗಳ ವಿವರ ಇಲ್ಲಿದೆ
(1 / 5)
ಅತ್ಯಧಿಕ ವೇಗದ ಮ್ಯಾಗ್‌ಸೇಫ್ ವೈರ್‌ಲೆಸ್ ಚಾರ್ಜಿಂಗ್: ಐಫೋನ್ 16ನಲ್ಲಿ ಅತ್ಯಧಿಕ ವೇಗದ ವೈರ್‌ಲೆಸ್ ಚಾರ್ಜಿಂಗ್ ವ್ಯವಸ್ಥೆಯನ್ನು ಅಪ್‌ಗ್ರೇಡ್ ಮಾಡಲಾಗಿದೆ. 25 ವ್ಯಾಟ್ ವೈರ್ ಲೆಸ್ ಚಾರ್ಜಿಂಗ್ ಮತ್ತು ಕ್ಯೂ 2 ಚಾರ್ಜರ್‌ಗಳಿಗೆ 15 ವ್ಯಾಟ್‌ವರೆಗೆ ಚಾರ್ಜಿಂಗ್ ನೀಡಲಾಗಿದೆ. ವೈರ್‌ಲೆಸ್ ಆಗಿಯೂ ಸ್ಪೀಡ್ ಆಗಿ ಚಾರ್ಜ್ ಮಾಡಲು ಇದು ನೆರವಾಗುತ್ತದೆ. (Apple)
(2 / 5)
ಐಫೋನ್ 16ನಲ್ಲಿ 45 ವ್ಯಾಟ್‌ನ ವಯರ್ ಚಾರ್ಜಿಂಗ್: ಇದು ಐದು ವ್ಯಾಟ್ ಚಾರ್ಜಿಂಗ್ ಸಾಮರ್ಥ್ಯ ಹೊಂದಿದೆ. ಇದು ಸ್ಪೀಡಾಗಿ ಚಾರ್ಜ್ ಆಗಲು ನೆರವಾಗುತ್ತದೆ. (afp)
(3 / 5)
ವೈ-ಫೈ 7: ಐಫೋನ್ 16 ಸೀರಿಸ್‌ನಲ್ಲಿ ವೈ-ಫೈ 6ಇನಿಂದ ವೈ-ಫೈ 7 ತಂತ್ರಜ್ಞಾನಕ್ಕೆ ಅಪ್‌ಗ್ರೇಡ್ ಮಾಡಲಾಗಿದೆ. ಇದರಿಂದ ವೇಗವಾಗಿ ಡೌನ್‌ಲೋಡ್ ಮತ್ತು ಅಪ್‌ಲೋಡ್ ಮಾಡಲು ಸಾಧ್ಯವಾಗಿದೆ.(Apple)
(4 / 5)
ಕ್ವಿಕ್ಟೇಕ್ ನವೀಕರಣ: ಆಪಲ್ ತನ್ನ ಕ್ವಿಕ್ಟೇಕ್ ಅನ್ನು ನವೀಕರಿಸಿದೆ. ಅಂದ್ರೆ 60 ಎಫ್ಪಿಎಸ್ ಮತ್ತು ಡಾಲ್ಬಿ ವಿಷನ್ ಬೆಂಬಲದ ಜತೆ 1080 ಪಿಯಿಂದ 4 ಕೆ ರೆಸಲ್ಯೂಶನ್ ವೀಡಿಯೊಗೆ ನವೀಕರಿಸಿದೆ. ಡೀಫಾಲ್ಟ್ ಫೋಟೋ ಮೋಡ್‌ನಲ್ಲಿ ಉತ್ತಮ ಗುಣಮಟ್ಟದ ವೀಡಿಯೊಗಳನ್ನು ಸೆರೆಹಿಡಿಯಲು ಇದರಿಂದ ಸಾಧ್ಯವಾಗಿದೆ.(Bloomberg)
ಇತರ ಗ್ಯಾಲರಿಗಳು