iPhone Hacked: ನಿಮ್ಮ ಐಫೋನ್ ಹ್ಯಾಕ್ ಆಗಿದೆಯಾ, ಇಲ್ವಾ ಅಂತ ತಿಳಿದುಕೊಳ್ಳಬೇಕಾ; ಹೀಗೆ ಮಾಡಿ
ಸಾಮಾನ್ಯವಾಗಿ ಐಫೋನ್ ಸುರಕ್ಷಿತ ಸ್ಮಾರ್ಟ್‌ಫೋನ್. ಐಫೋನ್‌ನಲ್ಲಿನ ಭದ್ರತೆ, ಗೌಪ್ಯತೆ ವೈಶಿಷ್ಟ್ಯಗಳು ತುಂಬಾ ಪವರ್‌ಫುಲ್ ಆಗಿವೆ. ಆದರೂ ಹ್ಯಾಕರ್‌ಗಳು ಐಫೋನ್‌ಗಳನ್ನೂ ಬಿಡ್ತಿಲ್ಲ. ನಿಮ್ಮ ಐಫೋನ್ ಹ್ಯಾಕ್ ಆಗಿದೆಯೇ ಅನ್ನೋದನ್ನ ತಿಳಿಯಿರಿ.
(1 / 6)
1. ಬ್ಯಾಟರಿ ಡ್ರೈನ್, ಹಿಟಿಂಗ್ ಸಮಸ್ಯೆಗಳು: ನಿಮ್ಮ ಐಫೋನ್ ಬ್ಯಾಟರಿ ತುಂಬಾ ಬೇಗ ಖಾಲಿಯಾಗುತ್ತಿದೆ ಎಂದರೆ ಐಫೋನ್ ಹ್ಯಾಕ್ ಆಗಿದೆ ಅಥವಾ ಸ್ಪೈವೇರ್ ನುಸುಳಿರಬಹುದು ಎಂಬುದರ ಸಂಕೇತವಾಗಿದೆ. ನಿಮ್ಮ ಐಫೋನ್ ಸೆಟ್ಟಿಂಗ್‌ಗೆ ಹೋಗಿ ಯಾವ ಅಪ್ಲಿಕೇಶನ್ ಹೆಚ್ಚು ಬ್ಯಾಟರಿಯನ್ನು ಬಳಸುತ್ತಿದೆ ಎಂಬುದನ್ನು ಪರಿಶೀಲಿಸಿ.(Unsplash)
(2 / 6)
2. ಹೆಚ್ಚುತ್ತಿರುವ ಮೊಬೈಲ್ ಡೇಟಾ ಬಳಕೆ: ನೀವು ಎಂದಿನಂತೆ ಇಂಟರ್ನೆಟ್ ಬಳಸುತ್ತಿದ್ದರೂ ನಿಮ್ಮ ಮೊಬೈಲ್ ಡೇಟಾ ಬಳಕೆ ಇದ್ದಕ್ಕಿದ್ದಂತೆ ಭಾರಿ ಪ್ರಮಾಣದಲ್ಲಿ ಹೆಚ್ಚಾದರೆ, ಅದು ನಿಮ್ಮ ಐಫೋನ್ ಹ್ಯಾಕ್ ಆಗಿರಬಹುದು ಎಂಬುದರ ಸಂಕೇತವಾಗಿದೆ. ಯಾವುದೇ ಅಸಾಮಾನ್ಯ ಡೇಟಾ ಬಳಕೆಯನ್ನು ಪತ್ತೆಹಚ್ಚಲು ನಿಮ್ಮ ಐಫೋನ್ ನಲ್ಲಿ ವಿವಿಧ ಅಪ್ಲಿಕೇಶನ್‌ಗಳು ಬಳಸುವ ಡೇಟಾವನ್ನು ನೀವು ಪರಿಶೀಲಿಸಬಹುದು. ಹ್ಯಾಕರ್‌ಗಳು ನಿಮ್ಮ ಫೋನ್‌ನಲ್ಲಿ ರಹಸ್ಯ ಸೇವೆಯನ್ನು ಸ್ಥಾಪಿಸಿದರೆ ನಿಮ್ಮ ಡೇಟಾ ಬಳಕೆ ಹೆಚ್ಚಾಗುತ್ತದೆ.(Unsplash)
(3 / 6)
3. ಅಪರಿಚಿತ ಅಪ್ಲಿಕೇಶನ್‌ಗಳು: ನಿಮ್ಮ ಐಫೋನ್‌ನಲ್ಲಿ ನೀವು ಇನ್‌ಸ್ಟಾಲ್ ಮಾಡದ ಇರುವ ಯಾವುದಾದರು ಆ್ಯಪ್ ನಿಮ್ಮ ಐಫೋನ್‌ನಲ್ಲಿ ಕಾಣಿಸಿದರೆ ಅದು ನಿಮ್ಮ ಐಫೋನ್‌ಗೆ ಸ್ಪೈವೇರ್ ನುಸುಳಿರಬಹುದು ಎಂಬುದರ ಸಂಕೇತವಾಗಿದೆ. ಬ್ಲೋಟ್ವೇರ್ ಜೊತೆಗೆ, ಕೆಲವು ಅಪ್ಲಿಕೇಶನ್‌ಗಳು ಸಾಮಾನ್ಯ ಹೆಸರುಗಳೊಂದಿಗೆ ಉಳಿಯುತ್ತವೆ. ಆದರೆ ರಹಸ್ಯ ಕಾರ್ಯಾಚರಣೆಯಲ್ಲಿ ತೊಡಗುತ್ತವೆ. ಅವು ಅಪ್ಲಿಕೇಶನ್ ಡ್ರಾಯರ್‌ನಲ್ಲಿಯೂ ಕಾಣಿಸಿಕೊಳ್ಳುವುದಿಲ್ಲ. ಅಂತಹ ಅಪ್ಲಿಕೇಶನ್‌ಗಳನ್ನು ತಕ್ಷಣವೇ ಅನ್ ಇನ್‌ಸ್ಟಾಲ್ ಮಾಡಿ.(Unsplash)
(4 / 6)
4. ಐಫೋನ್ ಸ್ಲೋ ಡೌನ್: ನಿಮ್ಮ ಐಫೋನ್‌ನ ಕಾರ್ಯಕ್ಷಮತೆ ಇತ್ತೀಚೆಗೆ ಹಾನಿಗೊಳಗಾಗಿದ್ದರೆ, ನೀವು ವೆಬ್ ಪೇಜ್‌ಗಳನ್ನು ಸರಿಯಾಗಿ ಲೋಡ್ ಮಾಡಲು ಸಾಧ್ಯವಾಗದಿದ್ದರೆ ಅಥವಾ ಆಗಾಗ್ಗೆ ನಿಮ್ಮ ಐಫೋನ್ ರಿಸ್ಟಾರ್ಟ್ ಆಗುತ್ತಿದ್ದರೆ ಫೋನ್‌ನಲ್ಲಿ ಸ್ಪೈವೇರ್ ನುಸುಳಿರುವ ಸಾಧ್ಯತೆ ಇರುತ್ತದೆ.(Unsplash)
(5 / 6)
5. ಆ್ಯಪ್‌ಗಳ ಸಮಸ್ಯೆ: ನೀವು ನಿಯಮಿತವಾಗಿ ಬಳಸುವ ಫೇಸ್ಬುಕ್, ವಾಟ್ಸಾಪ್ ಅಥವಾ ಇನ್‌ಸ್ಟಾಗ್ರಾಮ್‌ನಂತಹ ಅಪ್ಲಿಕೇಶನ್‌ಗಳು ಇದ್ದಕ್ಕಿದ್ದಂತೆ ಅಸಮರ್ಪಕವಾಗಿ ಕಾರ್ಯನಿರ್ವಹಿಸಿದರೆ ಅಥವಾ ಇದ್ದಕ್ಕಿದ್ದಂತೆ ಕಣ್ಮರೆಯಾದರೆ, ನಿಮ್ಮ ಐಫೋನ್ ದುರುದ್ದೇಶಪೂರಿತ ಸ್ಪೈವೇರ್‌ಗೆ ಒಳಗಾಗಿರುತ್ತದೆ. ಇದರಿಂದ ನಿಮ್ಮ ಫೋನ್ ಮೆಮೋರಿ ಖಾಲಿಯಾಗಿರಬಹುದು. (Unsplash)
ಇತರ ಗ್ಯಾಲರಿಗಳು