ಕಡಿಮೆ ಬೆಲೆಗೆ ಒಂದೊಳ್ಳೆ ಮೊಬೈಲ್ ಖರೀದಿ ಮಾಡ್ಬೇಕು ಅಂತಿದ್ದೀರಾ; ರೂ 7000 ಕ್ಕಿಂತ ಕಡಿಮೆಯ ಸ್ಮಾರ್ಟ್‌ಫೋನ್‌ಗಳು
ಕಡಿಮೆ ಬಜೆಟ್‌ನಲ್ಲಿ ಒಂದೊಳ್ಳೆ ಮೊಬೈಲ್ ಫೋನ್ ಖರೀದಿ ಮಾಡಬೇಕು ಅಂತಿದ್ದೀರಾ, ನಿಮ್ಮ ಬಳಿ 7000ಕ್ಕಿಂತ ಕಡಿಮೆ ಹಣವಿದ್ಯಾ, ನಿಮ್ಮ ಹಣಕ್ಕೆ ತಕ್ಕುದಾದ ಮೊಬೈಲ್ ಫೋನ್‌ಗಳ ವಿವರ ಇಲ್ಲಿದೆ ಗಮನಿಸಿ.
(1 / 7)
1. ಐಟೆಲ್ ಝೆನೋ 10: 3+64GB ಇರುವ ಈ ಫೋನ್ ಅಮೆಜಾನ್‌ನಲ್ಲಿ 5,998 ರೂಗಳಿಗೆ ಲಭ್ಯವಿದೆ. ಇದರ ಮೇಲೆ 500 ರೂ.ಗಳ ಕೂಪನ್ ರಿಯಾಯಿತಿಯನ್ನು ಸಹ ನೀಡಲಾಗುತ್ತಿದೆ. ಬ್ಯಾಂಕ್ ಮತ್ತು ವಿನಿಮಯ ಕೊಡುಗೆಗಳ ಲಾಭವನ್ನು ಪಡೆಯುವ ಮೂಲಕ ಇದರ ಬೆಲೆಯನ್ನು ಮತ್ತಷ್ಟು ಕಡಿಮೆ ಮಾಡಬಹುದು. ಈ ಫೋನ್ 6.6-ಇಂಚಿನ HD ಡಿಸ್‌ಪ್ಲೇಯನ್ನು ಹೊಂದಿದ್ದು, ಡೈನಾಮಿಕ್ ನಾಚ್, ಆಕ್ಟಾಕೋರ್ ಪ್ರೊಸೆಸರ್, 8-ಮೆಗಾಪಿಕ್ಸೆಲ್ ಮೈನ್ ಬ್ಯಾಕ್ ಕ್ಯಾಮೆರಾ ಮತ್ತು 5000 mAh ಬ್ಯಾಟರಿಯನ್ನು ಹೊಂದಿದೆ.
(2 / 7)
ಲಾವಾ O3 ಪ್ರೊ: 4+64GB ವೇರಿಯಂಟ್ ಫೋನ್ ಅಮೆಜಾನ್‌ನಲ್ಲಿ 6,698 ರೂ.ಗಳಿಗೆ ಲಭ್ಯವಿದೆ. ಇದರ ಮೇಲೆ 200 ರೂ.ಗಳ ಕೂಪನ್ ರಿಯಾಯಿತಿಯನ್ನು ಸಹ ನೀಡಲಾಗುತ್ತಿದೆ. ಬ್ಯಾಂಕ್ ಮತ್ತು ವಿನಿಮಯ ಕೊಡುಗೆಗಳ ಲಾಭವನ್ನು ಪಡೆಯುವ ಮೂಲಕ ಇದರ ಬೆಲೆಯನ್ನು ಮತ್ತಷ್ಟು ಕಡಿಮೆ ಮಾಡಬಹುದು. ಈ ಫೋನ್ 6.65-ಇಂಚಿನ ಡಿಸ್ಪ್ಲೇ, ಯುನಿಸಾಕ್ T606 ಆಕ್ಟಾಕೋರ್ ಪ್ರೊಸೆಸರ್, 50-ಮೆಗಾಪಿಕ್ಸೆಲ್ ಬ್ಯಾಕ್ ಕ್ಯಾಮೆರಾ, 8-ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಮತ್ತು 5000 mAh ಬ್ಯಾಟರಿಯನ್ನು ಹೊಂದಿದೆ.
(3 / 7)
ರೆಡ್ಮಿ A3X: 3+64GB ವೇರಿಯಂಟ್ ಫೋನ್ ಅಮೆಜಾನ್‌ನಲ್ಲಿ 6,149 ರೂ.ಗಳಿಗೆ ಲಭ್ಯವಿದೆ. ಈ ಫೋನ್ 6.71 ಇಂಚಿನ ಡಿಸ್‌ಪ್ಲೇ, ಆಕ್ಟಾಕೋರ್ ಪ್ರೊಸೆಸರ್, 8 ಮೆಗಾಪಿಕ್ಸೆಲ್ ಮೈನ್ ಬ್ಯಾಕ್ ಕ್ಯಾಮೆರಾ, 5 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಮತ್ತು 5000 mAh ಬ್ಯಾಟರಿಯನ್ನು ಹೊಂದಿದೆ.
(4 / 7)
ಲಾವಾ O3: 3+64GB ವೇರಿಯಂಟ್ ಫೋನ್ ಅಮೆಜಾನ್‌ನಲ್ಲಿ 5,798 ರೂ.ಗಳಿಗೆ ಲಭ್ಯವಿದೆ. ಈ ಫೋನ್ ಮೇಲೆ 200 ರೂ.ಗಳ ಕೂಪನ್ ರಿಯಾಯಿತಿಯೂ ಲಭ್ಯವಿದೆ. ಈ ಫೋನ್ 6.75 ಇಂಚಿನ ಡಿಸ್ಪ್ಲೇ, 13 ಮೆಗಾಪಿಕ್ಸೆಲ್ ಮೇನ್ ಬ್ಯಾಕ್ ಕ್ಯಾಮೆರಾ, 5 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಮತ್ತು 5000 mAh ಬ್ಯಾಟರಿಯನ್ನು ಹೊಂದಿದೆ.
(5 / 7)
ಸ್ಯಾಮ್‌ಸಂಗ್ ಗ್ಯಾಲಕ್ಸಿ M05: 4+64GB ವೇರಿಯಂಟ್ ಫೋನ್ ಅಮೆಜಾನ್‌ನಲ್ಲಿ 6,249 ರೂ.ಗಳಿಗೆ ಲಭ್ಯವಿದೆ. ಈ ಫೋನ್ 6.7 ಇಂಚಿನ ಡಿಸ್ಪ್ಲೇ, 50 ಮೆಗಾಪಿಕ್ಸೆಲ್ ಮೈನ್ ಬ್ಯಾಕ್ ಕ್ಯಾಮೆರಾ, 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಮತ್ತು 5000 mAh ಬ್ಯಾಟರಿಯನ್ನು ಹೊಂದಿದೆ.
(6 / 7)
ಸ್ಯಾಮ್‌ಸಂಗ್ ಗ್ಯಾಲಕ್ಸಿ F05: 4+64GB ವೇರಿಯಂಟ್ ಫೋನ್ ಅಮೆಜಾನ್‌ನಲ್ಲಿ 6,810 ರೂ.ಗಳಿಗೆ ಲಭ್ಯವಿದೆ. ಈ ಫೋನ್ 6.7 ಇಂಚಿನ ಡಿಸ್ಪ್ಲೇ, 50 ಮೆಗಾಪಿಕ್ಸೆಲ್ ಮೈನ್ ಬ್ಯಾಗ್ ಕ್ಯಾಮೆರಾ, 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಮತ್ತು 5000 mAh ಬ್ಯಾಟರಿಯನ್ನು ಹೊಂದಿದೆ.
ಇತರ ಗ್ಯಾಲರಿಗಳು