ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಮೊಟೊರೊಲಾ ಎಡ್ಜ್ 50 ಫ್ಯೂಷನ್‌ ಮೋಡಿಗೆ ಒಳಾಗುತ್ತಿದ್ದಾರೆ ಜನ, 22,999 ರೂಪಾಯಿಗೆ ಅಲ್ಟ್ರಾಫಾಸ್ಟ್‌ ಚಾರ್ಜಿಂಗ್‌, ಅದ್ಭುತ ಕ್ಯಾಮೆರಾ ಫೀಚರ್

ಮೊಟೊರೊಲಾ ಎಡ್ಜ್ 50 ಫ್ಯೂಷನ್‌ ಮೋಡಿಗೆ ಒಳಾಗುತ್ತಿದ್ದಾರೆ ಜನ, 22,999 ರೂಪಾಯಿಗೆ ಅಲ್ಟ್ರಾಫಾಸ್ಟ್‌ ಚಾರ್ಜಿಂಗ್‌, ಅದ್ಭುತ ಕ್ಯಾಮೆರಾ ಫೀಚರ್

ಮೊಟೊರೊಲಾ ಎಡ್ಜ್ 50 ಫ್ಯೂಷನ್‌ ಮೋಡಿಗೆ ಒಳಾಗುತ್ತಿದ್ದಾರೆ ಜನ, ಅಲ್ಟ್ರಾಫಾಸ್ಟ್‌ ಚಾರ್ಜಿಂಗ್‌, ಅದ್ಭುತ ಕ್ಯಾಮೆರಾ ಮಾತ್ರ ಕಾರಣವೇ, ಖಂಡಿತ ಅಲ್ಲ! 22,999 ರೂಪಾಯಿಯ ಹೊಸ ಫೋನ್‌ನ ಫೀಚರ್‌ ಮತ್ತು ಇತರೆ ವಿವರ ಇಲ್ಲಿದೆ ನೋಡಿ.   

ಸ್ಮಾರ್ಟ್‌ಫೋನ್‌ ರಂಗದಲ್ಲಿ ಮಧ್ಯಮ ಬಜೆಟ್‌ ವಿಭಾಗದಲ್ಲಿ ಸಂಚಲನ ಮೂಡಿಸಿದೆ ಹೊಸ ಮೊಟೊ ಎಡ್ಜ್ 50 ಫ್ಯೂಷನ್ ಅಥವಾ ಮೊಟೊರೊಲಾ ಎಡ್ಜ್ 50 ಫ್ಯೂಷನ್‌. ಮೊಟೊರೊಲಾ ಕಂಪನಿ ಹೇಳುವಂತೆ ಇದು ಅಲ್ಟ್ರಾ ಫಾಸ್ಟ್‌ ಚಾರ್ಜಿಂಗ್‌ ಫೋನ್‌, ಅದ್ಭುತ ಕ್ಯಾಮೆರಾ, ಕ್ಷಿಪ್ರ ಕಾರ್ಯಕ್ಷಮತೆ, ಇನ್ನೂ ಅನೇಕ ವಿಚಾರಗಳಿಗೆ ಈ ಫೋನ್‌ ಜನಮನ ಸೆಳಯುತ್ತಿದೆ. ಆ ವಿವರ ಗಮನಿಸೋಣ.
icon

(1 / 9)

ಎಡ್ಜ್ 50 ಫ್ಯೂಷನ್ ಅನ್ನು ಮೊಟೊರೊಲಾ ಭಾರತದ ಮಾರುಕಟ್ಟೆಯಲ್ಲಿ ಅನಾವರಣಗೊಳಿಸಿ ಎರಡು ದಿನಗಳಾಗತ್ತಿದೆಯಷ್ಟೆ.ಆಂಡ್ರಾಯ್ಡ್ 14ರ ಅಪ್ಡೇಟ್ಸ್‌ನೊಂದಿಗೆ 144Hz ರಿಫ್ರೆಶ್ ದರ, 6.67-ಇಂಚಿನ pOLED ಡಿಸ್‌ಪ್ಲೇ ಮತ್ತು ಸ್ನ್ಯಾಪ್‌ಡ್ರಾಗನ್‌ 7s ಜೆನ್‌ 2 ಚಿಪ್ ಅದರ ಕಾರ್ಯಕ್ಷತೆಗೆ ಬಲ ತುಂಬಿದೆ. ದರವೂ ಹೆಚ್ಚೇನೂ ಅಲ್ಲ, ಮಧ್ಯಮ ಬಜೆಟ್‌ನ ಫೋನ್ ಆಗಿರುವ ಕಾರಣ 22,999 ರೂಪಾಯಿ ಇದೆ. ಇದು 68W ಚಾರ್ಜಿಂಗ್‌ನೊಂದಿಗೆ 5,000mAh ಬ್ಯಾಟರಿಯನ್ನು ನೀಡುತ್ತದೆ, 12GB RAM, 256GB ಸ್ಟೋರೇಜ್‌ ಮತ್ತು ಪ್ರಭಾವಶಾಲಿ ಕ್ಯಾಮೆರಾ ಇವು ಫೋನ್‌ನ ಮುಖ್ಯ ಅಂಶಗಳು.
icon

(2 / 9)

13MP ಅಲ್ಟ್ರಾ ವೈಡ್‌ + ಮ್ಯಾಕ್ರೋ ಕ್ಯಾಮೆರಾದಲ್ಲಿ 4K ವಿಡಿಯೋ ರೆಕಾರ್ಡಿಂಗ್ ಮಾಡಬಹುದು. ಅದೇ ರೀತಿ 32MP ಸೆಲ್ಫಿ ಕ್ಯಾಮೆರಾ ಇರುವ ಕಾರಣ, ವಿಡಿಯೋ ರೆಕಾರ್ಡಿಂಗ್ ಎರಡೂ ಭಾಗದಲ್ಲಿ ಅತ್ಯುತ್ತಮ ಗುಣಮಟ್ಟದಲ್ಲಿರಲಿದೆ ಎಂಬುದು ಕಂಪನಿಯ ಪ್ರತಿಪಾದನೆ. ಇದರಲ್ಲಿ ಎರಡು ಸುಧಾರಿತ ಸೆನ್ಸರ್‌ಗಳಿದ್ದು, ಅಲ್ಟ್ರಾ ವೈಡ್‌ ಆಂಗಲ್‌ ಲೆನ್ಸ್ ಮೂಲಕ ಸಾಧಾರಣ ಲೆನ್ಸ್‌ಗಿಂತ ಹೆಚ್ಚು ಪರಿಣಾಮಕಾರಿಯಾಗಿ ದೃಶ್ಯಗಳನ್ನು ಸೆರೆಹಿಡಿಯಬಲ್ಲದು.
icon

(3 / 9)

ಸೋನಿ ಕಂಪನಿಯ LYTIA LYT-700C ಸೆನ್ಸರ್ ಅನ್ನು ಈ ಫೋನ್‌ನಲ್ಲಿ ಅಳವಡಿಸಿರುವ ಕಾರಣ 50MP ಮುಖ್ಯ ಕ್ಯಾಮೆರಾದಲ್ಲಿ ವಿಡಿಯೋ, ಫೋಟೋಗಳನ್ನು ಎಂಥದ್ದೇ ಬೆಳಕಿನಲ್ಲೂ ಸೆರೆಹಿಡಿಯಬಹುದು. ಕತ್ತಲಲ್ಲಿ ಕೂಡ ಅತ್ಯುತ್ತಮ ಫೋಟೋಗ್ರಫಿಯನ್ನು ಪಡೆಯಬಹುದು. ಸುಧಾರಿತ ಎಲ್ಲ ಪಿಕ್ಸೆಲ್‌ ಫೋಕಸ್ ಟೆಕ್ನಾಲಜಿಯನ್ನು ಹೊಂದಿರುವುದೇ ಮೊಟೊರೊಲಾ ಎಡ್ಜ್ 50 ಫ್ಯೂಷನ್‌ನ ಹೆಚ್ಚುಗಾರಿಕೆ.
icon

(4 / 9)

ಅಲ್ಟ್ರಾಫಾಸ್ಟ್‌ ಚಾರ್ಚಿಂಗ್ ಫೋನ್ ಅಂದ್ರೆ ಮೊಟೊರೊಲಾ ಎಡ್ಜ್ 50 ಫ್ಯೂಷನ್‌ ಎನ್ನುವಂತೆ ಕಂಪನಿ ಪ್ರತಿಪಾದಿಸುತ್ತಿದೆ. ಅದಕ್ಕೆ ಕಾರಣ 68W ಟರ್ಬೊಪವರ್ ಚಾರ್ಜಿಂಗ್ ಮತ್ತು 5000 mAh ಬ್ಯಾಟರಿ. ಕೇವಲ 15 ನಿಮಿಷ ಚಾರ್ಜಿಂಗ್ ಮಾಡಿದರೆ ಸಾಕು. 30 ಗಂಟೆ ಕಾಲ ಫೋನ್ ಬಳಸುವುದಕ್ಕೆ ಬೇಕಾದಷ್ಟು ಚಾರ್ಜ್ ಆಗಿಬಿಡುತ್ತೆ ಎನ್ನುತ್ತಿದೆ ಕಂಪನಿ.
icon

(5 / 9)

ಸ್ನ್ಯಾಪ್‌ ಡ್ರಾಗನ್‌ 7s ಜೆನ್ 2 ಪ್ರೊಸೆಸರ್‌ ಮತ್ತು 12GB ತನಕ RAM ಹೊಂದಿರುವ ಎಡ್ಜ್ 50 ಫ್ಯೂಷನ್‌ ಗೇಮಿಂಗ್ ಅನುಭವವನ್ನು ಇನ್ನಷ್ಟು ಮುದಗೊಳಿಸುತ್ತದೆ ಎಂಬುದು ಕಂಪನಿಯ ಪ್ರತಿಪಾದನೆ. 8 GB RAM + 128 GB ಕಾಂಬಿನೇಷನ್‌ನಲ್ಲಿ ಇನ್ನಷ್ಟು ಕಡಿಮೆ ಬೆಲೆ ಈ ಫೋನ್ ಲಭ್ಯವಿದೆ.
icon

(6 / 9)

ನೀರಿಗೆ ಬಿದ್ರೂ ಏನೂ ಆಗದ ಫೋನ್ ಮೊಟೊರೊಲಾ ಎಡ್ಜ್ 50 ಫ್ಯೂಷನ್‌ ಎನ್ನುತ್ತಿರುವ ಕಂಪನಿ, ಅದರಲ್ಲಿ IP68 ಅಂಡರ್ ವಾಟರ್ ಪ್ರೊಟೆಕ್ಷನ್ ವ್ಯವಸ್ಥೆಯನ್ನು ಒದಗಿಸಲಾಗಿದೆ ಎಂದು ಹೇಳಿಕೊಂಡಿದೆ. ಈ ತಂತ್ರಜ್ಞಾನವು ಫೋನ್ ಅನ್ನು ಧೂಳು, ಕೆಸರು ಮತ್ತು ಮರಳಿನಿಂದ ರಕ್ಷಿಸುತ್ತದೆ. ಅಷ್ಟೇ ಅಲ್ಲ, ಈ ಫೋನ್ ಅನ್ನು ಒಂದೂವರೆ ಮೀಟರ್ ತಾಜಾ ನೀರಿನಲ್ಲಿ 30 ನಿಮಿಷ ಮುಳುಗಿಸಿಟ್ಟರೂ ತೊಂದರೆಯಾಗದು ಎನ್ನುತ್ತಿದೆ ಕಂಪನಿ. ಇದಕ್ಕಾಗಿ ಸ್ಮಾರ್ಟ್ ವಾಟರ್ ಟಚ್ ತಂತ್ರಜ್ಞಾನವನ್ನು ಅದು ಪರಿಚಯಿಸಿದೆ.  
icon

(7 / 9)

144 Hz ರಿಫ್ರೆಶ್ ದರ ಹೊಂದಿರುವ ಎಡ್ಜ್ 50 ಫ್ಯೂಷನ್‌ 6.67 ಇಂಚಿನ ಕರ್ವ್ಡ್ ಡಿಸ್‌ಪ್ಲೇ ಹೊಂದಿದೆ. ಈ ವಿನ್ಯಾಸವು ಯಾವುದೇ ದೃಶ್ಯವನ್ನು ಮೂಲೆಯಿಂದ ಮೂಲೆಯ ತನಕ ಕಣ್ಣಿನ ನೋಟಕ್ಕೆ ಒದಗಿಸುತ್ತದೆ. ದೃಶ್ಯಗಳ ಗುಣಮಟ್ಟವೂ ಉತ್ತಮವಾಗಿದ್ದು, ಗೊರಿಲ್ಲಾ ಗ್ಲಾಸ್‌ 5 ಅಳವಡಿಸಿರುವ ಕಾರಣ ಗೀಚುಗಳಾಗುವುದಿಲ್ಲ. ಇದು ಸ್ಕ್ರೀನ್ ಅನ್ನು ರಕ್ಷಿಸುತ್ತದೆ.  
icon

(8 / 9)

ಆಂಡ್ರಾಯ್ಡ್ 14 ಫೋನ್ ಇದಾಗಿದ್ದು, ಹಲೋ ಯುಐ ಗಮನಸೆಳೆಯುತ್ತದೆ. ಮೂರು ವರ್ಷದ ಖಚಿತ ಆಪರೇಷನ್ ಸಿಸ್ಟಮ್ ಅಪ್ಡೇಟ್ ಸಿಗಲಿದೆ. ಅಂದರೆ ಆಂಡ್ರಾಯ್ಡ್ ಮಾದರಿ 17 ಬರುವ ತನಕವೂ ಇದರ ಸೆಕ್ಯುರಿಟಿ ಅಪ್ಡೇಟ್ಸ್ ಸಿಗಲಿದೆ. 
icon

(9 / 9)

ಟಿ20 ವರ್ಲ್ಡ್‌ಕಪ್ 2024

ಇತರ ಗ್ಯಾಲರಿಗಳು