Motorola Razr 50 Review: ಕೈಗೆಟುಕುವ ದರಕ್ಕೆ ಮಡುಚಬಹುದಾದ ಮೊಟೊ ಸ್ಮಾರ್ಟ್‌ಫೋನ್‌, ಫೀಚರ್ಸ್‌ ಏನೇನಿದೆ ಅಂತೀರಾ?-technology news new motorola razr 50 first impression affordable foldable smartphone with cool features pcp ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Motorola Razr 50 Review: ಕೈಗೆಟುಕುವ ದರಕ್ಕೆ ಮಡುಚಬಹುದಾದ ಮೊಟೊ ಸ್ಮಾರ್ಟ್‌ಫೋನ್‌, ಫೀಚರ್ಸ್‌ ಏನೇನಿದೆ ಅಂತೀರಾ?

Motorola Razr 50 Review: ಕೈಗೆಟುಕುವ ದರಕ್ಕೆ ಮಡುಚಬಹುದಾದ ಮೊಟೊ ಸ್ಮಾರ್ಟ್‌ಫೋನ್‌, ಫೀಚರ್ಸ್‌ ಏನೇನಿದೆ ಅಂತೀರಾ?

Motorola Razr 50 Revew: ಮೊಟೊರೊಲಾ ಕಂಪನಿಯ ಹೊಸ ರೇಜರ್‌ 50 ಸ್ಮಾರ್ಟ್‌ಫೋನ್‌ ಹೇಗಿದೆ? ಹೊಸ ಮೋಟೋ ಕ್ಲಾಮ್ ಶೆಲ್ ಶೈಲಿಯ ಫೋಲ್ಡ್ ಫೋನ್‌ ಕಾರ್ಯನಿರ್ವಹಣೆ ಹೇಗಿದೆ? ಈ ಸ್ಮಾರ್ಟ್‌ಫೋನ್‌ನ ವಿಮರ್ಶೆ ಇಲ್ಲಿದೆ.

Motorola Razr 50 Revew: ಈ ವರ್ಷದ ಆರಂಭದಲ್ಲಿ ಬಿಡುಗಡೆಯಾದ ಮೊಟೊರೊಲಾ ರೇಜರ್ 50 ಅಲ್ಟ್ರಾ ಕಿರಿಯ ತಮ್ಮನಾಗಿ ಇತ್ತೀಚೆಗೆ ಮೊಟೊರೊಲಾ ರೇಜರ್ 50  ಬಿಡುಗಡೆಗೊಂಡಿದೆ. ಮಡುಚಬಹುದಾದ ಸ್ಮಾರ್ಟ್‌ಫೋನ್‌ಗಳು ದುಬಾರಿ ಎನ್ನುವ ಕಾಲದಲ್ಲಿ ಮೊಟೊರೊಲಾದ ಈ ಫೋನ್‌ ದರ ಆಕರ್ಷಕವಾಗಿದೆ. ಇದು ಅನೇಕ ಉತ್ತಮ ಫೀಚರ್‌ಗಳನ್ನೂ ಹೊಂದಿದೆ. ಕಳೆದ ಕೆಲವು ದಿನಗಳಿಂದ ಎಚ್‌ಟಿ ಟೆಕ್‌ನ  ಐಶ್ವರ್ಯಾ ಈ ಫೋನ್‌ ಬಳಸಿದ್ದು, ಇದರ ಆರಂಭಿಕ ವಿಮರ್ಶೆಯನ್ನು ಇಲ್ಲಿ ಹಂಚಿಕೊಂಡಿದ್ದಾರೆ.
icon

(1 / 6)

Motorola Razr 50 Revew: ಈ ವರ್ಷದ ಆರಂಭದಲ್ಲಿ ಬಿಡುಗಡೆಯಾದ ಮೊಟೊರೊಲಾ ರೇಜರ್ 50 ಅಲ್ಟ್ರಾ ಕಿರಿಯ ತಮ್ಮನಾಗಿ ಇತ್ತೀಚೆಗೆ ಮೊಟೊರೊಲಾ ರೇಜರ್ 50  ಬಿಡುಗಡೆಗೊಂಡಿದೆ. ಮಡುಚಬಹುದಾದ ಸ್ಮಾರ್ಟ್‌ಫೋನ್‌ಗಳು ದುಬಾರಿ ಎನ್ನುವ ಕಾಲದಲ್ಲಿ ಮೊಟೊರೊಲಾದ ಈ ಫೋನ್‌ ದರ ಆಕರ್ಷಕವಾಗಿದೆ. ಇದು ಅನೇಕ ಉತ್ತಮ ಫೀಚರ್‌ಗಳನ್ನೂ ಹೊಂದಿದೆ. ಕಳೆದ ಕೆಲವು ದಿನಗಳಿಂದ ಎಚ್‌ಟಿ ಟೆಕ್‌ನ  ಐಶ್ವರ್ಯಾ ಈ ಫೋನ್‌ ಬಳಸಿದ್ದು, ಇದರ ಆರಂಭಿಕ ವಿಮರ್ಶೆಯನ್ನು ಇಲ್ಲಿ ಹಂಚಿಕೊಂಡಿದ್ದಾರೆ.(Aishwarya Panda/ HT Tech)

ವಿನ್ಯಾಸ: ಇದು ಮೊದಲ ನೋಟಕ್ಕೆ ರೇಜರ್‌ 50 ಆಲ್ಟ್ರಾದಂತೆಯೇ ಇದೆ. ಆದರೆ, ಆಲ್ಟ್ರಾಗೆ ಹೋಲಿಸಿದರೆ ವಿನ್ಯಾಸದಲ್ಲಿ ಸಾಕಷ್ಟು ಬದಲಾವಣೆ ಗುರುತಿಸಬಹುದು. ಮೊದಲಿಗಿಂತ ಸಣ್ಣದಾಗಿದೆ, ತೆಳ್ಳಗಾಗಿದೆ. ಆದರೆ, ಈ ಫೋಲ್ಡ್‌ ಫೋನ್‌ ಅನ್ನು ತೆರೆದಾಗ ವಿಚಿತ್ರವಾಗಿ ಡಿಸ್‌ಪ್ಲೇ ದೊಡ್ಡದಾಗುತ್ತದೆ. ಕೆಲವರಿಗೆ ಇದು ಇಷ್ಟವಾಗದೆಯೂ ಇರಬಹುದು. ಹಲವು ಬಣ್ಣಗಳಲ್ಲಿ ಈ ಫೋನ್‌ ಲಭ್ಯವಿದೆ.  ಸ್ಪ್ರಿಟ್ಜ್ ಆರೆಂಜ್ ಫಿನಿಶ್ ಬಣ್ಣ ನನಗೆ ತುಂಬಾ ಇಷ್ಟವಾಯಿತು.
icon

(2 / 6)

ವಿನ್ಯಾಸ: ಇದು ಮೊದಲ ನೋಟಕ್ಕೆ ರೇಜರ್‌ 50 ಆಲ್ಟ್ರಾದಂತೆಯೇ ಇದೆ. ಆದರೆ, ಆಲ್ಟ್ರಾಗೆ ಹೋಲಿಸಿದರೆ ವಿನ್ಯಾಸದಲ್ಲಿ ಸಾಕಷ್ಟು ಬದಲಾವಣೆ ಗುರುತಿಸಬಹುದು. ಮೊದಲಿಗಿಂತ ಸಣ್ಣದಾಗಿದೆ, ತೆಳ್ಳಗಾಗಿದೆ. ಆದರೆ, ಈ ಫೋಲ್ಡ್‌ ಫೋನ್‌ ಅನ್ನು ತೆರೆದಾಗ ವಿಚಿತ್ರವಾಗಿ ಡಿಸ್‌ಪ್ಲೇ ದೊಡ್ಡದಾಗುತ್ತದೆ. ಕೆಲವರಿಗೆ ಇದು ಇಷ್ಟವಾಗದೆಯೂ ಇರಬಹುದು. ಹಲವು ಬಣ್ಣಗಳಲ್ಲಿ ಈ ಫೋನ್‌ ಲಭ್ಯವಿದೆ.  ಸ್ಪ್ರಿಟ್ಜ್ ಆರೆಂಜ್ ಫಿನಿಶ್ ಬಣ್ಣ ನನಗೆ ತುಂಬಾ ಇಷ್ಟವಾಯಿತು.(Aishwarya Panda/ HT Tech)

ಮೊಟೊರೊಲಾ ರೇಜರ್ 50 3.6-ಇಂಚಿನ ಅಮೋಲೆಡ್ ಕವರ್ ಡಿಸ್ಪ್ಲೇ ಮತ್ತು 6.9-ಇಂಚಿನ ಎಫ್ಎಚ್‌ಡಿ ಅಮೋಲೆಡ್ ಮುಖ್ಯ ಡಿಸ್ಪ್ಲೇ ಹೊಂದಿದೆ. ಇವೆರಡೂ ಡಿಸ್‌ಪ್ಲೇಗಳು ಉತ್ತಮವಾಗಿವೆ. ಜೆಮಿನಿ ಎಐ  ಸೇರಿದಂತೆ ಹಲವು ಅಪ್ಲಿಕೇಷನ್‌ಗಳಿಗೆ ಕವರ್‌ ಡಿಸ್‌ಪ್ಲೇಯಿಂದಲೇ ಪ್ರವೇಶಿಸಬಹುದು.  
icon

(3 / 6)

ಮೊಟೊರೊಲಾ ರೇಜರ್ 50 3.6-ಇಂಚಿನ ಅಮೋಲೆಡ್ ಕವರ್ ಡಿಸ್ಪ್ಲೇ ಮತ್ತು 6.9-ಇಂಚಿನ ಎಫ್ಎಚ್‌ಡಿ ಅಮೋಲೆಡ್ ಮುಖ್ಯ ಡಿಸ್ಪ್ಲೇ ಹೊಂದಿದೆ. ಇವೆರಡೂ ಡಿಸ್‌ಪ್ಲೇಗಳು ಉತ್ತಮವಾಗಿವೆ. ಜೆಮಿನಿ ಎಐ  ಸೇರಿದಂತೆ ಹಲವು ಅಪ್ಲಿಕೇಷನ್‌ಗಳಿಗೆ ಕವರ್‌ ಡಿಸ್‌ಪ್ಲೇಯಿಂದಲೇ ಪ್ರವೇಶಿಸಬಹುದು.  (Aishwarya Panda/ HT Tech)

ಕ್ಯಾಮೆರಾ ಕಾರ್ಯಕ್ಷಮತೆ ಹೇಗಿದೆ?: ಇದು ಮೊಟೊರೊಲಾ ರೇಜರ್ 50 ಒಐಎಸ್ ಬೆಂಬಲದೊಂದಿಗೆ 50 ಎಂಪಿ ಮುಖ್ಯ ಕ್ಯಾಮೆರಾ ಮತ್ತು 13 ಎಂಪಿ ಅಲ್ಟ್ರಾ-ವೈಡ್ ಕ್ಯಾಮೆರಾವನ್ನು ಹೊಂದಿದೆ. ಮೇನ್‌ ಕ್ಯಾಮೆರಾದ ಚಿತ್ರಗಳ ಗುಣಮಟ್ಟ ಉತ್ತಮವಾಗಿದೆ. ಆದರೆ, 32 ಎಂಪಿ ಸೆಲ್ಫಿ ಕ್ಯಾಮೆರಾದಲ್ಲಿ ಚಿತ್ರಗಳಿಗೆ ಹೆಚ್ಚಿನ ಸ್ಯಾಚುರೇಶನ್ ತಂದಂತೆ ಭಾಸವಾಗುತ್ತದೆ. ಚರ್ಮವನ್ನು ಸ್ವಲ್ಪ ಗುಲಾಬಿ ಬಣ್ಣದಲ್ಲಿ ಕಾಣುವಂತೆ ಮಾಡುತ್ತದೆ. ಇದು ಫಿಲ್ಟರ್‌ ಬಳಸಿದಂತೆ ಕಾಣಿಸುತ್ತದೆ.
icon

(4 / 6)

ಕ್ಯಾಮೆರಾ ಕಾರ್ಯಕ್ಷಮತೆ ಹೇಗಿದೆ?: ಇದು ಮೊಟೊರೊಲಾ ರೇಜರ್ 50 ಒಐಎಸ್ ಬೆಂಬಲದೊಂದಿಗೆ 50 ಎಂಪಿ ಮುಖ್ಯ ಕ್ಯಾಮೆರಾ ಮತ್ತು 13 ಎಂಪಿ ಅಲ್ಟ್ರಾ-ವೈಡ್ ಕ್ಯಾಮೆರಾವನ್ನು ಹೊಂದಿದೆ. ಮೇನ್‌ ಕ್ಯಾಮೆರಾದ ಚಿತ್ರಗಳ ಗುಣಮಟ್ಟ ಉತ್ತಮವಾಗಿದೆ. ಆದರೆ, 32 ಎಂಪಿ ಸೆಲ್ಫಿ ಕ್ಯಾಮೆರಾದಲ್ಲಿ ಚಿತ್ರಗಳಿಗೆ ಹೆಚ್ಚಿನ ಸ್ಯಾಚುರೇಶನ್ ತಂದಂತೆ ಭಾಸವಾಗುತ್ತದೆ. ಚರ್ಮವನ್ನು ಸ್ವಲ್ಪ ಗುಲಾಬಿ ಬಣ್ಣದಲ್ಲಿ ಕಾಣುವಂತೆ ಮಾಡುತ್ತದೆ. ಇದು ಫಿಲ್ಟರ್‌ ಬಳಸಿದಂತೆ ಕಾಣಿಸುತ್ತದೆ.(Aishwarya Panda/ HT Tech)

ಟೆಕ್ನಾಲಜಿ: ಮೊಟೊರೊಲಾ ರೇಜರ್ 50 ಮೀಡಿಯಾಟೆಕ್ ಡೈಮೆನ್ಸಿಟಿ 7300 ಎಕ್ಸ್ ಚಿಪ್ ಸೆಟ್ ಹೊಂದಿದೆ. ಟೆಕ್ನಿಕಲಿ ನನಗೆ ಈ ಸ್ಮಾರ್ಟ್‌ಫೋನ್‌ ಇಷ್ಟವಾಯಿತು. ಬಳಸುವಾಗ ಯಾವುದೇ ತೊಂದರೆ ಉಂಟಾಗಲಿಲ್ಲ. ಆದರೆ, ಬ್ಯಾಟರಿ ಬಾಳ್ವಿಕೆ ತುಂಬಾ ಉತ್ತಮವೇನು ಅಲ್ಲ. ಫ್ಲಿಪ್‌ ಶೈಲಿಯಲ್ಲಿ ಮಡುವುವ ಫೋನ್‌ ಆಗಿರುವ ಕಾರಣ ಬ್ಯಾಟರಿ ಸಾಮರ್ಥ್ಯ ಸಹಿಸಿಕೊಳ್ಳಬಹುದು. 
icon

(5 / 6)

ಟೆಕ್ನಾಲಜಿ: ಮೊಟೊರೊಲಾ ರೇಜರ್ 50 ಮೀಡಿಯಾಟೆಕ್ ಡೈಮೆನ್ಸಿಟಿ 7300 ಎಕ್ಸ್ ಚಿಪ್ ಸೆಟ್ ಹೊಂದಿದೆ. ಟೆಕ್ನಿಕಲಿ ನನಗೆ ಈ ಸ್ಮಾರ್ಟ್‌ಫೋನ್‌ ಇಷ್ಟವಾಯಿತು. ಬಳಸುವಾಗ ಯಾವುದೇ ತೊಂದರೆ ಉಂಟಾಗಲಿಲ್ಲ. ಆದರೆ, ಬ್ಯಾಟರಿ ಬಾಳ್ವಿಕೆ ತುಂಬಾ ಉತ್ತಮವೇನು ಅಲ್ಲ. ಫ್ಲಿಪ್‌ ಶೈಲಿಯಲ್ಲಿ ಮಡುವುವ ಫೋನ್‌ ಆಗಿರುವ ಕಾರಣ ಬ್ಯಾಟರಿ ಸಾಮರ್ಥ್ಯ ಸಹಿಸಿಕೊಳ್ಳಬಹುದು. (Aishwarya Panda/ HT Tech)

ಒಟ್ಟಾರೆ ಮಡುಚಬಹುದಾದ ಸ್ಮಾರ್ಟ್‌ಫೋನ್‌ ಇಷ್ಟಪಡುವವರಿಗೆ ಈ ಮೊಟೊರೊಲಾ ಸ್ಮಾರ್ಟ್‌ಫೋನ್‌ ಇಷ್ಟವಾಗಬಹುದು. ಅಂದಹಾಗೆ ಇದರ ದರ 64,999 ರೂಪಾಯಿ ಇದೆ.
icon

(6 / 6)

ಒಟ್ಟಾರೆ ಮಡುಚಬಹುದಾದ ಸ್ಮಾರ್ಟ್‌ಫೋನ್‌ ಇಷ್ಟಪಡುವವರಿಗೆ ಈ ಮೊಟೊರೊಲಾ ಸ್ಮಾರ್ಟ್‌ಫೋನ್‌ ಇಷ್ಟವಾಗಬಹುದು. ಅಂದಹಾಗೆ ಇದರ ದರ 64,999 ರೂಪಾಯಿ ಇದೆ.


ಇತರ ಗ್ಯಾಲರಿಗಳು