ಸ್ಯಾಮ್‌ಸಂಗ್‌ ಗ್ಯಾಲಕ್ಸಿ ವಾಚ್‌ ಅಲ್ಟ್ರಾ: ಆಪಲ್‌ಗೆ ಪೈಪೋಟಿ ನೀಡಲು ಬಂದ ಆಂಡ್ರಾಯ್ಡ್ ವಾಚ್‌ನ ದರ 59,999 ರೂಪಾಯಿ, ಇದ್ರಲ್ಲಿ ಏನಿದೆ ವಿಶೇಷ?-technology news samsung galaxy watch ultra apples bold new rival in the heavyweight segment pcp ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಸ್ಯಾಮ್‌ಸಂಗ್‌ ಗ್ಯಾಲಕ್ಸಿ ವಾಚ್‌ ಅಲ್ಟ್ರಾ: ಆಪಲ್‌ಗೆ ಪೈಪೋಟಿ ನೀಡಲು ಬಂದ ಆಂಡ್ರಾಯ್ಡ್ ವಾಚ್‌ನ ದರ 59,999 ರೂಪಾಯಿ, ಇದ್ರಲ್ಲಿ ಏನಿದೆ ವಿಶೇಷ?

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ವಾಚ್‌ ಅಲ್ಟ್ರಾ: ಆಪಲ್‌ಗೆ ಪೈಪೋಟಿ ನೀಡಲು ಬಂದ ಆಂಡ್ರಾಯ್ಡ್ ವಾಚ್‌ನ ದರ 59,999 ರೂಪಾಯಿ, ಇದ್ರಲ್ಲಿ ಏನಿದೆ ವಿಶೇಷ?

Samsung Galaxy Watch Ultra: ಸ್ಯಾಮ್‌ಸಂಗ್‌ ಕಂಪನಿಯು ಕೆಲವು ವಾರದ ಹಿಂದೆ ಹೊಸ ಗ್ಯಾಲಕ್ಸಿ ವಾಚ್ ಅಲ್ಟ್ರಾವನ್ನು ಬಿಡುಗಡೆ ಮಾಡಿದೆ. ಇದು ಆಂಡ್ರಾಯ್ಡ್‌ ಬಳಕೆದಾರರಿಗೆ ಆಪಲ್‌ ಪ್ರತಿಸ್ಪರ್ಧಿ ವಾಚ್‌ ಎಂದು ವ್ಯಾಖ್ಯಾನಿಸಲಾಗುತ್ತದೆ. ಅಂದಹಾಗೆ, ನೂತನ ವಾಚ್‌ ದರ 59,999 ರೂಪಾಯಿ ಇದೆ. ಈ ವಾಚ್‌ ಕುರಿತು ಹೆಚ್ಚಿನ ವಿವರ ಇಲ್ಲಿದೆ.

ಸ್ಯಾಮ್ಸಂಗ್ ಗ್ಯಾಲಕ್ಸಿ ವಾಚ್ ಅಲ್ಟ್ರಾ ತನ್ನ ಅಂದದ ವಿನ್ಯಾಸದಿಂದ ಗಮನ ಸೆಳೆಯುತ್ತದೆ. ಈ ಹಿಂದಿನ ಗ್ಯಾಲಕ್ಸಿ ವಾಚ್‌ಗಿಂತ ಭಿನ್ನವಾಗಿ ವೃತ್ತಾಕಾರ ಮತ್ತು ಚೌಕಾಕಾರದ ವಿನ್ಯಾಸ ಹೊಂದಿದೆ. ದೊಡ್ಡ 47 ಎಂಎಂ ಕೇಸ್ ಆರಾಮದಾಯಕವಾಗಿ ಕಾಣುತ್ತದೆ. ಸಣ್ಣ ಮಣಿಕಟ್ಟು ಹೊಂದಿರುವವರಿಗೆ ಈ ವಾಚ್‌ ಕಟ್ಟಲು ಕೊಂಚ ಕಷ್ಟವಾಗಬಹುದು. 
icon

(1 / 5)

ಸ್ಯಾಮ್ಸಂಗ್ ಗ್ಯಾಲಕ್ಸಿ ವಾಚ್ ಅಲ್ಟ್ರಾ ತನ್ನ ಅಂದದ ವಿನ್ಯಾಸದಿಂದ ಗಮನ ಸೆಳೆಯುತ್ತದೆ. ಈ ಹಿಂದಿನ ಗ್ಯಾಲಕ್ಸಿ ವಾಚ್‌ಗಿಂತ ಭಿನ್ನವಾಗಿ ವೃತ್ತಾಕಾರ ಮತ್ತು ಚೌಕಾಕಾರದ ವಿನ್ಯಾಸ ಹೊಂದಿದೆ. ದೊಡ್ಡ 47 ಎಂಎಂ ಕೇಸ್ ಆರಾಮದಾಯಕವಾಗಿ ಕಾಣುತ್ತದೆ. ಸಣ್ಣ ಮಣಿಕಟ್ಟು ಹೊಂದಿರುವವರಿಗೆ ಈ ವಾಚ್‌ ಕಟ್ಟಲು ಕೊಂಚ ಕಷ್ಟವಾಗಬಹುದು. (Ayushmann Chawla/HT Tech)

ಈ ವಾಚ್‌ ಹಲವು ಸುಧಾರಿತ ಫೀಚರ್‌ಗಳನ್ನು ಹೊಂದಿದೆ. ಟ್ರಯಥ್ಲಾನ್‌ ಸೇರಿದಂತೆ ಹಲವು ಚಟುವಟಿಕೆಗೆ ಈ ವಾಚ್‌ ಬೆಂಬಲ ನೀಡುತ್ತದೆ. ಇದರಲ್ಲಿ ಕಸ್ಟಮೈಸ್‌ ಮಾಡಬಹುದಾದ ಬಟನ್‌ಗಳೂ ಇವೆ.  ಗ್ಯಾಲಕ್ಸಿ ವಾಚ್ ಅಲ್ಟ್ರಾ ಪವರ್ ಸೇವಿಂಗ್ ಮೋಡ್ ಹೊಂದಿದ್ದು, 72 ಗಂಟೆ ಬ್ಯಾಟರಿ ಬಾಳ್ವಿಕೆ ಇರುತ್ತದೆ. ಸಮಗ್ರ ಆರೋಗ್ಯ ಮತ್ತು ಫಿಟ್ನೆಸ್ ಟ್ರ್ಯಾಕಿಂಗ್‌ ಫೀಚರ್‌ಗಳನ್ನು ಈ ವಾಚ್‌ ಹೊಂದಿದೆ. ಆದರೆ, ಚಯಾಪಚಯ ಆರೋಗ್ಯ ತಿಳಿಯುವ ಎಜಿಇ ಫೀಚರ್‌ ಪ್ರಾಯೋಗಿಕವಾಗಿದೆ. 
icon

(2 / 5)

ಈ ವಾಚ್‌ ಹಲವು ಸುಧಾರಿತ ಫೀಚರ್‌ಗಳನ್ನು ಹೊಂದಿದೆ. ಟ್ರಯಥ್ಲಾನ್‌ ಸೇರಿದಂತೆ ಹಲವು ಚಟುವಟಿಕೆಗೆ ಈ ವಾಚ್‌ ಬೆಂಬಲ ನೀಡುತ್ತದೆ. ಇದರಲ್ಲಿ ಕಸ್ಟಮೈಸ್‌ ಮಾಡಬಹುದಾದ ಬಟನ್‌ಗಳೂ ಇವೆ.  ಗ್ಯಾಲಕ್ಸಿ ವಾಚ್ ಅಲ್ಟ್ರಾ ಪವರ್ ಸೇವಿಂಗ್ ಮೋಡ್ ಹೊಂದಿದ್ದು, 72 ಗಂಟೆ ಬ್ಯಾಟರಿ ಬಾಳ್ವಿಕೆ ಇರುತ್ತದೆ. ಸಮಗ್ರ ಆರೋಗ್ಯ ಮತ್ತು ಫಿಟ್ನೆಸ್ ಟ್ರ್ಯಾಕಿಂಗ್‌ ಫೀಚರ್‌ಗಳನ್ನು ಈ ವಾಚ್‌ ಹೊಂದಿದೆ. ಆದರೆ, ಚಯಾಪಚಯ ಆರೋಗ್ಯ ತಿಳಿಯುವ ಎಜಿಇ ಫೀಚರ್‌ ಪ್ರಾಯೋಗಿಕವಾಗಿದೆ. (Ayushmann Chawla/HT Tech)

ಆರೋಗ್ಯ ಟ್ರ್ಯಾಕಿಂಗ್ ಫೀಚರ್‌ಗಳು ಉತ್ತಮವಾಗಿವೆ. ಅಪ್‌ಡೇಟ್‌ ಆಗಿರುವ ಬಯೋಆಕ್ಟಿವ್ ಸೆನ್ಸರ್ ಇಕೆಜಿ ಮತ್ತು ದೇಹ ಸಂಯೋಜನೆ ವಿಶ್ಲೇಷಣೆಯನ್ನು ನೀಡುತ್ತದೆ.  ಡ್ಯುಯಲ್-ಫ್ರೀಕ್ವೆನ್ಸಿ ಜಿಪಿಎಸ್ ಹೊರಾಂಗಣ ಚಟುವಟಿಕೆಗಳಿಗೆ ನೆರವು ನೀಡುತ್ತದೆ. ಎಜಿಇ ಮೆಟ್ರಿಕ್ಸ್  ಫೀಚರ್‌ಗಳು ಉತ್ತಮವಾಗಿದೆ. ಒಟ್ಟಾರೆ ಫಿಟ್ನೆಸ್‌ ಮತ್ತು ಹೆಲ್ತ್‌ ಫೀಚರ್‌ಗಳು ಉತ್ತಮವಾಗಿವೆ. 
icon

(3 / 5)

ಆರೋಗ್ಯ ಟ್ರ್ಯಾಕಿಂಗ್ ಫೀಚರ್‌ಗಳು ಉತ್ತಮವಾಗಿವೆ. ಅಪ್‌ಡೇಟ್‌ ಆಗಿರುವ ಬಯೋಆಕ್ಟಿವ್ ಸೆನ್ಸರ್ ಇಕೆಜಿ ಮತ್ತು ದೇಹ ಸಂಯೋಜನೆ ವಿಶ್ಲೇಷಣೆಯನ್ನು ನೀಡುತ್ತದೆ.  ಡ್ಯುಯಲ್-ಫ್ರೀಕ್ವೆನ್ಸಿ ಜಿಪಿಎಸ್ ಹೊರಾಂಗಣ ಚಟುವಟಿಕೆಗಳಿಗೆ ನೆರವು ನೀಡುತ್ತದೆ. ಎಜಿಇ ಮೆಟ್ರಿಕ್ಸ್  ಫೀಚರ್‌ಗಳು ಉತ್ತಮವಾಗಿದೆ. ಒಟ್ಟಾರೆ ಫಿಟ್ನೆಸ್‌ ಮತ್ತು ಹೆಲ್ತ್‌ ಫೀಚರ್‌ಗಳು ಉತ್ತಮವಾಗಿವೆ. (Ayushmann Chawla/HT Tech)

ನೋಡಲು ನಯವಾಗಿ ಕಾಣಿಸುತ್ತದೆ. ಆದರೆ, ಹಿಂದಿನ ಸ್ಯಾಮ್‌ಸಂಗ್‌ ವಾಚ್‌ಗಳಿಗೆ ಹೋಲಿಸಿದರೆ ತಿರುಗುವ ಬೆಜೆಲ್‌ನ ಅನುಪಸ್ಥಿತಿ ಕಾಣಿಸುತ್ತದೆ. ಇದರಿಂದ ಬಳಕೆದಾರರಿಗೆ ಉತ್ತಮ ಅನುಭವ ದೊರಕದು.  ಅಲರ್ಟ್‌ಗಳನ್ನು ನಿಯಂತ್ರಿಸಲು ಡಬಲ್‌ ಪಿಂಚ್‌, ಕ್ಯಾಮೆರಾ ಸನ್ನೆಯಂತಹ ಫೀಚರ್‌ ನೀಡಲಾಗಿದೆ. ವಾಚ್ ಒನ್ ಯುಐ 6 ವಾಚ್ ಮತ್ತು ವೇರ್ ಓಎಸ್ 5  ಕಾರ್ಯನಿರ್ವಹಿಸುತ್ತದೆ. 
icon

(4 / 5)

ನೋಡಲು ನಯವಾಗಿ ಕಾಣಿಸುತ್ತದೆ. ಆದರೆ, ಹಿಂದಿನ ಸ್ಯಾಮ್‌ಸಂಗ್‌ ವಾಚ್‌ಗಳಿಗೆ ಹೋಲಿಸಿದರೆ ತಿರುಗುವ ಬೆಜೆಲ್‌ನ ಅನುಪಸ್ಥಿತಿ ಕಾಣಿಸುತ್ತದೆ. ಇದರಿಂದ ಬಳಕೆದಾರರಿಗೆ ಉತ್ತಮ ಅನುಭವ ದೊರಕದು.  ಅಲರ್ಟ್‌ಗಳನ್ನು ನಿಯಂತ್ರಿಸಲು ಡಬಲ್‌ ಪಿಂಚ್‌, ಕ್ಯಾಮೆರಾ ಸನ್ನೆಯಂತಹ ಫೀಚರ್‌ ನೀಡಲಾಗಿದೆ. ವಾಚ್ ಒನ್ ಯುಐ 6 ವಾಚ್ ಮತ್ತು ವೇರ್ ಓಎಸ್ 5  ಕಾರ್ಯನಿರ್ವಹಿಸುತ್ತದೆ. (Ayushmann Chawla/HT Tech)

ಗ್ಯಾಲಕ್ಸಿ ವಾಚ್ ಅಲ್ಟ್ರಾ ಶಕ್ತಿಯುತ ಆಂಡ್ರಾಯ್ಡ್ ಸ್ಮಾರ್ಟ್ ವಾಚ್ ಆಗಿದೆ. ಈ ಹಿಂದಿನ ಸ್ಯಾಮ್‌ಸಂಗ್‌ ವಾಚ್‌ಗಳಿಗೆ ಹೋಲಿಸಿದರೆ ಅನೇಕ ಸುಧಾರಿತ ಫೀಚರ್‌ಗಳು, ಅಪ್‌ಡೇಟ್‌ಗಳನ್ನು ಗುರುತಿಸಬಹುದು. ಸಮಗ್ರ ಫಿಟ್ನೆಸ್ ಮತ್ತು ಆರೋಗ್ಯ ಸಂಗಾತಿಯಾಗಿ ಗಮನ ಸೆಳೆಯುತ್ತದೆ. ಆದರೆ, ಇದನ್ನು ಆಪಲ್‌ ವಾಚ್‌ ಜತೆಗೆ ಹೋಲಿಸುವುದು ಆತಂಕ ಹುಟ್ಟಿಸುತ್ತದೆ. ಆಂಡ್ರಾಯ್ಡ್‌ ಬಳಕೆದಾರರಿಗೆ ಹೆಚ್ಚು ಫೀಚರ್‌ ಇರುವ ವಾಚ್‌ ಎನ್ನಬಹುದು. ಆಪಲ್‌ ವಾಚ್‌ಗೆ ಸಾಟಿಯಾಗದು. 
icon

(5 / 5)

ಗ್ಯಾಲಕ್ಸಿ ವಾಚ್ ಅಲ್ಟ್ರಾ ಶಕ್ತಿಯುತ ಆಂಡ್ರಾಯ್ಡ್ ಸ್ಮಾರ್ಟ್ ವಾಚ್ ಆಗಿದೆ. ಈ ಹಿಂದಿನ ಸ್ಯಾಮ್‌ಸಂಗ್‌ ವಾಚ್‌ಗಳಿಗೆ ಹೋಲಿಸಿದರೆ ಅನೇಕ ಸುಧಾರಿತ ಫೀಚರ್‌ಗಳು, ಅಪ್‌ಡೇಟ್‌ಗಳನ್ನು ಗುರುತಿಸಬಹುದು. ಸಮಗ್ರ ಫಿಟ್ನೆಸ್ ಮತ್ತು ಆರೋಗ್ಯ ಸಂಗಾತಿಯಾಗಿ ಗಮನ ಸೆಳೆಯುತ್ತದೆ. ಆದರೆ, ಇದನ್ನು ಆಪಲ್‌ ವಾಚ್‌ ಜತೆಗೆ ಹೋಲಿಸುವುದು ಆತಂಕ ಹುಟ್ಟಿಸುತ್ತದೆ. ಆಂಡ್ರಾಯ್ಡ್‌ ಬಳಕೆದಾರರಿಗೆ ಹೆಚ್ಚು ಫೀಚರ್‌ ಇರುವ ವಾಚ್‌ ಎನ್ನಬಹುದು. ಆಪಲ್‌ ವಾಚ್‌ಗೆ ಸಾಟಿಯಾಗದು. (Ayushmann Chawla/HT Tech)


ಇತರ ಗ್ಯಾಲರಿಗಳು