ಹಳೆಯ ಫೋನ್‌ ಖರೀದಿಗೆ ಮಾರ್ಗದರ್ಶಿ: ಸೆಕೆಂಡ್‌ಹ್ಯಾಂಡ್‌ ಸ್ಮಾರ್ಟ್‌ಫೋನ್‌ ಖರೀದಿಸುವಾಗ ಈ 6 ವಿಷಯ ಸರಿ ಇರುವುದೇ ಪರಿಶೀಲಿಸಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಹಳೆಯ ಫೋನ್‌ ಖರೀದಿಗೆ ಮಾರ್ಗದರ್ಶಿ: ಸೆಕೆಂಡ್‌ಹ್ಯಾಂಡ್‌ ಸ್ಮಾರ್ಟ್‌ಫೋನ್‌ ಖರೀದಿಸುವಾಗ ಈ 6 ವಿಷಯ ಸರಿ ಇರುವುದೇ ಪರಿಶೀಲಿಸಿ

ಹಳೆಯ ಫೋನ್‌ ಖರೀದಿಗೆ ಮಾರ್ಗದರ್ಶಿ: ಸೆಕೆಂಡ್‌ಹ್ಯಾಂಡ್‌ ಸ್ಮಾರ್ಟ್‌ಫೋನ್‌ ಖರೀದಿಸುವಾಗ ಈ 6 ವಿಷಯ ಸರಿ ಇರುವುದೇ ಪರಿಶೀಲಿಸಿ

  • Second Hand Mobile buy tips: ಅಮೆಜಾನ್‌, ಫ್ಲಿಪ್‌ಕಾರ್ಟ್‌ ಸೇರಿದಂತೆ ಹಲವು ಇ-ಕಾಮರ್ಸ್‌ ತಾಣಗಳಲ್ಲಿ ಸೆಕೆಂಡ್‌ ಹ್ಯಾಂಡ್‌ ರಿಫರ್ಬಿಷ್ಡ್‌ ಸ್ಮಾರ್ಟ್‌ಫೋನ್‌ಗಳು ಲಭ್ಯ ಇವೆ. ಮಾರುಕಟ್ಟೆಯಲ್ಲಿ ಸೆಕೆಂಡ್‌ ಹ್ಯಾಂಡ್‌ ಅಥವಾ ರಿಫರ್ಬಿಷ್ಡ್‌ ಫೋನ್‌ಗಳನ್ನು ಖರೀದಿಸುವ ಸಮಯದಲ್ಲಿ ತುಸು ಎಚ್ಚರಿಕೆವಹಿಸಬೇಕು. ಈ ಮುಂದಿನ ಸಲಹೆಗಳನ್ನು ಗಮನಿಸಿ.

ಮಾರಾಟಗಾರರ ಬಗ್ಗೆ ತಿಳಿದುಕೊಳ್ಳಿ: ಈಗಾಗಲೇ ಹಲವು ಕಂಪನಿಗಳು ಸೆಕೆಂಡ್‌ ಹ್ಯಾಂಡ್‌ ಮಾರುಕಟ್ಟೆಯಲ್ಲಿ ಜನಪ್ರಿಯತೆಗಳಿಸಿವೆ. ಇಬ್ಬರಿಂದ ಪಡೆದು ಇನ್ನೊಬ್ಬರಿಗೆ ನೀಡುವ ಸೆಕೆಂಡ್‌ ಹ್ಯಾಂಡ್‌ ಫೋನ್‌ಗಳ ಬದಲು ಹಳೆಯ ಫೋನ್‌ ಅನ್ನು ಸಾಕಷ್ಟು ಪರಿಶೀಲನೆ ನಡೆಸಿ ರಿಪೇರಿ ಮಾಡಿ ಮಾರಾಟ ಮಾಡುವ ಟ್ರಸ್ಟೆಡ್‌ ಸಂಸ್ಥೆಗಳಿಂದ ನವೀಕೃತ ಸ್ಮಾರ್ಟ್‌ಫೋನ್‌ ಖರೀದಿಸಿ. ಈ ರೀತಿ ಮಾರಾಟ ಮಾಡುವ ಸೆಲ್ಲರ್‌ಗಳ ಕುರಿತು ಬಳಕೆದಾರರು ನೀಡಿರುವ ರಿವ್ಯೂಗಳನ್ನು ಗಮನಿಸಿ.
icon

(1 / 7)

(pixabay)

ವಾರೆಂಟಿ ಪರಿಶೀಲನೆ ನಡೆಸಿ: ರಿಫರ್ಬಿಷ್ಡ್‌ ಫೋನ್‌ ಖರೀದಿಸುವ ಸಮಯದಲ್ಲಿ ಅದಕ್ಕೆ ನೀಡಲಾದ ವ್ಯಾರೆಂಟಿ ಗಮನಿಸುವುದು ಅತ್ಯಂತ ಅಗತ್ಯವಾಗಿದೆ. ವಾರೆಂಟಿ ಇಲ್ಲದ ಇಂತಹ ಸೆಕೆಂಡ್‌ ಹ್ಯಾಂಡ್‌ಗಳಲ್ಲಿ ಗಂಭೀರ ದೋಷಗಳು ಇರಬಹುದು. ಹಳೆಯ ಫೋನ್‌ ಅನ್ನು ಒರಿಜಿನಲ್‌ ಕಂಡಿಷನ್‌ಗೆ ರಿಸ್ಟೋರ್‌ ಮಾಡಿರುವುದಕ್ಕೆ ಗ್ಯಾರಂಟಿಯಾಗಿ ವಾರೆಂಟಿ ನೀಡಲಾಗುತ್ತದೆ. ಇವುಗಳನ್ನು ನಿರ್ದಿಷ್ಟ ಅವಧಿಗೆ ನಿಶ್ಚಿಂತೆಯಿಂದ ಬಳಸಬಹುದು.
icon

(2 / 7)

ಫೋನ್‌ನ ಸ್ಥಿತಿ ಪರಿಶೀಲಿಸಿ: ಆನ್‌ಲೈನ್‌ನಲ್ಲಿ ಖರೀದಿಸುವುದಾದರೆ ನಿರ್ದಿಷ್ಟ ಫೋನ್‌ನ ಸ್ಥಿತಿಯ ಕುರಿತು ಎಲ್ಲಾ ಆಂಗಲ್‌ನಿಂದ ಚಿತ್ರಗಳನ್ನು ನೀಡಿರುವುದನ್ನು ಖಚಿತಪಡಿಸಿಕೊಳ್ಳಿ. ಈ ಸಂದರ್ಭದಲ್ಲಿ ಫೋನ್‌ನಲ್ಲಿ ಏನಾದರೂ ಹಾನಿ, ತೊಂದರೆಗಳು ಇರುವುದೇ ಎಂದು ಅವಲೋಕಿಸಿ. ಕ್ಯಾಮೆರಾ ಬಟನ್‌, ಚಾರ್ಜಿಂಗ್‌ ಪಾಯಿಂಟ್‌ಗಳನ್ನು ಪರಿಶೀಲನೆ ನಡೆಸಿ. 
icon

(3 / 7)

ಬ್ಯಾಟರಿ ಲೈಫ್‌ ಗಮನಿಸಿ:  ಹಳೆ ಫೋನ್‌ನಲ್ಲಿ ಬ್ಯಾಟರಿಯೇ ಪ್ರಮುಖ ಸಮಸ್ಯೆಯ ಅಂಶವಾಗಿರುತ್ತದೆ. ಬ್ಯಾಟರಿ ಲೈಫ್‌ ಶೇಕಡ 80ಕ್ಕಿಂತ ಕಡಿಮೆ ಇಲ್ಲದೆ ಇರುವುದನ್ನು ಖಚಿತಪಡಿಸಿಕೊಳ್ಳಿ. ಹಳೆಯ ಬ್ಯಾಟರಿಯನ್ನು ಮುಂದುವರೆಸಲಾಗಿರುವುದೇ ಅಥವಾ ಹೊಸ ಬ್ಯಾಟರಿ ಹಾಕಲಾಗಿದೆಯೇ ಎಂದು ಮಾರಾಟಗಾರರಲ್ಲಿ ಕೇಳಿ ಖಚಿತಪಡಿಸಿಕೊಳ್ಳಿ.
icon

(4 / 7)

ಆಕ್ಸೆಸರಿಗಳನ್ನು ಗಮನಿಸಿ: ರಿಫರ್ಬಿಷ್ಡ್‌ ಫೋನ್‌ ಖರೀದಿ ಸಂದರ್ಭದಲ್ಲಿ ಒರಿಜಿನಲ್‌ ಆಕ್ಸೆಸರಿ ಹೊಂದಿರುವುದನ್ನು ಖಚಿತಪಡಿಸಿಕೊಳ್ಳಿ. ಅಂದರೆ, ಚಾರ್ಜರ್‌, ಇಯರ್‌ ಫೋನ್‌ಗಳು, ಯೂಸರ್‌ ಮ್ಯಾನುಯಲ್‌ಗಳು ಇದ್ದರೆ ಖರೀದಿಸಿ. ಇವು ಇಲ್ಲದೆ ಇದ್ದರೆ ಖರೀದಿಸುವುದು ಉತ್ತಮವಲ್ಲ.
icon

(5 / 7)

ದರ ಹೋಲಿಕೆ ಮಾಡಿ: ಹಳೆ ಫೋನ್‌ ದರ ತುಂಬಾ ಕಡಿಮೆ ಇದ್ದರೆ ಖರೀದಿಸಬಹುದು. ಹೊಸ ಫೋನ್‌ಗೂ ಹಳೆ ಫೋನ್‌ಗೂ ಕೆಲವು ಸಾವಿರ ರೂಪಾಯಿ ವ್ಯತ್ಯಾಸ ಇದ್ದರೆ ಹೊಸತೇ ಖರೀದಿ ಉತ್ತಮ.
icon

(6 / 7)

ಕೆಲವೊಮ್ಮೆ ಹಳೆಯ ಫೋನ್‌ಗಳು ನೋಡಲು ಚೆನ್ನಾಗಿರುತ್ತವೆ. ಆದರೆ, ಆಂತರಿಕವಾಗಿ ಏನಾದರೂ ದೊಡ್ಡ ಪ್ರಾಬ್ಲಂ ಇರುತ್ತದೆ. ತುಂಬಾ ಚೆನ್ನಾಗಿರುವ ಫೋನ್‌ ಅನ್ನು ಯಾರೂ ಮಾರಾಟ ಮಾಡುವುದಿಲ್ಲ. ಏನಾದರೂ ತೊಂದರೆ ಆರಂಭವಾದ ಬಳಿಕವೇ ಬಹುತೇಕರು ಹಳೆಯ ಫೋನ್‌ ಮಾರುತ್ತಾರೆ. ಅದನ್ನು ಸರಿಯಾಗಿ ರಿಫರ್ಬಿಷ್ಡ್‌ ಮಾಡಿದ್ದರೆ ಖರೀದಿಸಬಹುದು. ಇಲ್ಲವಾದರೆ ಕೆಲವೇ ದಿನಗಳಲ್ಲಿ ಬ್ಯಾಟರಿ ನಿಲ್ಲೋದಿಲ್ಲ, ಆಗಾಗ ಹ್ಯಾಂಗ್‌ ಆಗುತ್ತದೆ, ಆಗಾಗ ಆಫ್‌ ಆಗುತ್ತದೆ ಇತ್ಯಾದಿ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.
icon

(7 / 7)

ಇತರ ಗ್ಯಾಲರಿಗಳು