Battery Smartphones: 15000 ರೂಪಾಯಿ ಒಳಗಿನ ಟಾಪ್ 5 ಬ್ಯಾಟರಿ ಬಾಳ್ವಿಕೆಯ ಸ್ಮಾರ್ಟ್‌ಫೋನ್ಸ್
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Battery Smartphones: 15000 ರೂಪಾಯಿ ಒಳಗಿನ ಟಾಪ್ 5 ಬ್ಯಾಟರಿ ಬಾಳ್ವಿಕೆಯ ಸ್ಮಾರ್ಟ್‌ಫೋನ್ಸ್

Battery Smartphones: 15000 ರೂಪಾಯಿ ಒಳಗಿನ ಟಾಪ್ 5 ಬ್ಯಾಟರಿ ಬಾಳ್ವಿಕೆಯ ಸ್ಮಾರ್ಟ್‌ಫೋನ್ಸ್

ಸ್ಮಾರ್ಟ್‌ಫೋನ್‌ ಖರೀದಿ ಮಾಡುವಾಗ ಗಮನಿಸಬೇಕಾದ ಹಲವು ವಿಷಯಗಳಿವೆ. ನಾವು ಬಜೆಟ್ ಫೋನ್ ಖರೀದಿಸುವುದಾದರೆ, ಬ್ಯಾಟರಿ ಬಾಳ್ವಿಕೆ ಕಡೆಗೆ ಒತ್ತು ನೀಡುವುದು ಸಹಜ. 15,000 ರೂಪಾಯಿ ಒಳಗಿನ ಫೋನ್‌ಗಳ ಪೈಕಿ ಅಂತಹ ಟಾಪ್ 5 ಫೋನ್‌ಗಳ ವಿವರ ಇಲ್ಲಿದೆ. 

ರಿಯಲ್‌ ಮಿ ನಾರ್ಜೋ 60ಎಕ್ಸ್: ರಿಯಲ್‌ಮಿ ಸ್ಮಾರ್ಟ್‌ಫೋನ್‌ನ ನಾರ್ಜೋ ಸರಣಿಯ ಈ ಫೋನ್‌ 5000 ಎಂಎಎಚ್‌ ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದ್ದು, 33 ವಾಟ್‌ ಸೂಪರ್‌ವೂಕ್‌ ಫಾಸ್ಟ್‌ ಚಾರ್ಜಿಂಗ್ ಸೌಲಭ್ಯವನ್ನು ಹೊಂದಿದೆ. ಈ ಉಪಕರಣವು ಕೇವಲ 29 ನಿಮಿಷದಲ್ಲಿ ಶೇಕಡ 50ರಷ್ಟು ಚಾರ್ಜ್‌ ಆಗುತ್ತದೆ. ಇದು ಇಡೀ ದಿನ ಕಾರ್ಯನಿರ್ವಹಿಸಲು ಬಳಕೆದಾರರಿಗೆ ನೆರವಾಗುತ್ತದೆ. ಮೀಡಿಯಾ ಟೆಕ್‌ ಡೈಮೆನ್ಸಿಟಿ 6100 ಪ್ರೊಸೆಸರ್ ಇರುವ ಕಾರಣ ಸ್ಮೂತ್ ಆಗಿ ಕಾರ್ಯ ನಿರ್ವಹಿಸುತ್ತದೆ. ಸ್ಮಾರ್ಟ್‌ಫೋನ್‌ 4ಜಿಬಿ RAM ವರ್ಷನ್‌ನಲ್ಲಿ 12,999 ರೂಪಾಯಿಗೆ, 6ಜಿಬಿ RAM ವರ್ಷನ್‌ 14,999 ರೂಪಾಯಿಗೆ ಲಭ್ಯವಿದೆ.
icon

(1 / 5)

ರಿಯಲ್‌ ಮಿ ನಾರ್ಜೋ 60ಎಕ್ಸ್: ರಿಯಲ್‌ಮಿ ಸ್ಮಾರ್ಟ್‌ಫೋನ್‌ನ ನಾರ್ಜೋ ಸರಣಿಯ ಈ ಫೋನ್‌ 5000 ಎಂಎಎಚ್‌ ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದ್ದು, 33 ವಾಟ್‌ ಸೂಪರ್‌ವೂಕ್‌ ಫಾಸ್ಟ್‌ ಚಾರ್ಜಿಂಗ್ ಸೌಲಭ್ಯವನ್ನು ಹೊಂದಿದೆ. ಈ ಉಪಕರಣವು ಕೇವಲ 29 ನಿಮಿಷದಲ್ಲಿ ಶೇಕಡ 50ರಷ್ಟು ಚಾರ್ಜ್‌ ಆಗುತ್ತದೆ. ಇದು ಇಡೀ ದಿನ ಕಾರ್ಯನಿರ್ವಹಿಸಲು ಬಳಕೆದಾರರಿಗೆ ನೆರವಾಗುತ್ತದೆ. ಮೀಡಿಯಾ ಟೆಕ್‌ ಡೈಮೆನ್ಸಿಟಿ 6100 ಪ್ರೊಸೆಸರ್ ಇರುವ ಕಾರಣ ಸ್ಮೂತ್ ಆಗಿ ಕಾರ್ಯ ನಿರ್ವಹಿಸುತ್ತದೆ. ಸ್ಮಾರ್ಟ್‌ಫೋನ್‌ 4ಜಿಬಿ RAM ವರ್ಷನ್‌ನಲ್ಲಿ 12,999 ರೂಪಾಯಿಗೆ, 6ಜಿಬಿ RAM ವರ್ಷನ್‌ 14,999 ರೂಪಾಯಿಗೆ ಲಭ್ಯವಿದೆ.(Amazon)

ಸ್ಯಾಮ್‌ಸಂಗ್‌ ಎಫ್‌14: ಸ್ಯಾಮ್‌ಸಂಗ್‌ನ ಈ ಸ್ಮಾರ್ಟ್‌ಫೋನ್‌ನಲ್ಲಿ 6000ಎಂಎಎಚ್‌ ಬ್ಯಾಟರಿ ಸೌಲಭ್ಯವಿದೆ. 25 ವಾಟ್‌ನ ಫಾಸ್ಟ್ ಚಾರ್ಜಿಂಗ್ ಕೂಡ ಇದೆ. ಒಕ್ಟಾ ಕೋರ್‌ ಸ್ಯಾಮ್‌ಸಂಗ್‌ ಎಕ್ಸಿನೋಸ್ 1330 ಇರುವ ಕಾರಣ ಒಪ್ಟಿಮಮ್‌ ಕಾರ್ಯಸಾಧನೆಯನ್ನು ನಿರೀಕ್ಷಿಸಬಹುದು. ಸ್ಮಾರ್ಟ್‌ಫೋನ್‌ನಲ್ಲಿ 50 ಎಂಪಿ ಪ್ರೈಮರಿ ಕ್ಯಾಮೆರಾ ಮತ್ತು 13 ಎಂಪಿ ಫ್ರಂಟ್ ಕ್ಯಾಮೆರಾ ಸೌಲಭ್ಯವಿದೆ. ಇದರ 4ಜಿಬಿ RAM ವರ್ಷನ್‌ 12,990 ರೂಪಾಯಿಗೆ, 6ಜಿಬಿ RAM ವರ್ಷನ್ 13,990 ರೂಪಾಯಿಗೆ ಲಭ್ಯವಿದೆ.
icon

(2 / 5)

ಸ್ಯಾಮ್‌ಸಂಗ್‌ ಎಫ್‌14: ಸ್ಯಾಮ್‌ಸಂಗ್‌ನ ಈ ಸ್ಮಾರ್ಟ್‌ಫೋನ್‌ನಲ್ಲಿ 6000ಎಂಎಎಚ್‌ ಬ್ಯಾಟರಿ ಸೌಲಭ್ಯವಿದೆ. 25 ವಾಟ್‌ನ ಫಾಸ್ಟ್ ಚಾರ್ಜಿಂಗ್ ಕೂಡ ಇದೆ. ಒಕ್ಟಾ ಕೋರ್‌ ಸ್ಯಾಮ್‌ಸಂಗ್‌ ಎಕ್ಸಿನೋಸ್ 1330 ಇರುವ ಕಾರಣ ಒಪ್ಟಿಮಮ್‌ ಕಾರ್ಯಸಾಧನೆಯನ್ನು ನಿರೀಕ್ಷಿಸಬಹುದು. ಸ್ಮಾರ್ಟ್‌ಫೋನ್‌ನಲ್ಲಿ 50 ಎಂಪಿ ಪ್ರೈಮರಿ ಕ್ಯಾಮೆರಾ ಮತ್ತು 13 ಎಂಪಿ ಫ್ರಂಟ್ ಕ್ಯಾಮೆರಾ ಸೌಲಭ್ಯವಿದೆ. ಇದರ 4ಜಿಬಿ RAM ವರ್ಷನ್‌ 12,990 ರೂಪಾಯಿಗೆ, 6ಜಿಬಿ RAM ವರ್ಷನ್ 13,990 ರೂಪಾಯಿಗೆ ಲಭ್ಯವಿದೆ.(Amazon)

ಐಒಒಒ ಜೆಡ್‌6( iQOO Z6): ಐಒಒಒ ಜೆಡ್6 ಸ್ಮಾರ್ಟ್‌ಫೋನ್‌ 5000 ಎಂಎಎಚ್‌ ಬ್ಯಾಟರಿ ಜತೆಗೆ 44 ವಾಟ್‌ ಫ್ಲ್ಯಾಶ್ ಚಾರ್ಜಿಂಗ್ ಸೌಲಭ್ಯದೊಂದಿಗೆ ಲಭ್ಯವಿದೆ. 27 ನಿಮಿಷದಲ್ಲಿ ಶೇಕಡ 50 ಚಾರ್ಜ್ ಆಗುವುದು ವಿಶೇಷ. ಈ ಸ್ಮಾರ್ಟ್‌ಫೋನ್‌ ಸ್ನ್ಯಾಪ್‌ಡ್ರಾಗನ್ 680 ಪ್ರೊಸೆಸರ್ ಮೂಲಕ ಸ್ಮೂತ್ ಕಾರ್ಯನಿರ್ವಹಣೆಗೆ ಸಹಕರಿಸುತ್ತದೆ. 50 ಎಂಪಿ ಮೇನ್ ಕ್ಯಾಮೆರಾ, 16 ಎಂಪಿ ಫ್ರಂಟ್ ಕ್ಯಾಮೆರಾ ಹೊಂದಿದೆ. ಇದರ 4ಜಿಬಿ RAM ವೇರಿಯೆಂಟ್‌ 14,499 ರೂಪಾಯಿಗೆ, 6ಜಿ RAM ವೇರಿಯೆಂಟ್‌ 15,999 ರೂಪಾಯಿಗೆ ಮತ್ತು 8ಜಿಬಿ RAM 16,999 ರೂಪಾಯಿಗೆ ಲಭ್ಯವಿದೆ..
icon

(3 / 5)

ಐಒಒಒ ಜೆಡ್‌6( iQOO Z6): ಐಒಒಒ ಜೆಡ್6 ಸ್ಮಾರ್ಟ್‌ಫೋನ್‌ 5000 ಎಂಎಎಚ್‌ ಬ್ಯಾಟರಿ ಜತೆಗೆ 44 ವಾಟ್‌ ಫ್ಲ್ಯಾಶ್ ಚಾರ್ಜಿಂಗ್ ಸೌಲಭ್ಯದೊಂದಿಗೆ ಲಭ್ಯವಿದೆ. 27 ನಿಮಿಷದಲ್ಲಿ ಶೇಕಡ 50 ಚಾರ್ಜ್ ಆಗುವುದು ವಿಶೇಷ. ಈ ಸ್ಮಾರ್ಟ್‌ಫೋನ್‌ ಸ್ನ್ಯಾಪ್‌ಡ್ರಾಗನ್ 680 ಪ್ರೊಸೆಸರ್ ಮೂಲಕ ಸ್ಮೂತ್ ಕಾರ್ಯನಿರ್ವಹಣೆಗೆ ಸಹಕರಿಸುತ್ತದೆ. 50 ಎಂಪಿ ಮೇನ್ ಕ್ಯಾಮೆರಾ, 16 ಎಂಪಿ ಫ್ರಂಟ್ ಕ್ಯಾಮೆರಾ ಹೊಂದಿದೆ. ಇದರ 4ಜಿಬಿ RAM ವೇರಿಯೆಂಟ್‌ 14,499 ರೂಪಾಯಿಗೆ, 6ಜಿ RAM ವೇರಿಯೆಂಟ್‌ 15,999 ರೂಪಾಯಿಗೆ ಮತ್ತು 8ಜಿಬಿ RAM 16,999 ರೂಪಾಯಿಗೆ ಲಭ್ಯವಿದೆ..(Amazon)

ರೆಡ್‌ಮಿ 12: ಈ ಸ್ಮಾರ್ಟ್‌ಫೋನ್‌ 5000 ಎಂಎಎಚ್ ಬ್ಯಾಟರಿ ಮತ್ತು 18 ವಾಟ್‌ ಫಾಸ್ಟ್ ಚಾರ್ಜಿಂಗ್ ಸೌಲಭ್ಯದೊಂದಿಗೆ ಲಭ್ಯವಿದೆ. ಸ್ನ್ಯಾಪ್‌ಡ್ರಾಗನ್‌ 4 ಜೆನ್‌ 2 ಪ್ರೊಸೆಸರ್ ಇದರ ಸ್ಮೂತ್ ಪರ್ಫಾರ್ಮೆನ್ಸ್‌ಗೆ ಸಹಕಾರಿ. 50 ಎಂಪಿ ಮೇನ್ ಕ್ಯಾಮೆರಾ, 8ಎಂಪಿ ಸೆಲ್ಫೀ ಕ್ಯಾಮೆರಾ ಇದೆ. 4ಜಿಬಿ RAM ಮತ್ತು 128ಜಿಬಿ ಸ್ಟೋರೇಜ್‌ನ ಫೋನ್‌ 11,999 ರೂಪಾಯಿಗೆ, 6ಜಿಬಿ RAM ಮತ್ತು 128GB ಸ್ಟೋರೇಜ್‌ನ ಫೋನ್‌ 13499 ರೂಪಾಯಿಗೆ ಮತ್ತು 8ಜಿಬಿ RAM ,ಮತ್ತು 256ಜಿಬಿ ಸ್ಟೋರೇಜ್‌ನ ಫೋನ್‌ 15,499 ರೂಪಾಯಿಗೆ ಲಭ್ಯವಿದೆ.
icon

(4 / 5)

ರೆಡ್‌ಮಿ 12: ಈ ಸ್ಮಾರ್ಟ್‌ಫೋನ್‌ 5000 ಎಂಎಎಚ್ ಬ್ಯಾಟರಿ ಮತ್ತು 18 ವಾಟ್‌ ಫಾಸ್ಟ್ ಚಾರ್ಜಿಂಗ್ ಸೌಲಭ್ಯದೊಂದಿಗೆ ಲಭ್ಯವಿದೆ. ಸ್ನ್ಯಾಪ್‌ಡ್ರಾಗನ್‌ 4 ಜೆನ್‌ 2 ಪ್ರೊಸೆಸರ್ ಇದರ ಸ್ಮೂತ್ ಪರ್ಫಾರ್ಮೆನ್ಸ್‌ಗೆ ಸಹಕಾರಿ. 50 ಎಂಪಿ ಮೇನ್ ಕ್ಯಾಮೆರಾ, 8ಎಂಪಿ ಸೆಲ್ಫೀ ಕ್ಯಾಮೆರಾ ಇದೆ. 4ಜಿಬಿ RAM ಮತ್ತು 128ಜಿಬಿ ಸ್ಟೋರೇಜ್‌ನ ಫೋನ್‌ 11,999 ರೂಪಾಯಿಗೆ, 6ಜಿಬಿ RAM ಮತ್ತು 128GB ಸ್ಟೋರೇಜ್‌ನ ಫೋನ್‌ 13499 ರೂಪಾಯಿಗೆ ಮತ್ತು 8ಜಿಬಿ RAM ,ಮತ್ತು 256ಜಿಬಿ ಸ್ಟೋರೇಜ್‌ನ ಫೋನ್‌ 15,499 ರೂಪಾಯಿಗೆ ಲಭ್ಯವಿದೆ.(Amazon)

ಪೋಕೋ ಎಂ 4 ಪ್ರೊ: ಈ ಸ್ಮಾರ್ಟ್‌ಫೋನ್ 5000 ಎಂಎಎಚ್‌ ಲಿಥಿಯಂ ಅಯಾನ್‌ ಪಾಲಿಮರ್ ಬ್ಯಾಟರಿ ಮತ್ತು 33 ಡಬ್ಲ್ಯುಎಂಎಂಟಿ ಫಾಸ್ಟ್‌ ಚಾರ್ಜಿಂಗ್ ಸೌಲಭ್ಯದೊಂದಿಗೆ ಬರುತ್ತದೆ. ಮೀಡಿಯಾಟೆಕ್ ಹೀಲಿಯೋ ಜಿ96 ಒಕ್ಟಾ ಪ್ರೊಸೆಸರ್ ಇದರ ಕಾರ್ಯಸಾಧನೆಯನ್ನು ಸ್ಮೂತ್ ಆಗಿ ಮಾಡಿದೆ. ಪೋಕೋ ಎಂ 4 ಪ್ರೋನಲ್ಲಿ 64 ಎಂಪಿ ಮೇನ್‌ ಕ್ಯಾಮೆರಾ, 16 ಎಂಪಿ ಫ್ರಂಟ್ ಕ್ಯಾಮೆರಾಗಳಿವೆ. 6ಜಿಬಿ RAM ಮತ್ತು 64GB ಸ್ಟೋರೇಜ್‌ ಜತೆಗಿನ ವೇರಿಯೆಂಟ್‌ಗೆ 14,999 ರೂಪಾಯಿ ಮತ್ತು 6ಜಿಬಿ RAM ಮತ್ತು 128 ಜಿಬಿ ಸ್ಟೋರೇಜ್‌ ಜತೆೆಗಿರುವ ಫೋನ್‌ 16,499 ರೂಪಾಯಿಗೆ, 8ಜಿಬಿ RAM and 128ಜಿಬಿ ಸ್ಟೋರೇಜ್‌ನ ಫೋನ್‌ 12,999 ರೂಪಾಯಿಗೆ ಲಭ್ಯವಿದೆ.
icon

(5 / 5)

ಪೋಕೋ ಎಂ 4 ಪ್ರೊ: ಈ ಸ್ಮಾರ್ಟ್‌ಫೋನ್ 5000 ಎಂಎಎಚ್‌ ಲಿಥಿಯಂ ಅಯಾನ್‌ ಪಾಲಿಮರ್ ಬ್ಯಾಟರಿ ಮತ್ತು 33 ಡಬ್ಲ್ಯುಎಂಎಂಟಿ ಫಾಸ್ಟ್‌ ಚಾರ್ಜಿಂಗ್ ಸೌಲಭ್ಯದೊಂದಿಗೆ ಬರುತ್ತದೆ. ಮೀಡಿಯಾಟೆಕ್ ಹೀಲಿಯೋ ಜಿ96 ಒಕ್ಟಾ ಪ್ರೊಸೆಸರ್ ಇದರ ಕಾರ್ಯಸಾಧನೆಯನ್ನು ಸ್ಮೂತ್ ಆಗಿ ಮಾಡಿದೆ. ಪೋಕೋ ಎಂ 4 ಪ್ರೋನಲ್ಲಿ 64 ಎಂಪಿ ಮೇನ್‌ ಕ್ಯಾಮೆರಾ, 16 ಎಂಪಿ ಫ್ರಂಟ್ ಕ್ಯಾಮೆರಾಗಳಿವೆ. 6ಜಿಬಿ RAM ಮತ್ತು 64GB ಸ್ಟೋರೇಜ್‌ ಜತೆಗಿನ ವೇರಿಯೆಂಟ್‌ಗೆ 14,999 ರೂಪಾಯಿ ಮತ್ತು 6ಜಿಬಿ RAM ಮತ್ತು 128 ಜಿಬಿ ಸ್ಟೋರೇಜ್‌ ಜತೆೆಗಿರುವ ಫೋನ್‌ 16,499 ರೂಪಾಯಿಗೆ, 8ಜಿಬಿ RAM and 128ಜಿಬಿ ಸ್ಟೋರೇಜ್‌ನ ಫೋನ್‌ 12,999 ರೂಪಾಯಿಗೆ ಲಭ್ಯವಿದೆ.(Amazon)


ಇತರ ಗ್ಯಾಲರಿಗಳು