Upcoming Phones; ಐಫೋನ್‌ 16 ಸಿರೀಸ್ ಅಷ್ಟೇ ಅಲ್ಲ, ಈ ವರ್ಷ ಮಾರುಕಟ್ಟೆ ಬರಲಿವೆ ಒನ್‌ಪ್ಲಸ್‌ 13 ಸೇರಿ ಇನ್ನೂ 5 ಸ್ಮಾರ್ಟ್‌ಫೋನ್‌ಗಳು-technology news upcoming phones 2024 iphone 16 oneplus 13 and other flagship smartphones photos uks ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Upcoming Phones; ಐಫೋನ್‌ 16 ಸಿರೀಸ್ ಅಷ್ಟೇ ಅಲ್ಲ, ಈ ವರ್ಷ ಮಾರುಕಟ್ಟೆ ಬರಲಿವೆ ಒನ್‌ಪ್ಲಸ್‌ 13 ಸೇರಿ ಇನ್ನೂ 5 ಸ್ಮಾರ್ಟ್‌ಫೋನ್‌ಗಳು

Upcoming Phones; ಐಫೋನ್‌ 16 ಸಿರೀಸ್ ಅಷ್ಟೇ ಅಲ್ಲ, ಈ ವರ್ಷ ಮಾರುಕಟ್ಟೆ ಬರಲಿವೆ ಒನ್‌ಪ್ಲಸ್‌ 13 ಸೇರಿ ಇನ್ನೂ 5 ಸ್ಮಾರ್ಟ್‌ಫೋನ್‌ಗಳು

Upcoming Smartphones 2024; ಸ್ಮಾರ್ಟ್‌ಫೋನ್ ಮಾರುಕಟ್ಟೆ ಹೊಸ ಡಿವೈಸ್‌ಗಳ ನಿರೀಕ್ಷೆಯಲ್ಲಿದೆ. ಸ್ಮಾರ್ಟ್‌ಫೋನ್‌ ಪ್ರಿಯರು ಕೂಡ ಕಾತರದಿಂದ ಕಾಯುತ್ತಿದ್ದಾರೆ. ಈ ವರ್ಷ ಮಾರುಕಟ್ಟೆಗೆ ಪ್ರವೇಶಿಸಲಿರುವ ಆಪಲ್‌ ಐಫೋನ್ 16 ಸಿರೀಸ್, ಒನ್‌ಪ್ಲಸ್ 13, ವಿವೊ ಎಕ್ಸ್‌200 ಸೇರಿ 5 ಸ್ಮಾರ್ಟ್‌ ಫೋನ್‌ಗಳ ವಿವರ ಇಲ್ಲಿದೆ. 

ಸ್ಮಾರ್ಟ್‌ಫೋನ್‌ ಪ್ರಿಯರು ಇಷ್ಟಪಡುವ ಐಫೋನ್‌, ಒಪ್ಪೊ,ವಿವೋ ಸೇರಿ 5 ಪ್ರಮುಖ ಬ್ರ್ಯಾಂಡ್‌ಗಳ ಸ್ಮಾರ್ಟ್‌ಫೋನ್‌ಗಳು ಈ ವರ್ಷ ಮಾರುಕಟ್ಟೆಗೆ ಪ್ರವೇಶಿಸಲಿವೆ. ಅವುಗಳ ವಿವರ ಈ ಸಚಿತ್ರ ವರದಿಯಲ್ಲಿದೆ.
icon

(1 / 6)

ಸ್ಮಾರ್ಟ್‌ಫೋನ್‌ ಪ್ರಿಯರು ಇಷ್ಟಪಡುವ ಐಫೋನ್‌, ಒಪ್ಪೊ,ವಿವೋ ಸೇರಿ 5 ಪ್ರಮುಖ ಬ್ರ್ಯಾಂಡ್‌ಗಳ ಸ್ಮಾರ್ಟ್‌ಫೋನ್‌ಗಳು ಈ ವರ್ಷ ಮಾರುಕಟ್ಟೆಗೆ ಪ್ರವೇಶಿಸಲಿವೆ. ಅವುಗಳ ವಿವರ ಈ ಸಚಿತ್ರ ವರದಿಯಲ್ಲಿದೆ.(Canva)

ಐಫೋನ್‌ 16 ಸರಣಿ (iPhone 16 series): ಐಫೋನ್ 16, ಐಫೋನ್‌ 16 ಪ್ಲಸ್‌, ಐಫೋನ್‌ 16 ಪ್ರೊ ಮತ್ತು ಐಫೋನ್‌ 16 ಪ್ರೊ ಮ್ಯಾಕ್ಸ್‌ ಎಂಬ ನಾಲ್ಕು ಮಾದರಿಗಳನ್ನು ಒಳಗೊಂಡಿರುವ ಹೊಸ ಪೀಳಿಗೆಯ ಐಫೋನ್ ಇಂದು (ಸೆಪ್ಟೆಂಬರ್ 9) ಬಿಡುಗಡೆಯಾಗುತ್ತಿದೆ. ಈ ವರ್ಷ ಸ್ಮಾರ್ಟ್‌ಫೋನ್ ಎಐ ಹೆಚ್ಚು ಪ್ರವರ್ಧಮಾನಕ್ಕೆ ಬರುವ ನಿರೀಕ್ಷೆ ಇದೆ. ಹೊಸ ಪ್ರೊಸೆಸರ್, ಮತ್ತು ಕ್ಯಾಮೆರಾ ಅಪ್‌ಗ್ರೇಡ್‌ಗಳು, ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಅವುಗಳನ್ನು ಹೆಚ್ಚು ಬೆಲೆಯ ಫೋನ್‌ಗಳನ್ನಾಗಿ ಮಾಡುತ್ತವೆ.
icon

(2 / 6)

ಐಫೋನ್‌ 16 ಸರಣಿ (iPhone 16 series): ಐಫೋನ್ 16, ಐಫೋನ್‌ 16 ಪ್ಲಸ್‌, ಐಫೋನ್‌ 16 ಪ್ರೊ ಮತ್ತು ಐಫೋನ್‌ 16 ಪ್ರೊ ಮ್ಯಾಕ್ಸ್‌ ಎಂಬ ನಾಲ್ಕು ಮಾದರಿಗಳನ್ನು ಒಳಗೊಂಡಿರುವ ಹೊಸ ಪೀಳಿಗೆಯ ಐಫೋನ್ ಇಂದು (ಸೆಪ್ಟೆಂಬರ್ 9) ಬಿಡುಗಡೆಯಾಗುತ್ತಿದೆ. ಈ ವರ್ಷ ಸ್ಮಾರ್ಟ್‌ಫೋನ್ ಎಐ ಹೆಚ್ಚು ಪ್ರವರ್ಧಮಾನಕ್ಕೆ ಬರುವ ನಿರೀಕ್ಷೆ ಇದೆ. ಹೊಸ ಪ್ರೊಸೆಸರ್, ಮತ್ತು ಕ್ಯಾಮೆರಾ ಅಪ್‌ಗ್ರೇಡ್‌ಗಳು, ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಅವುಗಳನ್ನು ಹೆಚ್ಚು ಬೆಲೆಯ ಫೋನ್‌ಗಳನ್ನಾಗಿ ಮಾಡುತ್ತವೆ.(Hindustan Times Tech)

ಒನ್‌ಪ್ಲಸ್ 13 (OnePlus 13): ಒನ್‌ಪ್ಲಸ್‌ 12 ಮೂಲಕ ಹೆಚ್ಚು ಜನಪ್ರಿಯತೆಯನ್ನು ಗಳಿಸಿದ ಕಂಪನಿಯು ನವೆಂಬರ್ ತಿಂಗಳಲ್ಲಿ ಹೊಸ ಒನ್‌ಪ್ಲಸ್‌ 13 ಅನ್ನು ಪರಿಚಯಿಸಲು ಸಿದ್ಧತೆ ನಡೆಸಿದೆ. ಸ್ನಾಪ್‌ಡ್ರಾಗನ್ 8 ಜನ್ 4 ಚಿಪ್‌ಸೆಟ್‌ ಚಾಲಿತ ಸ್ಮಾರ್ಟ್‌ಫೋನ್ ಇದಾಗಿರಬಹುದು ಎಂಬ ನಿರೀಕ್ಷೆಯಿದೆ. ಇದು 6000mAh ಬ್ಯಾಟರಿಯನ್ನು ಹೊಂದಿರಲಿದ್ದು ಅದು ಸುಧಾರಿತ ಕಾರ್ಯಕ್ಷಮತೆ ಮತ್ತು ಶಾಶ್ವತ ಬ್ಯಾಟರಿ ಅವಧಿಯನ್ನು ಒದಗಿಸಬಹುದು.
icon

(3 / 6)

ಒನ್‌ಪ್ಲಸ್ 13 (OnePlus 13): ಒನ್‌ಪ್ಲಸ್‌ 12 ಮೂಲಕ ಹೆಚ್ಚು ಜನಪ್ರಿಯತೆಯನ್ನು ಗಳಿಸಿದ ಕಂಪನಿಯು ನವೆಂಬರ್ ತಿಂಗಳಲ್ಲಿ ಹೊಸ ಒನ್‌ಪ್ಲಸ್‌ 13 ಅನ್ನು ಪರಿಚಯಿಸಲು ಸಿದ್ಧತೆ ನಡೆಸಿದೆ. ಸ್ನಾಪ್‌ಡ್ರಾಗನ್ 8 ಜನ್ 4 ಚಿಪ್‌ಸೆಟ್‌ ಚಾಲಿತ ಸ್ಮಾರ್ಟ್‌ಫೋನ್ ಇದಾಗಿರಬಹುದು ಎಂಬ ನಿರೀಕ್ಷೆಯಿದೆ. ಇದು 6000mAh ಬ್ಯಾಟರಿಯನ್ನು ಹೊಂದಿರಲಿದ್ದು ಅದು ಸುಧಾರಿತ ಕಾರ್ಯಕ್ಷಮತೆ ಮತ್ತು ಶಾಶ್ವತ ಬ್ಯಾಟರಿ ಅವಧಿಯನ್ನು ಒದಗಿಸಬಹುದು.(OnePlus)

ಟೆಕ್ನೋ ಫ್ಯಾಂಟಮ್‌ ವಿ ಫೋಲ್ಡ್‌ 2, ವಿ ಫ್ಲಿಪ್‌ 2 (Techno Phantom V Fold 2,  V Flip 2): ಟೆಕ್ನೋ ಕಂಪನಿಯು ಹೊಸ ಫೋಲ್ಡಬಲ್ ಡಿವೈಸ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಲು ಸಿದ್ಧತೆ ನಡೆಸಿದ್ದು, ಫ್ಯಾಂಟಮ್ ವಿ ಫೋಲ್ಡ್ 2 ಮತ್ತು ವಿ ಫ್ಲಿಪ್ 2 ಮಾರುಕಟ್ಟೆ ಪ್ರವೇಶಿಸಲು ಸಜ್ಜಾಗಿವೆ. ಸ್ಮಾರ್ಟ್‌ಫೋನ್‌ಗಳು ಕ್ರಮವಾಗಿ ಮೀಡಿಯಾ ಟೆಕ್ ಡೈಮೆನ್ಸಿಟಿ 9000 ಮತ್ತು ಮೀಡಿಯಾ ಟೆಕ್ ಡೈಮೆನ್ಸಿಟಿ 8020 SoC ಒಳಗೊಂಡಿರುವ ನಿರೀಕ್ಷೆಯಿದೆ. ಭಾರತದ ಮಾರುಕಟ್ಟೆಗೆ ಇವುಗಳ ಪ್ರವೇಶ ಯಾವಾಗ ಎಂಬುದು ಇನ್ನೂ ಅಧಿಕೃತವಾಗಿಲ್ಲ. ಆದಾಗ್ಯೂ, ಇವು ಈ ವರ್ಷವೇ ಬರುವ ನಿರೀಕ್ಷೆ ಇದೆ.
icon

(4 / 6)

ಟೆಕ್ನೋ ಫ್ಯಾಂಟಮ್‌ ವಿ ಫೋಲ್ಡ್‌ 2, ವಿ ಫ್ಲಿಪ್‌ 2 (Techno Phantom V Fold 2,  V Flip 2): ಟೆಕ್ನೋ ಕಂಪನಿಯು ಹೊಸ ಫೋಲ್ಡಬಲ್ ಡಿವೈಸ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಲು ಸಿದ್ಧತೆ ನಡೆಸಿದ್ದು, ಫ್ಯಾಂಟಮ್ ವಿ ಫೋಲ್ಡ್ 2 ಮತ್ತು ವಿ ಫ್ಲಿಪ್ 2 ಮಾರುಕಟ್ಟೆ ಪ್ರವೇಶಿಸಲು ಸಜ್ಜಾಗಿವೆ. ಸ್ಮಾರ್ಟ್‌ಫೋನ್‌ಗಳು ಕ್ರಮವಾಗಿ ಮೀಡಿಯಾ ಟೆಕ್ ಡೈಮೆನ್ಸಿಟಿ 9000 ಮತ್ತು ಮೀಡಿಯಾ ಟೆಕ್ ಡೈಮೆನ್ಸಿಟಿ 8020 SoC ಒಳಗೊಂಡಿರುವ ನಿರೀಕ್ಷೆಯಿದೆ. ಭಾರತದ ಮಾರುಕಟ್ಟೆಗೆ ಇವುಗಳ ಪ್ರವೇಶ ಯಾವಾಗ ಎಂಬುದು ಇನ್ನೂ ಅಧಿಕೃತವಾಗಿಲ್ಲ. ಆದಾಗ್ಯೂ, ಇವು ಈ ವರ್ಷವೇ ಬರುವ ನಿರೀಕ್ಷೆ ಇದೆ.(Amazon)

ವಿವೊ ಎಕ್ಸ್‌200 ಸರಣಿ (Vivo X200 series): ವಿವೋ ಪ್ರಮುಖ ಶ್ರೇಣಿಯು ಮೂರು ಮಾದರಿಗಳಾದ ವಿವೋ ಎಕ್ಸ್‌200 (Vivo X200) ವಿವೊಎಕ್ಸ್‌200 ಪ್ಲಸ್‌ (Vivo X200 Plus) ಮತ್ತು ವಿವೊ ಎಕ್ಸ್‌200 ಪ್ರೊ (Vivo X200 Pro) ಫೋನ್‌ಗಳು ಈ ವರ್ಷ ಮಾರುಕಟ್ಟೆಗೆ ಬರಬಹುದು. ಕಳೆದ ಕೆಲವು ವಾರಗಳಿಂದ ವಿವೊ ಎಕ್ಸ್‌200 ಪ್ರೊ ಮತ್ತು ಅದರ 200MP ಪೆರಿಸ್ಕೋಪ್ ಟೆಲಿಫೋಟೋ ಕ್ಯಾಮರಾ ಕುರಿತು ಹಲವು ವದಂತಿಗಳು ಕೇಳತೊಡಗಿವೆ. ವಿವೊ ಇನ್ನೂ ಹೊಸ ಸ್ಮಾರ್ಟ್‌ಫೋನ್ ಸರಣಿಯನ್ನು ಅಧಿಕೃತವಾಗಿ ಘೋಷಿಸಿಲ್ಲ.ಆದಾಗ್ಯೂ, ವಿವೊ ಎಕ್ಸ್‌200 ಸರಣಿಯು ಶೀಘ್ರವೇ ಮಾರುಕಟ್ಟೆ ಪ್ರವೇಶಿಸುವ ನಿರೀಕ್ಷೆ ಇದೆ.
icon

(5 / 6)

ವಿವೊ ಎಕ್ಸ್‌200 ಸರಣಿ (Vivo X200 series): ವಿವೋ ಪ್ರಮುಖ ಶ್ರೇಣಿಯು ಮೂರು ಮಾದರಿಗಳಾದ ವಿವೋ ಎಕ್ಸ್‌200 (Vivo X200) ವಿವೊಎಕ್ಸ್‌200 ಪ್ಲಸ್‌ (Vivo X200 Plus) ಮತ್ತು ವಿವೊ ಎಕ್ಸ್‌200 ಪ್ರೊ (Vivo X200 Pro) ಫೋನ್‌ಗಳು ಈ ವರ್ಷ ಮಾರುಕಟ್ಟೆಗೆ ಬರಬಹುದು. ಕಳೆದ ಕೆಲವು ವಾರಗಳಿಂದ ವಿವೊ ಎಕ್ಸ್‌200 ಪ್ರೊ ಮತ್ತು ಅದರ 200MP ಪೆರಿಸ್ಕೋಪ್ ಟೆಲಿಫೋಟೋ ಕ್ಯಾಮರಾ ಕುರಿತು ಹಲವು ವದಂತಿಗಳು ಕೇಳತೊಡಗಿವೆ. ವಿವೊ ಇನ್ನೂ ಹೊಸ ಸ್ಮಾರ್ಟ್‌ಫೋನ್ ಸರಣಿಯನ್ನು ಅಧಿಕೃತವಾಗಿ ಘೋಷಿಸಿಲ್ಲ.ಆದಾಗ್ಯೂ, ವಿವೊ ಎಕ್ಸ್‌200 ಸರಣಿಯು ಶೀಘ್ರವೇ ಮಾರುಕಟ್ಟೆ ಪ್ರವೇಶಿಸುವ ನಿರೀಕ್ಷೆ ಇದೆ.(Vivo)

ಒಪ್ಪೊ ಫೈಂಡ್‌ ಎಕ್ಸ್‌8 ಸಿರೀಸ್‌ (Oppo Find X8 series): ಅಕ್ಟೋಬರ್‌ನಲ್ಲಿ ಮೂರು ಮಾದರಿಗಳೊಂದಿಗೆ ಅಂದರೆ ಒಪ್ಪೊ ಫೈಂಡ್‌ ಎಕ್ಸ್‌8 (Oppo Find X8), ಒಪ್ಪೊ ಫೈಂಡ್ ಎಕ್ಸ್‌8 ಪ್ರೊ (Oppo Find X8 Pro), ಒಪ್ಪೊ ಫೈಂಡ್‌ ಎಕ್ಸ್‌8 ಅಲ್ಟ್ರಾ (Oppo Find X8 Ultra) ಎಂಬ ಒಪ್ಪೊ ಫೈಂಡ್‌ ಎಕ್ಸ್‌8 ಸಿರೀಸ್‌ ಬಿಡುಗಡೆಯಾಗುವ ನಿರೀಕ್ಷೆಯಿದೆ. ಅಲ್ಟ್ರಾ ರೂಪಾಂತರವು ಮೀಡಿಯಾ ಟೆಕ್ ಡೈಮೆನ್ಸಿಟಿ 9400 ಚಿಪ್‌ಸೆಟ್‌ನಿಂದ ಕೂಡಿದ್ದು, ಎರಡು ಪೆರಿಸ್ಕೋಪ್ ಲೆನ್ಸ್‌ಗಳನ್ನು ಹೊಂದಿರುವ ವದಂತಿಗಳಿವೆ. ಸ್ಮಾರ್ಟ್‌ಫೋನ್‌ಗಳು 1.5K ರೆಸಲ್ಯೂಶನ್ ಡಿಸ್‌ಪ್ಲೇಗಳನ್ನು ಒಳಗೊಂಡಿರುವ ನಿರೀಕ್ಷೆಯಿದೆ
icon

(6 / 6)

ಒಪ್ಪೊ ಫೈಂಡ್‌ ಎಕ್ಸ್‌8 ಸಿರೀಸ್‌ (Oppo Find X8 series): ಅಕ್ಟೋಬರ್‌ನಲ್ಲಿ ಮೂರು ಮಾದರಿಗಳೊಂದಿಗೆ ಅಂದರೆ ಒಪ್ಪೊ ಫೈಂಡ್‌ ಎಕ್ಸ್‌8 (Oppo Find X8), ಒಪ್ಪೊ ಫೈಂಡ್ ಎಕ್ಸ್‌8 ಪ್ರೊ (Oppo Find X8 Pro), ಒಪ್ಪೊ ಫೈಂಡ್‌ ಎಕ್ಸ್‌8 ಅಲ್ಟ್ರಾ (Oppo Find X8 Ultra) ಎಂಬ ಒಪ್ಪೊ ಫೈಂಡ್‌ ಎಕ್ಸ್‌8 ಸಿರೀಸ್‌ ಬಿಡುಗಡೆಯಾಗುವ ನಿರೀಕ್ಷೆಯಿದೆ. ಅಲ್ಟ್ರಾ ರೂಪಾಂತರವು ಮೀಡಿಯಾ ಟೆಕ್ ಡೈಮೆನ್ಸಿಟಿ 9400 ಚಿಪ್‌ಸೆಟ್‌ನಿಂದ ಕೂಡಿದ್ದು, ಎರಡು ಪೆರಿಸ್ಕೋಪ್ ಲೆನ್ಸ್‌ಗಳನ್ನು ಹೊಂದಿರುವ ವದಂತಿಗಳಿವೆ. ಸ್ಮಾರ್ಟ್‌ಫೋನ್‌ಗಳು 1.5K ರೆಸಲ್ಯೂಶನ್ ಡಿಸ್‌ಪ್ಲೇಗಳನ್ನು ಒಳಗೊಂಡಿರುವ ನಿರೀಕ್ಷೆಯಿದೆ(HT Tech)


ಇತರ ಗ್ಯಾಲರಿಗಳು