Learn AI: ಎಐ ಬಗ್ಗೆ ನಿಮಗೆಷ್ಟು ಗೊತ್ತು? ಕೃತಕ ಬುದ್ಧಿಮತ್ತೆ ಬಗ್ಗೆ ಈ 7 ವಿಚಾರಗಳನ್ನು ತಿಳಿದುಕೊಳ್ಳಿ
- ಇದು ಎಐ ಕಾಲ. ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಬಗ್ಗೆ ಕಲಿತರೆ ಉತ್ತಮ ಕರಿಯರ್ ರೂಪಿಸಿಕೊಳ್ಳಬಹುದು. ಸಾಕಷ್ಟು ಜನರಿಗೆ ಎಐ ಬಗ್ಗೆ ಕಲಿಯಲು ಆಸಕ್ತಿ ಇರಬಹುದು. ಕನ್ನಡದಲ್ಲಿ ಎಐ ಬಗೆಗಿನ ಕೆಲವೊಂದು ವ್ಯಾಖ್ಯಾನಗಳನ್ನು, ವಿವರಗಳನ್ನು ಕಲಿಯಲು ಬಯಸುವವರಿಗೆ ಎಚ್‌ಟಿ ಕನ್ನಡವು ಇಲ್ಲಿ ಮಾಹಿತಿ ನೀಡಿದೆ.
- ಇದು ಎಐ ಕಾಲ. ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಬಗ್ಗೆ ಕಲಿತರೆ ಉತ್ತಮ ಕರಿಯರ್ ರೂಪಿಸಿಕೊಳ್ಳಬಹುದು. ಸಾಕಷ್ಟು ಜನರಿಗೆ ಎಐ ಬಗ್ಗೆ ಕಲಿಯಲು ಆಸಕ್ತಿ ಇರಬಹುದು. ಕನ್ನಡದಲ್ಲಿ ಎಐ ಬಗೆಗಿನ ಕೆಲವೊಂದು ವ್ಯಾಖ್ಯಾನಗಳನ್ನು, ವಿವರಗಳನ್ನು ಕಲಿಯಲು ಬಯಸುವವರಿಗೆ ಎಚ್‌ಟಿ ಕನ್ನಡವು ಇಲ್ಲಿ ಮಾಹಿತಿ ನೀಡಿದೆ.
(1 / 8)
ಈಗ ಎಲ್ಲೆಡೆ ಎಐ ಬಳಕೆ ಹೆಚ್ಚಾಗುತ್ತಿದೆ. ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಬಗ್ಗೆ ಕಲಿತರೆ ಉತ್ತಮ ಕರಿಯರ್ ರೂಪಿಸಿಕೊಳ್ಳಬಹುದು. ಸಾಕಷ್ಟು ಜನರಿಗೆ ಎಐ ಬಗ್ಗೆ ಕಲಿಯಲು ಆಸಕ್ತಿ ಇರಬಹುದು. ಕನ್ನಡದಲ್ಲಿ ಎಐ ಬಗೆಗಿನ ಕೆಲವೊಂದು ವ್ಯಾಖ್ಯಾನಗಳನ್ನು, ವಿವರಗಳನ್ನು ಕಲಿಯಲು ಬಯಸುವವರಿಗೆ ಎಚ್‌ಟಿ ಕನ್ನಡವು ಇಲ್ಲಿ ಮಾಹಿತಿ ನೀಡಿದೆ. ಈಗ ವ್ಯಾಪಕ ಬಳಕೆಯಲ್ಲಿರುವ ಎಐ ಬಗೆಗಿನ ನಿಮ್ಮ ಜ್ಞಾನ ಹೆಚ್ಚಿಸಿಕೊಳ್ಳಿ. ಇಲ್ಲಿ ಏಐ ಬಯಾಸ್, ಎಐ ಭ್ರಮೆ, ಎಐ ಟೂಲ್‌ಗಳು, ಗೂಗಲ್ ವರ್ಕ್ ಸ್ಪೇಸ್ ಲ್ಯಾಬ್ ಇತ್ಯಾದಿ ಏಳು ಫೋಟೋಗಳಲ್ಲಿ ಎಐ ಬಗೆಗಿನ ಏಳು ವಿಚಾರಗಳನ್ನು ತಿಳಿಸಲಾಗಿದೆ.
(2 / 8)
ಎಐ ಚಾಟ್‌ಬಾಟ್ ಎಂದರೇನು?ಚಾಟ್‌ಬಾಟ್ ಎನ್ನುವುದು ಪಠ್ಯ ಅಥವಾ ಧ್ವನಿ ಆಜ್ಞೆಗಳ ಮೂಲಕ ಮಾನವ ಸಂಭಾಷಣೆಯನ್ನು ಅನುಕರಿಸಲು ವಿನ್ಯಾಸಗೊಳಿಸಲಾದ ಸಾಫ್ಟ್‌ವೇರ್ ಅಪ್ಲಿಕೇಶನ್ ಆಗಿದೆ. ನೀವು ಯಾವುದಾದರೂ ಬ್ಯಾಂಕ್ ಅಥವಾ ಇತರೆ ಗ್ರಾಹಕ ಸೇವೆ ಬಯಸುವ ವೆಬ್‌ಸೈಟ್‌ಗಳಿಗೆ ಹೋದರೆ ಅಲ್ಲಿ ನಿಮ್ಮ ಜತೆ ಮೊದಲಿಗೆ ಎಐ ಚಾಟ್‌ಬಾಟ್ ಸಂವಹನ ನಡೆಸುತ್ತದೆ.
(3 / 8)
ಎಐ ಎಥಿಕ್ಸ್ ಎಂದರೇನು?ಎಐ ತಂತ್ರಜ್ಞಾನವನ್ನು ರೂಪಿಸುವಾಗ ಎಂಜಿನಿಯರ್‌ಗಳು, ಸರಕಾರಿ ಅಧಿಕಾರಿಗಳು ಅಥವಾ ಎಐ ಪಾಲುದಾರರು ಪರಿಗಣಿಸಬೇಕಾದ ನೀತಿಶಾಸ್ತ್ರವನ್ನು ಎಐ ಎಥಿಕ್ಸ್ ಎನ್ನುತ್ತಾರೆ. ಜವಾಬ್ದಾರಿಯುತವಾಗಿ ಅಭಿವೃದ್ಧಿಪಡಿಸುವುದು ಮತ್ತು ಬಳಸುವುದನ್ನು ಇದು ಒಳಗೊಂಡಿದೆ. ಯಾವುದೇ ಪಕ್ಷಪಾತವಿಲ್ಲದೆ ಎಐ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಬೇಕು. ರಶ್ಮಿಕಾ ಮಂದಣ್ಣರ ಅಶ್ಲೀಲ ಚಿತ್ರವನ್ನು ಎಐ ಮೂಲಕ ರಚಿಸಿದ್ದು ನಿಮಗೆ ನೆನಪಿರಬಹುದು. ಎಐ ಎಥಿಕ್ಸ್ ಇಲ್ಲದೆ ಇದ್ದರೆ ಏನಾಗುತ್ತದೆ ಎನ್ನುವುದಕ್ಕೆ ಇದು ಉದಾಹರಣೆ.
(4 / 8)
ಇಂಗ್ಲಿಷ್ ಬರೆಯಲು ನೆರವಾಗುವ ಎಐ ಟೂಲ್‌ಕಂಪ್ಯೂಟರ್, ಮೊಬೈಲ್‌ನಲ್ಲಿ ಇಂಗ್ಲಿಷ್ ಭಾಷೆಯಲ್ಲಿ ಬರೆಯಲು ಸಹಾಯ ಮಾಡುವ ಹಲವು ಎಐ ಸಹಾಯಕ ಟೂಲ್‌ಗಳಿವೆ. . ನೀವು ಇಂತಹ ಎಐ ಟೂಲ್ ಹುಡುಕುತ್ತಿದ್ದರೆ ಗ್ರಾಮರ್ಲಿ (Grammarly̧), ವರ್ಡ್ ಟ್ಯೂನ್ (Wordtune), ಅಥವಾ ಪ್ರೊರೈಟಿಂಗ್‌ಏಡ್ (ProWritingAID), ಗ್ರಾಮರ್‌ಚೆಕ್ (Grammarcheck), ಸ್ಕ್ರೈಬೆನ್ಸ್ (Scribens) ಮುಂತಾದವುಗಳನ್ನು ಪರಿಶೀಲಿಸಬಹುದು.
(5 / 8)
ಗೂಗಲ್ ವರ್ಕ್‌ಸ್ಪೇಸ್ ಲ್ಯಾಬ್ ಎಂದರೇನು?ಗೂಗಲ್ ಚಾಟ್‌ನಲ್ಲಿ ಡಾಕ್ಸ್‌ನಲ್ಲಿ, ಇಮೇಲ್‌ನಲ್ಲಿ, ಸ್ಲೈಡ್‌ಗಳಲ್ಲಿ, ಶೀಟ್‌ಗಳಲ್ಲಿ ಮೀಟ್, ಡ್ರೈವ್, ಗೂಗಲ್ ಫಾರ್ಮ್ಸ್‌ನಲ್ಲಿ ನಿಮಗೆ AI ಸಹಾಯಕನಾಗಿ "ಗೂಗಲ್ ವರ್ಕ್‌ಸ್ಪೇಸ್ ಲ್ಯಾಬ್" ಕಾರ್ಯನಿರ್ವಹಿಸುತ್ತದೆ. ಉದಾಹರಣೆಗೆ ಜಿಮೇಲ್‌ನಲ್ಲಿ ನಿಮಗೆ ಇಮೇಲ್ ಬರೆಯಲು ಸಹಾಯ ಮಾಡುತ್ತದೆ. ಇದು ಜೆಮಿನಿ ಆಧರಿತ ಸಹಾಯಕ. ಇದನ್ನು ಸಕ್ರೀಯಗೊಳಿಸಲು ಗೂಗಲ್‌ನಲ್ಲಿ www.workspace.google.com ಲಿಂಕ್‌ಗೆ ಭೇಟಿ ನೀಡಿ.
(6 / 8)
ಎಲ್‌ಎಲ್‌ಎಂ ಎಂದರೇನು?ಎಲ್‌ಎಲ್‌ಎಂ ವಿಸ್ತೃತರೂಪ- ಲಾರ್ಜ್ ಲ್ಯಾಂಗ್ವೇಜ್ ಮಾಡೆಲ್. ಕನ್ನಡದಲ್ಲಿ ಬೃಹತ್ ಭಾಷಾ ಮಾದರಿ ಎನ್ನಬಹುದು. ಇದು ಮಾನವ ಭಾಷೆಯನ್ನು ಅರ್ಥಮಾಡಿಕೊಳ್ಳುವ, ಪ್ರಕ್ರಿಯೆಗೊಳಿಸುವ ಮತ್ತು ಉತ್ಪಾದಿಸುವ ಕೃತಕ ಬುದ್ಧಿಮತ್ತೆಯ (ಎಐ) ಒಂದು ರೂಪ. ಅಕ್ಷರ, ವಿಡಿಯೋ, ಆಡಿಯೋ ಇತ್ಯಾದಿ ರೂಪದಲ್ಲಿ ಎಲ್‌ಎಲ್‌ಎಂಗಳಿಗೆ ಬೃಹತ್ ಪ್ರಮಾಣದ ಡೇಟಾಗಳ ಮೂಲಕ ತರಬೇತಿ ನೀಡಲಾಗುತ್ತದೆ. ಮೆಷಿನ್ ಲರ್ನಿಂಗ್ ತಂತ್ರದ ಮೂಲಕ ಇವು ಕಲಿಯುತ್ತ ಬೆಳೆಯುತ್ತವೆ.
(7 / 8)
ಎಐ ಬಯಾಸ್ ಎಂದರೇನು?ಎಐ ಮಾಡೆಲ್‌ಗಳು ಪೂರ್ವಗ್ರಹಪೀಡಿತ ಅಥವಾ ಪಕ್ಷಪಾತದ (bias) ಫಲಿತಾಂಶದ ಮಾಹಿತಿ ನೀಡುವುದನ್ನು 'ಎಐ ಬಯಾಸ್' (AI bias) ಎನ್ನುತ್ತಾರೆ. ತನಗೆ ಒದಗಿಸಿರುವ, ತನ್ನ ಗಮನಕ್ಕೆ ಬಂದ ಮಾಹಿತಿ ಆಧರಿಸಿಯೇ ಎಐ ಟೂಲ್‌ಗಳು ಪ್ರತಿಕ್ರಿಯೆ ನೀಡುತ್ತವೆ. ಇದರಲ್ಲಿ ತಪ್ಪುಗಳಿದ್ದರೆ ಎಐ ಕೊಡುವ ಉತ್ತರಗಳೂ ತಪ್ಪಾಗುತ್ತವೆ. ಉದಾ: ಅಶ್ವಿನಿ ವೈಷ್ಣವ್ ಗಂಡು ಆಗಿದ್ದರೂ ಕೆಲವು ಎಐ ಟೂಲ್‌ಗಳು ಹೆಣ್ಣು ಎಂದು ತನ್ನ ಉತ್ತರದಲ್ಲಿ ತಿಳಿಸಬಹುದು.
(8 / 8)
ಎಐ ಭ್ರಮೆ ಎಂದರೇನು?ಎಐ ನೀಡುವ ತಪ್ಪು ಅಥವಾ ದಾರಿ ತಪ್ಪಿಸುವ ಉತ್ತರಗಳಿಗೆ ಹಲುಸಿನೇಷಿಯನ್ ಅಥವಾ ಎಐ ಭ್ರಮೆ ಎನ್ನಲಾಗುತ್ತದೆ. "ನಿಮ್ಮ ಹೆಸರು ನೀಡಿ ಇವರ ಬಗ್ಗೆ ತಿಳಿಸಿ" ಎಂದು ಎಐನಲ್ಲಿ ಕೇಳಿದಾಗ ಕಪೋಲಕಲ್ಪಿತವಾಗಿ "ನೀವು ಮಹಾನ್ ಸಾಧಕರು, ನಿಮಗೆ ಇಂತಹ ಪ್ರಶಸ್ತಿಗಳು ಬಂದಿವೆ” ಎಂದೆಲ್ಲ ಎಐ ಸುಳ್ಳುಸುಳ್ಳೇ ಹೇಳುತ್ತದಲ್ವ. ಪರೀಕ್ಷೆಯಲ್ಲಿ ಉತ್ತರ ಗೊತ್ತಿಲ್ಲದೆ ಇದ್ದಾಗ ತೋಚಿದ್ದನ್ನು ಕೆಲವು ವಿದ್ಯಾರ್ಥಿಗಳು ಬರೆಯುತ್ತಾರಲ್ವ ಹಾಗೇ!
ಇತರ ಗ್ಯಾಲರಿಗಳು