ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎಸ್ 23 ಅಲ್ಟ್ರಾ ದರ ಶೇ 50 ಕುಸಿತ, ಅಮೆಜಾನ್‌ನಲ್ಲಿ ಈಗ ಈ ಸ್ಮಾರ್ಟ್‌ಫೋನ್‌ ದರ ಎಷ್ಟಿದೆ ನೋಡಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎಸ್ 23 ಅಲ್ಟ್ರಾ ದರ ಶೇ 50 ಕುಸಿತ, ಅಮೆಜಾನ್‌ನಲ್ಲಿ ಈಗ ಈ ಸ್ಮಾರ್ಟ್‌ಫೋನ್‌ ದರ ಎಷ್ಟಿದೆ ನೋಡಿ

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎಸ್ 23 ಅಲ್ಟ್ರಾ ದರ ಶೇ 50 ಕುಸಿತ, ಅಮೆಜಾನ್‌ನಲ್ಲಿ ಈಗ ಈ ಸ್ಮಾರ್ಟ್‌ಫೋನ್‌ ದರ ಎಷ್ಟಿದೆ ನೋಡಿ

Samsung Galaxy S23 Ultra: ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎಸ್ 23 ಅಲ್ಟ್ರಾ ಸ್ಮಾರ್ಟ್‌ಫೋನ್‌ಗೆ ಈಗ ಅಮೆಜಾನ್‌ನಲ್ಲಿ ಭರ್ಜರಿ ಡಿಸ್ಕೌಂಟ್‌ ನೀಡಲಾಗುತ್ತಿದೆ. ಬುಧವಾರ ಸಂಜೆ ಪರಿಶೀಲಿಸಿದಾಗ ಈ ಸ್ಮಾರ್ಟ್‌ಫೋನ್‌ ದರ ಶೇಕಡ 50ರಷ್ಟು ಕಡಿಮೆಯಾಗಿತ್ತು. ಇದರ ಡಿಸ್ಕೌಂಟ್‌ ದರ, ಬ್ಯಾಂಕ್‌ ಕೊಡುಗೆ ಇತ್ಯಾದಿಗಳನ್ನು ಪರಿಶೀಲಿಸಿ.

ಸ್ಯಾಮ್‌ಸಂಗ್‌ ಕಂಪನಿಯ ಹೊಸ ಗ್ಯಾಲಕ್ಸಿ ಎಸ್ 25 ಸರಣಿ ಜನವರಿ 22, 2025ರಂದು ಬಿಡುಗಡೆಯಾಗಲಿದೆ. ಇದು ಬಿಡುಗಡೆಯಾಗುವ ಮುನ್ನ ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎಸ್ 23 ಅಲ್ಟ್ರಾ ದರದಲ್ಲಿ ಭಾರೀ ಇಳಿಕೆಯಾಗಿದೆ. ಅಮೆಜಾನ್‌ನಲ್ಲಿ ಈಗ ಇದರ ದರ ಶೇಕಡ 50ರಷ್ಟು ಕಡಿಮೆಯಾಗಿದೆ. 
icon

(1 / 6)

(Samsung)

ಅಮೆಜಾನ್ ವೆಬ್‌ಸೈಟ್‌ನಲ್ಲಿ ಜನವರಿ 8ರಂದು ಸಂಜೆ ಪರಿಶೀಲಿಸಿದಾಗ ಇದರ ದರ ಶೇಕಡ 50ರಷ್ಟು ಕಡಿಮೆಯಾಗಿತ್ತು. ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎಸ್ 23 ಅಲ್ಟ್ರಾ  12 ಜಿಬಿ ರಾಮ್‌ ಮತ್ತು 256 ಜಿಬಿ ಸ್ಟೋರೇಜ್ ಆಯ್ಕೆ ಹೊಂದಿದೆ.  ಕೆಲವು ದಿನಗಳ ಹಿಂದೆ ಇದರ ದರ 1,49,999 ರೂ. ಇತ್ತು. ಶೇಕಡ 50 ರಿಯಾಯಿತಿ ನಂತರ ಈಗ ಈ ಸ್ಮಾರ್ಟ್‌ಫೋನ್‌ ದರ ಅಮೆಜಾನ್‌ನಲ್ಲಿ 74,999 ರೂ ಇದೆ. 
icon

(2 / 6)

ಈ ಭರ್ಜರಿ ಡಿಸ್ಕೌಂಟ್‌ ಜತೆಗೆ ಖರೀದಿದಾರರು ಬ್ಯಾಂಕ್‌ ಮತ್ತು ವಿನಿಮಯ ಕೊಡುಗೆಗಳನ್ನು ಪಡೆಯಬಹುದು. ಎಚ್‌ಡಿಎಫ್‌ಸಿ ಬ್ಯಾಂಕ್‌ ಕ್ರೆಡಿಟ್‌ ಕಾರ್ಡ್‌ನಲ್ಲಿ  6 ಅಥವಾ 9 ತಿಂಗಳ ಇಎಂಐ ವಹಿವಾಟುಗಳಿಗೆ 3000 ರೂ.ಗಳ  ರಿಯಾಯಿತಿ ದೊರಕುತ್ತದೆ. ಎಚ್‌ಡಿಎಫ್‌ಸಿ ಕ್ರೆಡಿಟ್‌ ಕಾರ್ಡ್‌ನಲ್ಲಿ  24 ತಿಂಗಳ ಇಎಂಐನಲ್ಲಿ ಪಡೆದರೆ  5000 ರೂ.ಗಳ ಡಿಸ್ಕೌಂಟ್‌ ದೊರಕುತ್ತದೆ.
icon

(3 / 6)

(Amazon)

ನಿಮ್ಮಲ್ಲಿರುವ ಸ್ಮಾರ್ಟ್‌ಫೋನ್‌ಗೆ ತಕ್ಕಂತೆ 22800 ರೂ.ಗಳವರೆಗೆ ವಿನಿಮಯದ ಕೊಡುಗೆಯನ್ನೂ ಪಡೆಯಬಹುದು. ನಿಮ್ಮಲ್ಲಿರುವ ಹಳೆಯ ಸ್ಮಾರ್ಟ್‌ಫೋನ್‌ನ ಸ್ಥಿತಿ ಮತ್ತು ಮಾಡೆಲ್‌ಗೆ ತಕ್ಕಂತೆ ವಿನಿಮಯ ದರ ಇರುತ್ತದೆ.
icon

(4 / 6)

(HT Tech)

ಎರಡು ವರ್ಷ ಹಳೆಯ ಈ ಸ್ಯಾಮ್‌ಸಂಗ್‌ ಮಾಡೆಲ್‌ ಅನ್ನು ಯಾಕೆ ಖರೀದಿಸಬೇಕು ಎಂಬ ಪ್ರಶ್ನೆ ನಿಮ್ಮಲ್ಲಿ ಇರಬಹುದು. ಇದು ಅತ್ಯುತ್ತಮ ಕ್ಯಾಮೆರಾ ಮತ್ತು ಉತ್ತಮ ಕಾರ್ಯಕ್ಷಮತೆಗೆ ಹೆಸರುವಾಸಿಯಾಗಿದೆ. ಗ್ಯಾಲಕ್ಸಿ ಎಐನೊಂದಿಗೆ ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌ ಫೀಚರ್‌ಗಳನ್ನು ಹೊಂದಿದೆ. ಹಳೆಯ ಮಾಡೆಲ್‌ ಆಗಿದ್ದರೂ ಇತ್ತೀಚಿನ ಎಲ್ಲಾ ಫೀಚರ್‌ಗಳನ್ನು ಹೊಂದಿದೆ.
icon

(5 / 6)

ಅಮೆಜಾನ್‌ ಕಂಪನಿಯ ಆಫರ್‌ ಗಮನಿಸಿಕೊಂಡು, ಈ ಸ್ಮಾರ್ಟ್‌ಫೋನ್‌ನ ಕುರಿತು ವಿಮರ್ಶೆಗಳನ್ನು ಗಮನಿಸಿ ಖರೀದಿ ನಿರ್ಧಾರ ಮಾಡಿ. 
icon

(6 / 6)

ಇತರ ಗ್ಯಾಲರಿಗಳು