ಕನ್ನಡ ಸುದ್ದಿ  /  Photo Gallery  /  Technology Upcoming Phones December 2023 These Phones Are Ready To Launch In India With Expected Price And Date Arc

ಭಾರತದ ಮಾರುಕಟ್ಟೆಯಲ್ಲಿ ಅದೃಷ್ಟ ಪರೀಕ್ಷೆಗೆ ಸಜ್ಜಾದ ಸ್ಮಾರ್ಟ್‌ಪೋನ್‌ಗಳು; ಡಿಸೆಂಬರ್‌ನಲ್ಲಿ ಬಿಡುಗಡೆಯಾಗಲಿರುವ ಫೋನ್‌ಗಳ ವಿವರ

  • Upcoming Phones December 2023: ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಡಿಸೆಂಬರ್‌ ತಿಂಗಳು ನಿರೀಕ್ಷೆ ಹೆಚ್ಚಿಸಿದೆ. ಆರಂಭಿಕ ಬೆಲೆಯ ಫೋನ್‌ಗಳಿಂದ ಹಿಡಿದು ಹೆಚ್ಚಿನ ವೈಶಿಷ್ಟ್ಯ ಮತ್ತು ಬೆಲೆ ಹೊಂದಿರುವ ಫೋನ್‌ಗಳು ಬಿಡುಗಡೆಗೆ ಸಿದ್ಧವಾಗಿ ನಿಂತಿವೆ. ಡಿಸೆಂಬರ್‌ನಲ್ಲಿ ಭಾರತದ ಮಾರುಕಟ್ಟೆಗೆ ಬರಲು ಕಾದು ಕುಳಿತಿರುವ ಫೋನ್‌ಗಳ ವಿವಿರ ಹೀಗಿದೆ.

ಪ್ರತಿ ತಿಂಗಳು ಹೊಸ ಹೊಸ ಸ್ಮಾರ್ಟ್‌ಫೋನ್‌ಗಳು ಗ್ಯಾಜೆಟ್‌ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುತ್ತಲೇ ಇವೆ. ಹಾಗೆಯೇ ನವೆಂಬರ್‌ ಕೂಡ ಇದಕ್ಕೆ ಹೊರತಾಗಿಲ್ಲ. ಅನೇಕ ಕಂಪನಿಯ ಫ್ಲಾಗ್‌ಶಿಪ್‌ ಮತ್ತು ಪ್ರೀಮಿಯಂ ಸರಣಿ ಫೋನ್‌ಗಳು ಇದಕ್ಕೆ ಸಾಕ್ಷಿಯಾಯಿತು. ಚೀನಾದಲ್ಲಿ ನವೆಂಬರ್‌ನಲ್ಲಿ ಸಾಲು ಸಾಲು ಮೊಬೈಲ್‌ ಫೋನ್‌ಗಳು ಬಿಡುಗಡೆಗೊಂಡವು. ಅದರಲ್ಲಿ ಪ್ರಮುಖವಾಗಿ ಐಕ್ಯೂ12 ಸರಣಿ, ಓಪ್ಪೋ ರೆನೊ 11 ಸರಣಿ, ಹೂನೂರ್‌ 100 ಸರಣಿ ಮತ್ತು ರೆಡ್‌ಮಾಜಿಕ್‌ 9 ಪ್ರೋ ಫೋನ್‌ಗಳು ಬಿಡುಗಡೆಯಾದವು. ಲಾವಾ ಬ್ಲೇಜ್‌ 2 5ಜಿ ಯಂತಹ ಕಡಿಮೆ ದರದ ಉತ್ತಮ ವೈಶಿಷ್ಟ್ಯಗಳಿರುವ ಫೋನ್‌ಗಳು ಭಾರತದ ಭಾರತದ ಮಾರುಕಟ್ಟೆ ಪ್ರವೇಶಿಸಿದವು. 
icon

(1 / 6)

ಸ್ಮಾರ್ಟ್‌ಫೋನ್‌ಗಳು ಬಿಡಗಡೆಯಾಗುವ ವೇಗ ಡಿಸೆಂಬರ್‌ನಲ್ಲೂ ಮುಂದುವರಿಯಲಿದೆ. ಚೀನಾದ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲು ಫೋನ್‌ಗಳು ಸಾಲುಗಟ್ಟಿ ನಿಂತಿವೆ. ಅದರಲ್ಲೂ ಭಾರತದಲ್ಲಿ ನಿರೀಕ್ಷಿಸಿದ ದರದಲ್ಲೇ ಪ್ರವೇಶ ಮಟ್ಟದ ರೆಡ್ಮಿ 13 ಸಿ ಯಿಂದ ಹೆಚ್ಚಿನ ದರದ ಐಕ್ಯೂ 12 5ಜಿ ಫೋನ್‌ಗಳು ಬಿಡುಗಡೆಯಾಗುವ ಸಂಭವವಿದೆ. ರಿಯಲ್‌ಮಿ ಜಿಟಿ 5 ಪ್ರೊ, ರೆಡ್ಮಿ ಕೆ70 ಸರಣಿ ಮತ್ತು ಒನ್‌ಪ್ಲಸ್‌ 5ಜಿ ಫೋನ್‌ಗಳು ಚೀನಾದಲ್ಲಿ ಬಿಡುಗಡೆಯಾಗಲು  ಸಜ್ಜಾಗಿವೆ. 
icon

(2 / 6)

ಒನ್‌ಪ್ಲಸ್‌ 12 5ಜಿ: ಈ ಸ್ಮಾರ್ಟ್‌ಫೋನ್‌ ಡಿಸೆಂಬರ್‌ 4ರಂದು ಚೀನಾದಲ್ಲಿ ಬಿಡುಗಡೆಯಾಗಲಿದೆ ಎಂದು ಕಂಪನಿಯು ಸ್ಪಷ್ಟಪಡಿಸಿದೆ. ಈ ಸ್ಮಾರ್ಟ್‌ಫೋನ್‌ 2024ರ ಜನವರಿ 23ರಂದು ಭಾರತದ ಮಾರುಕಟ್ಟೆಗೆ ಪ್ರವೇಶಿಸಬಹುದು ಎಂದು ಹೇಳಲಾಗುತ್ತಿದೆ. ಆದರೆ ಈ ಸ್ಮಾರ್ಟ್‌ಫೋನ್‌ ಈಗಾಗಲೇ ಇರುವ ಒನ್‌ಪ್ಲಸ್‌ 11 5ಜಿ ಗಿಂತ ಹೆಚ್ಚಿನ ದರ ಹೊಂದಿರಬಹುದು ಎಂದು ಅಂದಾಜಿಸಲಾಗಿದೆ. (PC: Oneplus India)
icon

(3 / 6)

ರಿಯಲ್‌ಮಿ ಜಿಟಿ 5 ಪ್ರೊ: ಈ ಸ್ಮಾರ್ಟ್‌ಫೋನ್‌ ಡಿಸೆಂಬರ್‌ 7 ರಂದು ಚೀನಾದಲ್ಲಿ ಬಿಡುಗಡೆಯಾಗಲಿದೆ. ಇದು ಸ್ನಾಪ್‌ಡ್ರಾಗನ್‌ 8 ಜೆನ್‌3 ಚಿಪ್‌ಸೆಟ್‌, ವೈರ್‌ಲೆಸ್‌ ಚಾರ್ಜಿಂಗ್‌ ಮತ್ತು 1ಟಿಬಿ ಸ್ಟೋರೆಜ್‌ ನೊಂದಿಗೆ ಬರಲಿದೆ.  ಈ ಫೋನ್‌ ಭಾರತದಲ್ಲಿ ಬಿಡುಗಡೆಯಾಗುವ ದಿನಾಂಕದ ಕುರಿತು ಯಾವುದೇ ಅಧಿಕೃತ ಮಾಹಿತಿ ಲಭ್ಯವಿಲ್ಲ. ಆದರೆ ಮುಂದಿನ ವರ್ಷ ಬಿಡುಗಡೆಯಾಗಬಹುದು ಎಂಬ ನಿರೀಕ್ಷೆಯಿದೆ. 50,000 ದಿಂದ 60,000 ರೂ. ಗಳ ನಡುವೆ ಇದರೆ ಬೆಲೆ ಅಂದಾಜಿಸಬಹುದಾಗಿದೆ. (PC: HT Tech)
icon

(4 / 6)

ಐಕ್ಯೂ 12 5ಜಿ: ಈ ಸ್ಮಾರ್ಟ್‌ಫೋನ್‌ ಡಿಸೆಂಬರ್‌ 12ರಂದು ಭಾರದಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ. ಇದು ಸ್ನಾಪ್‌ಡ್ರಾಗನ್‌ 8ಜೆನ್‌ 3 ಚಿಪ್‌ಸೆಟ್‌ ಹೊಂದಿದೆ. ಇದರ ಹಿಂಬದಿಯಲ್ಲಿ 50 MP ಪ್ರಾಥಮಿಕ ಕ್ಯಾಮೆರಾ, 50MP ಅಲ್ಟ್ರಾವೈಡ್‌ ಮತ್ತು 64MP ಪೆರಿಸ್ಕೋಪ್‌ ಲೆನ್ಸ್‌ ಹೊಂದಿದೆ. ಫೋನ್‌ ಈಗಾಗಲೇ ಚೀನಾದಲ್ಲಿ ಮಾರುಕಟ್ಟೆಯಲ್ಲಿ ಲಾಂಚ್ ಆಗಿದ್ದು 60,000 ರೂ. ದರದಲ್ಲಿ ಅಮೇಜಾನ್‌ನಲ್ಲಿ ಖರೀದಿಸಬಹುದಾಗಿದೆ. ಇದು ಐಕ್ಯೂ 11 ರ ನಂತರದ ಫೋನ್‌ ಆಗಿದೆ. (PC: iQoo Global)
icon

(5 / 6)

ರೆಡ್ಮಿ ನೋಟ್‌ 13 ಪ್ರೊ ಪ್ಲಸ್‌ 5ಜಿ, 13 ಪ್ರೊ 5ಜಿ ಮತ್ತು 13 5ಜಿ: ಮಧ್ಯಮ ಶ್ರೇಣಿಯ ಸರಣಿ ಸ್ಮಾರ್ಟ್‌ಫೋನ್‌ಗಳಂದೇ ಹೆಸರಾದ ಈ ಫೋನ್‌ಗಳು ಭಾರತದಲ್ಲಿ ಡಿಸೆಂಬರ್‌ ಅಥವಾ ಜನವರಿಯಲ್ಲಿ ಬಿಡುಗಡೆಯಾಗಲಿದೆ. ಈ ಮೂರು ಮಾದರಿಗಳನ್ನು ಚೀನಾದಲ್ಲಿ ಈಗಾಗಲೇ ಪರಿಚಯಿಸಲಾಗಿದ್ದು, ಇವು ರೆಡ್ಮಿ ನೋಟ್‌ 12 ಸರಣಿಯ ನಂತರದ ಫೋನ್‌ಗಳಾಗಿವೆ. ಈ ಸರಣಿಯ ಆರಂಭಿಕ ಬೆಲೆಯು 15,000ರೂ. ದಿಂದ ಟಾಪ್‌–ಎಂಡ್‌ ಬೆಲೆ 30,000ರೂ. ಗಳ ನಡುವೆ ನಿರೀಕ್ಷಿಸಬಹುದಾಗಿದೆ. (PC: HT Tech)
icon

(6 / 6)

ಇತರ ಗ್ಯಾಲರಿಗಳು