Medaram Jatara 2024: ಪುಟ್ಟ ಹಳ್ಳಿ ಮೇಡಾರಂನಲ್ಲಿ ಕೋಟಿ ಜನ ಸೇರುವ ವಿಶಿಷ್ಟ ಜಾತ್ರೆ, ಏನಿದರ ವಿಶೇಷ, ಹೋಗುವುದು ಹೇಗೆ-telangana news medaram tribal festival in samakka saralakka temple attracts lakhs of devotees from karnataka kub ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Medaram Jatara 2024: ಪುಟ್ಟ ಹಳ್ಳಿ ಮೇಡಾರಂನಲ್ಲಿ ಕೋಟಿ ಜನ ಸೇರುವ ವಿಶಿಷ್ಟ ಜಾತ್ರೆ, ಏನಿದರ ವಿಶೇಷ, ಹೋಗುವುದು ಹೇಗೆ

Medaram Jatara 2024: ಪುಟ್ಟ ಹಳ್ಳಿ ಮೇಡಾರಂನಲ್ಲಿ ಕೋಟಿ ಜನ ಸೇರುವ ವಿಶಿಷ್ಟ ಜಾತ್ರೆ, ಏನಿದರ ವಿಶೇಷ, ಹೋಗುವುದು ಹೇಗೆ

  • Telangana festival ತೆಲಂಗಾಣ ರಾಜ್ಯದ ಮುಲುಗು ಜಿಲ್ಲೆಯ ಮೇಡಾವರಂ ಜಾತ್ರೆ ಜನಪ್ರಿಯ. ಕೋಟ್ಯಂತರ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ.  ಈ ಬಾರಿಯ ನಾಲ್ಕು ದಿನಗಳ ಜಾತ್ರೆ ಬುಧವಾರ ಆರಂಭಗೊಂಡಿದೆ. ಜಾತ್ರೆಯ ಮಹತ್ವ, ಇಲ್ಲಿನ ಆಚರಣೆಗಳು, ಸೇರುವ ಭಕ್ತರ ಕುರಿತು ವಿವರಗಳ ಚಿತ್ರನೋಟ ಇಲ್ಲಿದೆ.

ತೆಲಂಗಾಣ ರಾಜ್ಯದ ಪುಟ್ಟ ಗ್ರಾಮ ಮೇಡಾವರಂ. ಜನಸಂಖ್ಯೆ 300ರ ಆಜುಬಾಜು. ಗ್ರಾಮದ ಜಾತ್ರೆ ಮಾತ್ರ ಕೋಟ್ಯಂತರ ಭಕ್ತರನ್ನು ಸೆಳೆಯುತ್ತದೆ. ಈ ಜಾತ್ರೆಯನ್ನು ಏಷ್ಯಾದ ಅತಿ ದೊಡ್ಡ ಜಾತ್ರೆ ಎಂದೇ ಗುರುತಿಸಲಾಗಿದೆ. 
icon

(1 / 10)

ಶತಮಾನಗಳ ಹಿನ್ನೆಲೆಯಿರುವ ಮೇಡಾರಂ ಗ್ರಾಮದ ಸಮಕ್ಕ ಸರಳಕ್ಕ ದೇಗುಲ ಈಗ ಆಕರ್ಷಕ ಕೇಂದ್ರ. ಇದು ಸಮಕ್ಕ ಸರಳಕ್ಕ ಅವರ ಗದ್ದುಗೆ.
icon

(2 / 10)

ಮುಲುಗು ಜಿಲ್ಲೆಯಲ್ಲಿರುವ ದೇಗುಲವಿದು.. ಇಲ್ಲಿಗೆ ತೆಲಂಗಾಣ ಮಾತ್ರವಲ್ಲದೇ ಆಂಧ್ರಪ್ರದೇಶ, ಮಹಾರಾಷ್ಟ್ರ, ಕರ್ನಾಟಕ, ಮಧ್ಯಪ್ರದೇಶ, ಒರಿಸ್ಸಾ, ಜಾರ್ಖಂಡ್‌, ಛತ್ತೀಸಗಢದಿಂದಲೂ ಲಕ್ಷಾಂತರ ಭಕ್ತರು ಬರುತ್ತಾರೆ.ಇಲ್ಲಿ ಭಕ್ತರು ಟನ್ ಗಟ್ಟಲೆ ಬೆಲ್ಲವನ್ನು ದೇವಿಗೆ ಅರ್ಪಿಸುರುವುದು ವಿಶೇಷ.
icon

(3 / 10)

ಶತಮಾನಗಳ ಹಿನ್ನೆಲೆಯಿರುವ ಮೇಡಾರಂ ಗ್ರಾಮದ ಸಮಕ್ಕ ಸರಳಕ್ಕ ದೇಗುಲ ಈಗ ಆಕರ್ಷಕ ಕೇಂದ್ರ. ಪ್ರತಿ ವರ್ಷ ಜನವರಿ ಇಲ್ಲವೇ ಫೆಬ್ರವರಿಯಲ್ಲಿ ಇಲ್ಲಿ ಜಾತ್ರೆ ನಡೆಯುತ್ತದೆ. ಈ ಬಾರಿಯ ಜಾತ್ರೆ ಈಗ ಆರಂಭಗೊಂಡಿದೆ.ಫೆಬ್ರವರಿ 24 ರವರೆಗೂ ಇರಲಿದೆ. 
icon

(4 / 10)

ಮೇಡಾವರಂ ಜಾತ್ರೆಯಲ್ಲಿ ಹಲವು ಹರಕೆ ಕಟ್ಟಿಕೊಳ್ಳಲು ಆಗಮಿಸುತ್ತಾರೆ. ಮಕ್ಕಳಾಗದವರು, ಅನಾರೋಗ್ಯಕ್ಕೆ ಈಡಾದವರು ಬಂದು ಪೂಜೆ ಸಲ್ಲಿಸುತ್ತಾರೆ. ಇಲ್ಲಿಗೆ ಬಂದರೆ ತಮ್ಮ ಇಷ್ಟಾರ್ಥ ಈಡೇರುತ್ತದೆ ಎನ್ನುವ ಬಲವಾದ ನಂಬಿಕೆ.
icon

(5 / 10)

ಪ್ರಮುಖ ಬುಡಕಟ್ಟು ಉತ್ಸವವಾಗಿರುವ ಇಲ್ಲಿಗೆ ಸಾಧುಪುರುಷರೂ ಆಗಮಿಸುತ್ತಾರೆ. ಕೆಲವು ದಿನ ಇಲ್ಲಿಯೇ ಇದ್ದು ಹೋಗುತ್ತಾರೆ. 
icon

(6 / 10)

ತೆಲಂಗಾಣದಲ್ಲಿ ಬುಡಕಟ್ಟು ಮೂಲದ ಒಂದು ಪುಟ್ಟ ಹಬ್ಬ ಕಳೆದ ಎಂಟು ವರ್ಷಗಳಲ್ಲಿ ಪ್ರಮುಖ ತೀರ್ಥಯಾತ್ರೆಯಾಗಿದೆ. ಮುಲುಗು ಜಿಲ್ಲೆಯ ದಟ್ಟಕಾಡುಗಳ ಹೃದಯಭಾಗದಲ್ಲಿರುವ ತಡವಾಯಿ ಮಂಡಲದ ಮೇಡಾರಂ ಗ್ರಾಮದಲ್ಲಿ ಪ್ರತಿ ಎರಡು ವರ್ಷಗಳಿಗೊಮ್ಮೆ ಮೇಡಾರಂ ಜಾಥಾರ ಉತ್ಸವ ನಡೆಯುತ್ತದೆ. ಇದಕ್ಕ ಗಾಡಿ ಕಟ್ಟಿಕೊಂಡು ಭಕ್ತರು ಆಗಮಿಸಿ ಅಲ್ಲಿಯೇ ವಾಸ್ತವ್ಯ ಹೂಡುತ್ತಾರೆ.
icon

(7 / 10)

ಮೇಡರಂ ಗ್ರಾಮವು ತೆಲಂಗಾಣದ ವಾರಂಗಲ್‌ನ ಎಟುರ್‌ನಗರಂ ಅರಣ್ಯ ಪ್ರದೇಶದಲ್ಲಿದೆ. ಜಾತ್ರೆ ಸಮಯದಲ್ಲಿ ತೆಲಂಗಾಣ ರಾಜ್ಯ ಸರ್ಕಾರವು ಭಕ್ತರಿಗೆ ವಿಶೇಷ ಬಸ್‌ಗಳನ್ನು ಒದಗಿಸುತ್ತಿದೆ ಮತ್ತು ಜಾತ್ರೆಗೆ ತಲುಪಲು ಅವರಿಗೆ ಸೌಕರ್ಯವನ್ನು ನೀಡುತ್ತದೆ. ತೆಲಂಗಾಣದ ಎಲ್ಲಾ ಜಿಲ್ಲೆಗಳಿಂದ ಮೇಡಾರಂಗೆ ವಿಶೇಷ ಬಸ್ಸುಗಳು ಪ್ರಾರಂಭವಾಗುತ್ತವೆ. ಸಾಮಾನ್ಯ ದಿನಗಳಲ್ಲಿ ತೆಲಂಗಾಣದ ಎಲ್ಲಾ ಜಿಲ್ಲೆಗಳಿಂದ ಮೇಡಾರಂಗೆ ಅನೇಕ ಬಸ್ಸುಗಳು ಉಂಟು.
icon

(8 / 10)

ಸಾಮಾನ್ಯ ಸಮಯದಲ್ಲಿ ಮೇಡಾರಂನಲ್ಲಿರುವ ಪುಟ್ಟ ಅರಣ್ಯ ಗ್ರಾಮದ ಜನಸಂಖ್ಯೆ 300 ಮೀರುವುದಿಲ್ಲ. ಇದ್ದಕ್ಕಿದ್ದಂತೆ ಕಳೆದ ವರ್ಷ ಸುಮಾರು 1 ಕೋಟಿ ಯಾತ್ರಾರ್ಥಿಗಳು ಜಾಥಾದಲ್ಲಿ ಭಾಗವಹಿಸಿದ್ದರು. ಈ ವರ್ಷದಲ್ಲಿ 1.20 ಕೋಟಿ ಭಕ್ತರು ಆಗಮಿಸುವ ನಿರೀಕ್ಷೆಯಿದೆ. ಇದರಿಂದ ಇಲ್ಲಿಗೆ  ಬರುವ ಭಕ್ತರಿಗೆ ಸರ್ಕಾರವೇ ಟೆಂಟ್‌ ಮೂಲಕ ವಾಸ್ಯವ್ಯ ಕಲ್ಪಿಸಲಿದೆ.
icon

(9 / 10)

ಮೇಡಾರಂಗೆ ಹೋಗುವುದು ಹೀಗೆ.ಹನಮಕೊಂಡದಿಂದ (ವಾರಂಗಲ್) 95 ಕಿಮೀ.ಹೈದರಾಬಾದ್‌ನಿಂದ 237 ಕಿಮೀಕರೀಂನಗರದಿಂದ 166 ಕಿಮೀಬೆಂಗಳೂರಿನಿಂದ ಹೈದ್ರಾಬಾದ್‌ಗೆ ಹೋಗಿ ಅಲ್ಲಿಂದ ಕಾಜಿಪೇಟ್‌ ತಲುಪಿ ಮೇಡಾವರಂಗೆ ಹೋಗಬಹುದು. ಮೇಡಾರಂಗೆ ಸಮೀಪದಲ್ಲಿ ಕಾಜಿಪೇಟ್ ರೈಲು ನಿಲ್ದಾಣವಿದೆ, ಇದು ಮೇಡಾರಂಗೆ ಪ್ರಮುಖ ರೈಲು ನಿಲ್ದಾಣ.
icon

(10 / 10)

ಇತರ ಗ್ಯಾಲರಿಗಳು