Amruthadhaare Serial: ಅಮ್ಮನಾಗುವ ಅನುಭವ ಅಷ್ಟು ಅದ್ಭುತವಾಗಿರುತ್ತ? ಭೂಮಿಕಾಳ ಮನಸ್ಸಿನಲ್ಲಿ ಮೊಳಕೆಯೊಡೆದ ತಾಯ್ತನದ ಆಸೆ
- Amruthadhaare Kannada Serial today Episode: ಅಮೃತಧಾರೆ ಧಾರಾವಾಹಿಯ ಇಂದಿನ ಸಂಚಿಕೆಯ ಪ್ರೊಮೊವನ್ನು ಜೀ ಕನ್ನಡ ವಾಹಿನಿಯು ಹಂಚಿಕೊಂಡಿದೆ. ಇದರಲ್ಲಿ ಭೂಮಿಕಾಳ ಮನಸ್ಸಲ್ಲಿ ತಾಯ್ತನದ ಆಸೆಯ ಚಿತ್ರಣವನ್ನು ತೋರಿಸಲಾಗಿದೆ. ಒಂದೆಡೆ ಗೌತಮ್ ಅಮ್ಮ ಸಿಕ್ಕ ಖುಷಿಯಲ್ಲಿದ್ದಾರೆ. ಇನ್ನೊಂದೆಡೆ ಭೂಮಿಕಾಳಿಗೆ ಅಮ್ಮನಾಗುವ ಕನಸು ಹುಟ್ಟಿದೆ.
- Amruthadhaare Kannada Serial today Episode: ಅಮೃತಧಾರೆ ಧಾರಾವಾಹಿಯ ಇಂದಿನ ಸಂಚಿಕೆಯ ಪ್ರೊಮೊವನ್ನು ಜೀ ಕನ್ನಡ ವಾಹಿನಿಯು ಹಂಚಿಕೊಂಡಿದೆ. ಇದರಲ್ಲಿ ಭೂಮಿಕಾಳ ಮನಸ್ಸಲ್ಲಿ ತಾಯ್ತನದ ಆಸೆಯ ಚಿತ್ರಣವನ್ನು ತೋರಿಸಲಾಗಿದೆ. ಒಂದೆಡೆ ಗೌತಮ್ ಅಮ್ಮ ಸಿಕ್ಕ ಖುಷಿಯಲ್ಲಿದ್ದಾರೆ. ಇನ್ನೊಂದೆಡೆ ಭೂಮಿಕಾಳಿಗೆ ಅಮ್ಮನಾಗುವ ಕನಸು ಹುಟ್ಟಿದೆ.
(1 / 8)
ಅಮೃತಧಾರೆ ಧಾರಾವಾಹಿಯ ಇಂದಿನ ಸಂಚಿಕೆಯ ಪ್ರೊಮೊವನ್ನು ಜೀ ಕನ್ನಡ ವಾಹಿನಿಯು ಹಂಚಿಕೊಂಡಿದೆ. ಇದರಲ್ಲಿ ಭೂಮಿಕಾಳ ಮನಸ್ಸಲ್ಲಿ ತಾಯ್ತನದ ಆಸೆಯ ಚಿತ್ರಣವನ್ನು ತೋರಿಸಲಾಗಿದೆ. ಒಂದೆಡೆ ಗೌತಮ್ ಅಮ್ಮ ಸಿಕ್ಕ ಖುಷಿಯಲ್ಲಿದ್ದಾರೆ. ಇನ್ನೊಂದೆಡೆ ಭೂಮಿಕಾಳಿಗೆ ಅಮ್ಮನಾಗುವ ಕನಸು ಹುಟ್ಟಿದೆ. ಇದು ಹೇಗೆ ಆರಂಭವಾಯ್ತು ಅಂತೀರಾ?. ಭೂಮಿಕಾಳಿಗೆ ತಾಯ್ತನದ ಬಯಕೆ ಮೂಡಲು ಕಾರಣವಿದೆ. ಸುಧಾ ಅಮ್ಮನಾಗುವ ಖುಷಿಯನ್ನು ಹಂಚಿಕೊಳ್ಳುತ್ತಾರೆ. "ಅಮ್ಮ ಮತ್ತು ಮಕ್ಕಳ ಸಂಬಂಧವೇ ಹಾಗೆಯೇ ಅಲ್ವ ಅತ್ತಿಗೆ" ಎನ್ನುತ್ತಾರೆ ಸುಧಾ.
(2 / 8)
ಈಕೆ ಗೌತಮ್ ಮತ್ತು ಅವರ ತಾಯಿಯ ಸಂಬಂಧದ ಬಗ್ಗೆ ಮಾತನಾಡುತ್ತಾರೆ. "ನಾವು ಅಮ್ಮನ ರಕ್ತ ಹಂಚಿಕೊಂಡು ಹುಟ್ಟಿರುತ್ತೇವೆ. ಅಮ್ಮ ನಮ್ಮ ರಕ್ತದಲ್ಲಿಯೇ ಬೆರೆತು ಇರ್ತಾಳೆ" ಎಂದು ಸುಧಾ ಹೇಳುತ್ತಾರೆ.
(3 / 8)
"ಅಮ್ಮನ ಹೊಟ್ಟೆಯಿಂದ ಹೊರಗೆ ಬರುವಾಗ ಕರುಳ ಬಳ್ಳಿಯನ್ನು ಕಟ್ ಮಾಡ್ತಾರೆ. ಆದರೆ, ಇನ್ನೊಂದು ಕರುಳ ಬಳ್ಳಿ ಹಾಗೆಯೇ ಇರುತ್ತದೆ" ಎಂದು ಭೂಮಿಕಾಳೂ ಸುಧಾಳ ಜತೆ ಮಾತನಾಡುತ್ತಾರೆ.
(4 / 8)
"ನಾನೂ ಕೂಡ ಒಂದು ಮಗುವಿನ ತಾಯಿ. ಇಡೀ ದಿನ ಕೆಲಸ ಮಾಡಿ ಸುಸ್ತಾದರೂ ಮಗಳು ಎದುರಿಗೆ ಬಂದಾಗ ಗೆಲುವಾಗ್ತಿನಿ. ಲಚ್ಚಿ ಎದುರಿಗೆ ಬರ್ತಾ ಇದ್ದಾಗ ಎಲ್ಲಾ ಮರೆತು ಹೋಗುತ್ತೆ ಅತ್ತಿಗೆ" ಎಂದು ಸುಧಾ ಹೇಳುತ್ತಾಳೆ.
(5 / 8)
ಸುಧಾ ಅಷ್ಟೇ ಹೇಳಿದ್ದರೆ ಪರವಾಗಿರಲಿಲ್ಲ. "ಮಕ್ಕಳು ಎಂದರೆ ಹಾಗೆಯೇ, ಅದನ್ನು ಬಾಯ್ಮಾತಿನಲ್ಲಿ ಹೇಳಿದರೆ ಅರ್ಥ ಮಾಡಿಕೊಳ್ಳಲು ಆಗುವುದಿಲ್ಲ. ಅದನ್ನು ಅನುಭವಿಸಿಯೇ ತೀರಬೇಕು" ಎಂದು ಸುಧಾ ಹೇಳುತ್ತಾಳೆ.
(6 / 8)
ಸುಧಾಳ ಈ ಮಾತು ಕೇಳಿ ಭೂಮಿಕಾಳ ಕಣ್ಣು ಅರಳುತ್ತದೆ. "ಆ ಅನುಭವ ಅಷ್ಟು ಅದ್ಭುತವಾಗಿ ಇರುತ್ತದೆಯೇ?" ಎಂದು ಭೂಮಿಕಾ ಯೋಚಿಸುತ್ತಾರೆ. ಈ ಮೂಲಕ ಈಕೆಗೂ ಮಗುವಾಗಬೇಕೆಂಬ ಆಸೆ ಹುಟ್ಟುತ್ತದೆ. ಈ ಹಿಂದೆಯೂ ಹಲವು ಸಲ ಇಂತಹ "ಮಗುವಿನ" ಮಾತುಗಳು ಸೀರಿಯಲ್‌ನಲ್ಲಿ ನಡೆದಿವೆ.
(7 / 8)
ಇನ್ನೊಂದೆಡೆ ಗೌತಮ್ ತಾಯಿಯನ್ನು ಸಾಯಿಸುವ ಪ್ರಯತ್ನ ಮಾಡಿ ಶಕುಂತಲಾದೇವಿ ವಿಫಲವಾಗಿದ್ದಾರೆ. ಮನೆಯಲ್ಲಿ ನಡೆದ ಘಟನೆಯ ಕುರಿತು ಗೌತಮ್ ತನಿಖೆ ಮಾಡುತ್ತಾನೆ. ಈ ಕೃತ್ಯ ಮಾಡಿದ್ದು ಶಕುಂತಲಾ ಎಂಬ ಸತ್ಯ ಗೌತಮ್‌ಗೆ ತಿಳಿಯಬಹುದೇ ಎನ್ನುವ ಕುತೂಹಲವೂ ಪ್ರೇಕ್ಷಕರಿಗೆ ಇದೆ.
(8 / 8)
ಈಗಾಗಲೇ ಗೌತಮ್ ತನ್ನ ಮನೆಯ ಭದ್ರತಾ ಸಿಬ್ಬಂದಿಗಳಲ್ಲಿ ಈ ಕುರಿತು ವಿಚಾರಿಸಿದ್ದಾರೆ. ಮನೆಯ ಒಳಗಿನವರೇ ಕೃತ್ಯ ಮಾಡಿರಬಹುದು ಎಂಬ ಅನುಮಾನವೂ ಈ ಸಂದರ್ಭದಲ್ಲಿ ವ್ಯಕ್ತವಾಗುತ್ತಿದೆ. ಭೂಮಿಕಾಳಿಗೂ ಮನೆಯಲ್ಲಿ ಇರುವವರ ಕುರಿತು ಅನುಮಾನವಿದೆ. ಆದರೆ, ಯಾರು ಭಾಗ್ಯಮ್ಮನ ಕೊಠಡಿಗೆ ಬಂದಿರಬಹುದು ಎನ್ನುವ ಕುರಿತು ಸ್ಪಷ್ಟತೆ ಸಿಗುತ್ತಿಲ್ಲ. ಮುಂದಿನ ಸಂಚಿಕೆಗಳಲ್ಲಿ ಗೌತಮ್ ಮತ್ತು ಭೂಮಿಕಾಗೆ ಸತ್ಯ ತಿಳಿಯಬಹುದು.
ಇತರ ಗ್ಯಾಲರಿಗಳು