Amruthadhaare: ಶಕುಂತಲಾದೇವಿ ಗಾಯ ಭೂಮಿಕಾಳಿಗೆ ಹುಟ್ಟಿಸಿದೆ ಅನುಮಾನ, ಕೇಡಿಗಳ ಬಂಡವಾಳ ಬಯಲಾಗೋ ಸಮಯ ಬಂತು!
- Amruthadhaare Serial Today Episode: ಜೀ ಕನ್ನಡ ವಾಹಿನಿಯು ಅಮೃತಧಾರೆ ಧಾರಾವಾಹಿಯ ಇಂದಿನ ಸಂಚಿಕೆಯ ಪ್ರೊಮೊ ಹಂಚಿಕೊಂಡಿದೆ. ಈ ಪ್ರೊಮೊದಲ್ಲಿ ಶಕುಂತಲಾದೇವಿಯ ಗಾಯಗಳ ಕುರಿತು ಭೂಮಿಕಾ ಅನುಮಾನದಿಂದ ಪ್ರಶ್ನಿಸುತ್ತಾರೆ. ಭಾಗ್ಯಮ್ಮಳನ್ನು ಸಾಯಿಸಲು ಯತ್ನಿಸಿದ್ದು ಶಕುಂತಲಾದೇವಿ ಆಗಿರಬಹುದೇ ಎಂಬ ಅನುಮಾನ ಭೂಮಿಕಾಳಿಗೆ ಮೂಡಿದೆ.
- Amruthadhaare Serial Today Episode: ಜೀ ಕನ್ನಡ ವಾಹಿನಿಯು ಅಮೃತಧಾರೆ ಧಾರಾವಾಹಿಯ ಇಂದಿನ ಸಂಚಿಕೆಯ ಪ್ರೊಮೊ ಹಂಚಿಕೊಂಡಿದೆ. ಈ ಪ್ರೊಮೊದಲ್ಲಿ ಶಕುಂತಲಾದೇವಿಯ ಗಾಯಗಳ ಕುರಿತು ಭೂಮಿಕಾ ಅನುಮಾನದಿಂದ ಪ್ರಶ್ನಿಸುತ್ತಾರೆ. ಭಾಗ್ಯಮ್ಮಳನ್ನು ಸಾಯಿಸಲು ಯತ್ನಿಸಿದ್ದು ಶಕುಂತಲಾದೇವಿ ಆಗಿರಬಹುದೇ ಎಂಬ ಅನುಮಾನ ಭೂಮಿಕಾಳಿಗೆ ಮೂಡಿದೆ.
(1 / 8)
Amruthadhaare Serial Today Episode: ಜೀ ಕನ್ನಡ ವಾಹಿನಿಯು ಅಮೃತಧಾರೆ ಧಾರಾವಾಹಿಯ ಇಂದಿನ ಸಂಚಿಕೆಯ ಪ್ರೊಮೊ ಹಂಚಿಕೊಂಡಿದೆ. ಈ ಪ್ರೊಮೊದಲ್ಲಿ ಶಕುಂತಲಾದೇವಿಯ ಗಾಯಗಳ ಕುರಿತು ಭೂಮಿಕಾ ಅನುಮಾನದಿಂದ ಪ್ರಶ್ನಿಸುತ್ತಾರೆ. ಭಾಗ್ಯಮ್ಮಳನ್ನು ಸಾಯಿಸಲು ಯತ್ನಿಸಿದ್ದು ಶಕುಂತಲಾದೇವಿ ಆಗಿರಬಹುದೇ ಎಂಬ ಅನುಮಾನ ಭೂಮಿಕಾಳಿಗೆ ಮೂಡಿದೆ. ಅಮೃತಧಾರೆ ಧಾರಾವಾಹಿಯಲ್ಲಿ ಮನೆಗೆ ಯಾರೋ ಅಪರಿಚಿತರು ನುಗ್ಗಿದ್ದಾರೆ ಎಂಬ ಅನುಮಾನ ಗೌತಮ್‌ಗೆ ಇತ್ತು. ಆದರೆ, ಇದು ಮನೆಯವರ ಕೃತ್ಯ ಎಂಬ ಅನುಮಾನ ಈಗ ಎಲ್ಲರಲ್ಲಿಯೂ ಮೂಡುತ್ತಿದೆ. ಇದೇ ಸಮಯದಲ್ಲಿ ಶಕುಂತಲಾದೇವಿಯ ಕೈ ಮತ್ತು ತಲೆಯ ಗಾಯದ ಕುರಿತು ಭೂಮಿಕಾಳಿಗೆ ಅನುಮಾನ ಮೂಡಿದೆ.
(2 / 8)
ಜೀ ಕನ್ನಡ ವಾಹಿನಿ ಬಿಡುಗಡೆ ಮಾಡಿರುವ ಪ್ರೊಮೊದಲ್ಲಿ ಶಕುಂತಲಾದೇವಿ ಮತ್ತು ಲಕ್ಕಿ ಲಕ್ಷ್ಮಿಕಾಂತ್ ಮಾತನಾಡುತ್ತಿದ್ದಾರೆ. ನಮಗೆ ಪವರ್ ಬೇಕು, ಅಧಿಕಾರ ಇದ್ದರೆ ಮಾತ್ರ ಇಂತಹ ಕ್ರೈಮ್ ಮಾಡಿಯೂ ನಿಭಾಯಿಸಬಹುದು ಎಂದೆಲ್ಲ ಅವರಿಬ್ಬರು ಮಾತನಾಡುತ್ತಾರೆ.
(3 / 8)
ಈ ಸಮಯದಲ್ಲಿ ಲಕ್ಕಿ ಲಕ್ಷ್ಮಿಕಾಂತ್ ಶಕುಂತಲಾದೇವಿಯ ಬ್ಯಾಂಡೇಜ್ ಸರಿಪಡಿಸುತ್ತ ಇರುತ್ತಾನೆ. ಕೈಗೆ ಬ್ಯಾಂಡೇಜ್ ಕಟ್ಟುತ್ತ ಇರುತ್ತಾನೆ. ಈ ಸಮಯದಲ್ಲಿ ಅಲ್ಲಿಗೆ ಭೂಮಿಕಾ ಆಗಮಿಸುತ್ತಾರೆ.
(4 / 8)
ಈಕೆಯ ಕೈ ಬ್ಯಾಂಡೇಜ್ ನೋಡಿ ಭೂಮಿಕಾಗೆ ಅನುಮಾನ ಬರುತ್ತದೆ. ಶಕುಂತಲಾ ಮಾಡುತ್ತಿರುವ ನಾಟಕವಾಗಿರಬಹುದೇ ಎಂಬ ಅನುಮಾನ ಆಕೆಗೆ ಬಂದಿದೆ.
(5 / 8)
"ಅತ್ತೆ ಇದೆಲ್ಲ ಹೇಗಾಯ್ತು?" ಎಂದು ಭೂಮಿಕಾ ಕೇಳುತ್ತಾಳೆ. "ಸಿಸ್ಟರ್ ಬಂಡವಾಳ ಎಲ್ಲಾ ಹೊರಗೆ ತೆಗೆಯುವಂತೆ ಕಾಣಿಸ್ತಿದೆ" ಎಂದು ಲಕ್ಷ್ಮಿಕಾಂತ್‌ಗೆ ಭಯದಲ್ಲಿ ಯೋಚಿಸುತ್ತಾನೆ. "ಆಗಲೇ ಹೇಳಿದೆ ಅಲ್ವ, ಆಟೋ ಬಂತು ಗುದ್ದಿತ್ತು, ಲೈಟ್ ಕಂಬಕ್ಕೆ ಹೊಡೆದುಕೊಂಡೆ ಅಂತ" ಎಂದು ಶಕುಂತಲಾ ವಿವರಿಸುತ್ತಾರೆ.
(6 / 8)
"ಆಟೋ ಹಿಂದೆಯಿಂದ ಬಂದು ಗುದ್ದಿತ್ತು. ನೀವು ಮುಂದೆ ಕರೆಂಟ್ ಕಂಬಕ್ಕೆ ಹೊಡೆದಿರು. ಗಾಯ ತಲೆಯ ಎದುರಿಗೆ ಆಗಬೇಕಿತ್ತು ಅಲ್ವ. ಹಿಂದಕ್ಕೆ ಹೇಗೆ ಆಯ್ತು?ʼ ಎಂದು ಭೂಮಿಕಾ ಪ್ರಶ್ನಿಸುತ್ತಾರೆ.
(7 / 8)
"ಅದು ನಾನು ಮುಂದೆ ಬೀಳುವುದನ್ನು ತಪ್ಪಿಸಲು ಹಿಂದೆ ವಾಲಿದೆ ಆಗ ಹಿಂದಕ್ಕೆ ಬಿದ್ದು ತಲೆಗೆ ಪೆಟ್ಟು ಬಿತ್ತು" ಎಂದು ಹೇಳುತ್ತಾರೆ ಶಕುಂತಲಾ. "ಹಾಗದರೆ ಕೈಗೆ ಹೇಗೆ ಗಾಯವಾಯ್ತು?" ಈ ಪ್ರಶ್ನೆಗೆ ಸುಳ್ಳು ಹೇಳಲಾಗದೆ ತಡಬಡಿಸುತ್ತಾರೆ.
ಇತರ ಗ್ಯಾಲರಿಗಳು