Amruthadhaare: ಭೂಮಿಕಾಳಿಗೆ ನಿಗೂಢ ಸತ್ಯ ಗೊತ್ತಾಯ್ತು; ಯಾರನ್ನು ಕಿಡ್ನ್ಯಾಪ್ ಮಾಡ್ತಿರಿ? ಯಾರನ್ನು ಕೋಮಾಕ್ಕೆ ಕಳುಹಿಸ್ತೀರಿ ಎಂದ ಪ್ರೇಕ್ಷಕ
- Amruthadhare Serial Today Episode: ಜೀ ಕನ್ನಡ ವಾಹಿನಿಯು ಅಮೃತಧಾರೆ ಧಾರಾವಾಹಿಯ ಇಂದಿನ ಸಂಚಿಕೆಯ (ಡಿಸೆಂಬರ್ 31) ಪ್ರೋಮೊ ಬಿಡುಗಡೆ ಮಾಡಿದೆ. ಇದರಲ್ಲಿ ಭೂಮಿಕಾಳಿಗೆ ಗೌತಮ್ ದಿವಾನ್‌ನ ತಾಯಿ ಭಾಗ್ಯಮ್ಮ ಎಂಬ ಸತ್ಯ ಗೊತ್ತಾಗಿಬಿಟ್ಟಿದೆ. ಆದರೆ, ಅಮ್ಮ ಮತ್ತು ಮಗನ ಭೇಟಿಯ ಕುರಿತು ಪ್ರೇಕ್ಷಕರು ನಾನಾ ಅನುಮಾನ ವ್ಯಕ್ತಪಡಿಸಿದ್ದಾರೆ.
- Amruthadhare Serial Today Episode: ಜೀ ಕನ್ನಡ ವಾಹಿನಿಯು ಅಮೃತಧಾರೆ ಧಾರಾವಾಹಿಯ ಇಂದಿನ ಸಂಚಿಕೆಯ (ಡಿಸೆಂಬರ್ 31) ಪ್ರೋಮೊ ಬಿಡುಗಡೆ ಮಾಡಿದೆ. ಇದರಲ್ಲಿ ಭೂಮಿಕಾಳಿಗೆ ಗೌತಮ್ ದಿವಾನ್‌ನ ತಾಯಿ ಭಾಗ್ಯಮ್ಮ ಎಂಬ ಸತ್ಯ ಗೊತ್ತಾಗಿಬಿಟ್ಟಿದೆ. ಆದರೆ, ಅಮ್ಮ ಮತ್ತು ಮಗನ ಭೇಟಿಯ ಕುರಿತು ಪ್ರೇಕ್ಷಕರು ನಾನಾ ಅನುಮಾನ ವ್ಯಕ್ತಪಡಿಸಿದ್ದಾರೆ.
(1 / 10)
ಅಮೃತಧಾರೆ ಧಾರಾವಾಹಿಯ ಇಂದಿನ ಸಂಚಿಕೆಯಲ್ಲಿ ಗೌತಮ್ ತಾಯಿ ಬೇರೆ ಯಾರೂ ಅಲ್ಲ, ಆಕೆ ಸುಧಾಳ ತಾಯಿ ಎಂಬ ಸಂಗತಿ ಭೂಮಿಕಾಳಿಗೆ ಗೊತ್ತಾಗಿಬಿಟ್ಟಿದೆ. ನಿನ್ನೆಯ ಸಂಚಿಕೆಯಲ್ಲಿ ಗೌತಮ್‌ಗೆ ಸುಧಾ ಮಾಡಿರುವ ಮೋಸದ ವಿಷಯ ಗೊತ್ತಾಗಿತ್ತು. ನೀನು ನನ್ನನ್ನು ಅಣ್ಣಾ ಎಂದು ಕರೆಯಬೇಡ ಎಂದ ಅಬ್ಬರಿಸಿದ್ದ. ಸುಧಾಳನ್ನು ಶಕುಂತಲಾ ಮನೆಯಿಂದ ಹೊರಗೆ ಹಾಕಿದ್ದಳು.
(2 / 10)
ಈ ಸಮಯದಲ್ಲಿ ಎಲ್ಲರೂ ಮನೆಯ ಒಳಗೆ ಹೋಗುತ್ತಾರೆ. ಭೂಮಿಕಾ ಹೋಗುವುದಿಲ್ಲ. ಯಾಕೆ ಹೀಗೆ ಮಾಡಿದ್ರಿ ಎಂದು ಸುಧಾಳ ಬಳಿ ಕೇಳುತ್ತಾಳೆ. "ನಾನು ಬೇಕುಬೇಕಂತ ಮಾಡಿಲ್ಲ. ನಾನು ನನ್ನ ಅಮ್ಮನಿಗೆ, ಮಗಳಿಗಾಗಿ ಮಾಡಿದೆ" ಎಂದು ಎಲ್ಲಾ ವಿಚಾರ ಹೇಳುತ್ತಾಳೆ. "ನಾನು ತುಂಬಾ ಇಕ್ಕಟ್ಟಿನ ಪರಿಸ್ಥಿತಿಗೆ ಸಿಕ್ಕಿಹಾಕಿಕೊಂಡೆ. ಏನು ಮಾಡಬೇಕೆಂದು ಗೊತ್ತಾಗಲಿಲ್ಲ" ಎಂದು ಭೂಮಿಕಾಳಿಗೆ ಎಲ್ಲಾ ವಿಷಯ ಹೇಳುತ್ತಾಳೆ.
(3 / 10)
ನಾನು ಇನ್ನೊಂದು ವಿಚಾರ ಹೇಳಬೇಕು ಎಂದು ಸುಧಾ ಹೇಳಿದಾಗ "ಅಜ್ಜಿ ನಿಂತ್ಕೋ ಹೋಗಬೇಡ" ಎಂದು ಮಗಳ ಧ್ವನಿ ಕೇಳುತ್ತದೆ. ಸುಧಾ ಮತ್ತು ಭೂಮಿಕಾ ಇಬ್ಬರೂ ಅಲ್ಲಿಗೆ ಓಡುತ್ತಾರೆ. ಅಲ್ಲಿ ಮನೆಯ ಮಹಡಿಯ ಮೇಲೆ ಸುಧಾಳ ತಾಯಿ ಭಾಗ್ಯಮ್ಮ ಹೋಗುತ್ತಿರುತ್ತಾರೆ. ಆಕೆ ಅಲ್ಲಿಂದ ಬೀಳಬಹುದು ಎಂಬ ಭಯ ಕಾಡುತ್ತದೆ. ಸುಧಾ ಮತ್ತು ಭೂಮಿಕಾ ಅಲ್ಲಿಗೆ ಓಡಿ ಬರುತ್ತಾರೆ.
(4 / 10)
ಭೂಮಿಕಾ ಮೆಲ್ಲಗೆ ಟೇರಸ್ ಮೇಲೆ ಹೋಗಿ ಭಾಗ್ಯಮ್ಮಳನ್ನು ಹಿಂದಿನಿಂದ ಹಿಡಿದುಕೊಳ್ಳುತ್ತಾಳೆ. ಭಾಗ್ಯಮ್ಮಳ ಮುಖ ನೋಡಿ ಆಶ್ಚರ್ಯಗೊಳ್ಳುತ್ತಾಳೆ. ಈಕೆ ಗೌತಮ್ ತಾಯಿ ಎಂಬ ಸತ್ಯ ಗೊತ್ತಾಗುತ್ತದೆ. ಸುಧಾ ಕೂಡ ಈ ಸಂಗತಿಯನ್ನು ಹೇಳುತ್ತಾಳೆ. ಇವರು ನಿಮ್ಮ ಅತ್ತೆ ಎಂದು ಹೇಳುತ್ತಾಳೆ.
(5 / 10)
ಭೂಮಿಕಾ ತನ್ನ ಅತ್ತೆಯ ಕಾಲಿಗೆ ಬಿದ್ದು ನಮಸ್ಕರಿಸುತ್ತಾಳೆ. ಈಗಲೇ ಈ ವಿಷಯ ಗೌತಮ್ ಅಣ್ಣನಿಗೆ ಹೇಳೋಣ ಎಂದು ಸುಧಾ ಹೇಳುತ್ತಾಳೆ. ಭೂಮಿಕಾ ಇಲ್ಲಿ ಬೇಡ, ನಿಮ್ಮ ಭೇಟಿ ದೇವಸ್ಥಾನದಲ್ಲಿ ಆಗಲಿ ಎಂದು ಕರೆದುಕೊಂಡು ಹೋಗುತ್ತಾಳೆ. ಪ್ರೋಮೊದಲ್ಲಿ ಇಷ್ಟು ತೋರಿಸಲಾಗಿದೆ. ಆದರೆ, ದೇವಾಲಯಕ್ಕೆ ಬಂದು ಗೌತಮ್ ತನ್ನ ತಾಯಿಯನ್ನು ಭೇಟಿಯಾಗಲು ಸಾಧ್ಯವೇ, ಇದರ ನಡುವೆ ಏನೆಲ್ಲ ಘಟನೆಗಳು ನಡೆಯಬಹುದು ಎಂದು ಪ್ರೇಕ್ಷಕರು ಸೋಷಿಯಲ್ ಮೀಡಿಯಾದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
(6 / 10)
"ಭೂಮಿಕಾ ಸೀದಾ ಮನೆಗೆ ಕರೆದುಕೊಂಡು ಹೋಗುವುದನ್ನು ಬಿಟ್ಟು ದೇವಸ್ಥಾನದಲ್ಲಿ ಒಂದಾಗಿ ಅಂತ ಹೇಳುತ್ತಿರುವುದು ಯಾಕೆ ಎಂದರೆ.... ಭೂಮಿಕ ಗೌತಮ್ ಅವರನ್ನು ಕರೆದುಕೊಂಡು ಬರುವ ಅಷ್ಟರಲ್ಲಿ ಸುಧಾ ಮತ್ತು ಅವರ ತಾಯಿ ಮಗುವನ್ನು ಜೈದೇವ್ ಅವರು ಎಸ್ಕೇಪ್ ಮಾಡಲಿ ಅನ್ನುವ ಉದ್ದೇಶದಿಂದ" ಎಂದು ಪ್ರೇಕ್ಷಕರು ಕಾಮೆಂಟ್ ಮಾಡಿದ್ದಾರೆ.
(7 / 10)
"ಭೂಮಿಕಾ ಕೋಮಾಕ್ಕೆ ಹೋಗಬಹುದು ಅನಿಸುತ್ತದೆ. ಅವಳಿಗೆ ಜ್ಞಾನ ಬರೋವಷ್ಟರಲ್ಲಿ 2 ವರ್ಷ ಆಗುತ್ತೆ. ಆಮೇಲೆ ಈ ಸೀರಿಯಲ್ ಮುಗಿಯುತ್ತೆ" ಎಂದೆಲ್ಲ ಪ್ರೇಕ್ಷಕರು ಪ್ರೋಮೊಗೆ ಕಾಮೆಂಟ್ ಮಾಡಿದ್ದಾರೆ.
(8 / 10)
"ಮುಂದಿನ ನಡೆ ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಎಲ್ಲಾ ಧಾರಾವಾಹಿಗಳಂತೆ ಇಲ್ಲಿ ಸಹ ದೇವಸ್ಥಾನಕ್ಕೆ ಹೋಗುವ ದಾರಿಯಲ್ಲಿ ಅಪಘಾತ ಮಾಡಿಸುತ್ತಾರೆ.." "ಮತ್ತೆ ಕಿಡ್ನಾಪ್ ಆಗಬಹುದು ಅನ್ಸುತ್ತೆ" "ಭೂಮಿಕಾ ನಿಮ್ಮ ಕೈ ಅಲ್ಲಿ ಫೋನ್ ಇದೆ ಅಲ್ವ, ಗೌತಮ್‌ಗೆ ತಕ್ಷಣ ಕಾಲ್ ಮಾಡಿ ವಿಷ್ಯ ತಿಳಿಸಬಹುದಿತ್ತು" ಎಂದು ಪ್ರೇಕ್ಷಕರು ಈ ಸೀರಿಯಲ್ ಮುಂದೆ ಏನಾಗಬಹುದು, ಏನು ಮಾಡಬಹುದಿತ್ತು ಎಂದು ತಿಳಿಸಿದ್ದಾರೆ.
(9 / 10)
"ಸುಧಾ ತಾಯಿಗೆ ಮನೆ ಒಳಗಡೆನೇ ಎದ್ದು ಓಡಾಡೋಕಾಗಲ್ಲ ಅಷ್ಟ್ರಲ್ಲಿ ಸ್ಟೆಪ್ಸ್ ಹತ್ತಿ ಟೆರೇಸ್ ಹೋಗ್ಬಿಟ್ರ... ಓಓಓ ದೇವರೇ..." "ಆದಷ್ಟು ಬೇಗ ಸರಿಯಾದ ರೀತಿಯಲ್ಲಿ ಅಮ್ಮ ಮಗ ಒಂದಾಗಲಿ , ಧಾರಾವಾಹಿ ಸುಖಾಂತ್ಯ ಕಾಣಲಿ , ಸುಖಾಸುಮ್ಮನೆ ಏನೆಲ್ಲಾ ಮಾಡಬೇಡಿ ಕಿಡ್ನಾಪ್ , ಅಪಘಾತ ಅಂತೆಲ್ಲಾ ಮಾಡಬೇಡಿ" ಎಂದು ಪ್ರೇಕ್ಷಕರು ಕಾಮೆಂಟ್ ಮಾಡಿದ್ದಾರೆ. ಒಟ್ಟಾರೆ ಈ ಸೀರಿಯಲ್ ಮುಂದೇನಾಗುತ್ತದೆ ಎಂಬ ಕುತೂಹಲ ಪ್ರೇಕ್ಷಕರಲ್ಲಿ ಹೆಚ್ಚಾಗಿರುವುದಂತೂ ಸತ್ಯ.
ಇತರ ಗ್ಯಾಲರಿಗಳು