Amruthadhaare: ಭೂಮಿಕಾ ಗರ್ಭಿಣಿಯೆಂಬ ಮಾಹಿತಿ ಲಕ್ಕಿ ಲಕ್ಷ್ಮಿಕಾಂತ್ ಕಿವಿಗೆ ಬಿತ್ತು, ಮುಂದೇನಾಗಬಹುದು? ವೀಕ್ಷಕರ ಊಹೆ ಹೀಗಿದೆ
- Amruthadhaare Kannada Serial today Episode: ಅಮೃತಧಾರೆ ಧಾರಾವಾಹಿಯಲ್ಲಿ ಭೂಮಿಕಾ ವಾಂತಿ ಮಾಡಿದ್ದಾರೆ. ಭೂಮಿಕಾ ಗರ್ಭಿಣಿಯಾಗಿರುವ ಖುಷಿಯಲ್ಲಿದ್ದಾರೆ. ಇದೇ ಸಮಯದಲ್ಲಿ ಲಕ್ಕಿ ಲಕ್ಷ್ಮಿಕಾಂತ್ ಈ ವಿಷಯ ಕೇಳಿಸಿಕೊಂಡಿದ್ದಾನೆ. ಇದೇ ಸಮಯದಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಪ್ರೇಕ್ಷಕರು ಮುಂದೇನಾಗಬಹುದು ಎಂದು ಊಹಿಸುತ್ತಿದ್ದಾರೆ.
- Amruthadhaare Kannada Serial today Episode: ಅಮೃತಧಾರೆ ಧಾರಾವಾಹಿಯಲ್ಲಿ ಭೂಮಿಕಾ ವಾಂತಿ ಮಾಡಿದ್ದಾರೆ. ಭೂಮಿಕಾ ಗರ್ಭಿಣಿಯಾಗಿರುವ ಖುಷಿಯಲ್ಲಿದ್ದಾರೆ. ಇದೇ ಸಮಯದಲ್ಲಿ ಲಕ್ಕಿ ಲಕ್ಷ್ಮಿಕಾಂತ್ ಈ ವಿಷಯ ಕೇಳಿಸಿಕೊಂಡಿದ್ದಾನೆ. ಇದೇ ಸಮಯದಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಪ್ರೇಕ್ಷಕರು ಮುಂದೇನಾಗಬಹುದು ಎಂದು ಊಹಿಸುತ್ತಿದ್ದಾರೆ.
(1 / 8)
ಅಮೃತಧಾರೆ ಧಾರಾವಾಹಿಯಲ್ಲಿ ಲಾಲಿಹಾಡು ಕೇಳಲಿದೆಯೇ? ಒಂದೆಡೆ ಮಲ್ಲಿ ತುಂಬು ಬಸುರಿ. ಆದರೆ, ಆಕೆ ಸದ್ಯ ಅಜ್ಜನ ಮನೆಯಲ್ಲಿದ್ದಾರೆ. ಆ ಪಾತ್ರ ಹಿಂತುರುಗಲು ಸಮಯ ಬೇಕಿದೆ. ಇದೇ ಸಮಯದಲ್ಲಿ ಭೂಮಿಕಾ ಗರ್ಭಿಣಿಯಾಗಿದ್ದಾರೆ. ಅಮೃತಧಾರೆ ಧಾರಾವಾಹಿಯಲ್ಲಿ ಭೂಮಿಕಾ ವಾಂತಿ ಮಾಡಿದ್ದಾರೆ. ಭೂಮಿಕಾ ಗರ್ಭಿಣಿಯಾಗಿರುವ ಖುಷಿಯಲ್ಲಿದ್ದಾರೆ. ಇದೇ ಸಮಯದಲ್ಲಿ ಲಕ್ಕಿ ಲಕ್ಷ್ಮಿಕಾಂತ್ ಈ ವಿಷಯ ಕೇಳಿಸಿಕೊಂಡಿದ್ದಾನೆ. ಇದೇ ಸಮಯದಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಪ್ರೇಕ್ಷಕರು ಮುಂದೇನಾಗಬಹುದು ಎಂದು ಊಹಿಸುತ್ತಿದ್ದಾರೆ.
(2 / 8)
ಅಮೃತಧಾರೆ ಧಾರಾವಾಹಿಯ ಇಂದಿನ ಸಂಚಿಕೆಯ ಪ್ರೊಮೊವನ್ನು ಜೀ ಕನ್ನಡ ವಾಹಿನಿ ಸೋಷಿಯಲ್ ಮೀಡಿಯಾಗಳಲ್ಲಿ ಬಿಡುಗಡೆ ಮಾಡಿದೆ. ಈ ಪ್ರೊಮೊದಲ್ಲಿ ಭೂಮಿಕಾ ವಾಮಿಟ್ ಮಾಡುವ ದೃಶ್ಯವಿದೆ. ಈ ಹಿಂದೆಯೂ ಒಂದೆರಡು ಬಾರಿ ಇದೇ ರೀತಿ ವಾಮಿಟ್ ಮಾಡಿದ್ದಾರೆ. ಈ ಮೂಲಕ ಈಕೆ ಗರ್ಭಿಣಿ ಎಂದು ಸೂಚ್ಯವಾಗಿ ತೋರಿಸಲಾಗಿದೆ.
(3 / 8)
ಸದ್ಯ ತಾನು ಗರ್ಭಿಣಿ ಎಂಬ ವಿಚಾರವನ್ನು ಭೂಮಿಕಾ, ಗೌತಮ್ ದಿವಾನ್‌ಗೆ ತಿಳಿಸಿಲ್ಲ. ಆದರೆ, ಈಕೆಯ ಬದಲಾದ ವರ್ತನೆ ನೋಡಿ ಅಜ್ಜಮ್ಮನಿಗೆ ಅನುಮಾನ ಬಂದಿದೆ. "ಇದು ಅದೇ" ಎಂದು ಹೇಳಿದ್ದಾರೆ.
(4 / 8)
ಭೂಮಿಕಾ ಮತ್ತು ಅಜ್ಜಿ ಮಾತನಾಡುವುದನ್ನು ಮರೆಯಲ್ಲಿ ಲಕ್ಕಿ ಲಕ್ಷ್ಮಿಕಾಂತ್ ಕೇಳಿಸಿಕೊಂಡಿದ್ದಾನೆ. ಈ ವಿಚಾರ ಅಕ್ಕನ ಕಿವಿಗೆ ಮುಟ್ಟಿಸಬೇಕು ಎಂದುಕೊಂಡಿದ್ದಾನೆ. "ಸಿಸ್ಟರ್.. ಸಿಸ್ಟರ್...." ಎಂದು ತಕ್ಷಣ ಈ ವಿಚಾರ ಅಕ್ಕ ಶಕುಂತಲಾದೇವಿ ಕಿವಿಗೆ ಲಕ್ಷ್ಮಿಕಾಂತ್ ಹಾಕಬಹುದು.
(5 / 8)
ಪ್ರೊಮೊದಲ್ಲಿ ಇಷ್ಟು ವಿಚಾರಗಳಿವೆ. ಇದೇ ಸಮಯದಲ್ಲಿ ಪ್ರೊಮೊಗೆ ಸಾಕಷ್ಟು ಜನರು ಕಾಮೆಂಟ್ ಮಾಡಿದ್ದಾರೆ. ಈ ಸೀರಿಯಲ್ ಮುಂದೆ ಏನಾಗಬಹುದು ಎಂದು ತಮಗೆ ತೋಚಿದಂತೆ ಕಾಮೆಂಟ್ ಮಾಡಿದ್ದಾರೆ. "ನಿರ್ದೇಶಕರು ಮಗುವಿನ ಅಬಾರ್ಷನ್ ಮಾಡಿಸಲು ಪ್ಲ್ಯಾನ್ ಮಾಡ್ತಾ ಇರಬಹುದು" ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ.
(6 / 8)
ವೀಕ್ಷಕರ ಕೆಲವು ಕಾಮೆಂಟ್‌ಗಳು ಈ ಮುಂದಿನಂತೆ ಇವೆ. "ಸದ್ಯಕ್ಕೆ ಮಕ್ಕಳು ಆಗಲ್ಲ , ಏಕೆಂದ್ರೆ ಮನೆಯ ಒಳಗೆ ಇರೋರು ಅಬಾಶನ್ ಆಗೋ ತರಹ ಮಾಡುತ್ತಾರೆ" "ಒರಿಜಿನಲ್ ಸ್ಟೋರಿ ಪ್ರಕಾರ ಕಥೆ ಬಂದರೆ ಮಗು ಆಗೋ ಟೈಂ ಗೆ ಇಬ್ಬರೂ ಜೊತೆಗೆ ಇರಲ್ಲ" "ಲಕ್ಕಿ ಲಕ್ಷ್ಮಿಕಾಂತ್ ಕೇಳಿಸಿಕೊಂಡೇ ಬಿಟ್ರು. sister sister ಅಂತಾ ಸೂಪರ್ acting ಮಾಡಿದ್ದಾರೆ" ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ.
(7 / 8)
"ಆ ಮಾಮ ಅಂತೂ ಎಲ್ಲಾ ಕಡೆ ಇರುತ್ತಾನೆ! ನಕ್ಷತ್ರಿಕ" "ಹೆಣ್ಣು ಮಗು ಆಗುತ್ತೆ, ಬಟ್ ಇಬ್ರೂ ಗಂಡ ಹೆಂಡತಿ ದೂರ ಆಗ್ತಾರೆ, ಹಿಂದಿ ಸೀರಿಯಲ್ ಡಬ್" "ಅಯ್ಯೋ ಆಗದೆ ಇರೋ ಮಗುಗೆ ಯಾಕವ್ವ ಇಷ್ಟೊಂದು ಖುಶಿ ಪಡ್ತೀಯ…ಸೀಮಂತ ಎಲ್ಲ ಆದ್ಮೇಲೆ ನೀನ್ ಹೊಟ್ಟೆ ಕರಗಿಸಿಬಿಡ್ತಾರೆ ನಿನ್ ಅತ್ತೆ ಬಾಮೈದ ಸೇರ್ಕೊಂಡು..ನಿಮ್ ಸೀರಿಯಲ್ ಡೈರೆಕ್ಟರಗೆ ಈ ಕಥೆ ಗೊತ್ತಿದ್ಯೋ ಇಲ್ವೋ ನಮಗಂತು ಗೊತ್ತು…" ಎಂದೆಲ್ಲ ಮುಂದೆ ಏನಾಗಬಹುದು ಎಂದು ಸೀರಿಯಲ್ ಪ್ರೇಕ್ಷಕರು ಅಂದಾಜಿಸಿದ್ದಾರೆ.
ಇತರ ಗ್ಯಾಲರಿಗಳು