Amruthadhaare: ಗೌತಮ್ ದಿವಾನ್‌ನ ಮುಗಿಸಲು ರಾಜೇಂದ್ರ ಭೂಪತಿ ಜತೆ ಕೈಜೋಡಿಸಿದ ಜೈದೇವ್, ಅಯ್ಯೋ ಪಾಪಿ ಎಂದ ಪ್ರೇಕ್ಷಕರು
- Amruthadhaare Serial Today Episode: ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್ ದಿವಾನ್ ವಿರುದ್ಧ ಸೇಡು ತೀರಿಸಿಕೊಳ್ಳಲು ರಾಜೇಂದ್ರ ಭೂಪತಿ ಖತರ್ನಾಕ್ ಪ್ಲ್ಯಾನ್ ಮಾಡಿದ್ದಾನೆ. ತನ್ನ ಬುಟ್ಟಿಗೆ ಜೈದೇವ್‌ನ ಬೀಳಿಸಿಕೊಂಡಿದ್ದಾನೆ. ಈ ಮೂಲಕ ಇಬ್ಬರು ವಿಲನ್‌ಗಳು ಒಂದಾಗಿದ್ದಾರೆ.
- Amruthadhaare Serial Today Episode: ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್ ದಿವಾನ್ ವಿರುದ್ಧ ಸೇಡು ತೀರಿಸಿಕೊಳ್ಳಲು ರಾಜೇಂದ್ರ ಭೂಪತಿ ಖತರ್ನಾಕ್ ಪ್ಲ್ಯಾನ್ ಮಾಡಿದ್ದಾನೆ. ತನ್ನ ಬುಟ್ಟಿಗೆ ಜೈದೇವ್‌ನ ಬೀಳಿಸಿಕೊಂಡಿದ್ದಾನೆ. ಈ ಮೂಲಕ ಇಬ್ಬರು ವಿಲನ್‌ಗಳು ಒಂದಾಗಿದ್ದಾರೆ.
(1 / 7)
Amruthadhaare Serial Today Episode: ಅಮೃತಧಾರೆ ಧಾರಾವಾಹಿಯ ಇಂದಿನ ಸಂಚಿಕೆಯ ಪ್ರಮೋವನ್ನು ಜೀ ಕನ್ನಡ ವಾಹಿನಿ ಬಿಡುಗಡೆ ಮಾಡಿದೆ. ಇದರಲ್ಲಿ ಗೌತಮ್ ದಿವಾನ್ ವಿರುದ್ಧ ಮಸಲತ್ತು ನಡೆಸುತ್ತಿರುವ ರಾಜೇಂದ್ರ ಭೂಪತಿಯು ಜೈದೇವ್‌ನನ್ನು ತನ್ನ ಕೆಲಸಕ್ಕೆ ಬಳಸಿಕೊಳ್ಳುವುದರ ಸೂಚನೆ ದೊರಕಿದೆ.
(2 / 7)
ರಾಜೇಂದ್ರ ಭೂಪತಿಯ ಮನೆಗೆ ಜೈದೇವ್ ಆಗಮಿಸಿದ್ದಾನೆ. "ಬರಲು ಹೇಳಿದ್ರಿ, ಏನು ವಿಷಯ" ಎಂದು ಕೇಳುತ್ತಾನೆ. "ಮನೆಯ ತನಕ ಬಂದಿದ್ದೀ. ಕೈ ಕೊಡಲು ಏನು" ಎಂದು ಷೇಕ್‌ಹ್ಯಾಂಡ್ ಮಾಡ್ತಾರೆ ಭೂಪತಿ.
(3 / 7)
"ನಿನಗೆ ನಿನ್ನ ಅಣ್ಣನ ಸೀಟ್ ಮೇಲೆ ಕಣ್ಣಿದೆ ಎಂದು ಗೊತ್ತಾಯ್ತು. ಹೊಡೆದ್ರೆ ಆನೆಯನ್ನೇ ಹೊಡೆಯಬೇಕು ಎಂದುಕೊಂಡವನು ನೀನು" ಎಂದು ರಾಜೇಂದ್ರ ಭೂಪತಿ ಹೇಳಿದಾಗ ಜೈದೇವ್‌ಗೆ ವಿಷಯ ಅರ್ಥವಾಗುತ್ತದೆ.
(4 / 7)
"ನಿನಗೆ ನಾನು ಸಪೋರ್ಟ್ ಮಾಡ್ತಿನಿ" ಎಂದು ರಾಜೇಂದ್ರ ಭೂಪತಿ ಹೇಳುತ್ತಾನೆ. ಇಬ್ಬರು ಮತ್ತೆ ಷೇಕ್ ಹ್ಯಾಂಡ್ ಮಾಡಿ ಹಗ್ ಮಾಡುತ್ತಾರೆ. ಈ ಮೂಲಕ ಎರಡು ವಿಲನ್‌ಗಳು ಒಂದಾಗಿದ್ದಾರೆ.
(5 / 7)
ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಈ ಪ್ರಮೋಗೆ ಪ್ರೇಕ್ಷಕರು ನಾನಾ ಬಗೆಯ ಕಾಮೆಂಟ್ ಮಾಡಿದ್ದಾರೆ. ಕೆಲವರು "ಚೆನ್ನಾಗಿರುವ ಸೀರಿಯಲ್‌ನ ಹಾಳು ಮಾಡಿಬಿಟ್ರಿ" ಎಂದಿದ್ದಾರೆ. ಇನ್ನು ಕೆಲವರು "ಈ ಸೀರಿಯಲ್ ಈಗ ಬೇರೆ ಲೆವೆಲ್‌ಗೆ ಹೋಗ್ತಿದೆ" ಎಂದಿದ್ದಾರೆ. "ಜೈದೇವ್ ಜತೆ ಮೈತ್ರಿ ಮಾಡಿಕೊಂಡರೆ ಸಕ್ಸಸ್ ಆಗದು" "ಎಲ್ಲದಕ್ಕೂ ಭೂಮಿಕಾ ಉತ್ತರ ನೀಡ್ತಾರೆ" ಎಂದೆಲ್ಲ ಪ್ರೇಕ್ಷಕರು ಕಾಮೆಂಟ್ ಮಾಡಿದ್ದಾರೆ.
(6 / 7)
ಕಳೆದ ಕೆಲವು ದಿನಗಳ ಹಿಂದೆ ಅಮೃತಧಾರೆ ಧಾರಾವಾಹಿಗೆ ರಾಜೇಂದ್ರ ಭೂಪತಿಯ ಎಂಟ್ರಿಯಾಗಿತ್ತು. ಡುಮ್ಮಸರ್‌ಗೂ ಭೂಪತಿಗೂ ಹಳೆಯ ದ್ವೇಷ. ಆ ಸೇಡು ತೀರಿಸಿಕೊಳ್ಳಲು ಇದೀಗ ಜೈದೇವ್‌ನ ಜತೆ ಮೈತ್ರಿ ಮಾಡಿಕೊಂಡಿದ್ದಾರೆ ಭೂಪತಿ.
(7 / 7)
ಇನ್ನೊಂದೆಡೆ ಶಕುಂತಲಾ ಗ್ಯಾಂಗ್‌ಗೆ ಮನೆಯಲ್ಲಿರುವ ಕೆಲಸದವಳು ಸುಧಾ ಎಂಬ ಸತ್ಯ ಗೊತ್ತಾಗಿದೆ. ಆಕೆಯ ಮೇಲೆ ಕಳ್ಳತನದ ಆರೋಪ ಹೊರಿಸಲು ಪ್ಲ್ಯಾನ್ ಮಾಡಿದ್ದಾರೆ. ನಂಬಿಕೆದ್ರೋಹವನ್ನು ಗೌತಮ್ ಸಹಿಸಿಕೊಳ್ಳುವುದಿಲ್ಲ ಎನ್ನುವ ಕಾರಣದಿಂದ ಈ ರೀತಿ ಮಾಡುತ್ತಾರೆ. ಹೀಗೆ, ಅಮೃತಧಾರೆ ಸೀರಿಯಲ್‌ನಲ್ಲಿ ಹೊಸ ಕಥೆಗಳು ಸೇರಿಕೊಂಡಿದ್ದು, ಸೀರಿಯಲ್ ಇನ್ನಷ್ಟು ಕಾಲ ಮುಂದುವರೆಯುವ ಸೂಚನೆ ದೊರಕಿದೆ.
ಇತರ ಗ್ಯಾಲರಿಗಳು