ಲಕ್ಷ್ಮೀ ನಿವಾಸವೂ ಅಲ್ಲ, ಪುಟ್ಟಕ್ಕನ ಮಕ್ಕಳು ಧಾರಾವಾಹಿಯೂ ಲೆಕ್ಕಕ್ಕಿಲ್ಲ, ಟಿಆರ್‌ಪಿಯಲ್ಲಿ ಅಮೃತಧಾರೆ ಸೀರಿಯಲ್ ಹೊಸ ದಾಖಲೆ
- Kannada Serial TRP: ಕನ್ನಡ ಕಿರುತೆರೆಯ ಟಿಆರ್‌ಪಿ ಲೆಕ್ಕಾಚಾರದಲ್ಲಿ ಅಚ್ಚರಿಯ ನಂಬರ್ ಹೊರಬಿದ್ದಿದೆ. ಯಾರೂ ಊಹೆ ಮಾಡದ ರೀತಿಯಲ್ಲಿ, ಅಮೃತಧಾರೆ ಸೀರಿಯಲ್ ಈ ಸಲ ಟಾಪ್ ಸ್ಥಾನಕ್ಕೆ ಬಂದು ನಿಂತಿದೆ. ಬರೋಬ್ಬರಿ 9.8 ಟಿಆರ್‌ಪಿ ಪಡೆದು, ಮೊದಲ ಸ್ಥಾನಕ್ಕೆ ಬಂದು ಕೂತಿದೆ. ಅಣ್ಣಯ್ಯನ ಓಟವೂ ಜೋರಾಗಿದೆ.
- Kannada Serial TRP: ಕನ್ನಡ ಕಿರುತೆರೆಯ ಟಿಆರ್‌ಪಿ ಲೆಕ್ಕಾಚಾರದಲ್ಲಿ ಅಚ್ಚರಿಯ ನಂಬರ್ ಹೊರಬಿದ್ದಿದೆ. ಯಾರೂ ಊಹೆ ಮಾಡದ ರೀತಿಯಲ್ಲಿ, ಅಮೃತಧಾರೆ ಸೀರಿಯಲ್ ಈ ಸಲ ಟಾಪ್ ಸ್ಥಾನಕ್ಕೆ ಬಂದು ನಿಂತಿದೆ. ಬರೋಬ್ಬರಿ 9.8 ಟಿಆರ್‌ಪಿ ಪಡೆದು, ಮೊದಲ ಸ್ಥಾನಕ್ಕೆ ಬಂದು ಕೂತಿದೆ. ಅಣ್ಣಯ್ಯನ ಓಟವೂ ಜೋರಾಗಿದೆ.
(1 / 12)
ಟಿಆರ್‌ಪಿ ರೇಟಿಂಗ್‌ನಲ್ಲಿ ಅಮೃತಧಾರೆ ಸೀರಿಯಲ್ ಹೊಸ ದಾಖಲೆ ಬರೆದಿದೆ. ಮಗದೊಮ್ಮೆ ಟಾಪ್ ನಂಬರ್ ಪಡೆದುಕೊಂಡು, ಮೊದಲ ಸ್ಥಾನದಲ್ಲಿ ಬಂದು ಕೂತಿದೆ. ಇಲ್ಲಿದೆ ಟಾಪ್ 10 ಸೀರಿಯಲ್‌ಗಳು.
(2 / 12)
ಅಮೃತಧಾರೆ ಸೀರಿಯಲ್ ಈ ಸಲ ಟಾಪ್ ಸ್ಥಾನಕ್ಕೆ ಬಂದು ನಿಂತಿದೆ. ಬರೋಬ್ಬರಿ 9.8 ಟಿಆರ್‌ಪಿ ಪಡೆದು, ಮೊದಲ ಸ್ಥಾನಕ್ಕೆ ಬಂದು ಕೂತಿದೆ.
(3 / 12)
ಜೀ ಕನ್ನಡದ ಮತ್ತೊಂದು ಸೀರಿಯಲ್ ಅಣ್ಣಯ್ಯ ಸಹ ಒಳ್ಳೆ ಟಿಆರ್ಪಿ ಪಡೆದು 2 ನೇ ಸ್ಥಾನಕ್ಕೆ ಲಗ್ಗೆ ಇಟ್ಟಿದೆ. 8.6 ಟಿಆರ್‌ಪಿ ಮೂಲಕ ಅಣ್ಣಯ್ಯ ಧಾರಾವಾಹಿ ಎರಡನೇ ಸ್ಥಾನಕ್ಕೆ ಬಂದಿದೆ. ಲಕ್ಷ್ಮೀ ನಿವಾಸ ಸೀರಿಯಲ್ ಅನ್ನೂ ಹಿಂದಿಕ್ಕಿದ್ದಾನೆ ಅಣ್ಣಯ್ಯ.
(4 / 12)
ಅದೇ ರೀತಿ ಈಗಾಗಲೇ ಮೊದಲ ಸ್ಥಾನದಲ್ಲಿಯೇ ಮುಂದುವರಿಯುತ್ತ ಬಂದಿದ್ದ, ಪುಟ್ಟಕ್ಕನ ಮಕ್ಕಳು ಸೀರಿಯಲ್ ಹಿಂದಿಕ್ಕಿದ್ದ ಲಕ್ಷ್ಮೀ ನಿವಾಸ, ಈ ವಾರ ಟಿಆರ್‌ಪಿಯಲ್ಲಿ ಕೊಂಚ ಮಂಕಾದಂತಿದೆ. ಮೊದಲ ಮತ್ತು ಎರಡನೇ ಸ್ಥಾನ ಕಳೆದುಕೊಂಡು, ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಅಂದರೆ, 8.1 ಟಿಆರ್‌ಪಿ ಪಡೆದಿದೆ.
(6 / 12)
ಮದುವೆ ವಿಚಾರವಾಗಿ ಶ್ರಾವಣಿ ಸುಬ್ರಮಣ್ಯ ಸೀರಿಯಲ್‌ನಲ್ಲಿ ರೋಚಕ ಬದಲಾವಣೆಗಳಾಗುತ್ತಿವೆ. ಆ ಕಾರಣಕ್ಕೂ ಕುತೂಹಲ ಕೆರಳಿಸಿರುವ ಈ ಸೀರಿಯಲ್ 6.9 ರೇಟಿಂಗ್ ಪಡೆದು ಐದನೇ ಸ್ಥಾನದಲ್ಲಿದೆ.
(7 / 12)
ಕಲರ್ಸ್ ಕನ್ನಡದ ನಾಲ್ಕು ಸೀರಿಯಲ್‌ಗಳು ಸಾಲುಗಟ್ಟಿ ಐದನೇ ಸ್ಥಾನದ ನಂತರ ಬಂದು ನಿಂತಿವೆ. ಭಾಗ್ಯಲಕ್ಷ್ಮೀ ಧಾರಾವಾಹಿ 53ನೇ ವಾರದ ಟಿಆರ್‌ಪಿ ರೇಟಿಂಗ್‌ನಲ್ಲಿ 6.8 ರೇಟಿಂಗ್ ಪಡೆದು ಆರನೇ ಸ್ಥಾನದಲ್ಲಿದೆ.
(8 / 12)
ಕಳೆದ ತಿಂಗಳು ಟಿಆರ್‌ಪಿಯಲ್ಲಿ ಮೊದಲ ಸ್ಥಾನ ಪಡೆದಿದ್ದ ಲಕ್ಷ್ಮೀ ಬಾರಮ್ಮಇದೀಗ 5.8 ಟಿಆರ್‌ಪಿ ಪಡೆದು ಏಳನೇ ಸ್ಥಾನದಲ್ಲಿದೆ.
(9 / 12)
ಕಲರ್ಸ್ ಕನ್ನಡದಲ್ಲಿ ಕಳೆದ ಎರಡು ವಾರಗಳ ಹಿಂದಷ್ಟೇ ಪ್ರಸಾರ ಆರಂಭಿಸಿದ, ನೂರು ಜನ್ಮಕೂ ಸೀರಿಯಲ್ ವೀಕ್ಷಕರಿಗೆ ಇಷ್ಟವಾಗುತ್ತಿದೆ. 5.5 ಟಿಆರ್‌ಪಿ ಮೂಲಕ ಎಂಟನೇ ಸ್ಥಾನದಲ್ಲಿದೆ.
ಇತರ ಗ್ಯಾಲರಿಗಳು