ನಟಿ ಛಾಯಾ ಸಿಂಗ್‌ಗೆ ಹುಟ್ಟುಹಬ್ಬದ ಸಂಭ್ರಮ; ಸಂಗಾತಿ ಹೇಗೆ ಇದ್ರೂ ಒಪ್ಪಿಕೊಳ್ಳಬೇಕು ಎಂದ ಅಮೃತಧಾರೆ ನಟಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ನಟಿ ಛಾಯಾ ಸಿಂಗ್‌ಗೆ ಹುಟ್ಟುಹಬ್ಬದ ಸಂಭ್ರಮ; ಸಂಗಾತಿ ಹೇಗೆ ಇದ್ರೂ ಒಪ್ಪಿಕೊಳ್ಳಬೇಕು ಎಂದ ಅಮೃತಧಾರೆ ನಟಿ

ನಟಿ ಛಾಯಾ ಸಿಂಗ್‌ಗೆ ಹುಟ್ಟುಹಬ್ಬದ ಸಂಭ್ರಮ; ಸಂಗಾತಿ ಹೇಗೆ ಇದ್ರೂ ಒಪ್ಪಿಕೊಳ್ಳಬೇಕು ಎಂದ ಅಮೃತಧಾರೆ ನಟಿ

ಕನ್ನಡದ ಜನಪ್ರಿಯ ಧಾರಾವಾಹಿ ಅಮೃತಧಾರೆಯಲ್ಲಿ ಭೂಮಿಕಾ ಪಾತ್ರದಲ್ಲಿ ಕಿರುತೆರೆ ಪ್ರೇಕ್ಷಕರ ಹೃದಯ ಗೆದ್ದಿರುವ ಛಾಯಾ ಸಿಂಗ್‌ಗೆ ಹುಟ್ಟುಹಬ್ಬದ ಸಂಭ್ರಮ. ಈ ಸಮಯದಲ್ಲಿ ಜೀ ಕನ್ನಡ ವಾಹಿನಿಯು ಸುಂದರವಾದ ವಿಡಿಯೋ ಮೂಲಕ ನಟಿಗೆ ಶುಭಾಶಯ ತಿಳಿಸಿದೆ.

ಛಾಯಾ ಸಿಂಗ್‌ಗೆ ವಯಸ್ಸೆಷ್ಟು?: 1981ರ ಮೇ 16ರಂದು ಜನಿಸಿದ ನಟಿ ಛಾಯಾ ಸಿಂಗ್‌ಗೆ ಈಗ 46 ವರ್ಷ ವಯಸ್ಸು ಎಂದರೆ ಯಾರೂ ನಂಬಲಿಕ್ಕಿಲ್ಲ. ಹೌದು, ಈಗಲೂ 20ರ ಹರೆಯದ ಸುಂದರಿಯರನ್ನು ನಾಚಿಸುವಂತೆ ಕಾಣಿಸುವ ನಟಿಗೆ 46 ವರ್ಷ ವಯಸ್ಸಾಗಿದೆ.
icon

(1 / 11)

ಅಮೃತಧಾರೆ ಸೀರಿಯಲ್‌ನಲ್ಲಿ ಶಕುಂತಲಾದೇವಿ ಹುಟ್ಟುಹಬ್ಬದ ಕಾರ್ಯಕ್ರಮ ನಡೆಯುತ್ತಿದೆ.‌ ಆದರೆ, ಹೊರಜಗತ್ತಿನಲ್ಲಿ ಇಂದು ಭೂಮಿಕಾ ಪಾತ್ರಧಾರಿ ಛಾಯಾ ಸಿಂಗ್‌ ಹುಟ್ಟುಹಬ್ಬ.
icon

(2 / 11)

ಜೀ ಕನ್ನಡ ವಾಹಿನಿ ಹಂಚಿಕೊಂಡ ವಿಡಿಯೋ ಆಕರ್ಷಕವಾಗಿದೆ. "ಪ್ರತಿಯೊಬ್ಬರ ಜೀವನದಲ್ಲಿ ಒಬ್ಬ ಸಂಗಾತಿ ಬಂದೇ ಬರುತ್ತಾನೆ.  ಅವರು ಹೇಗೆ ಇದ್ದರೂ ಹಾಗೆಯೇ ಒಪ್ಪಿಕೊಂಡರೆ ಗಾಢವಾಗಿ ಪ್ರೀತಿಸ್ತಾರೆ" ಎಂದು ಭೂಮಿಕಾಳ ಧ್ವನಿ ಈ ವಿಡಿಯೋದಲ್ಲಿ ಕೇಳಿಸುತ್ತದೆ.
icon

(3 / 11)

ಹೀಗೆ ಆರಂಭವಾಗುವ ವಿಡಿಯೋ ಬಳಿಕ ಛಾಯಾ ಸಿಂಗ್‌ ಅವರ ಅಮೃತಧಾರೆ ಧಾರಾವಾಹಿಯ ಜರ್ನಿಯ ಝಲಕ್‌ಗಳನ್ನು ತೋರಿಸಿದೆ.
icon

(4 / 11)

ರವಿಚಂದ್ರನ್‌ ಅವರಿಂದ ಜೀ ಕನ್ನಡ ಕುಟುಂಬ ಅವಾರ್ಡ್‌ ಪಡೆಯುವ ಕ್ಷಣಗಳನ್ನೂ ಈ ವಿಡಿಯೋ ತೋರಿಸಿದೆ.
icon

(5 / 11)

'ಅಮೃತಧಾರೆ' ಧಾರಾವಾಹಿಯ ನಾಯಕಿ ಭೂಮಿಕಾ ಪಾತ್ರದಲ್ಲಿ ಅಭಿನಯಿಸುತ್ತಿರುವ ನಟಿ ಛಾಯಾ ಸಿಂಗ್ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು! ಎಂದು ಕ್ಯಾಪ್ಷನ್‌ ಜತೆ ಈ ವಿಡಿಯೋ ಹಂಚಿಕೊಳ್ಳಲಾಗಿದೆ.
icon

(6 / 11)

ಈ ವಿಡಿಯೋಗೆ ಭೂಮಿಕಾ/ಛಾಯಾಸಿಂಗ್‌ ಅಭಿಮಾನಿಗಳು ಹುಟ್ಟುಹಬ್ಬದ ಶುಭಾಶಯಗಳ ಸುರಿಮಳೆಯನ್ನೇ ಸುರಿಸಿದ್ದಾರೆ.
icon

(7 / 11)

ಕನ್ನಡದ ಜನಪ್ರಿಯ ಧಾರಾವಾಹಿ ಅಮೃತಧಾರೆಯಲ್ಲಿ ಭೂಮಿಕಾಳಾಗಿ ಕಿರುತೆರೆ ವೀಕ್ಷಕರ ಹೃದಯ ಕದ್ದಿರುವ ನಟಿ ಛಾಯಾ ಸಿಂಗ್‌ ಅವರ ಪತಿ ಯಾರು ಎಂದಾಗ ಗೌತಮ್‌ ದಿವಾನ್‌ ನೆನಪು ಬರಬಹುದು. ಆದರೆ, ಛಾಯಾ ಸಿಂಗ್‌ರನ್ನು ರಿಯಲ್‌  ಆಗಿ ಪ್ರೀತಿಸುವ ಪತಿ ಬೇರೆ ಇದ್ದಾರೆ/
icon

(8 / 11)

ತಮಿಳು ನಟ ಕೃಷ್ಣ ಅವರು ಛಾಯಾ ಸಿಂಗ್‌ ಅವರ ಪತಿ. ಕೆಲಸದ ಒತ್ತಡದಿಂದ ವರ್ಷಕ್ಕೆ ಒಂದೆರಡು ಬಾರಿ ಇವರು ಭೇಟಿಯಾಗುತ್ತಾರಂತೆ.
icon

(9 / 11)

ನಟಿ ಛಾಯಾ ಸಿಂಗ್‌ ಮತ್ತು ಕೃಷ್ಣಾ ಅವರದ್ದು ಲವ್‌ ಸ್ಟೋರಿ. ಇವರಿಬ್ಬರು 2010 ರಲ್ಲಿ ಬಿಡುಗಡೆಯಾಗಿದ್ದ ಅನಂತಪುರಥು ವೀಡು ಎಂಬ ಸಿನಿಮಾದಲ್ಲಿ ಜತೆಯಾಗಿ ನಟಿಸಿದ್ದರು. ಛಾಯಾ ಸಿಂಗ್‌ ನಾಯಕಿ ಪಾತ್ರದಲ್ಲಿ ನಟಿಸಿದ್ದರು. ಕೃಷ್ಣಾ ಅವರು ವಿಲನ್‌ ಆಗಿದ್ದರು.
icon

(10 / 11)

ಮೂಲತಃ ಕೃಷ್ಣ ಅವರು ದೆಹಲಿಯವರು. ಛಾಯಾ ಸಿಂಗ್‌ ನಮ್ಮ ಬೆಂಗಳೂರಿನಲ್ಲಿ ಬೆಳೆದವರು.  ಅನಂತಪುರಥು ವೀಡು ಸಿನಿಮಾದಲ್ಲಿ ನಟಿಸುವ ಸಮಯದಲ್ಲಿ ಇವರಿಬ್ಬರು ಆರಂಭದಲ್ಲಿ ಪರಸ್ಪರ ಮಾತನಾಡುತ್ತ ಇರಲಿಲ್ಲ. ಕೃಷ್ಣ ಸೆಟ್‌ನಲ್ಲಿ ಪುಸ್ತಕ ಓದುವುದನ್ನು ಛಾಯಾ ಗಮನಿಸಿದ್ದರು. ಇವರು ಪುಸ್ತಕ ಕೇಳಿದರು. ಹೀಗೆ ಮೊದಲ ಮಾತು ಆರಂಭವಾಗಿತ್ತು.  ಇವಿಷ್ಟು ಛಾಯಾ ಸಿಂಗ್‌ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಹಂಚಿಕೊಂಡ ವಿವರ. ಅಮೃತಧಾರೆಯ ಪ್ರತಿಯೊಂದು ಅಪ್‌ಡೇಟ್‌ಗಳನ್ನು ಇಲ್ಲಿ ಓದಿ.
icon

(11 / 11)

Praveen Chandra B

TwittereMail
ಪ್ರವೀಣ್ ಚಂದ್ರ ಪುತ್ತೂರು: 'ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ'ದಲ್ಲಿ ಸಹಾಯಕ ಸುದ್ದಿ ಸಂಪಾದಕ. ಒನ್‌ ಇಂಡಿಯಾ, ವಿಜಯ ಕರ್ನಾಟಕದಲ್ಲಿ ಒಟ್ಟು 16 ವರ್ಷಗಳ ಅನುಭವ. ಆನ್‌ಲೈನ್‌ ಪತ್ರಿಕೋದ್ಯಮದಲ್ಲಿ ಎತ್ತರದ ಸಾಧನೆ ಮಾಡುವ ಕನಸು. ಡಿಜಿಟಲ್‌ ಜಗತ್ತಿನಲ್ಲಿ ಹೊಸತನ್ನು ಕಲಿಯುವ ಆಸಕ್ತಿ. ಮನರಂಜನೆ, ಶಿಕ್ಷಣ, ಉದ್ಯೋಗ, ತಂತ್ರಜ್ಞಾನ, ವಾಣಿಜ್ಯ, ಕರ್ನಾಟಕ, ದೇಶ- ವಿದೇಶ, ಸಿನಿಮಾ, ಷೇರುಪೇಟೆ, ಜೀವನಶೈಲಿ... ಹಲವು ವಿಚಾರಗಳ ಬಗ್ಗೆ ತಳಸ್ಪರ್ಶಿಯಾಗಿ ಬರೆಯಬಲ್ಲರು. ಎಸ್‌ಇಒ ತಂತ್ರಗಳನ್ನು ಪತ್ರಿಕೋದ್ಯಮದ ಹದಕ್ಕೆ ಪಳಗಿಸುವ ಸಾಮರ್ಥ್ಯ ರೂಢಿಸಿಕೊಂಡವರು. ಇಮೇಲ್: praveen.chandra@htdigital.in

ಇತರ ಗ್ಯಾಲರಿಗಳು