Amruthadhaare: ಮಿತಿಮೀರಿದ ಜೀವನ್‌ನ ದುರ್ವರ್ತನೆ, ಗಂಡನ ಮನೆಬಿಟ್ಟು ತವರಿಗೆ ಮಹಿಮಾ ಆಗಮನ; ಅಮೃತಧಾರೆಯಲ್ಲಿ ಹೊಸ ಟ್ವಿಸ್ಟ್
- Amruthadhaare serial: ಜೀಕನ್ನಡ ವಾಹಿನಿಯು ಅಮೃತಧಾರೆ ಧಾರಾವಾಹಿಯ ಹೊಸ ಪ್ರೊಮೊ ಬಿಡುಗಡೆ ಮಾಡಿದೆ. ಇದರಲ್ಲಿ ಮಹಿಮಾ ಗಂಡನ ಜತೆ ಮನಸ್ತಾಪದಿಂದ ತವರುಮನೆಗೆ ಆಗಮಿಸುವ ಅಚ್ಚರಿಯ ದೃಶ್ಯವಿದೆ. ಈ ಮೂಲಕ ಮಹಿಮಾ ಗೌತಮ್ ಮನೆಗೆ ಶಿಫ್ಟ್ ಆಗಿದ್ದಾರೆ. ಮುಂದಿನ ಹೊಸ ತಿರುವುಗಳಿಗೆ ಇದು ನಾಂದಿಯಾಡುವ ಸೂಚನೆ ಇದೆ.
- Amruthadhaare serial: ಜೀಕನ್ನಡ ವಾಹಿನಿಯು ಅಮೃತಧಾರೆ ಧಾರಾವಾಹಿಯ ಹೊಸ ಪ್ರೊಮೊ ಬಿಡುಗಡೆ ಮಾಡಿದೆ. ಇದರಲ್ಲಿ ಮಹಿಮಾ ಗಂಡನ ಜತೆ ಮನಸ್ತಾಪದಿಂದ ತವರುಮನೆಗೆ ಆಗಮಿಸುವ ಅಚ್ಚರಿಯ ದೃಶ್ಯವಿದೆ. ಈ ಮೂಲಕ ಮಹಿಮಾ ಗೌತಮ್ ಮನೆಗೆ ಶಿಫ್ಟ್ ಆಗಿದ್ದಾರೆ. ಮುಂದಿನ ಹೊಸ ತಿರುವುಗಳಿಗೆ ಇದು ನಾಂದಿಯಾಡುವ ಸೂಚನೆ ಇದೆ.
(1 / 12)
Amruthadhaare serial: ಜೀಕನ್ನಡ ವಾಹಿನಿಯು ಅಮೃತಧಾರೆ ಧಾರಾವಾಹಿಯ ಹೊಸ ಪ್ರೊಮೊ ಬಿಡುಗಡೆ ಮಾಡಿದೆ. ಮನೆ ಕಟ್ಟಿರುವ ಖುಷಿಯಲ್ಲಿರುವ ಜೀವನ್‌ನ ಇನ್ನೊಂದು ಮುಖ ಬಹಿರಂಗವಾಗಿದೆ. ಮಹಿಮಾಳ ಜತೆ ಕೆಟ್ಟದ್ದಾಗಿ ವರ್ತಿಸುತ್ತಾನೆ. ಈತನ ಅಹಂ, ಕೊಬ್ಬು ನೋಡಿ ಮಹಿಮಾ ರೋಸಿದ್ದಾಳೆ. ಬನ್ನಿ ಈ ಹೊಸ ಅಧ್ಯಾಯದಲ್ಲಿ ಏನೆಲ್ಲ ನಡೆಯಲಿದೆ ಎಂದು ನೋಡೋಣ.
(2 / 12)
"ಇಲ್ಲಿ ನೋಡು ಫೋಟೋ ಎಷ್ಟು ಲೈವ್ಲಿಯಾಗಿದೆ" ಎಂದು ಜೀವ ಹೇಳುತ್ತಾನೆ. "ಫೋಟೋ ಲೈವ್ಲಿ ಆಗಿದ್ರೆ ಏನು ಬಂತು. ಲೈಫ್ ಲೈವ್ಲಿಯಾಗಿರಬೇಕು" ಎಂದು ಮಹಿಮಾ ಹೇಳುತ್ತಾಳೆ. ಇಲ್ಲಿ ಜೀವನ್ ಗೃಹ ಪ್ರವೇಶದ ಫೋಟೋಗಳನ್ನು ನೋಡಿ ಸಂಭ್ರಮಿಸುತ್ತಾ ಇದ್ದಾನೆ. ಆದರೆ, ಮಹಿಮಾಳಿಗೆ ಈತನ ಬದಲಾದ ವರ್ತನೆ ಇಷ್ಟವಾಗಿಲ್ಲ.
(3 / 12)
"ಏನು ಹೇಳ್ತಾ ಇದ್ದಿಯಮ್ಮ ನೀನು. ನಾವು ನಮ್ಮ ಹೊಸ ಮನೆಗೆ ಬಂದಿದ್ದೇವೆ. ನಮ್ಮ ಬಗ್ಗೆ ನಮಗೆ ಪ್ರೌಡ್ ಫೀಲಿಂಗ್ ಇರಬೇಕು" ಎಂದು ಜೀವನ್ ಹೇಳುತ್ತಾನೆ. ಆತನಿಗೆ ತನ್ನ ಸಂಪಾದನೆಯಿಂದ ಮನೆ ಕಟ್ಟಿರೋ ಖುಷಿ. ಜತೆಗೆ ಅಹಂ ಕೂಡ ಇದೆ.
(4 / 12)
"ಕಟ್ಟಿರುವ ಈ ಮನೆಗೆ ತಾಜ್ ಮಹಲ್ಲೇ ಪರ್ಚೇಸ್ ಮಾಡಿದಂತೆ ಮಾಡ್ತಾ ಇದ್ದೀ" ಎಂದು ಮಹಿಮಾ ಹೇಳುತ್ತಾಳೆ. ಆಕೆಗೆ ಇಂತಹ ಆಡಂಬರ ಬೇಡ. ಪ್ರೀತಿಸುವ ಗಂಡ ಬೇಕು. ಆದರೆ, ಮೊದಲಿನ ಜೀವ ಕಾಣೆಯಾದ ಫೀಲಿಂಗ್ ಇದೆ.
(5 / 12)
"ಆದರೆ, ಇದು ನನಗೆ ತಾಜ್ ಮಹಲ್ಲೇ, ಬಡವರ ಮಕ್ಕಳು ಬೆಳೆದರೆ ನಿಮ್ಮಂತಹ ಶ್ರೀಮಂತರಿಗೆ ಒಂಥರ ಉರಿ ಅಲ್ವಾ?" ಎಂದು ಜೀವನ್ ಹೇಳುತ್ತಾನೆ. ಈ ಮೂಲಕ ಇವರಿಬ್ಬರ ನಡುವೆ ಬಿರುಕು ಕಾಣಿಸಿಕೊಂಡಿದೆ.
(6 / 12)
"ಜೀವ ಏನು ಹೇಳ್ತಾ ಇದ್ದೀಯಾ ನೀನು, ತಲೆಗಿಲೆ ಕೆಟ್ಟಿದ್ಯಾ ನಿನಗೆ" ಎಂದು ಮಹಿಮಾ ಕೇಳುತ್ತಾಳೆ. ಶ್ರೀಮಂತಿಕೆಯನ್ನು ಬಿಟ್ಟು ಈತನ ಜತೆ ಬದುಕಿದ್ದರೂ ಆತನ ಮನಸ್ಸಲ್ಲಿ ಇಂತಹ ಅಭಿಪ್ರಾಯ ಇರುವುದನ್ನು ಕೇಳಿ ಅವಳಿಗೆ ಸಹಿಸಲಾಗಿಲ್ಲ.
(7 / 12)
"ಜಸ್ಟ್ ಷಟ್‌ಅಪ್. ಯಾರಿಗೆ ತಲೆ ಕೆಟ್ಟಿರುವುದು. ನನ್ನನ್ನು ಕಿಂಡಲ್ ಮಾಡ್ತಾ ಇದ್ದೀಯ. ನೀನು ನನ್ನ ಹಂಗಿನಲ್ಲಿ ಇದ್ದಿಯಾ. ಮರಿಬೇಡ" ಎಂದು ಜೀವನ್ ಆಕ್ರೋಶದಿಂದ ಬೊಬ್ಬೆ ಹೊಡೆಯುತ್ತಾನೆ.
(8 / 12)
ತಕ್ಷಣ ಮಹಿಮಾ ಅಲ್ಲಿಂದ ಹೋಗುತ್ತಾಳೆ. ಲಗೇಜ್ ಪ್ಯಾಕ್ ಮಾಡುತ್ತಾಳೆ. "ದಯವಿಟ್ಟು ನನ್ನನ್ನು ನೀವಿಬ್ಬರು ಕ್ಷಮಿಸಿ ಬಿಡಿ. ನನಗೆ ಈ ಮನೆಯಲ್ಲಿ ಇರಲು ಆಗುತ್ತಿಲ್ಲ" ಎಂದು ಮಹಿಮಾ ತನ್ನ ಅತ್ತೆಮಾವನ ಕ್ಷಮೆ ಕೇಳಿ ಮನೆಯಿಂದ ಹೋಗುತ್ತಾಳೆ.
(9 / 12)
ಮಹಿಮಾ ಗೌತಮ್ ಮನೆಗೆ ಅಂದರೆ ತನ್ನ ತವರಿಗೆ ಬಂದಿದ್ದಾಳೆ. "ಅರೇ ಮಹೀ" ಎಂದು ಎಲ್ಲರೂ ಖುಷಿಯಾಗುತ್ತಾರೆ. ಗೌತಮ್, ಭೂಮಿಕಾ ಪ್ರೀತಿಯಿಂದ ಅಪ್ಪಿಕೊಳ್ಳುತ್ತಾರೆ.
(10 / 12)
"ಯಾಕೆ ಏನಾಯ್ತಮ್ಮ" ಎಂದು ಗೌತಮ್ ಕೇಳುತ್ತಾರೆ. "ಏನಿಲ್ಲಣ್ಣ ಐ ಆಮ್ ಫೈನ್ ಎನ್ನುತ್ತಾಳೆ ಮಹಿಮಾ. ಎಲ್ಲರ ಮುಖದಲ್ಲಿ ಒಂದು ಅನುಮಾನ ಮೂಡಿದೆ. ಜೀವನ್ ಜತೆ ಜಗಳವಾಗಿದೆ ಎಂದು ಎಲ್ಲರೂ ಅರ್ಥ ಮಾಡಿಕೊಳ್ಳುತ್ತಾರೆ.
(11 / 12)
ಜೀ ಕನ್ನಡ ವಾಹಿನಿ ಬಿಡುಗಡೆ ಮಾಡಿರುವ ಪ್ರೊಮೊದಲ್ಲಿ ಇಷ್ಟು ವಿವರಗಳಿವೆ. ಈ ಸೀರಿಯಲ್‌ನಲ್ಲಿ ಈಗ ಹೊಸ ಕಥೆಗಳು ಬೆಳೆಯುತ್ತಿವೆ. ಒಂದಿಷ್ಟು ಹೊಸ ಅಧ್ಯಾಯಗಳು ಸೇರ್ಪಡೆಗೊಳ್ಳುತ್ತಿವೆ. ಮಹಿಮಾ ಕೂಡ ಈ ಮನೆಗೆ ಬಂದಿರುವುದರಿಂದ ಈ ಮನೆಯಲ್ಲಿ ನಡೆಯುವ ಮುಂದಿನ ಘಟನೆಗಳಿಗೆ ಭೂಮಿಕಾಳಿಗೆ ಮಹಿಮಾಳ ಬೆಂಬಲ ದೊರಕುವ ಸಾಧ್ಯತೆ ಇದೆ. ಇದೇ ಸಮಯದಲ್ಲಿ ಶಕುಂತಲಾ ಟೀಮ್‌ಗೆ ಈಕೆ ಕಹಿ ಗುಳಿಗೆಯಾಗುವ ಸೂಚನೆಯಿದೆ.
ಇತರ ಗ್ಯಾಲರಿಗಳು