Amruthadhaare: ಭಾಗ್ಯಮ್ಮಳ ಮನೆಗೆ ಬೆಂಕಿ, ದೊಡ್ಡಮ್ಮನ ಕೊಲ್ಲುವ ಜೈದೇವ್ ಪ್ರಯತ್ನ ವಿಫಲ, ಗೌತಮ್‌ಗೆ ಶುಭಸುದ್ದಿ- ಅಮೃತಧಾರೆ ಧಾರಾವಾಹಿ
- Amruthadhaare serial today episode: ಅಮೃತಧಾರೆ ಧಾರಾವಾಹಿಯ ಇಂದಿನ ಸಂಚಿಕೆಯಲ್ಲಿ ಅನೇಕ ಘಟನೆಗಳು ನಡೆಯಲಿವೆ. ಒಂದೆಡೆ ಜೈದೇವ್ ತನ್ನ ದೊಡ್ಡಮ್ಮ ಭಾಗ್ಯಮ್ಮನ ಮನೆಗೆ ಬೆಂಕಿ ಹಚ್ಚಿದ್ದಾನೆ. ಇನ್ನೊಂದೆಡೆ ಗೌತಮ್‌ಗೆ ಇನ್‌ಸ್ಪೆಕ್ಟರ್ ಗುಡ್‌ನ್ಯೂಸ್ ನೀಡಿದ್ದಾರೆ.
- Amruthadhaare serial today episode: ಅಮೃತಧಾರೆ ಧಾರಾವಾಹಿಯ ಇಂದಿನ ಸಂಚಿಕೆಯಲ್ಲಿ ಅನೇಕ ಘಟನೆಗಳು ನಡೆಯಲಿವೆ. ಒಂದೆಡೆ ಜೈದೇವ್ ತನ್ನ ದೊಡ್ಡಮ್ಮ ಭಾಗ್ಯಮ್ಮನ ಮನೆಗೆ ಬೆಂಕಿ ಹಚ್ಚಿದ್ದಾನೆ. ಇನ್ನೊಂದೆಡೆ ಗೌತಮ್‌ಗೆ ಇನ್‌ಸ್ಪೆಕ್ಟರ್ ಗುಡ್‌ನ್ಯೂಸ್ ನೀಡಿದ್ದಾರೆ.
(1 / 13)
Amruthadhaare serial today episode: ಒಂದು ಕಡೆ ಗೌತಮ್ ತಾಯಿ ಭಾಗ್ಯಮ್ಮ ಮತ್ತು ತಂಗಿ ಸುಧಾಳನ್ನು ಕೊಲ್ಲಲು ಜೈದೇವ್ ಗ್ಯಾಂಗ್ ಪ್ರಯತ್ನಿಸುತ್ತಿದೆ. ಶಕುಂತಲಾ ಗ್ಯಾಂಗ್ ಇವರಿಬ್ಬರನ್ನು ಸಾಕಷ್ಟು ಸಮಯದಿಂದ ಹುಡುಕಾಟ ನಡೆಸುತ್ತಿತ್ತು. ತನ್ನ ದೊಡ್ಡಮ್ಮನ ಕೊನೆಗೊಳಿಸಲು ಸ್ವತಃ ಜೈದೇವ್ ಫೀಲ್ಡ್‌ಗೆ ಇಳಿದಿದ್ದ.
(2 / 13)
ಜೈದೇವ್ ಪ್ಲ್ಯಾನ್‌ನಂತೆ ಎಲ್ಲರೂ ಮನೆಮನೆ ಹುಡುಕಿದ್ದಾರೆ. ಇಂತಹ ಸಮಯದಲ್ಲಿ ಮನೆಯೊಂದರಲ್ಲಿ ಭಾಗ್ಯಮ್ಮ ಇರುವ ಸೂಚನೆ ದೊರಕಿತ್ತು. ಮನೆಯೊಳಗೆ ಭಾಗ್ಯಮ್ಮ ಇರುವುದು ಖಚಿತವಾಗಿತ್ತು. ರಾತ್ರಿ ಮನೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಜೈದೇವ್ ಪ್ಲ್ಯಾನ್ ಮಾಡಿದ್ದಾನೆ.
(3 / 13)
ತಾನು ಅಂದುಕೊಂಡಂತೆ ಭಾಗ್ಯಮ್ಮ ಮತ್ತು ಸುಧಾ ಮನೆಯಲ್ಲಿದ್ದಾರೆ ಎಂದು ರಾತ್ರಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಮನೆಯೊಳಗೆ ಎಲ್ಲರೂ ಸುಟ್ಟು ಹೋಗಿರುತ್ತಾರೆ ಎಂದು ಜೈದೇವ್ ಖುಷಿ ಪಟ್ಟಿದ್ದಾನೆ. ಆದರೆ, ಆ ಸಮಯದಲ್ಲಿ ಮನೆಯೊಳಗೆ ಭಾಗ್ಯಮ್ಮ ಇರಲಿಲ್ಲ ಎಂಬ ಮಾಹಿತಿ ದೊರಕಿದೆ.
(4 / 13)
ಹೆಲ್ತ್ ಚೆಕಪ್‌ಗೆ ಭಾಗ್ಯಮ್ಮಳನ್ನು ಅದೇ ರಾತ್ರಿ ಸುಧಾ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಹೀಗಾಗಿ, ಮನೆಯೊಳಗೆ ಬೆಂಕಿಗೆ ಆಹುತಿಯಾಗುವುದು ತಪ್ಪಿದೆ. ಭಾಗ್ಯಮ್ಮ, ಸುಧಾ ಮತ್ತು ಮಗು ಸೇಫ್ ಆಗಿದೆ.
(5 / 13)
ಇವರಿಬ್ಬರನ್ನು ಸಾಯಿಸಲು ಯತ್ನಿಸಿದ ಜೈದೇವ್‌ಗೆ ಈ ಬಾರಿಯೂ ಸೋಲಾಗಿದೆ. ಇದೇ ಸಮಯದಲ್ಲಿ ಗೌತಮ್‌ಗೆ ಶುಭ ಸುದ್ದಿಯೊಂದು ದೊರಕಿದೆ.
(6 / 13)
ಇನ್‌ಸ್ಪೆಕ್ಟರ್ ಗೌತಮ್‌ಗೆ ಫೋನ್ ಮಾಡಿದ್ದಾರೆ. ನಿಮ್ಮ ತಾಯಿ ಮತ್ತು ತಂಗಿಯ ಬಗ್ಗೆ ಗೊತ್ತಾಗಿದೆ ಎನ್ನುತ್ತಾರೆ.
(7 / 13)
ನಿಮ್ಮ ತಾಯಿ ಮತ್ತು ತಂಗಿಯ ಬಗ್ಗೆ ಗೊತ್ತಿರುವವರು ಸಿಕ್ಕಿದ್ದಾರೆ. ಸಂಜೆಯೊಳಗೆ ಬರ್ತೇವೆ ಎಂದು ಪೊಲೀಸ್ ಮಾಹಿತಿ ನೀಡಿದ್ದಾರೆ. ಈ ಸುದ್ದಿ ಕೇಳಿ ಗೌತಮ್ ಖುಷಿಯಾಗಿದ್ದಾರೆ.
(8 / 13)
ಅಮ್ಮ ಮತ್ತು ತಂಗಿ ಬರುತ್ತಿದ್ದಾರೆ ಎಂದು ಖುಷಿಯಿಂದ ಭೂಮಿಕಾಳಲ್ಲಿ ಹೇಳಿದ್ದಾರೆ. ಇಬ್ಬರೂ ಸಂಭ್ರಮಿಸಿದ್ದಾರೆ. ಈ ಸುದ್ದಿಯನ್ನು ಶಕುಂತಲಾ ದೇವಿಗೂ ಹೇಳಿದ್ದಾರೆ. ಆಕೆಯ ನಾಟಕ ಬಯಲಾಗುವ ಸಮಯ ಹತ್ತಿರ ಬಂದಂತೆ ಇದೆ.
(9 / 13)
ಅಮೃತಧಾರೆ ಸೀರಿಯಲ್ ಶೀಘ್ರದಲ್ಲಿ ಮುಗಿಯುತ್ತಾ? ಎಲ್ಲಾದರೂ ಗೌತಮ್‌ಗೆ ಅಮ್ಮ ಮತ್ತು ತಂಗಿ ಸಿಕ್ಕರೆ ಸೀರಿಯಲ್ ತಾರ್ಕಿಕವಾಗಿ ಅಂತ್ಯ ಕಂಡಂತೆ. ಶಕುಂತಲಾ ದೇವಿ ಗ್ಯಾಂಗ್‌ನ ಬಣ್ಣ ಒಂದೊಂದಾಗಿ ಬಯಲಾಗುತ್ತ ಸಾಗಲಿದೆ. ಕೆಲವೇ ತಿಂಗಳಲ್ಲಿ ಸೀರಿಯಲ್ ಕೊನೆಗೊಳ್ಳಲಿದೆ.
(10 / 13)
ಆದರೆ, ಅಮೃತಧಾರೆ ಜನಪ್ರಿಯ ಸೀರಿಯಲ್. ಇದನ್ನು ಅಷ್ಟು ಸುಲಭವಾಗಿ ಮುಗಿಸಲು ನಿರ್ದೇಶಕರಿಗೆ ಮನಸು ಬಾರದು. ಹೀಗಾಗಿ, ಭಾಗ್ಯಮ್ಮಳ ಎಪಿಸೋಡ್ ಸಾಕಷ್ಟು ಮುಂದುವರೆಯಬಹುದು ಅಥವಾ ಇನ್ನೇನಾದರೂ ಹೊಸ ಟ್ವಿಸ್ಟ್ ಕಾಣಿಸಿಕೊಳ್ಳಬಹುದು.
(11 / 13)
ಈ ಪ್ರಮೋಗೆ ಸಾಕಷ್ಟು ಜನರು ಕಾಮೆಂಟ್ ಮಾಡಿದ್ದಾರೆ. ಈ ನಿರ್ದೇಶಕರು ನಮ್ಮನ್ನೂ ಹುಚ್ಚ ಮಾಡುತ್ತಿದ್ದಾರೆ. ಈ ಸೀರಿಯಲ್ ಚೆನ್ನಾಗಿತ್ತು, ಎಕ್ಕುಟ್ಟು ಹೋಗುವ ಸೂಚನೆ ಇದೆ. ಬೇಗ ಗೌತಮ್ ಮತ್ತು ತಾಯಿ ತಂಗಿನ ಒಂದು ಮಾಡಿಸಿ ಎಂದೆಲ್ಲ ಪ್ರೇಕ್ಷಕರು ಕಾಮೆಂಟ್ ಮಾಡಿದ್ದಾರೆ.
(12 / 13)
ಅಮೃತಧಾರೆ ಧಾರಾವಾಹಿಯಲ್ಲಿ ಇದು ಹೊಸ ಟ್ವಿಸ್ಟ್‌ನ ಸಮಯ. ಗೌತಮ್ ದಿವಾನ್‌ಗೆ ತನ್ನ ತಾಯಿ ಮತ್ತು ತಂಗಿ ಬೇಗ ಸಿಗಲಿ. ಶಕುಂತಲಾ ದೇವಿ ಮತ್ತು ಇತರರ ಮೋಸದ ನಾಟಕಕ್ಕೆ ಅಂತ್ಯವಾಗಲಿ ಎಂದು ಪ್ರೇಕ್ಷಕರು ಬಯಸಿದ್ದಾರೆ. ಇದೊಂದು ಕನ್ನಡದ ಒಳ್ಳೆಯ ಸೀರಿಯಲ್. ಇದನ್ನು ಇನ್ನು ಹಾಳು ಮಾಡಬೇಡಿ ಎಂದು ಕೆಲವು ಪ್ರೇಕ್ಷಕರು ಕಾಮೆಂಟ್ ಮಾಡಿದ್ದಾರೆ.
ಇತರ ಗ್ಯಾಲರಿಗಳು