Amruthadhaare: ಲಕ್ಷ್ಮಿಕಾಂತ್‌ಗೆ ಭಾಗ್ಯಮ್ಮ ಸಿಗಲಿಲ್ಲ, ಆಕೆಯ ಕೈಯಲ್ಲಿದ್ದ ಫೋಟೋ ಸಿಗ್ತು, ಗೌತಮ್‌ ಮುಂದೆ ಅಮ್ಮ- ಅಮೃತಧಾರೆ ಧಾರಾವಾಹಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Amruthadhaare: ಲಕ್ಷ್ಮಿಕಾಂತ್‌ಗೆ ಭಾಗ್ಯಮ್ಮ ಸಿಗಲಿಲ್ಲ, ಆಕೆಯ ಕೈಯಲ್ಲಿದ್ದ ಫೋಟೋ ಸಿಗ್ತು, ಗೌತಮ್‌ ಮುಂದೆ ಅಮ್ಮ- ಅಮೃತಧಾರೆ ಧಾರಾವಾಹಿ

Amruthadhaare: ಲಕ್ಷ್ಮಿಕಾಂತ್‌ಗೆ ಭಾಗ್ಯಮ್ಮ ಸಿಗಲಿಲ್ಲ, ಆಕೆಯ ಕೈಯಲ್ಲಿದ್ದ ಫೋಟೋ ಸಿಗ್ತು, ಗೌತಮ್‌ ಮುಂದೆ ಅಮ್ಮ- ಅಮೃತಧಾರೆ ಧಾರಾವಾಹಿ

  • Amruthadhaare Serial Today Episode: ಅಮೃತಧಾರೆ ಧಾರಾವಾಹಿಯ ಇಂದಿನ ಸಂಚಿಕೆಯಲ್ಲಿ ಏನಾಗಲಿದೆ ಎಂದು ಜೀ ಕನ್ನಡ ವಾಹಿನಿ ಪ್ರಮೋ ಬಿಡುಗಡೆ ಮಾಡಿದೆ. ಕಳೆದುಹೋದ ಭಾಗ್ಯಮ್ಮ ಕೊನೆಗೂ ಸುಧಾಳಿಗೆ ಸಿಕ್ಕಿದ್ದಾಳೆ. ಆದರೆ, ಭಾಗ್ಯಮ್ಮ ಇರುವ ಸಂಗತಿ ತಿಳಿದು ಶಕುಂತಲಾ ಟೆನ್ಷನ್‌ ಹೆಚ್ಚಾಗಿದೆ.

Amruthadhaare Serial Today Episode: ಕಾರಿನಲ್ಲಿ ಗೌತಮ್‌ ಮತ್ತು ಲಕ್ಷ್ಮಿಕಾಂತ್‌ ಹೋಗುತ್ತಿದ್ದರು. ಆಗ ಲಕ್ಷ್ಮಿಕಾಂತ್‌ ಕಣ್ಣಿಗೆ ಭಾಗ್ಯಾ ಕಾಣಿಸಿದ್ದಾರೆ. ತನ್ನ ತಾಯಿಯನ್ನು ಗೌತಮ್‌ ನೋಡಿಬಿಟ್ರೆ ಗತಿ ಏನು ಎಂದು ಲಕ್ಷ್ಮಿಕಾಂತ್‌ ಚಿಂತಿಸುವಾಗಲೇ ತಲೆ ಎತ್ತದೆ ಗೌತಮ್‌ ತನ್ನ  ಅಮ್ಮ ಭಿಕ್ಷುಕಿ ಎಂದು ತಿಳಿದು ಐನೂರು ರೂ ನೀಡುತ್ತಾರೆ. ಇವತ್ತಿನ ಸಂಚಿಕೆಯಲ್ಲಿ ಗೌತಮ್‌ ತನ್ನ ತಾಯಿಯನ್ನು ನೋಡಿಲ್ಲ. ಭಾಗ್ಯಾ ಹಾಗೇ ಮುಂದಕ್ಕೆ ಹೋಗಿದ್ದಾರೆ. ಮತ್ತೆ ಏನೋ ಸಬೂಬು ಹೇಳಿ ಕಾರಿನಿಂದ ಇಳಿದ ಲಕ್ಷ್ಮಿಕಾಂತ್‌ ಭಾಗ್ಯಮ್ಮಳನ್ನು ಹುಡುಕಿದ್ದಾನೆ.
icon

(1 / 8)

ಅಮ್ಮ ಕಾಣೆಯಾಗಿರುವ ವಿಷಯ ಕೇಳಿದ ತಕ್ಷಣ ಭೂಮಿಕಾಳಿಗೂ ತಿಳಿಸದೆ ಸುಧಾ ಓಡೋಡಿ ಮನೆಗೆ ಬರುತ್ತಾಳೆ. ಮಗಳಿಗೆ ಸಮಾಧಾನ ಹೇಳುತ್ತಾಳೆ. ಸುಧಾ ಕೂಡ ಹುಡುಕಲು ಹೋಗುತ್ತಾಳೆ.  
icon

(2 / 8)

ಇನ್ನೊಂದೆಡೆ ಲಕ್ಷ್ಮಿಕಾಂತ್‌ ಹುಡುಕುತ್ತಿದ್ದಾನೆ. ಶಕುಂತಲಾದೇವಿಗೆ ಕಾಲ್‌ ಮಾಡಿ ವಿಷಯ ತಿಳಿಸುತ್ತಾನೆ. "ಭಾಗ್ಯಾ ನಮ್ಮ ಸುತ್ತಮುತ್ತ ಇದ್ದಾಳೆ. ನಾನು ನನ್ನ ಕಣ್ಣಾರೆ ನೋಡಿದೆ" ಎಂದು ಹೇಳುತ್ತಾನೆ. "ಅವಳು ನಿನ್ನ ಕಣ್ಣಿಗೆ ಕಾಣಿಸಿದ್ದಾಳೆ ಅಂದರೆ ಇನ್ನು ಯಾರ ಕಣ್ಣಿಗೂ ಕಾಣಿಸಬಾರದು" ಎಂದು ಹೇಳುತ್ತಾಳೆ. 
icon

(3 / 8)

ಭಾಗ್ಯಾ ರಸ್ತೆಯಲ್ಲಿ ಹೋಗುವಾಗ ರಿಕ್ಷಾವೊಂದಕ್ಕೆ ಅಡ್ಡಬರುತ್ತಾಳೆ. ರಿಕ್ಷಾ ಚಾಲಕ ಇಳಿದು ಬಯ್ಯುತ್ತಾನೆ. ಭಾಗ್ಯಾಳ ಕೈಯಲ್ಲಿದ್ದ ಹಣ ಮತ್ತು ಫೋಟೋ ಕೆಳಗೆ ಬೀಳುತ್ತದೆ. 
icon

(4 / 8)

ಇದನ್ನು ಸುಧಾ ನೋಡುತ್ತಾಳೆ. ಆಕೆಗೆ ಅಮ್ಮ ಸಿಗುತ್ತಾಳೆ. ಅದೇ ಆಟೋದಲ್ಲಿ ಅಮ್ಮನನ್ನು ಕರೆದುಕೊಂಡು ಹೋಗುತ್ತಾಳೆ. 
icon

(5 / 8)

ಆಗ ಅಲ್ಲೇ ಲಕ್ಷ್ಮಿಕಾಂತ್‌ ಹುಡುಕುತ್ತಾ ಇದ್ದಾನೆ. ಹೂವಿನ ಅಂಗಡಿಯವಳ ಬಳಿ ಕೇಳುತ್ತಾನೆ. "ಒಂದು ಹುಡುಗಿ ಬಂದು ಕರ್ಕೊಂಡು ಹೋದ್ಲು ನೋಡಿ" ಎನ್ನುತ್ತಾಳೆ. 
icon

(6 / 8)

ಲಕ್ಷ್ಮಿಕಾಂತ್‌ಗೆ ನೆಲದಲ್ಲಿ ಬಿದ್ದಿರುವ ಫೋಟೋ ಕಾಣಿಸುತ್ತದೆ. ಭಾಗ್ಯಾ ಗೌತಮ್‌ನ ಹಳೆಯ ಫೊಟೋ ನೋಡಿ ಆತಂಕ ಹೆಚ್ಚುತ್ತದೆ. ಮನೆಗೆ ಹೋಗಿ ಶಕುಂತಲಾಳಿಗೆ ವಿಷಯ ತಿಳಿಸುತ್ತಾನೆ. 
icon

(7 / 8)

ಒಟ್ಟಾರೆ, ಕಳೆದ ಕೆಲವು ದಿನಗಳಿಂದ ಮಂದಗತಿಯಲ್ಲಿ ಸಾಗುತ್ತಿದ್ದ ಅಮೃತಧಾರೆ ಧಾರಾವಾಹಿಯಲ್ಲಿ ಈಗ ಹೊಸ ಕುತೂಹಲವೊಂದು ಮೂಡಿದೆ. ಭಾಗ್ಯಮ್ಮ ಮತ್ತು ಗೌತಮ್‌ ಭೇಟಿಯಾಗುತ್ತಾರ? ಶಕುಂತಲಾ ಕೈಗ ಭಾಗ್ಯಮ್ಮ ದೊರಕುತ್ತಾರ? ಇತ್ಯಾದಿ ಪ್ರಶ್ನೆಗಳಿಗೆ ಮುಂದಿನ ದಿನಗಳಲ್ಲಿ ಉತ್ತರ ದೊರಕಲಿದೆ.
icon

(8 / 8)

ಇತರ ಗ್ಯಾಲರಿಗಳು