ರೌಡಿಗಳ ಕಣ್ಣಿಗೆ ಬಿದ್ದ ಭಾಗ್ಯಮ್ಮ, ದೊಡ್ಮಮ್ಮನ ಪೆಟ್ರೋಲ್ ಹಾಕಿ ಸುಡಲು ಮುಂದಾದ ಜೈದೇವ್- ಅಮೃತಧಾರೆ ಧಾರಾವಾಹಿ ಇಂದಿನ ಸಂಚಿಕೆ
- ಅಮೃತಧಾರೆ ಧಾರಾವಾಹಿಯಲ್ಲಿ ಶಕುಂತಲಾ ಗ್ಯಾಂಗ್ ಹುಡುಕುತ್ತಿದ್ದ ಭಾಗ್ಯಮ್ಮ ಕೊನೆಗೂ ಸಿಕ್ಕಿದ್ದಾಳೆ. ಇನ್ನೊಂದೆಡೆ ಅಮ್ಮನ ನೋಡುವ ಕನಸಲ್ಲಿ ಗೌತಮ್ ದಿವಾನ್ ಇದ್ದಾರೆ. ಜೈದೇವ್‌ನ ಕೈಯಿಂದ ಭಾಗ್ಯಮ್ಮ ಸಾಯುತ್ತಾಳ ಅಥವಾ ಗೌತಮ್‌ಗೆ ಅಮ್ಮ ಸಿಗುತ್ತಾಳ ಎಂಬ ಕೌತುಕ ಮನೆ ಮಾಡಿದೆ.
- ಅಮೃತಧಾರೆ ಧಾರಾವಾಹಿಯಲ್ಲಿ ಶಕುಂತಲಾ ಗ್ಯಾಂಗ್ ಹುಡುಕುತ್ತಿದ್ದ ಭಾಗ್ಯಮ್ಮ ಕೊನೆಗೂ ಸಿಕ್ಕಿದ್ದಾಳೆ. ಇನ್ನೊಂದೆಡೆ ಅಮ್ಮನ ನೋಡುವ ಕನಸಲ್ಲಿ ಗೌತಮ್ ದಿವಾನ್ ಇದ್ದಾರೆ. ಜೈದೇವ್‌ನ ಕೈಯಿಂದ ಭಾಗ್ಯಮ್ಮ ಸಾಯುತ್ತಾಳ ಅಥವಾ ಗೌತಮ್‌ಗೆ ಅಮ್ಮ ಸಿಗುತ್ತಾಳ ಎಂಬ ಕೌತುಕ ಮನೆ ಮಾಡಿದೆ.
(1 / 11)
ಅಮೃತಧಾರೆ ಧಾರಾವಾಹಿಯ ಇತ್ತೀಚಿನ ಸಂಚಿಕೆಯಲ್ಲಿ ಗೌತಮ್‌ಗೆ ಕನಸೊಂದು ಬಿದ್ದಿತ್ತು. ತನ್ನ ಮನೆಯ ಮುಂದೆ ಅಮ್ಮ ಬಂದಂತೆ, ಅವಳ ಕೈ ಹಿಡಿದಂತೆ ಕನಸು ಬಿದ್ದಿತ್ತು. ಈ ಖುಷಿಯನ್ನು ಆನಂದ್ ಜತೆಯೂ ಹಂಚಿಕೊಂಡಿದ್ದಾನೆ. ಭೂಮಿಕಾ, ಅಪರ್ಣಾ ಕೂಡ ಈ ವಿಷಯದಿಂದ ಖುಷಿಯಾಗಿದ್ದಾರೆ. ಕನಸಲ್ಲಿ ಬಂದ ಅಮ್ಮ ನಿಜವಾಗಿಯೂ ಬಾರದೆ ಇರುತ್ತಾಳ ಎಂದು ಆನಂದ್ ಭರವಸೆಯ ಮಾತುಗಳನ್ನು ಆಡುತ್ತಾನೆ.
(2 / 11)
ಇನ್ನೊಂದೆಡೆ ಈ ಭಾಗ್ಯಮ್ಮ ಯಾರ ಕೈಗೂ ಸಿಗಬಾರದು ಎಂದು ಶಕುಂತಲಾ ಗ್ಯಾಂಗ್ ಹುಡುಕುತ್ತಾ ಇರುತ್ತದೆ. ಮುಖ್ಯವಾಗಿ ಜೈದೇವ್‌ನ ಟೀಮ್ ಮನೆಮನೆಯನ್ನು ಹುಡುಕುತ್ತಿದೆ. ರೌಡಿಗಳು ಸೇಲ್ಸ್‌ಮ್ಯಾನ್ ರೂಪದಲ್ಲಿ ಮನೆಮನೆಗೆ ಹೋಗಿ ವಿಚಾರಿಸುತ್ತಿದ್ದಾರೆ. ಅವರು ಭಾಗ್ಯಮ್ಮ ಇರುವ ಬೀದಿಗೂ ಬಂದಿದ್ದಾರೆ.
(3 / 11)
ರೌಡಿಗಳು ದಾರಿಯಲ್ಲಿ ಸಿಕ್ಕವರಲ್ಲಿ ಕೇಳಿದಾಗ ಎಲ್ಲರೂ ತಮಗೆ ಗೊತ್ತಿಲ್ಲ ಎಂದಿದ್ದಾರೆ. ಹೆಸರು ಏನೆಂದು ಅಜ್ಜಿಯೊಬ್ಬಳು ಕೇಳಿದಾಗ ಭಾಗ್ಯಮ್ಮ ಎಂದು ಹೇಳುತ್ತಾರೆ. ಪಕ್ಕದ ಬೀದಿಯಲ್ಲಿ ಒಬ್ಬಳು ಭಾಗ್ಯಮ್ಮ ಇದ್ದಾಳೆ, ಆದರೆ ಅವಳು ಈ ಫೋಟೋದಲ್ಲಿ ಇರುವಂತೆ ಇಲ್ಲ ಎಂದು ಅಜ್ಜಿ ಹೇಳುತ್ತಾರೆ.
(4 / 11)
ರೌಡಿಗಳು ಖುಷಿಯಿಂದ ಅಜ್ಜಿ ಹೇಳಿದ ಮನೆಗೆ ಹೋಗಿ ನೋಡುತ್ತಾರೆ. ಅಲ್ಲಿ ಭಾಗ್ಯಮ್ಮ ಮಲಗಿರುವುದನ್ನು ನೋಡುತ್ತಾರೆ.
(5 / 11)
ಈ ವಿಷಯವನ್ನು ಜೈದೇವ್‌ಗೆ ಹೇಳುತ್ತಾರೆ. ಜೈದೇವ್ ಕೂಡ ಮನೆಯೊಳಗೆ ಇಣುಕಿ ಅಲ್ಲಿ ಇರುವುದು ಭಾಗ್ಯಮ್ಮ ಎಂದು ಕನ್‌ಫರ್ಮ್ ಮಾಡುತ್ತಾನೆ.
(6 / 11)
ರಾತ್ರಿಯಾದಗ ಮನೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚೋಣ ಎಂದು ಹೇಳುತ್ತಾನೆ. ಈ ಮೂಲಕ ಭಾಗ್ಯಮ್ಮಳನ್ನು ಮನೆಯಲ್ಲೇ ಸಾಯಿಸಲು ಯೋಜಿಸುತ್ತಾನೆ.
(7 / 11)
ಆದರೆ, ಈ ಸಂದರ್ಭದಲ್ಲಿ ಈತನ ಪ್ರಯತ್ನಕ್ಕೆ ಏನಾದರೂ ಅಡ್ಡಿಯಾಗುತ್ತದೆಯೇ? ಗೌತಮ್‌ಗೆ ತನ್ನ ಅಮ್ಮ ಸಿಗುತ್ತಾರೆಯೇ ಮುಂತಾದ ಮಾಹಿತಿ ತಿಳಿಯಲು ಇನ್ನಷ್ಟು ಸಂಚಿಕೆ ಕಾಯಬೇಕಾಗಬಹುದು.
(8 / 11)
ಅಂದಹಾಗೆ ಭಾಗ್ಯಮ್ಮಳನ್ನು ಸಾಯಿಸಲು ಶಕುಂತಲಾ ಗ್ಯಾಂಗ್ ಬಹಳಷ್ಟು ಸಮಯದಿಂದ ಕಾಯುತ್ತಿದ್ದಾರೆ. ಭಾಗ್ಯಮ್ಮ ಗೌತಮ್‌ನ ನಿಜವಾದ ತಾಯಿ. ಆಕೆಯನ್ನು ಸಾಯಿಸಲು ಯತ್ನಿಸಿ ಗೌತಮ್‌ನ ಆಸ್ತಿ ಕೊಳ್ಳೆ ಹೊಡೆಯುವ ಯೋಜನೆ ಇವರದ್ದು. ಆದರೆ, ಭಾಗ್ಯಮ್ಮ ಈ ಹಿಂದೆ ಸತ್ತಿರುವುದಿಲ್ಲ.
(9 / 11)
ಆಕೆ ಬದುಕಿರುವ ಸುದ್ದಿ ತಿಳಿದ ಬಳಿಕ ಮತ್ತೆ ಹುಡುಕಾಟ ಆರಂಭಿಸಿದ್ದರು. ಗೌತಮ್ ಕೂಡ ಹುಡುಕಿಸುತ್ತಿದ್ದಾರೆ. ಈಗ ಮೊದಲಿಗೆ ಭಾಗ್ಯಮ್ಮ ಜೈದೇವ್ ಕಣ್ಣಿಗೆ ಬಿದ್ದಿದ್ದಾಳೆ. ಮುಂದೇನಾಗಬಹುದೋ ಎಂದು ಕಾದು ನೋಡಬೇಕಿದೆ.
(10 / 11)
ಗೌತಮ್‌ಗೆ ಬಿದ್ದ ಕನಸು: ಗೌತಮ್ ಫೋನ್‌ನಲ್ಲಿ ಮಾತನಾಡುತ್ತಾ ಇದ್ದಾರೆ. ಆಗ ಸೆಕ್ಯುರಿಟಿ ಬರುತ್ತಾನೆ. "ಮನೆಯೊಳಗೆ ಯಾರೋ ಹೆಂಗಸು ಬಂದಿದ್ದಾರೆ" ಎನ್ನುತ್ತಾನೆ. ಗೌತಮ್ ನೋಡುವಾಗ ಅಲ್ಲಿ ಆತನ ಅಮ್ಮ ಇರುತ್ತಾರೆ. ಗೌತಮ್ ಭಾವುಕನಾಗುತ್ತಾನೆ. ಅಮ್ಮ ಗುಂಡೂ ಎಂದು ಕರೆಯುತ್ತಾರೆ. ಇವರು ಅಮ್ಮಾ ಎಂದೂ ಕರೆಯುತ್ತಾರೆ. ಹಿನ್ನೆಲೆಯಲ್ಲಿ ಅಮ್ಮನ ಪ್ರೀತಿಯ ಹಾಡು ಕೇಳಿ ಬರುತ್ತದೆ. ಇಷ್ಟು ವರ್ಷ ಎಲ್ಲಿ ಹೋಗಿದ್ದೆ ಅಮ್ಮ ಎಂದಾಗ ನೆನಪಾಗಲು ನಿನ್ನ ಮರೆತರೆ ತಾನೇ ಎಂದು ಅಮ್ಮ ಹೇಳುತ್ತಾರೆ. ತಿರುಗಿ ನೋಡಿದಾಗ ಅಮ್ಮ ಅಲ್ಲಿ ಇರುವುದಿಲ್ಲ. ಇದು ಗೌತಮ್‌ಗೆ ಬಿದ್ದ ಕನಸು.
ಇತರ ಗ್ಯಾಲರಿಗಳು