Amruthadhaare: ಭೂಮಿಕಾ, ಸುಧಾಗೆ ಆಕ್ಸಿಡೆಂಟ್ ಮಾಡುವ ಜೈದೇವ್ ಪ್ರಯತ್ನ ವಿಫಲಗೊಳಿಸಿದ ಆಗುಂತಕ ಯಾರು? ಅಮೃತಧಾರೆಯಲ್ಲಿ ಮತ್ತೊಂದು ಟ್ವಿಸ್ಟ್
- Amruthadhaare Serial Today Episode : ಜೀ ಕನ್ನಡ ವಾಹಿನಿಯ ಅಮೃತಧಾರೆಯಲ್ಲಿ ಆಗುಂತಕನೊಬ್ಬನ ಎಂಟ್ರಿಯಾಗಿದೆ. ಜೈದೇವ್‌ನ ಗೂಂಡಾಗಳು ಭೂಮಿಕಾ, ಸುಧಾ ಮತ್ತು ಮಗುವನ್ನು ಕೊಲ್ಲಲು ಪ್ರಯತ್ನಿಸುವ ಸಮಯದಲ್ಲಿ ಅವರನ್ನು ವ್ಯಕ್ತಿಯೊಬ್ಬ ಕಾಪಾಡಿದ್ದಾನೆ. ಆತನ ಸುಧಾಳ ಗಂಡ ಆಗಿರಬಹುದೇ? ಬನ್ನಿ ಇಂದಿನ ಸಂಚಿಕೆಯ ವಿವರ ಪಡೆಯೋಣ.
- Amruthadhaare Serial Today Episode : ಜೀ ಕನ್ನಡ ವಾಹಿನಿಯ ಅಮೃತಧಾರೆಯಲ್ಲಿ ಆಗುಂತಕನೊಬ್ಬನ ಎಂಟ್ರಿಯಾಗಿದೆ. ಜೈದೇವ್‌ನ ಗೂಂಡಾಗಳು ಭೂಮಿಕಾ, ಸುಧಾ ಮತ್ತು ಮಗುವನ್ನು ಕೊಲ್ಲಲು ಪ್ರಯತ್ನಿಸುವ ಸಮಯದಲ್ಲಿ ಅವರನ್ನು ವ್ಯಕ್ತಿಯೊಬ್ಬ ಕಾಪಾಡಿದ್ದಾನೆ. ಆತನ ಸುಧಾಳ ಗಂಡ ಆಗಿರಬಹುದೇ? ಬನ್ನಿ ಇಂದಿನ ಸಂಚಿಕೆಯ ವಿವರ ಪಡೆಯೋಣ.
(1 / 10)
ಅಮೃತಧಾರೆ ಧಾರಾವಾಹಿಯಲ್ಲಿ ಅಚ್ಚರಿಯ ಸರಮಾಲೆ ಮುಂದುವರೆದಿದೆ. ಅಮೃತಧಾರೆ ಧಾರಾವಾಹಿ ಮತ್ತೆ ಹಳಿಗೆ ಮರಳಿದೆ. ಆದರೆ, ಇದೀಗ ವಿಲನ್ ಪಡೆಗಳು ಮತ್ತೆ ವಿಜ್ರಂಭಿಸಲು ಆರಂಭಿಸಿವೆ. ಜೈದೇವ್ ಮತ್ತೆ ಗೂಂಡಾಗಳನ್ನು ಕರೆಸಿಕೊಂಡಿದ್ದಾನೆ. ಅಪಘಾತದ ಮೂಲಕ ಕೊಲೆ ಮಾಡಿಸುವ ಸೀರಿಯಲ್ ತಂತ್ರಗಳು ಮುಂದುವರೆದಿವೆ.
(2 / 10)
ಜೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯ ಇಂದಿನ ಸಂಚಿಕೆಯ ಪ್ರೊಮೊ ಬಿಡುಗಡೆಯಾಗಿದೆ. ಇದರಲ್ಲಿ ಸುಧಾ ಎಲ್ಲಿಗೋ ಹೊರಡುತ್ತಿದ್ದಾಳೆ. ಆಗ ಅಲ್ಲಿದ್ದ ಭೂಮಿಕಾ "ಎಲ್ಲಿಗೆ" ಎಂದು ಕೇಳುತ್ತಾಳೆ. ಮಗು ಲಚ್ಚಿಯನ್ನು ಸ್ಕೂಲ್‌ನಿಂದ ಕರೆದುಕೊಂಡು ಬರಲು ಹೋಗುತ್ತಿರುವೆ ಎಂದು ಸುಧಾ ಹೇಳುತ್ತಾಳೆ.
(3 / 10)
ಹಾಗಾದರೆ ನಿನ್ನ ಜತೆ ನಾನೂ ಬರುವ ಎಂದು ಸುಧಾಳ ಜತೆ ಭೂಮಿಕಾ ಕೂಡ ಹೊರಡುತ್ತಾಳೆ. ಮೂವರು ಶಾಲೆಗೆ ತಲುಪುತ್ತಾರೆ. ಮಗುವನ್ನು ಕರೆದುಕೊಂಡು ಬರುವ ಸಮಯದಲ್ಲಿ ಜೈದೇವ್ ತನ್ನ ಗೂಂಡಗಳಿಗೆ ಕರೆ ಮಾಡುತ್ತಾನೆ.
(4 / 10)
ಇವತ್ತು ಸುಧಾ ಮತ್ತು ಲಚ್ಚಿ ಉಳಿಯಬಾರದು ಸಾಯಿಸಿ ಬಿಡಿ ಎನ್ನುತ್ತಾನೆ ಜೈದೇವ್. ಆಗ, ಆ ಗೂಂಡಾಗಳಿಗೆ ಇವರಿಬ್ಬರು ಮಾತ್ರವಲ್ಲದೆ ಇನ್ನೊಬ್ಬಾಕೆ ಇರುವುದು ಕಾಣಿಸುತ್ತದೆ. ಭೂಮಿಕಾಳ ಫೋಟೋವನ್ನು ಜೈದೇವ್‌ಗೆ ಕಳುಹಿಸುತ್ತಾರೆ.
(5 / 10)
ಇಬ್ಬರ ಜತೆ ಇನ್ನೊಬ್ಬಳು ಇದ್ದಾಳೆ, ಇವಳು ಯಾರು ಎಂದು ಗೂಂಡಾಗಳು ಫೋಟೋ ತೆಗೆದು ಕಳುಹಿಸುತ್ತಾನೆ. "ಭೂಮಿಕಾ"ಳನ್ನು ನೋಡಿ ಜೈದೇವ್ ಖುಷಿಯಾಗುತ್ತಾನೆ. ಇಬ್ಬರ ಜತೆ ಇವಳ ಕಥೆಯನ್ನೂ ಮುಗಿಸಿ ಎಂದು ಗೂಂಡಗಳಿಗೆ ಆರ್ಡರ್ ಮಾಡುತ್ತಾನೆ.
(6 / 10)
ಸ್ಕೂಲ್‌ನಿಂದ ಗಾಡಿಯತ್ತ ಭೂಮಿಕಾ, ಸುಧಾ, ಲಚ್ಚಿ ನಡೆದುಕೊಂಡು ಬರುತ್ತಾರೆ. ಆಗ ಈ ಗೂಂಡಗಳು ಗಾಡಿಯನ್ನು ಇವರ ಹತ್ತೀರ ಸ್ಪೀಡ್ ಆಗಿ ತರುತ್ತಾರೆ. ಇನ್ನೇನೂ ಗುದ್ದಬೇಕೆನ್ನುವಷ್ಟರಲ್ಲಿ ಇವರ ಗಾಡಿಯ ಮುಂದೆ ಸ್ಪೀಡಾಗಿ ಒಂದು ಗಾಡಿ ಬಂದು ನಿಲ್ಲುತ್ತದೆ.
(7 / 10)
ರೌಡಿಗಳು ಗುದ್ದಿಸಬೇಕೆಂದುಕೊಂಡು ಕಾರು ತಂದಾಗ ಈ ಆಗುಂತಕ ಕಾರನ್ನು ಇವರ ಮುಂದೆ ತಂದು ನಿಲ್ಲಿಸುತ್ತಾನೆ. ಈ ಮೂಲಕ ಅಪಘಾತ ತಪ್ಪಿಸುತ್ತಾನೆ. ಈ ಸಮಯದಲ್ಲಿ ಕಾರಿನಿಂದ ಒಬ್ಬ ಇಳಿಯುತ್ತಾನೆ. ಅಮೃತಧಾರೆ ಧಾರಾವಾಹಿಯಲ್ಲಿ ಇಲ್ಲಿಯವರೆಗೆ ಕಾಣಿಸದ ಹೊಸ ಮುಖವದು. ಈತ ಯಾರು?
(8 / 10)
ಭೂಮಿಕಾ, ಸುಧಾ, ಲಚ್ಚಿಯನ್ನು ಕಾಪಾಡಿದ ಈ ಮೂರನೇ ವ್ಯಕ್ತಿ ಯಾರು ಎಂಬ ಪ್ರಶ್ನೆಗೆ ವೀಕ್ಷಕರು ನಾನಾ ಉತ್ತರ ನೀಡಿದ್ದಾರೆ. ಈ ಪ್ರೊಮೊಗೆ ಕಾಮೆಂಟ್ ಮಾಡಿರುವ ಬಹುತೇಕರು ಈತ ಸುಧಾಳ ಗಂಡ ಆಗಿರಬಹುದು ಎನ್ನುತ್ತಾರೆ. ಸುಧಾಳ ಗಂಡ ಸತ್ತಿದ್ದಾನೆ ಎಂದು ಸುಧಾ ಈ ಹಿಂದೆ ಹೇಳಿದ್ದ ನೆನಪು. ಹಾಗಾದರೆ, ಈತ ಬದುಕಿರುವನೇ? ಅಥವಾ ಈ ಮೂರನೇ ವ್ಯಕ್ತಿ ಬೇರೆ ಯಾರಾಗಿರಬಹುದು?
(9 / 10)
ಅಮೃತಧಾರೆ ಧಾರಾವಾಹಿಯಲ್ಲಿ ಈ ಹೊಸ ವ್ಯಕ್ತಿಯಾಗಿ ಬಂದಾತ ಅತಿಥಿ ಪಾತ್ರವೇ ಅಥವಾ ಇನ್ನು ಮುಂದಿನ ಹಲವು ಎಪಿಸೋಡ್‌ಗಳಲ್ಲಿ ಇರಬಹುದಾದ ಕಾಯಂ ಪಾತ್ರವೇ ಎಂದು ತಿಳಿದುಬಂದಿಲ್ಲ.
(10 / 10)
ಒಟ್ಟಾರೆ, ಕಳೆದ ಕೆಲವು ಸಂಚಿಕೆಗಳಿಂದ ಅಮೃತಧಾರೆ ಮತ್ತೆ ಟ್ರ್ಯಾಕಿಗೆ ಮರಳಿದೆ. ಮತ್ತೆ ಮೊದಲಿನಂತೆ ಹಲವು ಕೌತುಕ, ಟ್ವಿಸ್ಟ್‌ಗಳ ಮೂಲಕ ವೀಕ್ಷಕರನ್ನು ಅಚ್ಚರಿಗೆ ದೂಡುತ್ತಿದೆ. ಮಲ್ಲಿ ಕೂಡ ಈಗ ಮನೆಗೆ ವಾಪಸ್ ಆಗಿದ್ದಾಳೆ. ಭೂಮಿಕಾಳ ಹೊಟ್ಟೆಯಲ್ಲಿರುವ ಮಗುವನ್ನು ಸಾಯಿಸುವ ಪ್ರಯತ್ನವೂ ನಡೆಯುತ್ತಿದೆ. ಇಂದು ರಾತ್ರಿ ಏಳು ಗಂಟೆಗೆ ಪ್ರಸಾರವಾಗುವ ಅಮೃತಧಾರೆ ಧಾರಾವಾಹಿಯಲ್ಲಿ ಸಾಕಷ್ಟು ಹೊಸ ವಿಚಾರಗಳು ಇರುವ ಸೂಚನೆಯಿದೆ.
ಇತರ ಗ್ಯಾಲರಿಗಳು