Amruthadhaare: ಭಾಗ್ಯಮ್ಮನ ಸಾಯಿಸಲು ಯತ್ನಿಸಿದ್ದು ಶಕುಂತಲಾ ಎಂಬ ಸತ್ಯ ಗೌತಮ್‌ಗೆ ಗೊತ್ತಾಗುತ್ತ? ಅಮೃತಧಾರೆ ಧಾರಾವಾಹಿ ಸ್ಟೋರಿ
- Amruthadhaare serial Today Episode: ಜೀ ಕನ್ನಡ ವಾಹಿನಿಯು ಅಮೃತಧಾರೆ ಧಾರಾವಾಹಿಯ ಇಂದಿನ ಸಂಚಿಕೆಯ ಪ್ರೊಮೊ ಹಂಚಿಕೊಂಡಿದೆ. ಈ ಪ್ರೊಮೊದಲ್ಲಿ ಗೌತಮ್ ತನ್ನ ಮನೆಯ ಭದ್ರತಾ ಸಿಬ್ಬಂದಿಗಳನ್ನೆಲ್ಲ ಎನ್‌ಕ್ವಯರಿ ಮಾಡುತ್ತಾರೆ. ಈ ಸಮಯದಲ್ಲಿ ಭಾಗ್ಯಮ್ಮನ ಕೊಠಡಿಗೆ ಪ್ರವೇಶಿಸಿರುವುದು ಮನೆಯೊಳಗಿನವರೇ ಎಂಬ ಅನುಮಾನ ಗೌತಮ್‌ನನ್ನು ಕಾಡುತ್ತದೆ.
- Amruthadhaare serial Today Episode: ಜೀ ಕನ್ನಡ ವಾಹಿನಿಯು ಅಮೃತಧಾರೆ ಧಾರಾವಾಹಿಯ ಇಂದಿನ ಸಂಚಿಕೆಯ ಪ್ರೊಮೊ ಹಂಚಿಕೊಂಡಿದೆ. ಈ ಪ್ರೊಮೊದಲ್ಲಿ ಗೌತಮ್ ತನ್ನ ಮನೆಯ ಭದ್ರತಾ ಸಿಬ್ಬಂದಿಗಳನ್ನೆಲ್ಲ ಎನ್‌ಕ್ವಯರಿ ಮಾಡುತ್ತಾರೆ. ಈ ಸಮಯದಲ್ಲಿ ಭಾಗ್ಯಮ್ಮನ ಕೊಠಡಿಗೆ ಪ್ರವೇಶಿಸಿರುವುದು ಮನೆಯೊಳಗಿನವರೇ ಎಂಬ ಅನುಮಾನ ಗೌತಮ್‌ನನ್ನು ಕಾಡುತ್ತದೆ.
(1 / 8)
Amruthadhaare serial Today Episode: ಜೀ ಕನ್ನಡ ವಾಹಿನಿಯು ಅಮೃತಧಾರೆ ಧಾರಾವಾಹಿಯ ಇಂದಿನ ಸಂಚಿಕೆಯ ಪ್ರೊಮೊ ಹಂಚಿಕೊಂಡಿದೆ. ಈ ಪ್ರೊಮೊದಲ್ಲಿ ಗೌತಮ್ ತನ್ನ ಮನೆಯ ಭದ್ರತಾ ಸಿಬ್ಬಂದಿಗಳನ್ನೆಲ್ಲ ಎನ್‌ಕ್ವಯರಿ ಮಾಡುತ್ತಾರೆ. ಈ ಸಮಯದಲ್ಲಿ ಭಾಗ್ಯಮ್ಮನ ಕೊಠಡಿಗೆ ಪ್ರವೇಶಿಸಿರುವುದು ಮನೆಯೊಳಗಿನವರೇ ಎಂಬ ಅನುಮಾನ ಗೌತಮ್‌ನನ್ನು ಕಾಡುತ್ತದೆ. ಇದಕ್ಕೂ ಮೊದಲು ಭಾಗ್ಯಮ್ಮನನ್ನು ಸಾಯಿಸಬೇಕೆಂದು ಶಕುಂತಲಾದೇವಿ ಪ್ರಯತ್ನಿಸಿದ್ದಾರೆ. ತನ್ನ ಗುರುತು ಹಿಡಿದು ಮುಖಕ್ಕೆ ಉಗುಳಿದ ಅವಮಾನವೂ ಶಕುಂತಲಾದೇವಿಗೆ ಇತ್ತು. ತಾನು ಒಳ್ಳೆಯವಳು ಎಂದು ತೋರಿಸಲು ಭಾಗ್ಯಮ್ಮನಿಗೆ ಊಟ ತಿನ್ನಿಸುವ ಸಮಯದಲ್ಲಿ ಭಾಗ್ಯಮ್ಮ ಈಕೆಯ ಮುಖಕ್ಕೆ ಉಗುಳಿದ್ದಳು. ಇವಳು ನನ್ನನ್ನು ಗುರುತು ಹಿಡಿದಿದ್ದಾಳೆ ಎಂದು ಶಕುಂತಲಾ ದೇವಿಗೆ ಖಾತ್ರಿಯಾಗಿತ್ತು. ಇನ್ನು ಸಮಯ ವ್ಯರ್ಥ ಮಾಡಿದರೆ ಉಳಿಗಾಲವಿಲ್ಲ ಎಂದು ಯೋಚಿಸಿದ್ದಾಳೆ.
(2 / 8)
ಅದೇ ರಾತ್ರಿ ಭಾಗ್ಯಮ್ಮನ ದಿಂಬಿನಿಂದ ಸಾಯಿಸಲು ಪ್ರಯತ್ನಿಸಿದ್ದಾಳೆ. ಸುಧಾ ಹಾಲು ತರಲು ಹೋಗುವಾಗ ಶಕುಂತಲಾದೇವಿ ಭಾಗ್ಯಮ್ಮನ ಕೊಠಡಿ ಪ್ರವೇಶಿಸಿದ್ದಾರೆ. ರೋಷದ ಒಂದೆರಡು ಡೈಲಾಗ್‌ಗಳನ್ನು ಹೇಳಿ ದಿಂಬನ್ನು ಭಾಗ್ಯಮ್ಮನ ಮುಖದ ಮೇಲೆ ಒತ್ತಿದ್ದಾಳೆ. ಆ ಸಮಯದಲ್ಲಿ ಏನೋ ಸದ್ದಾಗಿ ಅಲ್ಲಿಗೆ ಭೂಮಿಕಾ ಬಂದಿದ್ದಾರೆ.
(3 / 8)
ಭೂಮಿಕಾ ಬಂದಿರುವುದನ್ನು ತಿಳಿದು ಶಕುಂತಲಾದೇವಿ ಅಲ್ಲಿಂದ ಓಡಿ ಅಡಗಿದ್ದಾರೆ. ಈ ಸಮಯದಲ್ಲಿ ಭೂಮಿಕಾ ಎಸೆದ ತುಂಡೊಂದು ಶಕುಂತಲಾದೇವಿ ತಲೆಗೆ ಬಡಿದಿದೆ. ಭೂಮಿಕಾಳಿಗೆ ಗೊತ್ತಾಗುತ್ತದೆ ಎನ್ನುವಷ್ಟರಲ್ಲಿ ಸೀರಿಯಲ್ ಬೇರೆ ಹಾದಿ ಹಿಡಿದಿದೆ.
(4 / 8)
ಮನೆಗೆ ನುಗ್ಗಿದವರು ಯಾರು ಎಂದು ತಿಳಿಯಲು ಸಿಸಿಟಿವಿ ಪರಿಶೀಲನೆ ಮಾಡಬೇಕೆಂದು ನೋಡಿದರೆ ಲಕ್ಕಿ ಲಕ್ಷ್ಮಿಕಾಂತ್ ಆ ಸಿಸಿಟಿವಿಗೆ ಗತಿ ಕಾಣಿಸಿದ್ದಾನೆ. ಹೀಗಾಗಿ, ಮನೆಯೊಳಗೆ ಭಾಗ್ಯಮ್ಮನ ಸಾಯಿಸಲು ಯತ್ನಿಸಿದ್ದು ಶಕುಂತಲಾದೇವಿ ಎಂದು ಯಾರಿಗೂ ಗೊತ್ತಾಗಿರಲಿಲ್ಲ.
(5 / 8)
ಇಂದು ಜೀ ಕನ್ನಡ ವಾಹಿನಿ ಬಿಡುಗಡೆ ಮಾಡಿರುವ ಪ್ರೊಮೊದಲ್ಲಿ ಗೌತಮ್ ತನ್ನ ಮನೆಯ ಸೆಕ್ಯುರಿಟಿಗಳನ್ನೆಲ್ಲ ಕರೆದು ಕ್ಲಾಸ್ ತೆಗೆದುಕೊಳ್ಳುತ್ತಾನೆ. ಆದರೆ ಅವರೆಲ್ಲ "ಮನೆಯ ಒಳಗೆ ಯಾರೂ ಬರಲು ಸಾಧ್ಯವಿಲ್ಲ" ಎನ್ನುತ್ತಾರೆ. ಹಾಗಾದರೆ ಇದು ಮನೆಯೊಳಗಿನವರ ಕೃತ್ಯವೇ ಎಂಬ ಸಂದೇಹ ಗೌತಮ್‌ಗೆ ಬರುತ್ತದೆ.
(6 / 8)
ಮುಂದಿನ ದಿನಗಳಲ್ಲಿ ಮನೆಯಲ್ಲಿ ನಡೆಯುವ ಈ ಅನಾಹುತಗಳಿಗೆ ಶಕುಂತಲಾದೇವಿಯೇ ಕಾರಣ ಎಂದು ಗೌತಮ್‌ಗೆ ತಿಳಿಯಬಹುದು. ಅಥವಾ ಈ ಸತ್ಯವನ್ನು ಭೂಮಿಕಾ ಕಂಡುಹಿಡಿಯಬಹುದು.
(7 / 8)
ಈ ಪ್ರೊಮೊಗೆ ಪ್ರೇಕ್ಷಕರು ನಾನಾ ರೀತಿ ಕಾಮೆಂಟ್ ಮಾಡಿದ್ದಾರೆ. "ಅಷ್ಟು ದೊಡ್ಡ ಕಂಪನಿ ಓನರ್‌ಗೆ, ಇಷ್ಟು ದಡ್ಡತನನ,, ಮನೇಲಿ ತಾಯಿಗೆ ಇದ್ದಕಿದ್ದ ಹಾಗೆ ತಲೆಗೆ ಹೊಡೆತ ಬಿದ್ದಿದೆ ಅಂದ್ರೆ ಏನಾಗಿದೆ ಅಂತ, ತಿಳ್ಕೊಳ್ಳೋ ಬುದ್ದಿತನ ಇಲ್ವಾ" ಎಂದೆಲ್ಲ ವೀಕ್ಷಕರು ಈ ಪ್ರೊಮೊಗೆ ಕಾಮೆಂಟ್ ಮಾಡಿದ್ದಾರೆ.
ಇತರ ಗ್ಯಾಲರಿಗಳು